ಶುಕ್ರವಾರ, ಡಿಸೆಂಬರ್ 6, 2019
21 °C
ಭಾನುವಾರ

ಭಾರತದ ಐಶ್ವರ್ಯಾ ರೈ ಈಗ ವಿಶ್ವ ಸುಂದರಿ | ಭಾನುವಾರ, 20–11–1994

Published:
Updated:

ಪ್ರಿಟೋರಿಯಾ, ನ. 19 (ಪಿಟಿಐ)– ಇಂದು ಇಲ್ಲಿನ ಸನ್‌ಸಿಟಿಯಲ್ಲಿ ಜರುಗಿದ 1994ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯಾ ರೈ ಅವರು ವಿಶ್ವಸುಂದರಿ (ಮಿಸ್‌ ವರ್ಲ್ಡ್) ಆಗಿ ಆಯ್ಕೆಯಾದರು.

ಎರಡನೇ ಹಾಗೂ ಮೂರನೇ ಸ್ಥಾನಗಳಿಗೆ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ವೆನಿಜುವೆಲಾ ಸುಂದರಿಯರು ಆಯ್ಕೆಯಾದರು. ಅಂತಿಮ ಸ್ಪರ್ಧೆಗೆ ಮೊದಲಿನ ಸುತ್ತಿನಲ್ಲಿ ರೈಗೆ ‘ಅತ್ಯಂತ ಕಾಂತಿಯುಕ್ತ ಮುಖದವಳು’ ಎಂಬ ಪ್ರಶಸ್ತಿಯೂ ದೊರೆಯಿತು.

ಮುಂಬೈನ ಮಾಡೆಲ್ ರೈ ಅವರು ‘ಭಾರತ ಸುಂದರಿ’ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ‍ಪ‍ಡೆದಿದ್ದರು.


ಪ್ರಜಾವಾಣಿಯ 20–11–1994 ಸಂಚಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿ

ಕೇಸರಿ, ರಾಯ್ ರಾಜೀನಾಮೆ ಕೇಳಲು ಆಯೋಗಕ್ಕೆ ಹಕ್ಕಿಲ್ಲ

ಜಬಲ್‌ಪುರ (ಮಧ್ಯ ಪ್ರದೇಶ), ನ. 19 (ಪಿಟಿಐ)– ಕೇಂದ್ರ ಸಚಿವ ಸಂಪುಟದಿಂದ ಸೀತಾರಾಮ ಕೇಸರಿ ಹಾಗೂ ಕಲ್ಪನಾಥ ರಾಯ್‌ ಅವರ ರಾಜೀನಾಮೆ ಕೇಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಕಾಂಗೈ ವಕ್ತಾರ ವಿ.ಎನ್. ಗಾಡ್ಗೀಳ್ ಅವರು ಇಂದು ಇಲ್ಲಿ ಹೇಳಿದರು.

‘ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಪಡಿಸುವ ಮೂಲಕ ಚುನಾವಣಾ ಆಯೋಗವು ರಾಜಕಾರಣದ ಕಣವನ್ನು ಪ್ರವೇಶಿಸಿದಂತಾಗಿದೆ. ಅಲ್ಲದೆ ಸಂವಿಧಾನವು ತನಗೆ ನೀಡಿದಂತಹ ಅಧಿಕಾರ ಹಾಗೂ ಕಾರ್ಯಕ್ಷೇತ್ರದ ಮಿತಿಯನ್ನು ಮೀರಿ ಆಜ್ಞೆಯನ್ನು ಹೊರಡಿಸಿದಂತಾಗಿದೆ’‍ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)