ಶನಿವಾರ, ಜೂನ್ 25, 2022
22 °C
ಸೋಮವಾರ, 17–7–1995

25 ವರ್ಷಗಳ ಹಿಂದೆ | ದೋಣಿ ದುರಂತ: ಬೆಂಗಳೂರಿನ ಹತ್ತು ಪ್ರವಾಸಿಗರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಣಿ ದುರಂತ: ಬೆಂಗಳೂರಿನ ಹತ್ತು ಪ್ರವಾಸಿಗರ ಸಾವು
ಟಿ.ನರಸೀಪುರ, ಜುಲೈ 16–
ಇಲ್ಲಿಗೆ ಸಮೀಪದ ತ್ರಿವೇಣಿ ಸಂಗಮದಲ್ಲಿ ಇಂದು ಸಂಜೆ 6.30ರ ಹೊತ್ತಿನಲ್ಲಿ ಸಂಭವಿಸಿದ ನಾಡದೋಣಿ ದುರಂತದಲ್ಲಿ ಬೆಂಗಳೂರಿನ ಯಶವಂತಪುರ ಪೈಪ್‌ಲೈನ್‌ ಪ್ರದೇಶದ 10 ಮಂದಿ ನೀರುಪಾಲಾಗಿದ್ದಾರೆ.

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 3–4 ಕುಟುಂಬಗಳಿಗೆ ಸೇರಿದ 10 ಮಂದಿ ನಾಡದೋಣಿಯಲ್ಲಿ ದೋಣಿ ವಿಹಾರಕ್ಕೆ ಹೊರಟಿದ್ದರು.

ಸಂಗಮದ ನಡು ಹೊಳೆಯಲ್ಲಿದ್ದ ಬಸವ ವಿಗ್ರಹವನ್ನು ಮುಟ್ಟಲು ದೋಣಿಯಲ್ಲಿದ್ದವರು ಪ್ರಯತ್ನಿಸಿದಾಗ ದೋಣಿ ಮಗುಚಿ ಈ ದುರಂತ ಸಂಭವಿಸಿತೆಂದು ವರದಿಯಾಗಿದೆ.

ಮಂಜರಾಬಾದ್‌ ಕೋಟೆಗೆ ಶೀಘ್ರ ಪುನಶ್ಚೇತನ
ನವದೆಹಲಿ, ಜುಲೈ 16–
ಪಶ್ಚಿಮಘಟ್ಟದ ನಿತ್ಯಹರಿದ್ವರ್ಣದ ಅರಣ್ಯ ತಪ್ಪಲಿನಲ್ಲಿ ಮೂಲೆಗುಂಪಾಗಿರುವ ಸಕಲೇಶಪುರ ಪಟ್ಟಣದ ಹೊರ ಆವರಣದಲ್ಲಿನ ಮಂಜರಾಬಾದ್‌ ಕೋಟೆಗೆ ಶೀಘ್ರದಲ್ಲಿಯೇ ಪುನಶ್ಚೇತನ ದೊರೆಯಲಿದೆ.

ಮೈಸೂರು ಹುಲಿ ಎಂದು ಖ್ಯಾತಿಯಾಗಿದ್ದ ಟಿಪ್ಪು ಸುಲ್ತಾನ್‌, ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಸಮರ ನಡೆಸಲು ಎರಡು ಶತಮಾನಗಳ ಹಿಂದೆ ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ಸನ್ನದುಗೊಳಿಸಿದ ಈ ಐತಿಹಾಸಿಕ ದಾಖಲೆ ಪುನಃ ಹೆಮ್ಮೆಯ ಕುರುಹಾಗಿ ಕಂಗೊಳಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು