ಗುರುವಾರ, 3–3–1994

ಶನಿವಾರ, ಏಪ್ರಿಲ್ 20, 2019
29 °C

ಗುರುವಾರ, 3–3–1994

Published:
Updated:

ಕಾಶ್ಮೀರ: ‘ಅನಗತ್ಯ ಕುತೂಹಲ’ ಸಲ್ಲ– ಅಮೆರಿಕಕ್ಕೆ ಜವಾಬು

ನವದೆಹಲಿ, ಮಾ. 2 (ಪಿಟಿಐ, ಯುಎನ್‌ಐ)– ಕಾಶ್ಮೀರದ ವಿವಾದ ಕುರಿತಂತೆ ಅಮೆರಿಕದ ನಿಲುವನ್ನು ಪ್ರಶ್ನಿಸಿರುವ ಭಾರತವು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅದು ತೋರುತ್ತಿರುವ ‘ಅನಗತ್ಯ ಕುತೂಹಲ’ವನ್ನು ಖಂಡಿಸಿದೆ.

ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವ ಬಗ್ಗೆ ಇಂದು ಲೋಕಸಭೆಯಲ್ಲಿ ನಡೆದ ಒಂದು ದಿನದ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವೆ ಎಸ್.ಬಿ. ಚವಾಣ್ ಅವರು, ಕಾಶ್ಮೀರ ಕುರಿತು ಅಮೆರಿಕ ತಾಳಿದ ನಿಲುವನ್ನು ಇದೇ ಪ್ರಥಮ ಭಾರಿ ಕಟುವಾಗಿ ಟೀಕಿಸಿದರು.

‘ಕಾಶ್ಮೀರ ಕುರಿತಂತೆ ಅಮೆರಿಕ ಭಾರತಕ್ಕಾಗಲೀ ಅಥವಾ ಪಾಕಿಸ್ತಾನಕ್ಕಾಗಲೀ ನೆರವು ನೀಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಈ ಮೂಲಕ ಯಾವುದೋ ಪ್ರಯೋಜನ ಪಡೆಯಲು ಯತ್ನಿಸುತ್ತಿದೆ’ ಎಂದ ಅವರು, ಎಚ್ಚರದಿಂದ ಇರುವಂತೆ ರಾಷ್ಟ್ರದ ಜನತೆಗೆ ಕರೆ ನೀಡಿದರು.

ನಾಯಿ ಪಾಲಾದ ವೃದ್ಧೆ

ತುಮಕೂರು, ಮಾ. 2– ಇಲ್ಲಿನ ಆಸ್ಪತ್ರೆ ಆವರಣದಲ್ಲೇ ಮಂಗಳವಾರ ಬೆಳಿಗ್ಗೆ ಅನಾಥ ವೃದ್ಧೆಯೊಬ್ಬಳನ್ನು ನಾಯಿಗಳು ತಿಂದು ಹಾಕಿದ ದಾರುಣ ಘಟನೆ ನಡೆದಿದೆ.

ಜನನಿಬಿಡ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಂದಿನ ಕಾಂಪೌಂಡಿನ ಮೂಲೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆ ವೇಳೆಗೆ ನಾಯಿಗಳು ಮುದುಕಿಯೊಬ್ಬಳನ್ನು ಎಳೆದಾಡುತ್ತಿರುವ ದೃಶ್ಯವನ್ನು ನೋಡಿದ ಜನ, ಕುಣಿಗಲ್‌ ವೃತ್ತದ ಮೂಲೆಯಲ್ಲಿರುವ ಬೂತ್‌ನಿಂದ ಪೊಲೀಸರಿಗೆ ಸುದ್ಧಿ ಮುಟ್ಟಿಸಿದರು.

ರಾತ್ರಿಯೇ ಹಸಿವು ಹಾಗೂ ಚಳಿಯಿಂದ ಸತ್ತಿರಬಹುದಾದ ಸುಮಾರು 70 ವರ್ಷ ವಯಸ್ಸಿನ ಮುದುಕಿಯ ಶವ ಪೊಲೀಸರು ಬರುವ ವೇಳೆಗೆ ಪೂರಾ ನಾಯಿಗಳ ಪಾಲಾಗಿತ್ತು. ಮುಖದಲ್ಲಿ ಮಾಂಸವೇ ಇರದೆ ಕೈಕಾಲುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಮೂಳೆಗಳಷ್ಟೇ ಉಳಿದಿದ್ದವು. ಮುದುಕಿ ಹೊದ್ದುಕೊಂಡಿದ್ದ ಗೋಣಿಚೀಲವೂ ಚಿಂದಿಯಾಗಿತ್ತು.

ಬಂಧುಗಳಿಗೆ ಟಿಕೆಟ್ ಸೋಲಿಗೆ ಕಾರಣ

ನವದೆಹಲಿ, ಮಾ. 2 (ಯುಎನ್‌ಐ)– ಹಿರಿಯ ಕಾಂಗೈ ನಾಯಕರಾದ ಬಲರಾಂ ಜಾಖಡ್, ರಾಜೇಶ್ ಪೈಲಟ್ ಹಾಗೂ ಬೂಟಾಸಿಂಗ್ ಮೊದಲಾದವರ ಆಪ್ತಬಂಧುಗಳಿಗೆ ಪಕ್ಷದ ಟಿಕೆಟ್ ನೀಡಿದ್ದೆ ಪಕ್ಷವು ಕಳೆದ ನವೆಂಬರ್‌ನಲ್ಲಿ ಜರುಗಿದ ರಾಜಸ್ತಾನದ ವಿಧಾನಸಭಾ ಚುನಾವಣೆಗಳಲ್ಲಿ ಪರಾಭವ ಅನುಭವಿಸಲು ಕಾರಣ ಎಂದು 5 ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷದ ಕಾರ್ಯನಿರ್ವಹಣೆ ಕುರಿತು ಅಧ್ಯಯನ ನಡೆಸಲು ನೇಮಿಸಿದ್ದ ಜನಾರ್ದನ ರೆಡ್ಡಿ ಸಮಿತಿಯು ಅಭಿಪ್ರಾಯ ಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !