ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ, ಆಗಸ್ಟ್‌ 27, 1995

Last Updated 26 ಆಗಸ್ಟ್ 2020, 15:34 IST
ಅಕ್ಷರ ಗಾತ್ರ

ರಾಜಕೀಯದಿಂದ ಎನ್‌ಟಿಆರ್‌ ಪತ್ನಿ ನಿವೃತ್ತಿ

ಹೈದರಾಬಾದ್‌, ಆ. 26 (ಪಿಟಿಐ)– ಆಂಧ್ರದಲ್ಲಿ ಆಡಳಿತ ತೆಲುಗುದೇಶಂ ಪಕ್ಷದೊಳಗಿನ ಭಾರಿ ಬಿಕ್ಕಟ್ಟನ್ನು ತಡೆಯುವ ಕೊನೆ ಗಳಿಗೆ ಯತ್ನವಾಗಿ ಮುಖ್ಯಮಂತ್ರಿ ರಾಮರಾವ್‌ ಅವರ ಪತ್ನಿ ಲಕ್ಷ್ಮಿ ಶಿವಪಾರ್ವತಿ ಅವರು ‘ದುರುದ್ದೇಶವಿಲ್ಲದೆ ತಮ್ಮಿಂದ ನಡೆದ ತಪ್ಪುಗಳಿಗೆ’ ಬಹಿರಂಗ ಕ್ಷಮೆ ಕೇಳಿದರು. ಅಲ್ಲದೆ ರಾಜಕೀಯದಿಂದ ದೂರ ಸರಿದು ತಮ್ಮ ಚಟುವಟಿಕೆಯನ್ನು ಗೃಹ ಕೃತ್ಯಕ್ಕೆ ಸೀಮಿತಗೊಳಿಸುವುದಾಗಿ ಪ್ರಕಟಿಸಿದರು.

ಪಕ್ಷ ಮತ್ತು ಸರ್ಕಾರದ ವ್ಯವಹಾರಗಳಲ್ಲಿ ಅವರ ‘ಅನಗತ್ಯ ಹಸ್ತಕ್ಷೇಪ’ ಪಕ್ಷದ ಒಡಕಿಗೆ ಕಾರಣವಾಗಿ, ರಾಮರಾವ್‌ ಅಧಿಕಾರದ ಕುರ್ಚಿ ಅಲುಗಾಡುತ್ತಿದೆ.

ರಾಜ್ಯದ ಭೂಸುಧಾರಣೆ ಕಾಯ್ದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಕ್ಕೆ

ನವದೆಹಲಿ, ಆ. 26 (ಪಿಟಿಐ)– ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ 27 ಭೂಸುಧಾರಣಾ ಕಾನೂನುಗಳನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸುವ ಮೂಲಕ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಡುವ 81ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್‌ ಇಂದು ಅನುಮೋದನೆ ನೀಡಿತು.

ಮಸೂದೆಗೆ ರಾಜ್ಯಸಭೆ ಈಗಾಗಲೇ ಒಪ್ಪಿಗೆ ನೀಡಿದ್ದು, ಲೋಕಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಡಾ. ಜಗನ್ನಾಥ ಮಿಶ್ರಾ ಇಂದು ಮಂಡಿಸಿದ ಮಸೂದೆ 325 ಮತಗಳಿಂದ ಅಂಗೀಕಾರಗೊಂಡಿತು. ಯಾರೂ ವಿರುದ್ಧ ಮತ ಚಲಾಯಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT