ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 4–12–1993

Last Updated 3 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಚದುರಂಗ: ಕನ್ನಡ ಸಾಹಿತ್ಯಸಮ್ಮೇಳನಾಧ್ಯಕ್ಷ

ಬೆಂಗಳೂರು, ಡಿ. 3– ಅಖಿಲ ಭಾರತ 63ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚದುರಂಗ (ಡಾ. ಸುಬ್ರಹ್ಮಣ್ಯ ರಾಜೇ ಅರಸು) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ‍ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಇಂದು ಇಲ್ಲಿ ತಿಳಿಸಿದರು.

ಚದುರಂಗರ ವ್ಯಥೆ

‘ಪ್ರಜಾವಾಣಿ’ ಚದುರಂಗರನ್ನು ಅಭಿನಂದಿಸಿದಾಗ ಅವರು ತಮ್ಮ ವ್ಯಥೆಯನ್ನು ತೋಡಿಕೊಂಡರು. ಕಾರಣ ‘ನನ್ನಿಂದ ಆಗೋಲ್ಲ. ನನ್ನ ಆರೋಗ್ಯ ಅಷ್ಟೊಂದು ಸರಿ ಇಲ್ಲ. ಅಲ್ಲದೆ ನನಗಿಂತ ಹಿರಿಯರಾದ ತ.ಸು. ಶಾಮರಾಯರಿದ್ದಾರೆ, ಎಸ್.ವಿ. ಪರಮೇಶ್ವರ ಭಟ್ಟರಿದ್ದಾರೆ, ಕಥೆಗಾರ ಅಶ್ವತ್ಥ ಅವರಿದ್ದಾರೆ. ಅವರು ನನಗಿಂತ ಹಿರಿಯರಲ್ಲದೆ ಅವರ ಸಾಧನೆಯೂ ದೊಡ್ಡದು. ಹೀಗಿರುವಾಗ ನನ್ನನ್ನು ಆಯ್ಕೆ ಮಾಡುವುದು ಸರಿಯೇ?’ ಎಂದರು.

ಉತ್ತರಪ್ರದೇಶಕ್ಕೆ ಮುಲಾಯಂ, ರಾಜಸ್ತಾನಕ್ಕೆ ಶೆಖಾವತ್ ಸಂಪುಟ

ನವದೆಹಲಿ, ಡಿ. 3 (ಪಿಟಿಐ, ಯುಎನ್ಐ)– ರಾಜಸ್ತಾನದಲ್ಲಿ ಭೈರೋನ್ ಸಿಂಗ್ ಶೆಖಾವತ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿವೆ. ಇದರಿಂದಾಗಿ ಈ ರಾಜ್ಯಗಳಲ್ಲಿ ಸರ್ಕಾರ ರಚನೆಬಗ್ಗೆ ಇದ್ದ ಅನಿಶ್ಚಿತ ಸ್ಥಿತಿನಿವಾರಣೆಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT