ಮಂಗಳವಾರ, 24–5–1994

ಗುರುವಾರ , ಜೂನ್ 20, 2019
24 °C

ಮಂಗಳವಾರ, 24–5–1994

Published:
Updated:

ಕನ್ನಡ ಮಾಧ್ಯಮ ವಿರುದ್ಧ ಆಂಗ್ಲ ಶಾಲೆಗಳ ರಿಟ್

ಬೆಂಗಳೂರು, ಮೇ 23– ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತೃ ಭಾಷೆ ಅಥವಾ ಕನ್ನಡದಲ್ಲಿ ಶಿಕ್ಷಣ ನೀಡಬೇಕೆಂದು ಸರ್ಕಾರ ಹೊರಡಿಸಿರುವ ಆಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಇಂದು ರಿಟ್ ಅರ್ಜಿ ಸಲ್ಲಿಸಲಾಗಿದೆ.

ಮನ್ನಣೆ ಪಡೆದ ಅನುದಾನ ರಹಿತ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತ ಆಡಳಿತ ಮಂಡಳಿಯ ಪರವಾಗಿ ಅದರ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಕೃಷ್ಣ ಅಯ್ಯರ್ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರ ಕಳೆದ ಏಪ್ರಿಲ್ 29ರಂದು ಹೊರಡಿಸಿರುವ ಆಜ್ಞೆಯನ್ನು 1989ನೇ ಜೂನ್ 18ಕ್ಕೆ ಮೊದಲು ಪ್ರಾರಂಭವಾಗಿರುವ ಶಾಲೆಗಳಿಗೂ ಅನ್ವಯಿಸಿರುವುದರ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿದ್ದಾರೆ.

ಕೈಗಾ ಯೋಜನೆ ಕಾಮಗಾರಿ ಪುನರಾರಂಭ

ಕಾರವಾರ, ಮೇ 23– ಕೈಗಾ ಯೋಜನೆಯ ನಿರ್ಮಾಣ ಹಂತದಲ್ಲಿರುವ ಮೊದಲ ರಿಯಾಕ್ಟರ್ ಗುಮ್ಮಟದ ಒಂದು ಬದಿಯ ಒಳಭಾಗ ಮೇ 13ರಂದು ಕುಸಿದಾಗ ಸ್ಥಗಿತಗೊಂಡ ಕಾಮಗಾರಿಯನ್ನು ಯೋಜನಾ ನಿರ್ದೇಶಕ ಪರಮಹಂಸ ತಿವಾರಿಯವರ ಒತ್ತಾಯ ಮತ್ತು ಬೆದರಿಕೆಯ ಆದೇಶದ ಮೇರೆಗೆ ಕೆಲ ಕೈಗಾ ಸಿಬ್ಬಂದಿ ಮತ್ತು ಗುತ್ತಿಗೆದಾರರ ಕಾರ್ಮಿಕರು ಇಂದು ಸಾಯಂಕಾಲ 4 ಗಂಟೆಯಿಂದ ಕೆಲಸ ಪುನರಾರಂಭಿಸಿದರು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !