ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 26–5–1994

Last Updated 25 ಮೇ 2019, 16:08 IST
ಅಕ್ಷರ ಗಾತ್ರ

ಅಭಿವೃದ್ಧಿ ಕಾರ್ಯ, ಮೊಯಿಲಿ ಚರ್ಚೆ: ಯೋಜನಾ ಗುರಿ ವೈಫಲ್ಯಕ್ಕೆ ಶಿಕ್ಷೆ, ಅಧಿಕಾರಿಗಳಿಗೆ ಎಚ್ಚರಿಕೆ

ಬೆಂಗಳೂರು, ಮೇ 25– ‘ಅಭಿವೃದ್ಧಿ ಯೋಜನೆಗಳ ಆರ್ಥಿಕ, ಭೌತಿಕ ಗುರಿ ಸಾಧಿಸಲು ವಿಫಲರಾಗುವ ಅಧಿಕಾರಿಗಳನ್ನು ಅನ್ಯ ಮಾರ್ಗವಿಲ್ಲದೆ ಅಮಾನತ್ತು ಹಾಗೂ ಕಡ್ಡಾಯ ನಿವೃತ್ತಿ ಶಿಕ್ಷೆಗೊಳಪಡಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘200 ದಿನಗಳ ಕಾರ್ಯ’ ಕುರಿತು ಚರ್ಚಿಸಲುಸಚಿವರುಗಳ ಸಮ್ಮುಖದಲ್ಲಿ ನಡೆದ ಇಲಾಖಾ ಕಾರ್ಯದರ್ಶಿ, ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಆಡಳಿತ ನಿರ್ವಹಣಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಕಟ್ಟಕಡೆಯ ಮನುಷ್ಯನ ತೃಪ್ತಿಯ ಉಸಿರು ನಿಮ್ಮ ಕೆಲಸ ಅಳೆಯ
ಬಹುದಾದ ಮಾನದಂಡವಾಗುತ್ತದೆ’ ಎಂದು ನುಡಿದರು.

ತೆರಿಗೆ ಸರಳೀಕರಣ ಚರ್ಚೆಗೆ ಸಚಿವರ ಸಭೆ

ನವದೆಹಲಿ, ಮೇ 25 (ಯುಎನ್‌ಐ)– ಮಾರಾಟ ತೆರಿಗೆ ಕುರಿತು ಚರ್ಚಿಸಲು ಅರ್ಥ ಸಚಿವ ಮನಮೋಹನ‌್ ಸಿಂಗ್ ಅವರು ಮೇ 27 ರಂದು ರಾಜ್ಯ ಹಣಕಾಸು ಸಚಿವರುಗಳ ಸಮಾವೇಶವೊಂದನ್ನು ಕರೆದಿದ್ದಾರೆ.

ಈ ಸಮಾವೇಶದಲ್ಲಿ ಸರಕು ಸಾಗಣೆತೆರಿಗೆ, ಮಾರಾಟ ತೆರಿಗೆಗೆ ಪರ್ಯಾಯವಾಗಿಮೌಲ್ಯ ವರ್ಧಿತ ತೆರಿಗೆ ವಿಧಿಸುವುದನ್ನು
ಏಕರೀತಿಯ ಮಾರಾಟ ತೆರಿಗೆ ಕಾಯ್ದೆಅಂಗೀಕಾರ, ದರ ಪೈಪೋಟಿ, ಐಷಾರಾಮಿ ತೆರಿಗೆ ಹಾಗೂ ಹೆಚ್ವುವರಿ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಕುರಿತು ಚರ್ಚಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT