ಶುಕ್ರವಾರ, ಫೆಬ್ರವರಿ 28, 2020
19 °C
25 ವರ್ಷಗಳ ಹಿಂದೆ

ಗುರುವಾರ, 1–12–1994: ಬಿ.ವಿ. ಕಾರಂತರಿಗೆ ‘ಕಾಳಿದಾಸ ಸಮ್ಮಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ವಿ. ಕಾರಂತರಿಗೆ ‘ಕಾಳಿದಾಸ ಸಮ್ಮಾನ’

ಭೋಪಾಲ್, ನ. 30– (ಯುಎನ್ಐ)– ಹೆಸರಾಂತ ರಂಗಭೂಮಿ ನಿರ್ದೇಶಕ ಬಿ.ವಿ. ಕಾರಂತರಿಗೆ 1993–94ನೇ ಸಾಲಿನ ‘ಕಾಳಿದಾಸ ಸಮ್ಮಾನ’ ನೀಡಲಾಗಿದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ಇರುವ ಈ ಪ್ರಶಸ್ತಿಯನ್ನು ಕಾರಂತರು ಸೃಜನಶೀಲ ಕಲೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಲು ನೀಡಲಾಗುತ್ತಿದೆ.

ಕಾರಂತರು ಬಹುಕಾಲದಿಂದ ಸಂಪರ್ಕ ಹೊಂದಿರುವ ಭೋಪಾಲದ ಕಲಾ ಸಂಕೀರ್ಣ ‘ಭಾರತ ಭವನ’ದಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇಂದು ಅಂತಿಮ ಸುತ್ತಿನ ಮತದಾನ ಘಟಾನುಘಟಿಗಳ ಭವಿಷ್ಯ ನಿರ್ಧಾರ

ಬೆಂಗಳೂರು, ನ. 30– ರಾಜ್ಯ ವಿಧಾನಸಭೆಗೆ ನಡೆಯಲಿರುವ ಅತ್ಯಂತ ಕುತೂಹಲದ ಚುನಾವಣೆಯ ಎರಡನೇ ಹಾಗೂ ಅಂತಿಮ ಸುತ್ತಿನ ಮತದಾನ ನಾಳೆ ಹತ್ತು ಜಿಲ್ಲೆಗಳ 109 ಕ್ಷೇತ್ರಗಳಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)