ಸೋಮವಾರ, ಸೆಪ್ಟೆಂಬರ್ 20, 2021
21 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಗುರುವಾರ 7–9–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್‌ ಯೋಜನೆಗಳಿಗೆ ಟೆಂಡರ್‌ ವ್ಯವಸ್ಥೆ

ನವದೆಹಲಿ, ಸೆ. 6 (ಪಿಟಿಐ)– ವಿದ್ಯುತ್‌ ಯೋಜನೆಗಳಿಗೆ ಪೈಪೋಟಿಯ ಟೆಂಡರ್‌ ಸ್ವೀಕರಿಸಲು ಸಮಿತಿಯೊಂದನ್ನು ಮುಂದಿನ 10 ದಿನಗಳಲ್ಲಿ ರಚಿಸಲಾಗುವುದು ಎಂದು ಕೇಂದ್ರ ವಿದ್ಯುತ್‌ ಸಚಿವ ಎನ್‌.ಕೆ.ಪಿ.ಸಾಳ್ವೆ ಅವರು ಇಂದು ಪ್ರಕಟಿಸಿ, ಈ ಸಮಿತಿ ಯಾವುದೇ ರಹಸ್ಯಗಳಲ್ಲಿದೆ ಕೆಲಸ ಮಾಡುವುದು ಎಂದರು.

ಈ ಮಧ್ಯೆ ಹಣಕಾಸು ಸಚಿವ ಡಾ. ಮನಮೋಹನ ಸಿಂಗ್‌ ಅವರು ಇಲ್ಲಿ ಜರುಗಿದ ಆರ್ಥಿಕ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ಮಾತನಾಡುತ್ತಾ, ವಿದ್ಯುತ್‌, ದೂರವಾಣಿ ಹಾಗೂ ಪೆಟ್ರೋಲಿಯಂ ರಂಗಗಳ ಬೃಹತ್‌ ಯೋಜನೆಗಳಿಗೆ ಖಾಸಗಿಯವರನ್ನು ಆಹ್ವಾನಿಸುವಾಗ ಬರುವ ಭ್ರಷ್ಟಾಚಾರದ ಆರೋಪಗಳನ್ನು ನಿವಾರಿಸಲು ಇಂತಹ ವ್ಯವಸ್ಥೆ ಅಗತ್ಯ ಎಂದು ಪ್ರತಿಪಾದಿಸಿದರು.

ಆಂಧ್ರ: ಇಂದು ಚಂದ್ರಬಾಬು ವಿಶ್ವಾಸಮತ ಕೋರಿಕೆ

ಹೈದರಾಬಾದ್‌, ಸೆ. 6 (ಯುಎನ್‌ಐ)– ಆಂಧ್ರ ಪ್ರದೇಶದ ಎನ್‌.ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸಚಿವ ಸಂಪುಟವು ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಕೇಳಲಿದೆ. ವಿಶ್ವಾಸಮತಕ್ಕೆ ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌ ಅವರು ತಮ್ಮ ಪಕ್ಷದ ಶಾಸಕರಿಗೆ ಪ್ರತ್ಯೇಕ ‘ವಿಪ್‌’ಗಳನ್ನು ಹೊರಡಿಸಿದ್ದಾರೆ.

ನೀವು ನೀಡಿದ ಆದೇಶವನ್ನು ಉಲ್ಲಂಘಿಸಿದ ಶಾಸಕರು ಅರ್ಹತೆ ಕಳೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಚಂದ್ರಬಾಬು ನಾಯ್ಡು ‘ಕಾನೂನು ತನ್ನ ಕೆಲಸ ಮಾಡುತ್ತದೆ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.