ಭಾನುವಾರ, ಜನವರಿ 19, 2020
24 °C
ಬುಧವಾರ

ಪ್ರಜಾವಾಣಿ 25 ವರ್ಷಗಳ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಗಡೆ, ಬೊಮ್ಮಾಯಿಗೆ ದೇವೇಗೌಡ ಸಮಜಾಯಿಷಿ

ಬೆಂಗಳೂರು, ಡಿ. 13: ವಿಧಾನಸೌಧಕ್ಕೆ ಮುತ್ತಿಗೆ ಮತ್ತು ಅದಕ್ಕೆ ಮುನ್ನ ಹಾಗೂ ನಂತರ ನಡೆದ ದಾಂದಲೆಯಿಂದಾಗಿ ನೊಂದಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಖುದ್ದಾಗಿ ಭೇಟಿ ಮಾಡಿ ಕ್ಷಮೆ ಯಾಚಿಸಿದರು. ಅವರ ಮಾರ್ಗದರ್ಶನಕ್ಕೆ ಮನವಿ ಮಾಡಿಕೊಂಡರು.

ಹೆಗಡೆ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ದೇವೇಗೌಡ ಅವರಿಗೆ, ಸರ್ಕಾರವನ್ನು ನಡೆಸಲು ತಮ್ಮ ಬೆಂಬಲ ಎಂದಿಗೂ ಇದೆ ಎಂದು ಹೆಗಡೆ ಭರವಸೆ ನೀಡಿದರೆಂದು ಹೇಳಲಾಗಿದೆ.

ದೇವೇಗೌಡ ಅವರು ಬೊಮ್ಮಾಯಿ ಅವರ ಮನೆಗೂ ತೆರಳಿ ಮಾತುಕತೆ ನಡೆಸಿದರು. ಭಾನುವಾರ ನಡೆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪ‍ಡಿಸಿದರು ಎನ್ನಲಾಗಿದೆ.

ಸಕ್ಕರೆ ಹಗರಣ: ವರದಿಗೆ ನಕಾರ; ಕೋಲಾಹಲ

ನವದೆಹಲಿ, ಡಿ. 13 (ಪಿಟಿಐ): ಸಕ್ಕರೆ ಆಮದು ಹಗರಣದ ತನಿಖೆಗೆ ನೇಮಕಗೊಂಡಿದ್ದ ಗ್ಯಾನ್ ಪ್ರಕಾಶ್ ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂಬ ಎಡಪಕ್ಷ ಮತ್ತು ಜನತಾ ದಳ ಸದಸ್ಯರ ಬಿಗಿಪಟ್ಟಿಗೆ ಮಣಿಯಲು ಸರ್ಕಾರ ನಿರಾಕರಿಸಿದ್ದರಿಂದ ಇಂದು ಲೋಕಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿ ಮಧ್ಯಾಹ್ನದ ನಂತರ ಕಲಾಪ ನಡೆಸಲಾಗದೆ ಮುಂದೂಡಲಾಯಿತು.

ಪ್ರತಿಕ್ರಿಯಿಸಿ (+)