ಭಾನುವಾರ, ಜನವರಿ 26, 2020
25 °C

25 ವರ್ಷಗಳ ಹಿಂದೆ |ಶನಿವಾರ, 17–12–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮ, ಪ್ರತಿಭಟನೆ ಮಧ್ಯೆ ‍ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಡಿ. 16– ರಾಜ್ಯದ ಎಲ್ಲೆಡೆಯಿಂದ ಬಂದ ಸಾವಿರಾರು ಅಭಿಮಾನಿಗಳ ಉಕ್ಕಿದ ಸಂತಸ, ಜೈಕಾರ ಹಾಗೂ ಕೆಲವು ಅತೃಪ್ತರ ಬಹಿರಂಗ ಪ್ರತಿಭಟನೆಗಳ ಮಧ್ಯೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂದು ಸಂಜೆ ನಡೆದ ಸಡಗರದ ಸಮಾರಂಭದಲ್ಲಿ ಜನತಾ ದಳದ 35 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಮಂತ್ರಿಮಂಡಲದಲ್ಲಿ 21 ಮಂದಿ ಸಂಪುಟ ದರ್ಜೆಯ ಸಚಿವರು, 14 ರಾಜ್ಯ ಸಚಿವರಿದ್ದಾರೆ.

ಇದರೊಂದಿಗೆ ಕಳೆದ ಭಾನುವಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಡಿ. ದೇವೇಗೌಡರ ಚೊಚ್ಚಲ ಮಂತ್ರಿಮಂಡಲ ರಚನೆ ನಿರ್ವಿಘ್ನವಾಗಿ ನೆರವೇರಿತು. ಸಚಿವರಿಗೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಅಧಿಕಾರ ಹಾಗೂ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ನೂತನ ಮಂತ್ರಿಮಂಡಲದಲ್ಲಿ 15 ಮಂದಿ ಹೊಸಬರಿದ್ದು, ಇಬ್ಬರು ಮಹಿಳೆಯರು.

ಐಶ್ವರ್ಯಾ ಆಗಮನ

ಮುಂಬೈ, ಡಿ. 16 (ಪಿಟಿಐ)– ದಕ್ಷಿಣ ಆಫ್ರಿಕಾದ ಸನ್‌ಸಿಟಿಯಲ್ಲಿ ನವೆಂಬರ್ 19ರಂದು ನಡೆದ ಸ್ಪರ್ಧೆಯಲ್ಲಿ ‘ವಿಶ್ವ ಸುಂದರಿ–1994’ ಆಗಿ ಆಯ್ಕೆಯಾದ ಭಾರತದ ಸುಂದರಿ ಐಶ್ವರ್ಯಾ ರೈ ಇಂದು ಇಲ್ಲಿಗೆ ಆಗಮಿಸಿದರು.

ಪ್ರತಿಕ್ರಿಯಿಸಿ (+)