ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, ಫೆ. 24, 1994

Last Updated 23 ಫೆಬ್ರುವರಿ 2019, 20:18 IST
ಅಕ್ಷರ ಗಾತ್ರ

ಜಮ್ಮು ಪೇಟೆ ಮಧ್ಯೆ 2 ಬಾಂಬ್ ಸ್ಫೋಟ: ಕಾಶ್ಮೀರಿ ಅಕೃತ್ಯದ ಶಂಕೆ

ಜಮ್ಮು, ಫೆ. 23 (ಯುಎನ್‌ಐ)– ಇಲ್ಲಿನ ಜನಭರಿತ ತರಕಾರಿ ಮಾರುಕಟ್ಟೆಯಲ್ಲಿ ಇಂದು ಏಕ ಕಾಲಕ್ಕೆ ಎರಡು ಬಾಂಬುಗಳು ಸ್ಫೋಟಿಸಿ ನಾಲ್ಕ ಜನರನ್ನು ಆಹುತಿ ಪಡೆದವು. ಅನಂತರ ಈ ನಗರದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ಗಲಭೆಗಳು ನಡೆದವು. ಹಿಂಸಾ ನಿರತ ಗುಂಪುಗಳನ್ನು ಚದುರಿಸಲು ಪೊಲೀಸರು ಅನೇಕ ಬಾರಿ ಲಾಠಿ ಪ್ರಹಾರ, ಅಶ್ರುವಾಯು ಶೆಲ್‌ಗಳ ಸ್ಫೋಟ ನಡೆಸಿದ್ದಾರೆ.

ಬೆಳಿಗ್ಗೆ ಎಂಟೂವರೆ ಗಂಟೆ ವೇಳೆಗೆ ಇಂದಿರಾ ಚೌಕದಲ್ಲಿ ಜನರಿಂದ ಗಿಜಿಗುಟ್ಟುತ್ತಿದ್ದ ಮಾರುಕಟ್ಟೆಯಲ್ಲಿ ಈ ಬಾಂಬುಗಳು ಸ್ಫೋಟಿಸಿದವು. ಈ ಸ್ಫೋಟಕಗಳಿಂದ ಮೂವತ್ತಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡರೆನ್ನಲಾಗಿದೆ. ಆ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟರೊಂದರಲ್ಲಿ ಈ ಬಾಂಬುಗಳನ್ನು ಅಡಗಿಸಿಡಲಾಗಿತ್ತು ಎಂದು ಶಂಕಿಸಲಾಗಿದೆ.

**

ಹಸ್ತಕ್ಷೇಪದ ವಿರುದ್ಧ ಭಾರತ ಎಚ್ಚರಿಕೆ

ವಾಷಿಂಗ್ಟನ್, ಫೆ. 23– ಮಾನವ ಹಕ್ಕು ರಕ್ಷಣೆ ಮತ್ತು ಜನತೆಯ ಅಶೋತ್ತರ ಈಡೇರಿಕೆ ಹೆಸರಿನಲ್ಲಿ ತನ್ನ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಪ್ರಜಾಸತ್ತಾತ್ಮಕ ಪರಂಪರೆ ಮತ್ತು ಭಾವೈಕ್ಯತೆಗೆ ಅಪಾಯ ಉಂಟು ಮಾಡುವ ಯಾವುದೇ ಪ್ರಯತ್ನಗಳನ್ನು ಭಾರತ ಸಹಿಸುವುದಿಲ್ಲ ಎಂದು ಅಮೆರಿಕದಲ್ಲಿ ಭಾರತೀಯ ರಾಯಭಾರಿ ಸಿದ್ಧಾರ್ಥ ಶಂಕರ ರಾಯ್ ಇಂದು ಸ್ಪಷ್ಟಪಡಿಸಿದರು.

ನ್ಯೂಯಾರ್ಕ್ ವಿದೇಶಾಂಗ ನೀತಿ ಸಂಘದ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕು ಎಂಬ ವಾದ ಸಮರ್ಥಿಸಿದರೆ ಭಾರತದಲ್ಲಿ ‘40 ಬೋಸ್ನಿಯಗಳು’ ಸೃಷ್ಟಿಯಾದವು ಎಂದು ಎಚ್ಚರಿಸಿದರು. ಭಾರತ ಮತ್ತು ಅಮೆರಿಕಗಳ ಉದ್ದೇಶ ಮತ್ತು ಪರಂಪರೆಯಲ್ಲಿನ ಸಮಾನ ಅಂಶಗಳನ್ನು ರಾಯ್ ಪಟ್ಟಿ ಮಾಡಿದರು.

**

ಮತ್ತೆ ಗಡಿ ವಿವಾದ ಕೆದಕಲು ಮಹಾರಾಷ್ಟ್ರ ಯತ್ನ

ನವದೆಹಲಿ, ಫೆ. 23– ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವನ್ನು ಹೊಸದಾಗಿ ಕೆದಕಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಆರಂಭಿಸಿದೆ.

ಗಡಿ ವಿವಾದಕ್ಕೆ ‘ಸಮಾಧಾನಕರ’ ಪರಿಹಾರ ಕಂಡು ಹಿಡಿಯುವ ಉದ್ದೇಶದಿಂದ ಮುಖ್ಯಮಂತ್ರಿ ಶರದ್ ಪವಾರ್ ಅವರು ಕಳೆದ ವಾರ ರಾಜ್ಯದ ಸರ್ವ ಪಕ್ಷಗಳ ಸಂಸತ್ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದರೂ, ಅವರ ಸಂಪುಟದ ಹಿರಿಯ ಸದಸ್ಯರೊಬ್ಬರು ಹೊಸ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT