ಶುಕ್ರವಾರ, ನವೆಂಬರ್ 22, 2019
23 °C
ಶನಿವಾರ,

ರಾಜ್ಯದ ಐವರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ

Published:
Updated:

ರಾಜ್ಯದ ಐವರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ

ನವದೆಹಲಿ, ಸೆ. 5– ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಗಳಿಗೆ ತೊಂಬತ್ತೈದು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ಐವತ್ತೊಂದು ಜನ
ಪ್ರಾಥಮಿಕ ಶಾಲಾ ಶಿಕ್ಷಕರು, ಮೂವತ್ತೈದು ಜನ ಸೆಕೆಂಡರಿ ಶಾಲಾ ಶಿಕ್ಷಕರು ಮತ್ತು ಒಂಬತ್ತು ಜನ ಸಂಸ್ಕೃತ
ಪಂಡಿತರು.

ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಎಂ.ಎಸ್. ಅಕ್ಕಿ, ಶ್ರೀ ಕೆ. ನಾಗಪ್ಪ ಮತ್ತು ಶ್ರೀಮತಿ ಕೃಷ್ಣಾ‍ಬಾಯಿ ವಿಷ್ಣುನಾಯಕ್ ಹಾಗೂ ಸೆಕೆಂಡರಿ ಶಾಲಾ ಶಿಕ್ಷಕರಾದ ಕೆ. ಮದರ್ ಎಂ. ಕಾರ್ಮೆಲ, ಶ್ರೀ ಬಸಪ್ಪ ಗುರಪ್ಪ ನರಗುಂದ್ ಅವರನ್ನು ಮೈಸೂರು ರಾಜ್ಯದಿಂದ ಈ ‍ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1958ರಲ್ಲಿ ಆರಂಭವಾದ ಈ ಪ್ರಶಸ್ತಿಯನ್ನು ಈ ವರ್ಷದ ಪ್ರಶಸ್ತಿ ವಿಜೇತರೂ ಸೇರಿ 1,001 ಜನ ಶಿಕ್ಷಕರು ರಾಷ್ಟ್ರದಲ್ಲಿ ಪಡೆದಿದ್ದಾರೆ.

ತೆರಿಗೆ ಹಾರಿಸಿದ ನಟ ಕಿಶೋರ್‌ಗೆ 2 ತಿಂಗಳು ಸೆರೆ

ಮುಂಬೈ, ಸೆ. 5– ಸುಪ್ರಸಿದ್ಧ ಚಲನಚಿತ್ರ ನಟ ಹಾಗೂ ನಿರ್ಮಾಪಕ ಕಿಶೋರ್‌ಕುಮಾರ್ ಅವರು ತೆರಿಗೆ ಕೊಡದೆ ತಪ್ಪಿಸಿಕೊಂಡಿದ್ದಕ್ಕಾಗಿ ಅವರಿಗೆ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಶ್ರೀ ಎಂ.ವೈ. ಗುಪ್ತ ಅವರು ಇಂದು ಎರಡು ತಿಂಗಳು ಸಾದಾ ಶಿಕ್ಷೆ ವಿಧಿಸಿದರು.

ಪ್ರತಿಕ್ರಿಯಿಸಿ (+)