ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರ–ರಾಜ್ಯ ನೌಕರರ ವೇತನ, ಭತ್ಯ ಏಕರೀತಿ ಇರಲಿ’

Last Updated 15 ಡಿಸೆಂಬರ್ 2018, 18:34 IST
ಅಕ್ಷರ ಗಾತ್ರ

‘ಕೇಂದ್ರ–ರಾಜ್ಯ ನೌಕರರ ವೇತನ, ಭತ್ಯ ಏಕರೀತಿ ಇರಲಿ’

ಮೈಸೂರು,ಡಿ.15– ರಾಜ್ಯ ಮತ್ತು ಕೇಂದ್ರ ಸರ್ಕಾರ ನೌಕರರ ಸಂಬಳ ಮತ್ತು ತುಟ್ಟಿಭತ್ಯೆಗಳಲ್ಲಿನ ವ್ಯತ್ಯಾಸವನ್ನು ಆದಷ್ಟು ಬೇಗ ತೊಲಗಿಸಿ, ಏಕಮಟ್ಟದ ಸ್ಕೇಲುಗಳು ಮತ್ತು ತುಟ್ಟಿಭತ್ಯವನ್ನು ಜಾರಿಗೆ ತರುವುದು ಅಗತ್ಯವೆಂದು ವಿಧಾನಪರಿಷತ್‌ ಅಧ್ಯಕ್ಷ ಶ್ರೀ ಕೆ.ಕೆ.ಶೆಟ್ಟಿ ಅವರು ಇಂದು ಇಲ್ಲಿ ಒತ್ತಾಯಪಡಿಸಿದರು.

ಸರ್ಕಾರಿ ನೌಕರರಿಗೆ ಮುಷ್ಕರ, ಚಳವಳಿ ಹಕ್ಕಿಲ್ಲ: ಕೆಂಗಲ್‌

ಜಯಪುರ, ಡಿ.15–ಮುಷ್ಕರ, ಚಳವಳಿ, ಪ್ರದರ್ಶನ ಬಂದ್‌ ಮೊದಲಾದವುಗಳಲ್ಲಿ ಭಾಗ
ವಹಿಸುವ ಹಕ್ಕು ಸರ್ಕಾರಿ ನೌಕರರಿಗಿಲ್ಲವೆಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಕೆ. ಹನುಮಂತಯ್ಯನವರು ಇಂದು ಇಲ್ಲಿ ತಿಳಿಸಿದರು.

ಐ.ಎ.ಎಸ್‌.,ಐ.ಸಿ.ಎಸ್‌, ಅಥವಾ ಎನ್‌.ಜಿ.ಓ, ಯಾರೇ ಆಗಲೀ ಸರ್ಕಾರಿ ನೌಕರರಿಗೆ ಕಾರ್ಮಿಕ ಸಂಘದ ಮನೋಭಾವ ಸಲ್ಲದು ಎಂದು ಅವರು ತಿಳಿಸಿದರು.

ಮಹಾಜನ ವರದಿ ಕುರಿತು ಹೆಚ್ಚು ಘರ್ಷಣೆ ಇಲ್ಲದ ನಿರ್ಧಾರಕ್ಕೆ ಯತ್ನ

ಬೆಂಗಳೂರು, ಡಿ.15– ಮೈಸೂರು–ಮಹಾರಾಷ್ಟ್ರ ಗಡಿಗೆ ಸಂಬಂಧಿಸಿದಂತೆ ಮಹಾಜನ್‌ ಆಯೋಗದ ಶಿಫಾರಸು ಕಾರ್ಯಗತವಾಗುತ್ತಿರುವುದು ತಡವಾಗಿರುವುದಕ್ಕೆ ಕಾರಣ ‘ಘರ್ಷಣೆ ಅತ್ಯಂತ ಕಡಿಮೆಯಾಗುವಂತಹ’ ಪರಿಹಾರವನ್ನು ಹುಡುಕುತ್ತಿರುವುದಾಗಿದೆ.

ಅಧಿಕ ವೇತನ‘ ಜನರ ಮೇಲೆ ಹೆಚ್ಚು ತೆರಿಗೆ ಭಾರ

ಮೈಸೂರು ಡಿ.15– ‘ಕನಿಷ್ಠ ಅಗತ್ಯಗಳ ಪೂರೈಕೆಗೆ ಸಾಕಾಗುವಷ್ಟು ಸಂಬಳವನ್ನು ನೀಡುವುದು ಸರ್ಕಾರದ ಕರ್ತವ್ಯ. ಅದೇ ಸಂದರ್ಭದಲ್ಲಿ ಸರ್ಕಾರಿ ನೌಕರರು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಮತ್ತು ಹೊಸ ಆದಾಯ ಮೂಲಗಳನ್ನು ಇರುವ ಕಷ್ಟಗಳನ್ನು ಮನಗಾಣಬೇಕು’ ಎಂದು ಪೌರಾಡಳಿತ ಖಾತೆ ಸಚಿವ ಶ್ರೀ ಕೆ. ಪುಟ್ಟಸ್ವಾಮಿ ಅವರು ಇಂದು ಇಲ್ಲಿ ರಾಜ್ಯ ಎನ್‌.ಜಿ.ಓ.ಗಳ ಸಮ್ಮೇಳನವನ್ನು ಉದ್ಘಾಟಿಸುತ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT