ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 29–11–1968

Last Updated 28 ನವೆಂಬರ್ 2018, 20:25 IST
ಅಕ್ಷರ ಗಾತ್ರ

ಕೇಂದ್ರದ ನೆರವಿಲ್ಲದೆ ನಕ್ಸಲೀಯರ ದಮನ: ಇ.ಎಂ.ಎಸ್.

ನವದೆಹಲಿ, ನ. 28– ಕೇರಳದ ಪೊಲೀಸ್ ಠಾಣೆಗಳ ಮೇಲೆ ನಕ್ಸಲೀಯರ ದಾಳಿ ರಾಜಕೀಯ ಮತ್ತು ಕಾಯಿದೆ ಸುವ್ಯವಸ್ಥೆ ಸಮಸ್ಯೆಯಾಗಿದ್ದು ಕೇಂದ್ರದ ನೆರವಿಲ್ಲದೆ ಅದನ್ನು ಹತೋಟಿಗೆ ತರುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆಯೆಂದು ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದರಿ ಪಾಡ್ ಅವರು ಇಂದು ಇಲ್ಲಿ ತಿಳಿಸಿದರು.

**

‘ಕ್ರಾಂತಿ ಕನ್ಯೆ’ ಅಜಿತಾಗೆ ಮುಖಕ್ಕೆ ಪೆಟ್ಟು

ಮೈಸೂರು, ನ. 28– ಕೇರಳದ ನಕ್ಸಲೀಯ ಚಟುವಟಿಕೆಯ ಸಂಬಂಧದಲ್ಲಿ ಸಾಹಸಿ ಎನಿಸಿದ 21 ವರ್ಷದ ಕನ್ಯೆಗೆ ಮುಖದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.

ಮೈಸೂರು–ಕೇರಳ ಗಡಿ ಪ್ರದೇಶಕ್ಕೆ ಇಂದು ಭೇಟಿ ಇತ್ತ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿದು ಬಂದ ಸಂಗತಿಗಳ ಪ್ರಕಾರ ನ. 26 ರಂದು ಒಂದು ನಾಡಬಾಂಬು ಆಕಸ್ಮಿಕವಾಗಿ ಸಿಡಿದಾಗ ಈ ಗಾಯ ಆಯಿತೆಂದು ಗೊತ್ತಾಗಿದೆ.

***

ಹಸಿರ ಮನೆಯಲ್ಲಿ ರಕ್ತಕ್ರಾಂತಿ?
ಇಲ್ಲಿಯವರೆಗೆ ತಿಳಿದು ಬಂದಿರುವಷ್ಟನ್ನು ನಂಬುವುದಾದರೆ, ಸಶಸ್ತ್ರ ಕ್ರಾಂತಿಯ ಮೂಲಕ, 14 ವರ್ಷಗಳಲ್ಲಿ ಇಡೀ ಭಾರತದಲ್ಲಿ ಕಮ್ಯೂನಿಸ್ಟ್ ಆಡಳಿತ ಸ್ಥಾಪಿಸಲಾಗುವುದೆಂಬ ನಂಬಿಕೆ ಅಥವಾ ನಿರ್ಧಾರದಿಂದಿರುವ ಕೇರಳದ ಕಮ್ಯೂನಿಸ್ಟ್ ತೀವ್ರಗಾಮಿಗಳು (ನಕ್ಸಲ್ ಬಾರಿ ಮಾರ್ಗವಾದಿಗಳು) ಬಿಟ್ಟು ಹೋಗಿರುವ ಎಚ್ಚರಿಕೆ.

ಕಳೆದ ಭಾನುವಾರ ಬೆಳಗಿನ ಜಾವದಲ್ಲಿ ಪೊಲೀಸ್ ವೈರ್‌ಲೆಸ್ ಯಂತ್ರವಿದ್ದ ಮನೆಯ ಮೇಲೆ ಕಮ್ಯೂನಿಸ್ಟ್ ತೀವ್ರವಾದಿಗಳೆನ್ನಲಾದ ಶಸ್ತ್ರಧಾರಿಗಳಿಂದ ದಾಳಿ, ಈಟಿ ಮಾದರಿಯ ಆಯುಧವನ್ನು ಕತ್ತಿಗೆ ತೂರಿ ವೈರ್‌ಲೆಸ್ ಆಪರೇಟರನ ಕೊಲೆ ಮತ್ತೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ತೊಡೆಗೆ ಗುಂಡಿನೇಟು, ಸಬ್‌ಇನ್ಸ್‌ಪೆಕ್ಟರ್ ಶಂಕುಣ್ಣಿ ಮೇನನ್ ಅವರಿಗೆ ತೀವ್ರ ಗಾಯ. ಮೂರು ಮಂದಿ ಪೊಲೀಸರಿಗೆ ಗಾಯ.ಇಡೀ ಭಾರತದಲ್ಲಿ ಕುತೂಹಲವನ್ನುಂಟು ಮಾಡಿರುವ ಘಟನೆಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT