ಗುರುವಾರ, 9–1–1969

7
ಗುರುವಾರ

ಗುರುವಾರ, 9–1–1969

Published:
Updated:

ಕನ್ನಡದ ಋಣ ತೀರಿಸಲು ರಾಷ್ಟ್ರಕವಿ ಕುವೆಂಪು ಕರೆ

ಬೆಂಗಳೂರು, ಜ. 8– ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಲ್ಲ ತರಗತಿಗಳಲ್ಲೂ ವ್ಯಾಪಕವಾಗಿ ಕನ್ನಡ ಮಾಧ್ಯಮ ಜಾರಿಗೆ ಬರಬೇಕೆಂದು ರಾಷ್ಟ್ರಕವಿ ಡಾ. ಕೆ.ವಿ. ಪುಟ್ಟಪ್ಪ ಅವರು ಇಂದು ಆಗ್ರಹಪಡಿಸಿದರು.

ಈ ವಿಶ್ವವಿದ್ಯಾನಿಲಯವು ಮೊದಲು ಈ ಪ್ರದೇಶದ ಅವಶ್ಯಕತೆಗಳನ್ನು ಗುರುತಿಸಿ ಈಡೇರಿಸಬೇಕು. ಈ ಭಾಗದ ಜನತೆಯ ಋಣತೀರಿಸಬೇಕು. ಅದು ಕನ್ನಡದಿಂದ ಮಾತ್ರ ಸಾಧ್ಯ, ಇನ್ನಾವ ಭಾಷೆಯಿಂದಲೂ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೇವಾಲಯವೀ ಹೂವಿನ ತೋಟಂ’ ಗಾಜಿನ ಮನೆಯಲ್ಲಿ ನಡೆದ ನಾಲ್ಕನೆ ವಾರ್ಷಿಕ ಪದವೀ ಪ್ರಧಾನ ಸಮಾರಂ
ಭದಲ್ಲಿ ಗೌರವ ಡಿ.ಲಿಟ್, ಪ್ರಶಸ್ತಿಯನ್ನು ಸ್ವೀಕರಿಸಿ ಭಾಷಣ ಮಾಡಿದ ಅವರು ಹಿಂದೀ ಮಾಧ್ಯಮದ ಪ್ರಸ್ತಾಪವೆತ್ತಿ
‘ಇದು ಈ ಘಟ್ಟದಲ್ಲಿ ತುಂಬ ಅಪಾಯಕಾರಿ ಹೆಜ್ಜೆ’ ಎಂದು ಸ್ಪಷ್ಟಪಡಿಸಿದರು.

‘ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸುವ ಯೋಜನೆಯ ಅಂಗವಾಗಿ ಅಲ್ಲಿ ಸಂಪರ್ಕ ಭಾಷೆಯಾದ ಹಿಂದೀ ಮಾಧ್ಯಮದ ಪ್ರಸ್ತಾಪವೆತ್ತಿರುವುದೇನಾದರೂ ನಿಜವಾಗಿದ್ದ ಪಕ್ಷದಲ್ಲಿ ಆಚಾತುರ್ಯದ ನೀತಿಯೆಂದೇ ಭಾವಿಸಬೇಕಾಗುತ್ತದೆ’ ಎಂದರು.

**

ಪ್ರಧಾನಿಗೆ ಬಂಗಾರಪ್ಪ ಗೇಲಿ

ಬೆಂಗಳೂರು, ಜ. 8– ರಾಜ್ಯ ಕಾಂಗೈ ಶಾಸಕಾಂಗ ಪಕ್ಷದ ನಾಯಕತ್ವ ಬದಲಾವಣೆ ಹಾಗೂ ಭಿನ್ನಮತದಿಂದ ಪ್ರಸಕ್ತ ರಾಜ್ಯದಲ್ಲಿ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ನಿಲುವು ‘ಬೇಜವಾಬ್ದಾರಿ ಹಾಗೂ ನಾಚಿಕೆಗೇಡಿನದು’‍ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಇಂದು ಇಲ್ಲಿ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !