ಭಾನುವಾರ, 26–1–1969

7
ದಿನದ ನೆನಪು

ಭಾನುವಾರ, 26–1–1969

Published:
Updated:

ವಿದ್ಯಾರ್ಥಿ ಅಶಿಸ್ತು: ರಾಷ್ಟ್ರಪತಿ ಕಳವಳ

ನವದೆಹಲಿ, ಜ. 25– ವಿದ್ಯಾರ್ಥಿಗಳಲ್ಲಿ ಅಶಿಸ್ತು ಹರಡುತ್ತಿರುವುದಕ್ಕೆ ‘ಅತೀವ ಕಳವಳ’ವನ್ನು ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಅವರು ಇಂದು ವ್ಯಕ್ತಪಡಿಸಿ, ವಿದ್ಯಾರ್ಥಿಗಳು ತಮ್ಮ ಆಲೋಚನೆ ಮತ್ತು ಕೃತಿಗಳಲ್ಲಿ ಕರ್ತವ್ಯಕ್ಕೆ ಮೊದಲ ಸ್ಥಾನವನ್ನು ಕೊಡಬೇಕೆಂದು ಮನವಿ ಮಾಡಿಕೊಂಡರು.

ರಾಷ್ಟ್ರಕ್ಕೆ ರಾಷ್ಟ್ರಪತಿ ಅವರು ಗಣರಾಜ್ಯೋತ್ಸವ ಸಂದೇಶ ನೀಡುತ್ತಿದ್ದರು.

**

ಐವರು ಕನ್ನಡಿಗರಿಗೆ ಪದ್ಮಶ್ರೀ

ನವದೆಹಲಿ, ಜ. 25– ಈ ಬಾರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾದ ಪದ್ಮಶ್ರೀ ಪ್ರಶಸ್ತಿ ಪಡೆದಿರುವವರಲ್ಲಿ ಚಿತ್ರಕಲೆ, ವಿಜ್ಞಾನ, ನೃತ್ಯ, ಚಲನಚಿತ್ರ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಐವರು ಪ್ರತಿಭಾವಂತ ಕನ್ನಡಿಗರಿದ್ದಾರೆ.

‘ಪದ್ಮಶ್ರೀ’ ವಿಜೇತ ಕನ್ನಡಿಗರ ವಿವರ: ತಿರುವನಂತಪುರದ ತುಂಬಾ ರಾಕೆಟ್‌ ಕೇಂದ್ರದ ಡೈರೆಕ್ಟರ್ ಹೊಳೆನರಸೀಪುರದ ಗೋವಿಂದರಾವ್‌ ಶ್ರೀನಿವಾಸಮೂರ್ತಿ, ಚಿತ್ರ ಕಲಾವಿದರಾದ ಬರೋಡದಲ್ಲಿರುವ ಪ್ರೊಫೆಸರ್ ನಾರಾಯಣ ಶ್ರೀಧರ ಬೇಂದ್ರೆ, ಹುಬ್ಬಳ್ಳಿಯ ವೈದ್ಯ ಡಾ. ರೇವಣ್ಣಸಿದ್ದಪ್ಪಗೌಡ ಬಸಪ್ಪಗೌಡ ಪಾಟೀಲ್, ಮೈಸೂರಿನ ಕಲಾವಿದ ನೃತ್ಯಕೋವಿದ ಸಿಂಗಣ್ಣಾಚಾರ್ ನರಸಿಂಹಸ್ವಾಮಿ ಮತ್ತು ಸುಪ್ರಸಿದ್ಧ ಚಲನಚಿತ್ರತಾರೆ ಬಿ. ಸರೋಜಾದೇವಿ.

**

ಹಾಸನದ ರಾಜಾರಾವ್, ಲತಾ ಮಂಗೇಶ್ಕರ್ ‘ಪದ್ಮಭೂಷಣ’ ವಿಜೇತರು

ನವದೆಹಲಿ, ಜ. 25– ಕನ್ನಡಿಗ ಕಾದಂಬರಿಕಾರ ಹಾಸನದ ರಾಜಾರಾವ್ (‘ಕಾಂತಾಪುರ’ದ ಖ್ಯಾತಿ), ಹಿನ್ನೆಲೆ ಗಾಯಕಿ ಲತಾಮಂಗೇಶ್ಕರ್ ಅವರು ಈ ಸಲ ಪದ್ಮಭೂಷಣ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !