ಭಾನುವಾರ, 2–2–1969

7
ಭಾನುವಾರ

ಭಾನುವಾರ, 2–2–1969

Published:
Updated:

ತಾರಾಪುರ ರಿಆಕ್ಟರ್ ಕಾರ್‍ಯಶೀಲ

ಮುಂಬೈ, ಫೆ. 1– ಅಣುಶಕ್ತಿಯಿಂದ ವಿದ್ಯುತ್ತನ್ನು ಉತ್ಪಾದಿಸುವ ತಾರಾಪುರ ರಿಆಕ್ಟರ್ ಇಂದು ಬೆಳಿಗ್ಗೆ 8.37ರಲ್ಲಿ ‘ಕಾರ್‍ಯಶೀಲ’ವಾಯಿತು. ಇದರಿಂದ ಉತ್ಪಾದಿಸಲಾಗುವ ವಿದ್ಯುತ್ತನ್ನು ಮಹಾರಾಷ್ಟ್ರ ಮತ್ತು ಗುಜರಾತ್‌ಗಳಿಗೆ ಒದಗಿಸಲಾಗುವುದು.

ಎರಡನೆ ಘಟಕದ ಕಾರ್ಯಾಚರಣೆಯು ಈ ತಿಂಗಳ ಕೊನೆಯ ಭಾಗದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

ವರ್ಷದ ಜುಲೈ ತಿಂಗಳ ವೇಳೆಗೆ ಈ ರಿಆಕ್ಟರ್ 380 ಮೆಗಾವಾಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯುವುದು ಎಂದು ಇಂದು ರಾತ್ರಿ ಅಣುಶಕ್ತಿ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ. ‘ಕಾರ್‍ಯಶೀಲ’ವಾಗುತ್ತಿರುವ ರಿಆಕ್ಟರ್‌ಗಳಲ್ಲಿ ಇದು ನಾಲ್ಕನೆಯದು, ಅಪ್ಸರಾಸೈರಿಸ್ ಮತ್ತು ಸೆರ್ಲಿನಾ ರಿಆಕ್ಟರುಗಳು ಸಂಶೋಧನಾ ರಿಆಕ್ಟರುಗಳು.

ನಾಟಕ ವಿಮರ್ಶೆಗೆ ‘ಪ್ರಜಾವಾಣಿ’ ಬಹುಮಾನ

ಬೆಂಗಳೂರು, ಫೆ. 1– ನಾಟ್ಯ ಸಂಘದ ಆಶ್ರಯದಲ್ಲಿ ಜನವರಿ 20ರಿಂದ 27ರ ವರೆಗೆ ನಡೆದ ಅಂತರ ಕಾಲೇಜು ನಾಟಕ ಸ್ಪರ್ಧೆ ಸಂಬಂಧವಾಗಿ ವಿದ್ಯಾರ್ಥಿಗಳಿಂದ ಬಂದ ವಿಮರ್ಶೆಗಳಲ್ಲಿ ‘ಪ್ರಜಾವಾಣಿ’ಯ ಬಹುಮಾನ ಪಡೆದವರು: ‘ಶ್ರೀ ಎಸ್.ಎನ್. ಶ್ರೀಧರ್’ ಮೂರನೇ ಬಿ.ಎ. (ಆನರ್ಸ್) ಇಂಗ್ಲಿಷ್, ಸೆಂಟ್ರಲ್ ಕಾಲೇಜು, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !