ಸೋಮವಾರ, 3–2–1969

7

ಸೋಮವಾರ, 3–2–1969

Published:
Updated:

ಅಣ್ಣಾ ದೊರೆ ಇನ್ನಿಲ್ಲ

ಮದ್ರಾಸ್, ಫೆ. 2– ತಮಿಳುನಾಡು ಮುಖ್ಯಮಂತ್ರಿ ಶ್ರೀ ಅಣ್ಣಾದೊರೆ ಅವರು ಇಂದು ಮಧ್ಯರಾತ್ರಿ 12.20ಕ್ಕೆ ನಿಧನರಾದರು.

ಶ್ರೀ ಅಣ್ಣಾದೊರೆ ಅವರು ಹಠಾತ್ತಾಗಿ ಅಂತ್ಯಗೊಂಡರೆಂದು ಶಿಕ್ಷಣ ಸಚಿವ ಶ್ರೀ ನೆಡುಂಚೆಳಿಯನ್ ಅವರು ಪ್ರಕಟಿಸಿದರು.

ಅವರ ಸಚಿವ ಸಂಪುಟದ ಸದಸ್ಯರೆಲ್ಲರೂ ಅಡಿಯಾರ್‌ನ ಕ್ಯಾನ್ಸರ್ ಇನ್‌ಸ್ಟಿಟೂಟ್‌ನಲ್ಲಿ ಬಿಕ್ಕಿಬಿಕ್ಕಿ ಅಳುತ್ತಿದ್ದರು. ‌ಕಾನೂನು ಸಚಿವ ಶ್ರೀ ಮಾಧವನ್ ಪ್ರಜ್ಞೆ ತಪ್ಪಿ ಬಿದ್ದರು.

ನಗರ ಕ್ರೀಡಾಂಗಣದಲ್ಲಿ ಗಲಭೆ: ಆಶ್ರುವಾಯು

ಬೆಂಗಳೂರು, ಫೆ. 2– ಅಂಪೈರ್ ನೀಡಿದ ತೀರ್ಮಾನ ಒಂದರ ಬಗ್ಗೆ ಅಸಮಾಧಾನಗೊಂಡ ಕ್ರಿಕೆಟ್ ಪಂದ್ಯದ ಪೋಷಕರು ಇಂದು ಭಾರಿ ಗಲಭೆಯನ್ನುಂಟು ಮಾಡಿ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಕಿಟಕಿಗಳಿಗೆ, ಕುರ್ಚಿಗಳಿಗೆ ಬೆಂಕಿ ಹಚ್ಚಿದರು. ಗುಂಪು ಚದುರಿಸಲು ಮೈದಾನದ ಹೊರಗೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಗಲಭೆಯ ಕಾರಣ ಮೈಸೂರು ಮತ್ತು ಬಂಗಾಳದ ನಡುವಿನ ರಣಜಿ ಟ್ರೋನಿ ಸೆಮಿಫೈನಲ್ಸ್‌ ಪಂದ್ಯ ಇಂದು ಹಠಾತ್ತನೆ ನಿಂತಿತು. ನಾಳೆ ಮುಂದುವರಿಯಲಿದೆ.

ಪ್ರೇಮಕ್ಕೂ ಕ್ಲಾಸು

ಕೊಲಂಬಿಯ (ದಕ್ಷಿಣ ಕೆರೊಲಿನ), ಫೆ. 2– ದಕ್ಷಿಣ ಕೆರೊಲಿನ ವಿಶ್ವವಿದ್ಯಾನಿಯದಲ್ಲಿ ಕೆಲವು ಹೊಸ ತರಗತಿಗಳು ಪ್ರಾರಂಭವಾಗಿವೆ.

ಪ್ರಣಯ ಕಲೆ, ಬಾರ್‌ಗಳಲ್ಲಿ ಕೆಲಸ ಮಾಡುವ ವಿಧಾನ ಹಾಗೂ ಮಾಟ ಇವುಗಳನ್ನು ಕಲಿಸುವುದಾಗಿ ತಿಳಿಸಿದೆ.

ಈ ಅಲ್ಪಾವಧಿ ತರಗತಿಗಳಿಗೆ ರಿಜಿಸ್ಟ್ರೇಷನ್ ಶುಲ್ಕ ಇಲ್ಲ. ಪರೀಕ್ಷೆ ಇಲ್ಲ, ಗ್ರೇಡ್‌ಗಳೂ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !