ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 15–3–1969

Last Updated 14 ಮಾರ್ಚ್ 2019, 20:04 IST
ಅಕ್ಷರ ಗಾತ್ರ

ಗಂಗಾ ನೀರು: ಸಚಿವರ ಸಭೆಗೆ ಮತ್ತೆ ಪಾಕ್ ಕರೆ
ನವದೆಹಲಿ, ಮಾ. 14– ಗಂಗಾನದಿ ನೀರಿನ ಹಂಚಿಕೆ ಬಗ್ಗೆ ಭಾರತದೊಡನೆ ಸಚಿವ ಮಟ್ಟದ ಸಭೆಗೆ ಒತ್ತಾಯ ಪಡಿಸಲಾಗುವುದೆಂದು ಪಾಕಿಸ್ತಾನದ ವಿದೇಶಾಂಗ ಸಚಿವ ಅಜೀಜ್ ಹುಸೇನ್ ಅವರು ಇಂದು ಬೆಳಿಗ್ಗೆ ಲಾಹೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರೆಂದು ವರದಿಯಾಗಿದೆ.

ಈ ತಿಂಗಳ18ರಂದು ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಲಿರುವ ಎರಡು ರಾಷ್ಟ್ರಗಳ ನಡುವಣ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಸಚಿವ ಮಟ್ಟದ ಸಭೆಗೆ ಪಾಕಿಸ್ತಾನ ಒತ್ತಾಯಪಡಿಸುವುದೆಂದು ಅವರು ಹೇಳಿರುವುದಾಗಿ ‘ರೇಡಿಯೋ ಪಾಕಿಸ್ತಾನ್’ ವರದಿ ಮಾಡಿದೆ.

ಮೂರು ಸಾವಿರ ಮಠದ ಸ್ವಾಮಿಗಳಿಗೆ ಬೆದರಿಕೆ ಪತ್ರ
ಹುಬ್ಬಳ್ಳಿ, ಮಾ. 14– ಇಲ್ಲಿಯ ಮೂರು ಸಾವಿರ ಮಠದ ಜಗದ್ಗುರುಗಳಿಗೆ ಮಾ. 10ರಂದು ಬೆದರಿಕೆ ಪತ್ರ ಒಂದು ಬಂದಿದ್ದು, ಸ್ವಾಮಿಗಳು ನಗರದಲ್ಲಿ ಹಿಂದೂಗಳಿಗೆ ಪ್ರೋತ್ಸಾಹ ಕೊಟ್ಟು ಒಂದು ಜನವರ್ಗದ ಮೇಲೆ ಹಲ್ಲೆ ಮಾಡಲು ನೆರವು ನೀಡಿರುವುದಾಗಿ ಆರೋಪಿಸಿದ್ದು ಸ್ವಾಮಿಗಳು ಹಾಗೂ ಅವರ ಮಠದ ಮೇಲೆ ಹಲ್ಲೆ ಮಾಡುವುದಾಗಿ ಎಚ್ಚರಿಕೆ ಕೊಡಲಾಗಿದೆಯೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT