ಮಂಗಳವಾರ, 27–5–1969

ಮಂಗಳವಾರ, ಜೂನ್ 25, 2019
26 °C

ಮಂಗಳವಾರ, 27–5–1969

Published:
Updated:

ಚಂದ್ರ ಪ್ರವಾಸದ ನಂತರ ಅಪೊಲೊ ಯಾತ್ರಿಗಳು ಸುರಕ್ಷಿತ ಧರೆಗೆ

ಹೂಸ್ಟನ್ (ಟೆಕ್ಸಾಸ್), ಮೇ 26– ಎಂಟು ದಿನಗಳ ಅತ್ಯಂತ ಸಾಹಸಮಯ ಚಂದ್ರ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಅಪೊಲೊ–10 ಬಾಹ್ಯಾಕಾಶ ನೌಕೆ ಇಂದು ಕರಾರುವಾಕ್ಕಾಗಿ 10.22 ಗಂಟೆಗೆ ಶಾಂತಿ ಸಾಗರದಲ್ಲಿ ಸುರಕ್ಷಿತವಾಗಿ ಇಳಿಯಿತು.

**

ಧ್ರುವೀಕರಣದ ಮಾತಿಗೆ ರಾಜಕೀಯ ಆಶಾಭಂಗ ಕಾರಣ ಎಂದು ಇಂದಿರಾ

ನವದೆಹಲಿ, ಮೇ 26– ಕಾಂಗ್ರೆಸ್ ಪಕ್ಷದ ಭಿನ್ನ ರಾಜಕೀಯ ಪ್ರವೃತ್ತಿ ಹೊಂದಿರುವವರ ‘ಧ್ರುವೀಕರಣ’ದ ಮಾತು ವ್ಯಕ್ತಿಗಳಲ್ಲಿ ಉಂಟಾಗಿರುವ ಆಶಾಭಂಗದ ಪ್ರತಿರೂಪವೇ ಹೊರತು ತೀವ್ರವಾದ ರಾಜಕೀಯ ವಿವೇಚನೆಯಿಂದ ಮೂಡಿಬಂದಿರುವ ಫಲವಲ್ಲ ಎಂದು ಪ್ರಧಾನಿ ಇಂದಿರಾಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕತ್ವ ತನಗೆ ಪ್ರೇರಕವಾದ ದೃಷ್ಟಿಯನ್ನೂ, ತಾನು ಬದ್ಧವಾಗಿರುವ ಗುರಿಗಳನ್ನೂ ಈಗ ಕಳೆದುಕೊಳ್ಳಬಾರದು ಎಂದವರು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !