ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಭಾರತದ ಪ್ರತಿಭಟನೆಗೆ ರಷ್ಯ–ಅಮೆರಿಕ ಉಪೇಕ್ಷೆ

Last Updated 21 ನವೆಂಬರ್ 2018, 17:07 IST
ಅಕ್ಷರ ಗಾತ್ರ

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಭಾರತದ ಪ್ರತಿಭಟನೆಗೆ ರಷ್ಯ–ಅಮೆರಿಕ ಉಪೇಕ್ಷೆ

ನವದೆಹಲಿ, ನ. 21– ಪಾಕಿಸ್ತಾನಕ್ಕೆ ತುರ್ಕಿಯಿಂದ 100 ಅಮೆರಿಕದ ಪ್ಯಾಟನ್ ಟ್ಯಾಂಕುಗಳ ಸರಬರಾಜು ಒಪ್ಪಂದವಾಗಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿರುವುದಾಗಿ ರಕ್ಷಣಾಮಂತ್ರಿ ಸ್ವರಣ್‌ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.

ಸರ್ಕಾರವು ಈ ವಿಷಯವನ್ನು ತುರ್ಕಿ ಹಾಗೂ ಅಮೆರಿಕ ಸರಕಾರಗಳ ಜತೆ ರಾಜತಾಂತ್ರಿಕ ಪ್ರತಿನಿಧಿಗಳ ಮೂಲಕ ಚರ್ಚಿಸುವುದೆಂದೂ ತಿಳಿಸಿದರು.

ಪಾಕಿಸ್ತಾನಕ್ಕೆ ತನ್ನ ಪ್ಯಾಟನ್ ಟ್ಯಾಂಕ್ ಬಿಕರಿ ಮಾಡಲು ಅಮೆರಿಕವು ತುರ್ಕಿಗೆ ಅನುಮತಿ ನೀಡಿದೆ ಎಂಬ ವರದಿ ಕುರಿತು ಗಮನ ಸೆಳೆಯುವ ನಿರ್ಣಯ ಒಂದಕ್ಕೆ ಉತ್ತರ ನೀಡಿದ ರಕ್ಷಣಾ ಸಚಿವರು, ಸದಸ್ಯರ ಜತೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದ ರಲ್ಲದೆ ಈ ಕ್ರಮದಿಂದ ಪಾಕಿಸ್ತಾನದ ಮಿಲಿಟರಿ ಶಕ್ತಿ ವೃದ್ಧಿಸುವುದೆಂದರು.

ಆಳುವ ಆಸೆ

ನವದೆಹಲಿ, ನ. 21– ಮದ್ರಾಸ್ ರಾಜ್ಯಕ್ಕೆ ತಮಿಳುನಾಡು ಎಂದು ನಾಮಕರಣ ಮಾಡಲು ಉದ್ದೇಶಿಸಲಾದ ಮಸೂದೆ ಇಂದು ಅಪರಾಹ್ನ ಲೋಕಸಭೆಯ ಮುಂದೆ ಬಂದಾಗ ಡಿ.ಎಂ.ಕೆ. ಸದಸ್ಯರಿಂದ ಹರ್ಷೋದ್ಗಾರಗಳು ಕೇಳಿಬಂದ ಕೊಂಚ ಕಾಲದಲ್ಲಿಯೇ ‘ನಾಚಿಗೇಡು, ನಾಚಿಕೆಗೇಡು’ ಎಂಬ ಕೋಪೋದ್ರಿಕ್ತ ಕೂಗುಗಳು ಕೇಳಿಬಂದವು.

ಮಸೂದೆಯನ್ನು ಮಂಡಿಸಲು ಗೃಹ ಸಚಿವರು ಇಲ್ಲದಿದ್ದುದೇ ಈ ಕೋಪಕ್ಕೆ ಕಾರಣ. ಪರಿಣಾಮವಾಗಿ ಸಭೆಯನ್ನು ಅರ್ಧಗಂಟೆ ಕಾಲ ಮುಂದಕ್ಕೆ ಹಾಕಲಾಯಿತು.

ಸದನದಲ್ಲಿ ಹಾಜರಿದ್ದ ಕಾನೂನು ಉಪಸಚಿವರು ಮಸೂದೆಯನ್ನು ಮಂಡಿಸುವಂತೆ ತಿಳಿಸಬೇಕೆಂದು ಮದ್ರಾಸಿನ ಡಿ.ಎಂ.ಕೆ. ಸದಸ್ಯರಿತ್ತ ಸಲಹೆಯನ್ನು ಉಪ ಸ್ಪೀಕರ್ ಖಾಡಿಲ್ಕರ್ ತಳ್ಳಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT