ವಿಶ್ವಶಾಂತಿಗೆ ರಿಚರ್ಡ್ ನಿಕ್ಸನ್ ಸಂಕಲ್ಪ

7
ವಾರ

ವಿಶ್ವಶಾಂತಿಗೆ ರಿಚರ್ಡ್ ನಿಕ್ಸನ್ ಸಂಕಲ್ಪ

Published:
Updated:

ವಿಶ್ವಶಾಂತಿಗೆ ರಿಚರ್ಡ್ ನಿಕ್ಸನ್ ಸಂಕಲ್ಪ

ವಾಷಿಂಗ್‌ಟನ್, ಜ. 20– ರಾಷ್ಟ್ರ–ರಾಷ್ಟ್ರಗಳಲ್ಲಿ ಶಾಂತಿ ಮೂಡಿಸುವ ಯತ್ನಕ್ಕೆ ತಮ್ಮ ಅಧಿಕಾರ, ಶಕ್ತಿ, ವಿವೇಕಗಳೆಲ್ಲ ಮೀಸಲು ಎಂದು ಅಧ್ಯಕ್ಷ ರಿಚರ್ಡ್ ಮಿಲ್ ಹೌಸ್ ನಿಕ್ಸನ್ ಇಂದು ಸಂಕಲ್ಪ ತೊಟ್ಟರು.

ಅಮೆರಿಕದ ಅಧ್ಯಕ್ಷ ಪದವಿಯನ್ನಲಂಕರಿಸಿದ ಕೆಲವು ಹೊತ್ತಿನ ನಂತರ ಕ್ಯಾಪಿಟಲ್ ಹಿಲ್‌ನಿಂದ ನಿಕ್ಸನ್ ಮಾತಾಡುತ್ತಿದ್ದರು.

ಅಣ್ಣಾದೊರೆ ಕ್ಯಾನ್ಸರ್ ಆಸ್ಪತ್ರೆಗೆ

ಮದ್ರಾಸ್, ಜ. 20– ತಮಿಳುನಾಡು ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೆ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಅಡಿಯಾರ್‌ನಲ್ಲಿರುವ ಕ್ಯಾನ್ಸರ್‌ ಆಸ್ಪತ್ರೆಗೆ ಇಂದು ಸೇರಿಸಲಾಯಿತು.

ಕಳೆದ ಸೆಪ್ಟಂಬರ್‌ನಲ್ಲಿ ಅಣ್ಣಾದೊರೆ ಅವರ ಗಂಟಲಿನಲ್ಲಿ ಬೆಳೆದ ದುರ್ಮಾಂಸದ ಶಸ್ತ್ರಚಿಕಿತ್ಸೆ ನಡೆಸಿದ ನ್ಯೂಯಾರ್ಕ್ ಮೆಮೋರಿಯಲ್ ಆಸ್ಪತ್ರೆಯ ಡಾ. ಮಿಲ್ಲರ್‌ರವರು ಅಣ್ಣಾದೊರೆಯವರನ್ನು ಪರಿಶೀಲಿಸಲು ಜನವರಿ 22ರಂದು ಮದರಾಸಿಗೆ ಬರುತ್ತಾರೆ. ಅವರ ಜತೆ ಮತ್ತೊಬ್ಬ ಅಮೆರಿಕನ್ ವೈದ್ಯ ಡಾ.ಹೆಸ್ಪೆಕ್‌ರವರೂ ಬರುವರು.

ಹೈದರಾಬಾದ್‌ ಬಳಿ ವಿದ್ಯಾರ್ಥಿಗಳ ಮೇಲೆ ಗುಂಡು

ಹೈದರಾಬಾದ್, ಜ. 20– ಇಲ್ಲಿಂದ ಹನ್ನೆರಡು ಮೈಲಿ ದೂರದಲ್ಲಿರುವ ಷಂಷಾಬಾದ್‌ನಲ್ಲಿ ಇಂದು ಪೊಲೀಸರು ‘ಪ್ರತ್ಯೇಕ ತೆಲಂಗಾಣ’ ಘೋಷಣೆ ಕೂಗುತ್ತಿದ್ದ ಉದ್ರಿಕ್ತ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಏಳು ಮಂದಿ ಗಾಯಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !