ಬುಧವಾರ, 16–4–1969

ಭಾನುವಾರ, ಏಪ್ರಿಲ್ 21, 2019
26 °C

ಬುಧವಾರ, 16–4–1969

Published:
Updated:

ಅಸ್ಸಾಂ ಗಿರಿರಾಜ್ಯ ರಚನೆ: ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ

ನವದೆಹಲಿ, ಏ. 15– ಅಸ್ಸಾಮಿನಲ್ಲಿ ಸ್ವಯಮಾಧಿಕಾರ ಪಡೆದ ಗಿರಿಜನರ ಉಪರಾಜ್ಯ ರಚಿಸಲು ಅನುಕೂಲವಾಗು
ವಂತೆ ಸಂವಿಧಾನದ ತಿದ್ದುಪಡಿ ಮಸೂದೆಯನ್ನು ಲೋಕಸಭೆಯು 369 ಮತಗಳಷ್ಟು ಬಹುಮತದಿಂದ ಇಂದು ಅಂಗೀಕರಿಸಿತು. ಮಸೂದೆಗೆ ವಿರೋಧವಾಗಿ 28 ಮತಗಳು ದೊರೆತವು.

ಇತರ ರಾಜ್ಯಗಳಲ್ಲೂ ಸ್ವಯಮಾಧಿಕಾರವುಳ್ಳ ಪ್ರದೇಶಗಳನ್ನು ರಚಿಸುವುದು ಸರ್ಕಾರದ ಉದ್ದೇಶವಲ್ಲ ಎಂದು ಗೃಹಸಚಿವ ವೈ.ಬಿ. ಚವಾಣರು ಸ್ಪಷ್ಟವಾಗಿ ಹೇಳಿದರು. ಇತರ ರಾಜ್ಯಗಳಲ್ಲೂ ಸ್ವಯಮಾಧಿಕಾರ ಪಡೆದ ಪ್ರದೇಶಗಳನ್ನು ಸೃಜಿಸುತ್ತಾ ಹೋದರೆ ರಾಷ್ಟ್ರದಲ್ಲಿ ಒಡಕು ಆರಂಭವಾಗುತ್ತದೆ ಎಂದರು. ಈ ಮಸೂದೆಗೆ ರಾಜ್ಯಸಭೆ ಅಂಗೀಕಾರವಿತ್ತ ನಂತರ ಭಾರತದ ಒಕ್ಕೂಟಕ್ಕೆ ಸೇರಿದ ಹದಿನೇಳು ರಾಜ್ಯಗಳಲ್ಲಿ ಒಂಬತ್ತು ರಾಜ್ಯಗಳ ಅಂಗೀಕಾರವನ್ನು ಪಡೆಯಬೇಕು. ಆನಂತರ ಮರು ವಿಂಗಡಣೆ ಯೋಜನೆಯ ವಿವರಗಳುಳ್ಳ ಸಮಗ್ರ ಮಸೂದೆಯನ್ನು ಸರ್ಕಾರ ಮಂಡಿಸುವುದು.

ರಾಮದಾಸ್ ಗಾಂಧಿ ಅವರ ನಿಧನ

ಮುಂಬೈ, ಏ. 15– ಮಹಾತ್ಮ ಗಾಂಧಿ ಅವರ ಮಕ್ಕಳಲ್ಲಿ ಉಳಿದಿದ್ದ ಶ್ರೀ ರಾಮದಾಸ್ ಮೋಹನ್‌ದಾಸ್ ಗಾಂಧಿ ಅವರೂ ನಿನ್ನೆ ರಾತ್ರಿ ಮುಂಬೈನಲ್ಲಿ ನಿಧನರಾದರು. 73 ವರ್ಷದ ಅವರಿಗೆ ಮೂರು ವಾರಗಳಿಂದ ಕಾಮಾಲೆ ಆಗಿತ್ತು. ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾರೆ.

ಎಲ್ಲ ಸರಕುಗಳ ಚಿಲ್ಲರೆ ಅಂಗಡಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿದ್ದ ಅವರು, 24ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದವರು ಪುನಃ ಆಫ್ರಿಕಕ್ಕೆ ವಾಪಸಾಗದೆ, ತಂದೆಯ ಇಚ್ಛೆಯಂತೆ ಇಲ್ಲಿಯ ರಾಜಕೀಯ ರಂಗ ಪ್ರವೇಶಿಸಿದರು. ಚಂಪಾರಣ್ಯ ಸತ್ಯಾಗ್ರಹ
ದಲ್ಲಿ ಅವರನ್ನು ಬಂಧಿಸಿದಾಗ ‘ಎ’ ದರ್ಜೆಯ ಬಂದಿಯ ಸ್ಥಾನಮಾನ ನೀಡಿದರೂ, ಅದನ್ನು ತ್ಯಜಿಸಿ ಇತರ ಸ್ವಯಂ ಸೇವಕರ ಜತೆ ‘ಸಿ’ ದರ್ಜೆಗೆ ಸೇರಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !