ಕೃತಕ ಬುದ್ಧಿಮತ್ತೆ ಕ್ಷೇತ್ರವು ಅತಿ ವೇಗದಲ್ಲಿ ವಿಸ್ತರಣೆಗೊಳ್ಳುತ್ತಿದೆ. ಜನರು ಮೊಬೈಲ್ ಸೇವೆಗಳನ್ನು ಬಳಸುವಷ್ಟು ಸಲೀಸಾಗಿ ಎಐ ಬಳಸಲು ಶುರುಮಾಡಿದ್ದಾರೆ. ಎಐ ಪ್ರವೇಶದಿಂದಾಗಿ ಬೃಹತ್ ಪ್ರಮಾಣದ ಉದ್ಯೋಗ ನಷ್ಟವಾಗುತ್ತದೆ ಎಂಬ ಭಯ ಎಲ್ಲೆಡೆ ವ್ಯಾಪಿಸಿದೆ. ಆದರೂ, ಎಐನಿಂದ ಕೆಲಸ ಮಾಡಿಸಲು ಬೇಕಾದ ಆಗಾಧ ವಿದ್ಯುತ್ ಶಕ್ತಿ ಮತ್ತು ಡೇಟಾ ಸೆಂಟರ್ಗಳನ್ನು ತಂಪಾಗಿರಿಸಲು ಬಳಸುವ ಶುದ್ಧ ನೀರಿನ ಮೂಲಗಳ ಮೇಲೆ ಬೀಳುತ್ತಿರುವ ಒತ್ತಡದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿಲ್ಲ.

ನಾವು ಬಳಸುವ ಇ–ಮೇಲ್, ಸೋಷಿಯಲ್ ಮೀಡಿಯಾ ಪೋಸ್ಟ್ ಮತ್ತು ಎಐ ಆಧಾರಿತ ಕೆಲಸಗಳ ಸಂಭಾಷಣೆಗಳು ಡೇಟಾ ಸೆಂಟರ್ಗಳ ಸರ್ವರ್ ಮೂಲಕ ಹಾದುಹೋಗುತ್ತವೆ. ಲೆಕ್ಕಾಚಾರದ ಪ್ರಕಾರ, ಸರಾಸರಿ 100 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ವಹಣೆಗೆ ಸುಮಾರು 30 ಲಕ್ಷ ಲೀಟರ್ ನೀರು ಬೇಕು. ಇಷ್ಟು ನೀರನ್ನು ಬೆಂಗಳೂರಿನ 15,000 ಕುಟುಂಬಗಳು ಪ್ರತಿನಿತ್ಯ ಬಳಸುತ್ತವೆ. ಇದೇ ನೀರು ಗಂಗಾವತಿ ನಗರದ 40,000 ಜನರಿಗೆ ಸಾಕಾಗುತ್ತದೆ. ಇದೇ ಡೇಟಾ ಸೆಂಟರ್ ವರ್ಷಕ್ಕೆ ಬಳಸುವ ನೀರು ಸಾಧಾರಣ ನಗರದ ಒಂದು ಲಕ್ಷ ಜನರ ವಾರ್ಷಿಕ ಅಗತ್ಯವನ್ನು ಪೂರೈಸಬಲ್ಲದು. ಜಾಗತಿಕವಾಗಿ, ಡೇಟಾ ಸೆಂಟರ್ಗಳು ಒಂದು ವರ್ಷದ ಅವಧಿಯಲ್ಲಿ ಬಳಸುವ (560 ಶತಕೋಟಿ ಲೀಟರ್) ನೀರಿನಿಂದ 200 ಎಕರೆ ಜಮೀನಿನಲ್ಲಿ ಭರಪೂರ ಭತ್ತದ ಬೆಳೆ ತೆಗೆಯಬಹುದು! ಎಐ ಬಳಕೆಯಿಂದ ನಿಮಿಷಕ್ಕೆ ಸುಮಾರು 10 ಲಕ್ಷ ಲೀಟರ್ ನೀರು ಆವಿಯಾಗುತ್ತಿದೆ. ‘ಡಿಜಿಟಲ್ ಬಾಯಾರಿಕೆ’ ನಮ್ಮ ಕೃಷಿ ಭೂಮಿಯ ಪಾಲಿನ ನೀರನ್ನು ಕಸಿದುಕೊಳ್ಳುತ್ತಿದೆ. ಡೇಟಾ ಸೆಂಟರ್ಗಳ ನೀರಿನ ದಾಹ ನದಿಗಳನ್ನೇ ಒಣಗಿಸಬಲ್ಲದು!

ದಾವಣಗೆರೆಯಂಥ ನಗರವು ಒಂದು ವರ್ಷವಿಡೀ ಬಳಸುವ ವಿದ್ಯುತ್ತನ್ನು 100 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಬರೀ ಎರಡೂವರೆ ತಾಸುಗಳಲ್ಲಿ ಖಾಲಿ ಮಾಡುತ್ತದೆ. ವಿಶ್ವದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ 2ರಿಂದ 3ರಷ್ಟನ್ನು ಡೇಟಾ ಸೆಂಟರ್ಗಳೇ ಬಳಸುತ್ತಿವೆ. 2030ರ ವೇಳೆಗೆ ಇದರ ಪ್ರಮಾಣ ಶೇ 10ಕ್ಕೆ ತಲಪುವ ಅಂದಾಜಿದೆ. ಇದರ ಪೂರೈಕೆಗೆ ಅಣುವಿದ್ಯುತ್ ಸ್ಥಾವರಗಳೇ ಬೇಕು! ಸದ್ಯಕ್ಕೆ ಬಹುತೇಕ ದೇಶಗಳು ಉಷ್ಣ ಸ್ಥಾವರಗಳನ್ನು ಅವಲಂಬಿಸಿರುವುದರಿಂದ, ಟನ್ಗಟ್ಟಲೆ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಸೇರುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.

ಸರ್ವರ್ಗಳಿಂದ ಹೊರಬರುವ ಬಿಸಿ ಗಾಳಿಯು ಸ್ಥಳೀಯ ವಾತಾವರಣದ ತಾಪಮಾನವನ್ನು ಹೆಚ್ಚಿಸು
ತ್ತದೆ. ಸರ್ವರ್ಗಳನ್ನು ತಂಪಾಗಿಡಲು ಶುದ್ಧ ನೀರೇ ಬೇಕು. ಸಮುದ್ರದ ನೀರನ್ನಾಗಲೀ, ಸಂಸ್ಕರಿಸಿದ ನೀರನ್ನಾಗಲೀ ಬಳಸಲು ಬರುವುದಿಲ್ಲ. ಅಶುದ್ಧ ನೀರನ್ನು ಬಳಸಿದರೆ ಡೇಟಾ ಸೆಂಟರ್ನಲ್ಲಿನ ಕೊಳವೆಗಳು ಸೋರಿ, ಅಲ್ಲಿರುವ ಬೆಲೆ ಬಾಳುವ ಸೆಮಿಕಂಡಕ್ಟರ್ ಚಿಪ್ಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ.

2022ರಿಂದ ಜಾಗತಿಕವಾಗಿ ನಿರ್ಮಿಸಲಾದ ಹೊಸ ಡೇಟಾ ಸೆಂಟರ್ಗಳಲ್ಲಿ ಮೂರನೇ ಎರಡರಷ್ಟು ಭಾಗ ಈಗಾಗಲೇ ನೀರಿನ ಅಭಾವವಿರುವ ಪ್ರದೇಶಗಳಲ್ಲಿವೆ. ಓಪನ್ ಎಐ ಕಂಪನಿಯ ಚಾಟ್ ಜಿಪಿಟಿ ಪ್ರಾರಂಭವಾಗುವ ಮೊದಲೇ, ನಗರಗಳ ಅಲ್ಪ ಪ್ರಮಾಣದ ನೀರಿನ ಸಂಪನ್ಮೂಲವನ್ನು ಈ ಕೇಂದ್ರಗಳು ನುಂಗಿ ಹಾಕುತ್ತಿವೆ ಎಂದು ಸಮುದಾಯಗಳು ದೂರುತ್ತಿದ್ದವು.

ಎಐ ಡೇಟಾ ಸೆಂಟರ್ಗಳಿಗೆ ಸಾಮಾನ್ಯ ಡೇಟಾ ಸೆಂಟರ್ಗಳಿಗಿಂತ ಹೆಚ್ಚಿನ ಮೂಲಸೌಕರ್ಯ ಬೇಕಾಗುತ್ತದೆ. ಎಐ ಕೆಲಸಗಳಿಗೆ ತರಬೇತಿ ನೀಡಲು ಮತ್ತು ಅವುಗಳನ್ನು ನಿರ್ವಹಿಸಲು ಸುಧಾರಿತ ಸ್ಟೋರೇಜ್, ಹೆಚ್ಚಿನ ಕ೦ಪ್ಯೂಟಿಂಗ್ ಶಕ್ತಿ ಮತ್ತು ಶಕ್ತಿಯುತ ಕೂಲಿಂಗ್ ವ್ಯವಸ್ಥೆಯ ಜೊತೆಗೆ ಹೆಚ್ಚಿನ ಸ್ಥಳಾವಕಾಶವೂ ಬೇಕಾಗುತ್ತದೆ.

ಅಮೆರಿಕದ ಅರಿಜೋನಾದಲ್ಲಿ ಮ್ಯಾರಿಕೋಪಾ ಕೌಂಟಿ ತೀವ್ರ ಬರಗಾಲ ಎದುರಿಸುತ್ತಿದ್ದರೂ, ಅಲ್ಲಿ ಮೆಟಾ ಮತ್ತು ಗೂಗಲ್ನಂತಹ ಕಂಪನಿಗಳು ಬೃಹತ್ ಡೇಟಾ ಸೆಂಟರ್ಗಳನ್ನು ತೆರೆಯುತ್ತಿವೆ. ಸ್ಪೇನ್ನ ಶೇ 75ರಷ್ಟು ಭಾಗ ಮರುಭೂಮಿಯಾಗುವ ಅಪಾಯದಲ್ಲಿದ್ದರೂ, ಅಮೆಜಾನ್ ಅಲ್ಲಿ ಬೃಹತ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಒರೆಗಾನ್ನಲ್ಲಿರುವ ಒಂದು ಡೇಟಾ ಸೆಂಟರ್ನ ಶಾಖ ತಣಿಸಲು ವರ್ಷಕ್ಕೆ 50 ಕೋಟಿ ಲೀಟರ್ ಕುಡಿಯುವ ನೀರು ಬೇಕು. ಆದರೆ, ಚಿಲಿ ದೇಶ ಮಾತ್ರ ಜಗತ್ತಿಗೇ ಮಾದರಿ ಎನಿಸುವ ಕೆಲಸ ಮಾಡಿದೆ. 2024ರಲ್ಲಿ, ಗೂಗಲ್ ತನ್ನ 200 ದಶಲಕ್ಷ ಡಾಲರ್ ವೆಚ್ಚದ ಡೇಟಾ ಸೆಂಟರ್ ಅನ್ನು ಚಿಲಿಯಲ್ಲಿ ಸ್ಥಾಪಿಸಲು ಯೋಜನೆ ರೂಪಿಸಿತ್ತು. ಆದರೆ, ಚಿಲಿಯ ನ್ಯಾಯಾಲಯವು ನೀರಿನ ಅಭಾವ ಮತ್ತು ಹವಾಮಾನ ಬದಲಾವಣೆಯ ಅಡ್ಡಪರಿಣಾಮ ಪರಿಗಣಿಸಿ ಯೋಜನೆಯನ್ನು ಸ್ಥಗಿತಗೊಳಿಸಿತು.

ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಡೇಟಾ ಸೆಂಟರ್ಗಳಿವೆ. ಅದರಲ್ಲಿ ಅರ್ಧದಷ್ಟು (5,429) ಅಮೆರಿಕದಲ್ಲಿವೆ. ಜರ್ಮನಿ (529), ಯುನೈಟೆಡ್ ಕಿಂಗ್ಡಮ್ (523), ಚೀನಾ (449), ಕೆನಡಾ (337) ಮತ್ತು ಆಸ್ಟ್ರೇಲಿಯಾದಲ್ಲಿ 300ಕ್ಕೂ ಹೆಚ್ಚು ಡೇಟಾ ಸೆಂಟರ್ ಸ್ಥಾಪಿಸಲಾಗಿದ್ದು, ನೆದರ್ಲೆಂಡ್ಸ್, ಸಿಂಗಪುರ, ಉರುಗ್ವೆ, ಮೆಕ್ಸಿಕೊ, ಸ್ಪೇನ್, ಐರ್ಲೆಂಡ್ ಮತ್ತು ಬ್ರೆಜಿಲ್ ಕೂಡ ಪ್ರಮುಖ ಡೇಟಾ ಕೇಂದ್ರಗಳಾಗಿ ಹೊರಹೊಮ್ಮಿವೆ.

ಪ್ರಸ್ತುತ 150ಕ್ಕೂ ಹೆಚ್ಚು ದೊಡ್ಡ ಡೇಟಾ ಸೆಂಟರ್ಗಳಿರುವ ಭಾರತವು ಏಷ್ಯಾದಲ್ಲೇ ಅತ್ಯಂತ ವೇಗವಾಗಿಬೆಳೆಯುತ್ತಿರುವ ಡೇಟಾ ಸೆಂಟರ್ ಮಾರುಕಟ್ಟೆ ಆಗಿದೆ. ಮುಂಬೈ, ದೆಹಲಿ, ಪುಣೆ, ಬೆಂಗಳೂರಿನ ಪೈಕಿಒಟ್ಟು ಡೇಟಾ ಸೆಂಟರ್ ಸಾಮರ್ಥ್ಯದ ಅರ್ಧದಷ್ಟು ಮುಂಬೈನಲ್ಲೇ ಇವೆ. ಪಕ್ಕದ ಪುಣೆಯಲ್ಲೂ ಗಣನೀಯ ಸಂಖ್ಯೆಯ ಕೇಂದ್ರಗಳಿವೆ. ಸಮುದ್ರದ ಅಡಿಯ ಕೇಬಲ್ ಸಂಪರ್ಕ ಇರುವುದರಿಂದ ಚೆನ್ನೈ ಎರಡನೇ ದೊಡ್ಡ ಹಬ್ ಆಗಿ ಬೆಳೆಯುತ್ತಿದೆ. ಐಟಿ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಎಂಟರ್ಪ್ರೈಸ್ ಡೇಟಾ ಸೆಂಟರ್ಗಳಿವೆ. ನೋಯ್ಡಾ ಉತ್ತರ ಭಾರತದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ಅಮೆಜಾನ್ ಮತ್ತು ಮೈಕ್ರೊಸಾಫ್ಟ್ ಹೈದರಾಬಾದ್ನಲ್ಲಿ ಬೃಹತ್ ಹೂಡಿಕೆ ಮಾಡಿವೆ.

ಹೆಚ್ಚಿನ ಡೇಟಾ ಸೆಂಟರ್ಗಳು ‘ಇವಾಪೊರೇಟಿವ್ ಕೂಲಿಂಗ್’ ವಿಧಾನವನ್ನು ಬಳಸುವುದರಿಂದ
ಶೇ 80ರಷ್ಟು ನೀರು ಆವಿಯಾಗಿ, ಭೂಮಿಯಿಂದ ಶಾಶ್ವತವಾಗಿ ಹೊರಹೋಗುತ್ತದೆ. ನೀರಿನ ಉಳಿತಾಯಕ್ಕಾಗಿ ಲಿಕ್ವಿಡ್ ಇಮ್ಮರ್ಶನ್ ಕೂಲಿಂಗ್, ಡೈರೆಕ್ಟ್–ಟು–ಚಿಪ್ ಕೂಲಿಂಗ್ ಮತ್ತು ನೈಸರ್ಗಿಕ ಶೀತಲ ಬಳಕೆಯಂಥ ಸುಧಾರಿತ ಕೂಲಿಂಗ್ ತಂತ್ರಜ್ಞಾನಗಳಿವೆ. ಲಿಕ್ವಿಡ್ ಇಮ್ಮರ್ಶನ್ ಕೂಲಿಂಗ್ ವಿಧಾನದಲ್ಲಿ ಸರ್ವರ್ಗಳನ್ನು ವಿದ್ಯುತ್ ಪ್ರವಹಿಸದ ವಿಶೇಷ ದ್ರವದಲ್ಲಿ ಪೂರ್ಣವಾಗಿ ಮುಳುಗಿಸಲಾಗುತ್ತದೆ. ಈ ದ್ರವಕ್ಕೆ ಗಾಳಿಗಿಂತ ಸಾವಿರದ ಇನ್ನೂರು ಪಟ್ಟು ಹೆಚ್ಚು ಶಾಖ ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ. ಇದು ಸಂಪೂರ್ಣವಾಗಿ ‘ಕ್ಲೋಸ್ಡ್–ಲೂಪ್’ ವ್ಯವಸ್ಥೆಯಾದ್ದರಿಂದ ನೀರಿನ ಅಗತ್ಯವೇ ಇರುವುದಿಲ್ಲ. ಡೈರೆಕ್ಟ್–ಟು–ಚಿಪ್ ಕೂಲಿಂಗ್ ವಿಧಾನದಲ್ಲಿ ಶಾಖ ಉತ್ಪಾದಿಸುವ ಕಂಪ್ಯೂಟರ್ ಚಿಪ್ಗಳ ಮೇಲೆ ನೇರವಾಗಿ ಸಣ್ಣ ಪೈಪ್ಗಳ ಮೂಲಕ ದ್ರವವನ್ನು ಹರಿಸಲಾಗುತ್ತದೆ. ಇದು ಇಡೀ ಕೊಠಡಿಯನ್ನು ತಣ್ಣಗಾಗಿಸುವ ಬದಲು, ಎಲ್ಲಿ ಶಾಖವಿದೆಯೋ ಅಲ್ಲಷ್ಟೇ ತಂಪು ಮಾಡುತ್ತದೆ. ಇದರಿಂದ ನೀರು ಮತ್ತು ವಿದ್ಯುತ್ ಎರಡೂ ಉಳಿತಾಯವಾಗುತ್ತವೆ. ಎಐ ಸರ್ವರ್ಗಳಿಗೆ ಇದು ಹೆಚ್ಚು ಸೂಕ್ತವಾದರೂ, ಇವುಗಳನ್ನು ಸ್ಥಾಪಿಸಲು ಭಾರೀ ಬಂಡವಾಳ ಬೇಕು.

ಮನೆಯ ‘ಎಸಿ’ಯಂತೆ ಕೆಲಸ ಮಾಡುವ ಸಾಂಪ್ರದಾಯಿಕ ಏರ್ ಕೂಲಿಂಗ್ ಮತ್ತು ಡ್ರೈ ಕೂಲಿಂಗ್ ವಿಧಾನಗಳನ್ನು ಬಳಸಿದರೆ ನೀರಿನ ಅವಶ್ಯಕತೆಯೇ ಇರುವುದಿಲ್ಲ. ಇದಕ್ಕೆ ಅಪಾರ ಪ್ರಮಾಣದ ವಿದ್ಯುತ್ ಬೇಕು. ಡೇಟಾ ಸೆಂಟರ್ಗಳನ್ನು ಸಮುದ್ರದ ಹಾಸಿನ ಮೇಲಿರಿಸಿ, ಅಲ್ಲಿರುವ ನೀರಿನ ತಂಪನ್ನೇ ಬಳಸಿಕೊಳ್ಳುವ ನೈಸರ್ಗಿಕ ಶೀತಲ ಬಳಕೆ ವಿಧಾನವೂ ಲಭ್ಯವಿದೆ. ಮೈಕ್ರೊಸಾಫ್ಟ್ ಈಗಾಗಲೇ ‘ಪ್ರಾಜೆಕ್ಟ್ ನೇಟಿಕ್’ ಹೆಸರಿನಲ್ಲಿ ಸಮುದ್ರದ ಅಡಿಯಲ್ಲಿ ಡೇಟಾ ಸೆಂಟರ್ ನಿರ್ಮಿಸುವ ಪ್ರಯೋಗ ಮಾಡಿದೆ. ಆದರೆ, ರಿಪೇರಿ ಮತ್ತು ಸರ್ವೀಸಿಂಗ್ ಅಷ್ಟು ಸುಲಭವಲ್ಲ. ತಣ್ಣಗಿನ ಹವಾಮಾನವಿರುವ ನಾರ್ವೆ, ಸ್ವೀಡನ್ನಲ್ಲಿ ಡೇಟಾ ಸೆಂಟರ್ ನಿರ್ಮಿಸುವ ಅವಕಾಶಗಳಿವೆ. ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ ಕಟ್ಟುವ ಚಿಂತನೆ ಶುರುವಾಗಿದೆ. ಅದರ ವೆಚ್ಚವೂ ಅಷ್ಟೇ ಎತ್ತರದ್ದು. ಅಮೆಜಾನ್ ಮತ್ತು ಗೂಗಲ್ನಂತಹ ಕಂಪನಿಗಳು 2030ರ ವೇಳೆಗೆ ತಾವು ಬಳಸುವ ನೀರಿಗಿಂತ ಹೆಚ್ಚು ನೀರನ್ನು ಜಲಮೂಲಗಳಿಗೆ ಮರುಪೂರಣ ಮಾಡಿ ‘ವಾಟರ್ ಪಾಸಿಟಿವ್’ ಆಗುವುದಾಗಿ ಪಣತೊಟ್ಟಿವೆ.

ಇನ್ನೈದು ವರ್ಷಗಳಲ್ಲಿ ಸೆಮಿಕಂಡಕ್ಟರ್ ಚಿಪ್ಗಳ ಸಾಂದ್ರತೆ ಹೆಚ್ಚಾಗುವುದರಿಂದ ‘ಏರ್ ಕೂಲಿಂಗ್’ ಸಂಪೂರ್ಣವಾಗಿ ಅಪ್ರಸ್ತುತವಾಗಲಿದೆ. ಹೆಚ್ಚಿನ ಕಂಪನಿಗಳು ಲಿಕ್ವಿಡ್ ಕೂಲಿಂಗ್ ವಿಧಾನವನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳಲಿವೆ. ಇದು ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆಯಾದರೂ, ಇವುಗಳನ್ನು ನಿರ್ಮಿಸಲು ಭಾರೀ ಬಂಡವಾಳ ಬೇಕು.

ಡೇಟಾ ಸೆಂಟರ್ಗಳು ಸಂಪೂರ್ಣವಾಗಿ ನವೀಕರಿಸಬಲ್ಲ ಇಂಧನಗಳನ್ನಷ್ಟೇ ಬಳಸುವಂತೆ ಕಡ್ಡಾಯಗೊಳಿಸಬೇಕು. ಪ್ರತಿ ಡೇಟಾ ಸೆಂಟರ್ ಎಷ್ಟು ನೀರು ಬಳಸುತ್ತಿದೆ ಎಂಬುದರ ಆಡಿಟ್ ನಡೆಯಬೇಕು. ಡೇಟಾ ಸೆಂಟರ್ಗಳನ್ನು ನೀರಿನ ಕೊರತೆಯಿರುವ ಪ್ರದೇಶಗಳ ಬದಲು, ನೈಸರ್ಗಿಕವಾಗಿ ತಂಪಾಗಿರುವ ದೇಶಗಳಲ್ಲಿ ಅಥವಾ ಸಮುದ್ರದಾಳದಲ್ಲಿ ನಿರ್ಮಿಸುವುದು ಉತ್ತಮ. ಡೇಟಾ ಸೆಂಟರ್ಗಳು ನಮ್ಮ ಡಿಜಿಟಲ್ ಬದುಕಿಗೆ ಅನಿವಾರ್ಯ. ಆದರೆ, ಅವುಗಳಿಗೆ ಭೂಮಿಯ ನೀರಿನ ಮೂಲಗಳನ್ನು ಆಪೋಶನ ತೆಗೆದುಕೊಳ್ಳುವ ಅವಕಾಶ ನೀಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.