ಇಂದು ಅಂಬೇಡ್ಕರ್ ಜಯಂತಿ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ.

ಐತಿಹಾಸಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳುವುದು ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ಸಂದರ್ಭಗಳನ್ನು, ದೇಶದಲ್ಲಿ ಅನುಸೂಚಿತ ಜಾತಿಗಳು, ಬುಡಕಟ್ಟುಗಳು, ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿರುವಿಕೆಯ ಬಗ್ಗೆ ಚರ್ಚೆ ಆಗಬೇಕಾಗಿದೆ. ಜೀವನದುದ್ದಕ್ಕೂ ತಾರತಮ್ಯ/ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಂತಹ ಬಾಬಾ ಸಾಹೇಬರು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಸಿಗಬೇಕೆಂದು ಅಚಲ ಸಂಕಲ್ಪ ಹೊಂದಿದ್ದರು.

ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜೊತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. 'ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು' ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಶತಮಾನಗಳಿಂದಲೂ ತಳ ಸಮುದಾಯಗಳಿಗೆ ಆದಂತಹ ಅನ್ಯಾಯಗಳನ್ನು ಸರಿಪಡಿಸಿ ಸಮಾನ ಅವಕಾಶಗಳನ್ನು ಒದಗಿಸುವುದರ ಬಗ್ಗೆ ಹಾಗೂ ಇವುಗಳ ಹಿಂದಿನ ತಾರ್ಕಿಕತೆ ಮತ್ತು ಅನುಷ್ಠಾನದ ನಡುವೆ ಚರ್ಚೆಗಳಾಗಬೇಕಾಗಿದೆ. ಇದರಿಂದ ಅಲ್ಪಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತಿರುವುದು ಹಾಗೂ ಕ್ರಮೇಣ ಅಸಮಾನತೆ ಎಂಬುದು ನಿವಾರಣೆಯಾಗುತ್ತದೆ ಎಂಬುದರ ಭರವಸೆ ದಮನಿತ ವರ್ಗಗಳಲ್ಲಿ ಮೂಡುತ್ತಿದೆ. ದೇಶ ಸಂಪೂರ್ಣ ಸಮಾನತೆ ಕಂಡಾಗ ಬಾಬಾಸಾಹೇಬರ ಕನಸು ನನಸಾಗುತ್ತದೆ ಎಂಬುದನ್ನು ನಾವುಗಳು ಅರಿಯಬೇಕಾಗಿದೆ.

ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ತಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು.

ಈಗಾಗಲೇ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅಸಮಾನತೆ ಎಂಬುದು ಇದೆ. ಆ ದೇಶಗಳು ಕೂಡ ಅಂಬೇಡ್ಕರ್ ಚಿಂತನೆ ಮತ್ತು ಆಶಯಗಳಿಂದ ಪ್ರೇರಿತರಾಗಿ ಹೋರಾಟಗಳು ನಡೆಯುತ್ತಿರುವುದು ಹಾಗೂ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಸಾಮಾಜಿಕ ಕಳಂಕ (Social Stigma) ಮತ್ತು ಸ್ಟೀರಿಯೋ ಟೈಪ್ ಅಂತಹ ಸಮಸ್ಯೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಅಂಬೇಡ್ಕರ್ ಅವರನ್ನು ಬಹುಜನ ನಾಯಕ ಎಂದು ಕರೆಯುತ್ತಾರೆ.

ಅಮಾನವೀಯವಾದ ವರ್ತನೆಗಳು, ಬಹುಜನರ ವಿಶೇಷವಾದ ಭಾಷೆ, ವೇಷಭೂಷಣ, ಸಂಸ್ಕೃತಿ, ಆಚಾರ ವಿಚಾರಗಳು, ಸಂಪ್ರದಾಯಗಳನ್ನು ಕೀಳಾಗಿ ಕಂಡು, ಆ ಸಮುದಾಯವನ್ನು ನಿಂದಿಸುವುದರೊಂದಿಗೆ ಮಾನಸಿಕ ಹಿನ್ನಡೆಯನ್ನು ಮೀರಿ ಸಮಾನತೆಗೆ ಅವರ ದಿಟ್ಟ ನಿರ್ಧಾರಗಳ ಬಗೆಗಿನ ಅವರ ಗ್ರಹಿಕೆಯನ್ನು ನಾವು ಪ್ರಶಂಸಿಸಲೇಬೇಕು.

ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು. ಆರ್ಥಿಕ ಅಭಿವೃದ್ಧಿ, ಕೈಗಾರಿಕರಣ, ರಾಜಕೀಯ ಭಾಗವಹಿಸಿಕೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ ಹಾಗೂ ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಚಿಸಿದ್ದರು.

ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಕಾಣಬಹುದು. ಉದಾಹರಣೆಯಾಗಿ ನೋಡುವುದಾದರೆ ಇಂದಿರಾಗಾಂಧಿ, ಡಿ.ದೇವರಾಜ ಅರಸು, ಕಾಂಶಿರಾಂ, ಬಂಗಾರಪ್ಪ, ಸಿದ್ದರಾಮಯ್ಯ, ನಿತೀಶ್ ಕುಮಾರ್, ಕರುಣಾನಿಧಿ, ಕೇಜ್ರಿವಾಲ್, ಡಾ.ಹೆಚ್.ಸಿ.ಮಹದೇವಪ್ಪ, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು.

ಉಳುವವನೇ ಭೂಮಿಯ ಒಡೆಯ, ಭೂಹೀನರಿಗೆ ಭೂಮಿ ನೀಡುವುದು, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ಮುಂತಾದ ಯೋಜನೆಗಳು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಲ್ಲಿ ಬಂದಂತವುಗಳಾಗಿವೆ ಹಾಗೂ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ತಂದಂತಹ ಭಾಗ್ಯಗಳು, ಗ್ಯಾರಂಟಿ ಯೋಜನೆಗಳು-ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಒಳಗೊಂಡಿದೆ ಎಂದರೆ ತಪ್ಪಾಗಲಾರದು. ಈ ಯೋಜನೆಗಳು ಮತ್ತು ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಂವಿಧಾನದ ಆಶಯಗಳಂತೆ ಅನುಷ್ಠಾನ ಮಾಡಿರುವುದನ್ನು ಮೌಲ್ಯಯುತವಾಗಿ ಗಮನಿಸಬೇಕಾಗಿದೆ ಹಾಗೂ ಸುಸ್ಥಿರ ಅಭಿವೃದ್ಧಿಯ ಯೋಜನೆಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಗಳಾಗಿವೆ.

ಭಾರತ ದೇಶವು ಸ್ವಾತಂತ್ರ್ಯಗೊಂಡು 76 ವರ್ಷಗಳು ಕಳೆದರೂ ಗ್ರಾಮೀಣ ಪ್ರದೇಶಗಳಲ್ಲಿ, ನಗರ ಪ್ರದೇಶದ ಕೊಳಗೇರಿಗಳಲ್ಲಿ ಇಂದಿಗೂ ಸಹ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಆಗದೇ ಇರುವುದು ಒಂದು ವಿಪರ್ಯಾಸವೇ ಸರಿ. ಈ ಕಾರಣದಿಂದಲೇ ಇಂದಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ದೇಶದಲ್ಲಿನ ಎಲ್ಲಾ ಸರ್ಕಾರಗಳು ಈ ನಿಟ್ಟಿನಲ್ಲಿ ತಾವು ರೂಪಿಸುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಳಿಸಿದಾಗ ಮಾತ್ರ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಿದಂತಾಗುತ್ತದೆ ಹಾಗೂ ಪ್ರಗತಿಪರ ದೇಶವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಭರವಸೆಯ ಚಿಹ್ನೆ.

ಲೇಖಕರು: ಪರಿಸರ ತಜ್ಞರು ಮತ್ತು ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.