ಸಾಮಾಜಿಕ ಹಿತಾಸಕ್ತಿಯ ಹೆಸರಿನಲ್ಲಿ ಸರ್ಕಾರ ಹಲವು ಕ್ರಿಮಿನಲ್ ಪ್ರಕರಣಗಳನ್ನು ಕೈಬಿಟ್ಟಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ನಡೆ. ಸರ್ಕಾರದ ಅಕಾರಣ ಔದಾರ್ಯವು ಸಮಾಜಘಾತುಕರು ಕಾನೂನಿನ ಪರಿಧಿಯಿಂದ ತಪ್ಪಿಸಿಕೊಳ್ಳಲಿಕ್ಕೆ ಅವಕಾಶ ಕಲ್ಪಿಸಲಿದೆ.

ಸಂವೇದನಾಶೀಲರು ಮತ್ತು ಸಾಮಾಜಿಕ ಚಿಂತಕರು ಯಾವಾಗಲೂ ದುಃಖತಪ್ತರು ಎಂಬ ಮಾತೊಂದಿದೆ. ಈ ಮಾತಿಗೆ ಹತ್ತಿರವಾಗಿರುವ ಬೆಳವಣಿಗೆಯೊಂದು ನಾಡಿನ ಜನರಿಗೆ ಈಗ ಎದುರಾಗಿದೆ.

ನಮ್ಮ ಅಪರಾಧಿಕ ನ್ಯಾಯವ್ಯವಸ್ಥೆಯಲ್ಲಿ ಮುಖ್ಯ ಪಾತ್ರವಹಿಸುವ ಕಾನೂನುಗಳೆಂದರೆ ‘ಐಪಿಸಿ’ (ಭಾರತೀಯ ದಂಡ ಸಂಹಿತೆ–1860), ‘ಸಿಆರ್ಪಿಸಿ’ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973) ಮತ್ತು ‘ಇಂಡಿಯನ್ ಎವಿಡೆನ್ಸ್ ಆ್ಯಕ್ಟ್’ (ಭಾರತೀಯ ಸಾಕ್ಷ್ಯ ಅಧಿನಿಯಮ–1872). ಸಿಆರ್ಪಿಸಿ ಎಂಬುದು ವಿಶೇಷವಾಗಿ ತನಿಖಾ ಕಾಲದಲ್ಲಿ ತನಿಖಾಧಿಕಾರಿ ಗಮನದಲ್ಲಿ ಇರಿಸಿಕೊಂಡು ಅನುಸರಿಸಲೇಬೇಕಾದ ಮಾರ್ಗೋಪಾಯಗಳನ್ನು ಗುರ್ತಿಸುತ್ತದೆ. ಅಲ್ಲದೆ, ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿ ಬಳಸಬೇಕಾದ ಪ್ರಕ್ರಿಯೆಗಳು ಹೇಗಿರಬೇಕೆಂಬ ನಿಯಮ ಗಳನ್ನು ಒದಗಿಸಿಕೊಡುತ್ತದೆ. ಇತ್ತೀಚೆಗೆ ರಾಜ್ಯ ಸರ್ಕಾರ ವಿವಿಧ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಇದ್ದ 52 ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂಪಡೆಯುವ ಸಂಬಂಧ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶವು ಜನರಲ್ಲಿ ಕುತೂಹಲ ಮೂಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಮುಖ್ಯ ಕಾರಣ, ಘೋರ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣ ವಾಪಸು ಪಡೆದಿರುವುದು.

ಸಿಆರ್ಪಿಸಿ–1973ರ ಸೆಕ್ಷನ್ 320ರ (ಹೊಸ ಕಾಯ್ದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023, ಸೆಕ್ಷನ್ 359) ಪ್ರಕಾರ, ಭಾರತೀಯ ದಂಡ ಸಂಹಿತೆ–1860ರಲ್ಲಿ ಇರುವ 56 ಅಪರಾಧಗಳಿಗೆ (ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್ 360ರಲ್ಲಿ 55) ಸಂಬಂಧಪಟ್ಟಂತೆ, ಫಿರ್ಯಾದು ದಾರರು ಇಲ್ಲವೇ ಸಂತ್ರಸ್ತರು ಖುದ್ದಾಗಿ ಕೊಟ್ಟ ಫಿರ್ಯಾದಿನ ಆಧಾರದ ಮೇಲೆ ತನಿಖೆ ನಡೆದು ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಯಾದಾಗ, ವಿಚಾರಣೆಯಲ್ಲಿರುವ ಪ್ರಕರಣಗಳನ್ನು ಖುದ್ದಾಗಿ ಮನ್ನಾ ಮಾಡುವ ಇಲ್ಲವೇ ಕಾನೂನು ಕ್ರಮ ಮುಂದುವರಿಸದೆ ಬಿಟ್ಟುಬಿಡುವ ಹಕ್ಕು ಇದೆ.

ಐಪಿಸಿಯಲ್ಲಿ ಇಷ್ಟು ಅಪರಾಧಗಳ ಹೊರತಾಗಿ ಉಳಿಯುವ ಸುಮಾರು 450 ಅಪರಾಧಗಳಿಗೆ ಸಂಬಂಧಪಟ್ಟಂತೆ ಮೊಕದ್ದಮೆಗಳನ್ನು ವಾಪಸು ಪಡೆಯುವ ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಂದಿರುತ್ತವೆ. ರಾಜ್ಯ ಸರ್ಕಾರ ವಾಗಲಿ, ಕೇಂದ್ರ ಸರ್ಕಾರವಾಗಲಿ, ಮೊಕದ್ದಮೆಯನ್ನು ವಾಪಸು ಪಡೆಯುವ ಆದೇಶವನ್ನು ಹೊರಡಿಸುವ ಮುನ್ನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಗುತ್ತದೆ. ಆ ನಿರ್ಣಯಗಳು ಮೊಕದ್ದಮೆ ವಾಪಸು ತೆಗೆಯಲು ಬಲವಾದ ಕಾರಣಗಳನ್ನು ಒಳಗೊಂಡಿರ ಬೇಕಾಗಿರುತ್ತದೆ. ಇದರಲ್ಲಿ ಮುಖ್ಯವಾದುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದೇ ಆಗಿರುತ್ತದೆ. ಈ ಸಂಬಂಧದಲ್ಲಿ ಕೆಲವು ಸಿದ್ಧಸೂತ್ರಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಂದಿವೆ. ಇದಕ್ಕೆ ಬೆಂಬಲವಾಗಿ ಹೈಕೋರ್ಟ್ಗಳ ಮತ್ತು ಸುಪ್ರೀಂ ಕೋರ್ಟ್ನ ಮಾರ್ಗದರ್ಶಕ ಸೂತ್ರಗಳೂ ಇವೆ.

ಯಾವುದೇ ಸರ್ಕಾರ ಕ್ರಿಮಿನಲ್ ಮೊಕದ್ದಮೆ ಗಳನ್ನು ವಾಪಸು ಪಡೆಯಲು ಆದೇಶ ಹೊರಡಿಸಿದ ಮಾತ್ರಕ್ಕೆ ನ್ಯಾಯಾಲಯ ಅವುಗಳನ್ನು ಕೈಬಿಡು ವಂತಿಲ್ಲ. ಹಳೆಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 321ರಂತೆ ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕರು ಸಮರ್ಥವಾದ ವಾದಮಂಡನೆ ಮಾಡಬೇಕಾಗಿರುತ್ತದೆ. ಹೊಸ ಕಾನೂನಿನ ಪ್ರಕಾರ, ಅಂದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಸೆಕ್ಷನ್ 360ರಂತೆ, ಸಾರ್ವಜನಿಕ ಅಭಿಯೋಜಕರು ಸರ್ಕಾರದ ಆದೇಶವನ್ನು ಸಮರ್ಥಿಸಿಕೊಳ್ಳುವಲ್ಲಿ ವಾದ ಮಂಡನೆ ಮಾಡಿದ ರಷ್ಟೇ ಸಾಲದು; ಆ ಹಂತದಲ್ಲಿ ನ್ಯಾಯಾಲಯದ ಹೊಣೆಗಾರಿಕೆ, ಸಂಬಂಧಪಟ್ಟ ಮೊಕದ್ದಮೆಯಲ್ಲಿ ಕಂಡುಬರುವ ಸಂತ್ರಸ್ತರನ್ನೂ ಬರಮಾಡಿಕೊಂಡು ವಾದ ಮಂಡನೆಗೆ ಅವಕಾಶ ಕೊಡಬೇಕಾಗಿದೆ. ಇವೆಲ್ಲಾ ವಾದ ಪ್ರಕ್ರಿಯೆಗಳು ಜರುಗಿದ ನಂತರ ಕ್ರಿಮಿನಲ್ ನ್ಯಾಯಾಲಯ ತನ್ನ ಸಮ್ಮತಿಯನ್ನು ಸರ್ಕಾರದ ಆದೇಶದ ಪರವಾಗಿ ಕೊಟ್ಟರೆ ಮಾತ್ರ ಅದು ಊರ್ಜಿತವಾಗಲು ಸಾಧ್ಯ. ಇದು ಹೊಸ ಕಾನೂನಿನಲ್ಲಿ ಕಂಡುಬರುವ ವಿಶೇಷ ಬೆಳವಣಿಗೆ.

ಪ್ರಸ್ತುತ ಆದೇಶವು ಹಳೆಯ ಮತ್ತು ಹೊಸ ಕಾಯ್ದೆಗಳಿಗೆ ಸಂಬಂಧಪಟ್ಟಿದ್ದು ಸಂಕೀರ್ಣವಾಗಿದೆ. ಸದರಿ ಆದೇಶವು ಕಲಬುರಗಿಯ ಆಳಂದ, ಹುಬ್ಬಳ್ಳಿ ಮತ್ತು ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿಯಲ್ಲಿ ಜರುಗಿದ ಗಲಭೆ ಪ್ರಕರಣಗಳನ್ನೂ ಒಳಗೊಂಡಿದೆ. ಈ ಪ್ರಕರಣಗಳಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆಯ ಕಾರಣ ಹಲವರು ದೈಹಿಕವಾಗಿ ಊನಗೊಂಡರು. ಮುಸ್ಲಿಮರ ವಿರುದ್ಧ ಹಿಂದೂಗಳು, ಹಿಂದೂಗಳ ವಿರುದ್ಧ ಮುಸ್ಲಿಮರು ಎಸಗಿದ ಘೋರ ಪ್ರಕರಣಗಳಲ್ಲಿ ಪ್ರಾಣ ಮತ್ತು ಆಸ್ತಿಗಳಿಗೆ ಹಾನಿಯಾಗಿ ‘ಪಕ್ಷ ಪ್ರತಾಪಿ’ಗಳು ಮಿಂಚಿರು ವುದಿದೆ. ಎಷ್ಟೋ ಪ್ರಕರಣಗಳಲ್ಲಿ ರಾಜಕೀಯ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು ಮತ್ತು ಸಾರ್ವಜನಿಕರು ಎಸಗಿದ್ದಾರೆನ್ನುವ ಕೃತ್ಯಗಳ ಪರಿಣಾಮ ತೀರಾ ಅಪಾಯಕಾರಿಯಲ್ಲ. ಇವುಗಳಲ್ಲಿ ಕಾವೇರಿ ನೀರಿನ ಹಂಚಿಕೆ ವಿವಾದದ ಸಂಬಂಧ ನಡೆದ ಪ್ರತಿಭಟನೆ, ಬೇರೆ ಭಾಷೆಯ ನಾಮಫಲಕಗಳ ವಿರುದ್ಧದ ಪ್ರತಿಭಟನೆ ಮತ್ತು ಆ ಸಂದರ್ಭಗಳಲ್ಲಿ ವಿಧಿಸಿದ್ದ ನಿಷೇಧಾಜ್ಞೆಗಳ ವಿರುದ್ಧದ ಪ್ರತಿಭಟನೆ, ಮೇಕೆದಾಟು ಯೋಜನೆ ಸಂಬಂಧದ ಹೋರಾಟ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದರ ವಿರುದ್ಧದ ಹೋರಾಟದ ಪ್ರಕರಣಗಳು, ವಾಟಾಳ್ ನಾಗರಾಜ್ ಮತ್ತು ಅವರ ಬೆಂಬಲಿಗರ ವಿರುದ್ಧದ ಹತ್ತಾರು ಪ್ರಕರಣಗಳು, ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ನಾರಾಯಣಗೌಡ ಮತ್ತು ಪ್ರವೀಣ ಶೆಟ್ಟಿ ಅವರಿಗೆ ಸಂಬಂಧಿಸಿದ ಪ್ರಕರಣಗಳೂ ಸೇರಿವೆ.

ಆಳಂದದ ಲಾಡ್ಲೇ ಮಶಾಕ ದರ್ಗಾದ ಬಳಿ ಪೊಲೀಸರ ಮೇಲೆ ನಡೆದ ಹಲ್ಲೆಯನ್ನು ಧರ್ಮ, ಸಿದ್ಧಾಂತ ಅಥವಾ ಜಾತಿಯ ನೆಲೆಯಲ್ಲಿ ಕಾನೂನಿನ ಬಗ್ಗೆ ಗೌರವವೇ ಇಲ್ಲದಂತೆ ಎಸಗಿರುವುದು ಅಕ್ಷಮ್ಯ. ಇಂತಹ ಕೃತ್ಯಗಳನ್ನು ಅಧಿಕಾರ ಇರುವವರು, ಅಧಿಕಾರ ಇಲ್ಲದವರ ಮೇಲೆ ಅಥವಾ ದುರ್ಬಲರ ಮೇಲೆ ನಡೆಸಿದಾಗ ಬದುಕು ದುಸ್ತರವಾಗುತ್ತದೆ. ಯಾರೂ, ಯಾವುದೂ ಇಂತಹವರನ್ನು ಶಿಕ್ಷೆ ಯಿಂದ ತಪ್ಪಿಸಬಾರದು. ಈ ಸಂಬಂಧದಲ್ಲಿ 2015ರವರೆಗೆ ಸರ್ಕಾರ ಹೊರಡಿಸಿದ ಆದೇಶಗಳಲ್ಲಿ ಗಮನದಲ್ಲಿ ಇರಿಸಿಕೊಂಡಿದ್ದ ಕಾನೂನಿನ ಅಂಶ ಗಳು, ಸಾಮಾಜಿಕ ತತ್ತ್ವಗಳನ್ನು ಇತ್ತೀಚಿನ ಆದೇಶದಲ್ಲಿ ಗಮನದಲ್ಲಿ ಇರಿಸಿಕೊಂಡಿರುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ಅಸಂಖ್ಯ ಕಿಡಿಗೇಡಿಗಳೂ ಸಮಾಜಘಾತುಕರೂ ಇದರ ನೆಪದಲ್ಲಿ ಬಚಾವಾಗಿರುವುದು ದುರದೃಷ್ಟಕರ. ಅನೇಕ ಪ್ರಕರಣಗಳಲ್ಲಿ ಎಷ್ಟೋ ಕೇಡಿಗಳು (Known Dacoits), ರೌಡಿ ಶೀಟರ್ಗಳು, ವೃತ್ತಿಪರ ಕ್ರಿಮಿನಲ್ ಗಳು ಮುಂತಾದವರಿದ್ದರೂ, ಬೇರೆಯವರನ್ನು ಅವರಿಂದ ಹೊರತುಪಡಿಸಿ ಕ್ರಿಮಿನಲ್ ಪ್ರಕರಣವನ್ನು ಅಂತಹವರ ವಿರುದ್ಧ ಮುಂದುವರಿಯುವಂತೆ ಎಚ್ಚರ ವಹಿಸದಿರುವುದು, ಸರ್ಕಾರವು ಏನನ್ನೂ ತಳಸ್ಪರ್ಶಿ ಯಾಗಿ ಗಮನಿಸದೆ ಇರುವುದು ಎದ್ದು ಕಾಣುತ್ತಿದೆ.

ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸುವ ಅಥವಾ ಹಿಂಪಡೆಯುವ ಪ್ರಕ್ರಿಯೆಯು ಅತ್ಯಂತ ಅರ್ಹರಿಗೆ ಸಂಬಂಧಿಸಿದ್ದು ಎನ್ನುವ ಮೂಲತತ್ತ್ವವನ್ನೇ ಗಾಳಿಗೆ ತೂರಿರುವುದು ಇಲ್ಲಿ ಎದ್ದುಕಾಣುತ್ತದೆ. ಕರವೇ ನಾರಾಯಣಗೌಡರ ವಿರುದ್ಧ 27 ಪ್ರಕರಣಗಳಿದ್ದು, ಪ್ರತಿ ಪ್ರಕರಣದಲ್ಲೂ ಅವರ ವೇದಿಕೆಯ ನೂರಾರು
ಸದಸ್ಯರು ಆರೋಪಿಗಳಾಗಿರುವುದು ಒಂದು ವಾಸ್ತವ. ಸರ್ಕಾರದ ಆದೇಶದ ವಿರುದ್ಧ ಪ್ರತಿಕ್ರಿಯಿಸಿ ರುವ ನಾರಾಯಣಗೌಡರು, ‘ನಾಮ್ ಕೆ ವಾಸ್ತೆಗೆ ಎರಡು ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಮೂಗಿಗೆ ತುಪ್ಪ ಹಚ್ಚುವುದು ಎಂದರೆ ಇದೇನಾ? ಆ ಎರಡು ಪ್ರಕರಣಗಳನ್ನಾದರೂ ಏಕೆ ಹಿಂಪಡೆದಿರಿ?’ ಎಂದು
ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಅವರು ಪ್ರಸ್ತುತ ಸಂದರ್ಭದ ಕುರಿತು ಸರಿಯಾದ ಮಾತುಗಳನ್ನೇ ಆಡಿರುತ್ತಾರೆ. ಸರ್ಕಾರ ಇದುವರೆಗೂ ನಿರುತ್ತರ ವಾಗಿದೆ. ಕೆಲವೊಂದು ಪ್ರಕರಣಗಳಲ್ಲಿನ ಆರೋಪಿಗಳನ್ನು ರಕ್ಷಿಸುವುದು ಸರ್ಕಾರದ ಉದ್ದೇಶವಾಗಿದ್ದು, ಅದಕ್ಕಾಗಿ ಬೇರೆ ಸಂಘ ಸಂಸ್ಥೆಗಳ ವಿರುದ್ಧವಿದ್ದ ಪ್ರಕರಣಗಳಲ್ಲಿ ಕೆಲವನ್ನು ನೆಪಮಾತ್ರಕ್ಕೆ ಆಯ್ಕೆ ಮಾಡಿಕೊಂಡಿರುವುದು ಎದ್ದುಕಾಣಿಸುವಂತಿದೆ. ಭಂಡರನ್ನು ರಕ್ಷಿಸುವ ಸರ್ಕಾರದ ಹದ್ದು ಮೀರಿದ ಹಿರಿಯಾಸೆಯೂ ಕಂಡುಬರುತ್ತದೆ.

ಪ್ರಕರಣಗಳನ್ನು ಹಿಂಪಡೆಯಲು ಪ್ರಮುಖ ಇಲಾಖೆಗಳ ಹಾಗೂ ಉನ್ನತ ಅಧಿಕಾರಿಗಳ ಸಮ್ಮತಿ ಮುಖ್ಯವಾಗಿದ್ದು, ಆ ಇಲಾಖೆಗಳು ಮತ್ತು ಅಧಿಕಾರಿಗಳು ಸರ್ಕಾರದ ಪ್ರಸ್ತಾವನೆಗೆ ಲಿಖಿತವಾಗಿಯೇ ಅಸಮ್ಮತಿ ಸೂಚಿಸಿದ್ದರು. ಪ್ರಕರಣ ಗಳನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿ ಡಿಜಿ ಮತ್ತು ಐಜಿಪಿ ಕಾರಣಗಳನ್ನು ನೀಡಿ ಹಿಂತೆಗೆಯುವುದನ್ನು ನಿರಾಕರಿಸಿರುವುದು ಗಮನಾರ್ಹ.

ಸರ್ಕಾರದ ನಿರ್ಧಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಕಂಡುಬರುತ್ತಿಲ್ಲ. ಕೆಲವು ವರ್ಷಗಳ ಹಿಂದೆಯೇ ಗೃಹ ಮಂತ್ರಿ ಜಿ. ಪರಮೇಶ್ವರ ಅವರು ‘ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹಿಂಜರಿಯುವ ಮನಸ್ಸುಗಳೇ, ನಿಮ್ಮ ಮನೆಗಳ ಮೆಟ್ಟಿಲನ್ನು ನಮ್ಮ ಆರಕ್ಷಕರೇ ಹತ್ತಲಿದ್ದಾರೆ. ನಿಮ್ಮ ದೂರುಗಳನ್ನು ಆಲಿಸಿ, ಕಾನೂನುಗಳ ಪಾಲಿಸಿ, ಸಮಸ್ಯೆಗಳನ್ನು ಬಗೆಹರಿಸಿ, ನಿಮ್ಮೆಲ್ಲರ ಮನ ಮುಟ್ಟಲಿದ್ದಾರೆ’ ಎಂದು ಹೇಳಿದ್ದರು (‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಅನುಷ್ಠಾನದ ಸಂದರ್ಭದಲ್ಲಿ). ಆ ಮಾತಿನ ಹಿನ್ನೆಲೆಯಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಪರಿಶೀಲಿಸುವಾಗ, ನೊಬೆಲ್ ಪುರಸ್ಕೃತೆ ಡೋರಿಕ್ ಲೆಸ್ಸಿಂಗ್ ಅವರ ಮಾತುಗಳು ನೆನಪಾಗುತ್ತವೆ: ‘ಬಹುತೇಕ ರಾಜಕಾರಣಿಗಳು ಅಸಂಬದ್ಧವಾಗಿ ಜೀವಿಸುವ ಜೀವಿಗಳು. ಅವರನ್ನು ಯಾರಾದರೂ ನೋಡಿಕೊಳ್ಳುತ್ತಿರಲೇಬೇಕು’ ಎನ್ನುವ ಮಾತದು. ಹೌದಲ್ಲವೆ? ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಕ್ರಿಮಿನಲ್ ಪ್ರಕರಣ ಕೈಬಿಡಲಾಗಿದೆ ಎಂದಾದರೆ, ಅಂತಹ ಸಾರ್ವಜನಿಕ ಹಿತಾಸಕ್ತಿಗೆ ಬೆಲೆಯಿಲ್ಲ ಎಂದು ಹೇಳಬೇಕಾಗುತ್ತದೆ. ಜಗತ್ತಿನಲ್ಲಿ ನಮಗೆ ಗೊತ್ತಾಗಬೇಕಾಗಿರುವುದು ನ್ಯಾಯ ಮಾತ್ರ. ನಾವೆಲ್ಲ ಕೇಳುವುದು ಅದೊಂದನ್ನು ಮಾತ್ರ.

ಲೇಖಕ: ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.