ವಾಗ್ದಂಡನೆಗೆ ಒಳಗಾಗಲು ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಇನ್ನೇನನ್ನಾದರೂ ಮಾಡಬೇಕಿದೆಯೆ? ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಂಡನೆ ನೋಟಿಸ್ ನೀಡಿದ ವಿರೋಧ ಪಕ್ಷಗಳ ಕ್ರಮವನ್ನು ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಖಂಡಿಸಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ.

ರಾಜಕೀಯ ಪೂರ್ವಗ್ರಹ, ಅತಿರೇಕದ ನಡವಳಿಕೆ, ಸಕಾಲಿಕವಲ್ಲದ ಮತ್ತು ಕಳಪೆಯಾದ ‘ಎಸ್ಐಆರ್’ ಮುಂತಾದ ಆರೋಪಗಳಲ್ಲಿ ಹುರುಳಿದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ; ಹಾಗಿದ್ದರೂ ವಿರೋಧ ಪಕ್ಷಗಳು ಸಾಂಕೇತಿಕ ಸಂದೇಶವೊಂದನ್ನು ನೀಡುವುದಕ್ಕಾಗಿ ಕೊಟ್ಟ ಕೊನೆಯಲ್ಲಿ ಬಳಸಬೇಕಿದ್ದ ಅಸ್ತ್ರವನ್ನು ಆತುರಾತುರವಾಗಿ ಬಳಸುವ ಮೂಲಕ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯೊಂದನ್ನು ಎದುರು ಹಾಕಿಕೊಂಡು ತನ್ನನ್ನು ತಾನೇ ದುರ್ಬಲಪಡಿಸಿಕೊಂಡಿದೆ ಎಂದು ಬರೆಯಲಾಗಿದೆ. ನಾನು ಸಂವಿಧಾನವನ್ನು ಪರಿಶೀಲಿಸಿದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸುವ ರೀತಿಯಲ್ಲಿ ಮಾತ್ರವೇ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿ ಸಾಧ್ಯ ಎಂದು ಸಂವಿಧಾನದ 324 (5)ನೇ ವಿಧಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ದುರ್ನಡತೆ ಅಥವಾ ಅದಕ್ಷತೆ ಸಾಬೀತಾಗಿರುವುದರ ಆಧಾರದಲ್ಲಿ ವಾಗ್ದಂಡನೆಯೇ ಅವರ ಪದಚ್ಯುತಿ ಪ್ರಕ್ರಿಯೆಯಾಗಿದೆ. ಅದೃಷ್ಟವಶಾತ್, ಪ್ರಸಿದ್ಧ ಪ್ರಕರಣವೊಂದರಲ್ಲಿ (ಅನೂಪ್ ಬರಮ್ವಾಲ್ ಮತ್ತು ಕೇಂದ್ರ ಸರ್ಕಾರ) ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ವಿವರಿಸಿದೆ. ಬಹುಮತದ ತೀರ್ಪನ್ನು ದಾಖಲಿಸಿರುವ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು ಚುನಾವಣಾ ಆಯುಕ್ತರಿಂದ ಯಾವ ರೀತಿಯ ನಡವಳಿಕೆಯನ್ನು ನಿರೀಕ್ಷಿಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಈ ಮಾನದಂಡಗಳ ಮೂಲಕವೇ ಜ್ಞಾನೇಶ್ ಕುಮಾರ್ ಅವರನ್ನು ನಾವು ಅಳೆಯಬೇಕಿದೆ: ‘ಪ್ರಾಮಾಣಿಕ ಮತ್ತು ಸ್ವತಂತ್ರವಾದ ವ್ಯಕ್ತಿಯಾಗಿದ್ದು, ಸಾರ್ವಜನಿಕರ ನಂಬಿಕೆಯನ್ನು ಗಳಿಸಿರಬೇಕು’, ‘ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು’, ‘ಕಾರ್ಯಾಂಗದ ಪ್ರಭಾವಗಳನ್ನು ಮೀರಿ ನಿಲ್ಲುವವರಾಗಿರಬೇಕು’, ‘ಪಕ್ಷಪಾತ ಅಥವಾ ಭೀತಿ ಇಲ್ಲದೆ ಕೆಲಸ ಮಾಡುವವರಾಗಿರಬೇಕು’ ಮತ್ತು ‘ಯಾವುದೇ ರಾಜಕೀಯ ಒತ್ತಡಗಳನ್ನು ಮೀರಿ ನಿಲ್ಲುವ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಹೊಂದಿರಬೇಕು’.

ಒಳ್ಳೆಯ ನಡವಳಿಕೆಯ ಜೊತೆಗೆ, ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ಅನರ್ಹಗೊಳಿಸಲು ಕಾರಣವಾಗಬಹುದಾದ ನಕಾರಾತ್ಮಕ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅದಕ್ಕಾಗಿ ನಾನು, ನವೀನ್ ಚಾವ್ಲಾ ಅವರ ನೇಮಕದ ವಿರುದ್ಧ ರಾಷ್ಟ್ರಪತಿಯವರಿಗೆ ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಿದೆ. ಮೊದಲಿಗೆ ಚುನಾವಣಾ ಆಯುಕ್ತರಾಗಿ ಮತ್ತು ನಂತರ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮತ್ತು ಮುಂದುವರಿಕೆಗೆ ಇರುವ ಆಕ್ಷೇಪಗಳನ್ನು ಬಿಜೆಪಿ ವಿವರವಾಗಿ ಪ್ರತಿಪಾದಿಸಿತ್ತು. 2006ರ ಏಪ್ರಿಲ್ 8ರಂದು ಬಿಜೆಪಿ ಬರೆದ ಈ ಪತ್ರದ ಅಂಶಗಳನ್ನು ಗಮನಿಸೋಣ: ‘ಇಲ್ಲಿ ಅವರ ಮುಂದುವರಿಕೆಗೆ ಇರುವ ವಾದ ಕಾನೂನುಬದ್ಧತೆಗೆ ಸಂಬಂಧಿಸಿದ್ದಲ್ಲ, ಬದಲಿಗೆ ಸರಿಯಾದ ನಡವಳಿಕೆಗೆ ಸಂಬಂಧಿಸಿದ್ದಾಗಿದೆ’. ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ‘ಚುನಾವಣಾ ಆಯುಕ್ತರಿಂದ ನಿರೀಕ್ಷಿಸಬಹುದಾದ ತಟಸ್ಥ ನಿಲುವು ಅವರಲ್ಲಿ ಇಲ್ಲ ಮತ್ತು ಅವರು ಪೂರ್ವಗ್ರಹ ಹೊಂದಿದ್ದಾರೆ ಎಂಬುದಕ್ಕೆ ಅಗತ್ಯ ಕಾರಣಗಳಿವೆ’ ಎಂದು ವಾದಿಸಿದ್ದರು. ಅಂತಿಮವಾಗಿ, 2008ರಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಅವರು ರಾಷ್ಟ್ರಪತಿಯವರಿಗೆ ಪತ್ರ ಬರೆದು ಚಾವ್ಲಾ ಅವರನ್ನು ಪದಚ್ಯುತಗೊಳಿಸುವಂತೆ ಕೋರುತ್ತಾರೆ; ‘ಅವರು ರಾಜಕೀಯವಾಗಿ ತಟಸ್ಥ ಎಂಬುದರ ಕುರಿತು ಗಂಭೀರ ಸಂದೇಹಗಳಿವೆ’ ಮತ್ತು ಅವರ ನಡವಳಿಕೆಯು ‘ರಾಜಕೀಯ ಪಕ್ಷಪಾತಿ ಎಂಬ ಭಾವನೆ ಮೂಡಿಸುತ್ತದೆ’ ಎಂದು ಪತ್ರದಲ್ಲಿ ವಾದಿಸಲಾಗಿತ್ತು. ಅಂತಿಮವಾಗಿ, ಚಾವ್ಲಾ ಅವರ ಪದಚ್ಯುತಿ ಆಗುವುದಿಲ್ಲ; ಆದರೆ, ಯಾವ ರೀತಿಯ ನಿಯಮಗಳನ್ನು ರೂಪಿಸಿಕೊಳ್ಳಬೇಕು ಎಂಬುದಕ್ಕೆ ಈ ಪ್ರಕರಣ ನಮಗೆ ನೆರವಾಗುತ್ತದೆ.

ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರ ನಡವಳಿಕೆಯನ್ನು ಸಾಬೀತಾದ ‘ದುರ್ನಡತೆ ಮತ್ತು ಅದಕ್ಷತೆ’ಯನ್ನು ಒಳಗೊಂಡ ನಿಯಮಗಳ ಆಧಾರದಲ್ಲಿ ತೀರ್ಮಾನಿಸಬೇಕಿದೆ. ಇಲ್ಲಿ ದುರ್ನಡತೆ ಎಂದರೆ, ಅವರು ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದಲ್ಲ. ರಾಜಕೀಯ ನಾಯಕರತ್ತ ಬೆರಳು ತೋರುವಿಕೆ, ಜನರೇ ಇಲ್ಲದಲ್ಲಿ ಕೈಬೀಸಿ ಶುಭಾಶಯ ಹೇಳುವಿಕೆ, ಮಾಧ್ಯಮಗೋಷ್ಠಿಯಲ್ಲಿ ರಾಜಕೀಯ ಭಾಷಣಗಳೆಲ್ಲವೂ ಹಾಸ್ಯಾಸ್ಪದ ಮತ್ತು ಅಪಮಾನಕರವಾಗಿದೆ. ಹೇಗೆಯೇ ನೋಡಿದರೂ ಈ ಆಡಂಬರವು ಅಸಾಂವಿಧಾನಿಕ ಅಲ್ಲದೇ ಇದ್ದರೂ ಹುದ್ದೆಗೆ ತಕ್ಕ ನಡವಳಿಕೆ ಅಲ್ಲ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡುವುದರಿಂದ ತಪ್ಪಿಸಿಕೊಳ್ಳಲು ಅವರು ಕೊಟ್ಟಿದ್ದ ‘ಬೆಹನ್–ಬೇಟಿ ಕಿ ಫೋಟೊ’ ವಾದವು ಸಮರ್ಪಕವಾದ ವಾದ ಮುಂದಿಡುವಲ್ಲಿ ಅವರ ಅದಕ್ಷತೆಯನ್ನು ಸಾಬೀತು ಮಾಡುತ್ತದೆ. ಹಾಗಿದ್ದರೂ ಇದು ಸಾಂವಿಧಾನಿಕವಾಗಿ ವ್ಯಾಖ್ಯಾನಿಸಲಾದ ‘ಅದಕ್ಷತೆ’ಯ ವ್ಯಾಪ್ತಿಗೆ ಬರಲಿಕ್ಕಿಲ್ಲ. ಏನೇ ಆದರೂ ಸಣ್ಣ ಜನರು ದೊಡ್ಡ ಹುದ್ದೆಗೆ ಹೋಗುವುದನ್ನು ನಿಷೇಧಿಸಿದರೆ, ನಮ್ಮ ಬಹುಪಾಲು ಸಾಂವಿಧಾನಿಕ ಹುದ್ದೆಗಳು ಖಾಲಿ ಉಳಿಯುತ್ತವೆ.

ಜ್ಞಾನೇಶ್ ಕುಮಾರ್ ಅವರ ‘ದುರ್ನಡತೆ’ಯ ಹೆಚ್ಚು ಗಂಭೀರವಾದ ಅಂಶವೆಂದರೆ, ಎದ್ದು ಕಾಣುವ ರಾಜಕೀಯ ಪಕ್ಷಪಾತ. ಈಗ ಕುಪ್ರಸಿದ್ಧವಾಗಿರುವ ‘ಮತಕಳವು’ ವಿಚಾರಕ್ಕೆ ಸಂಬಂಧಿಸಿ ಅವರು ನಡೆಸಿದ ಮಾಧ್ಯಮಗೋಷ್ಠಿಯನ್ನು ನೆನಪಿಸಿಕೊಳ್ಳಿ; ಆ ಮಾಧ್ಯಮಗೋಷ್ಠಿಯಲ್ಲಿ ಅವರು, ‘ಪ್ರಮಾಣಪತ್ರ ಸಲ್ಲಿಸಿ ಇಲ್ಲವೇ ದೇಶದ ಕ್ಷಮೆ ಯಾಚಿಸಿ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಆಗ್ರಹಿಸಿದ್ದರು. ಇದಾದ ಬಳಿಕ ಅವರಿಗೆ ಉಳಿದಿರುವುದು ಬಿಜೆಪಿ ಟಿಕೆಟ್ ಪಡೆದುಕೊಂಡು ಸ್ವತಃ ಚುನಾವಣೆಗೆ ಸ್ಪರ್ಧಿಸುವುದು. ಇದು ಇಂತಹ ಏಕೈಕ ಘಟನೆಯೇನೂ ಅಲ್ಲ. ಇಂತಹ ಸಂಘರ್ಷಾತ್ಮಕ ಮುಖಾಮುಖಿಗಳು ಅಸಂಖ್ಯ ಮತ್ತು ಟಿಎಂಸಿ ಮುಖಂಡರ ಜೊತೆಗಿನ ಮುಖಾಮುಖಿ ತೀರಾ ಇತ್ತೀಚಿನದ್ದು. ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಐಆರ್, ಬಿಜೆಪಿಗೆ ಅನುಕೂಲಕರವಲ್ಲದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ತೆಗೆದುಹಾಕುವ ಚುನಾವಣಾ ಆಯೋಗದ ಹತಾಶ ಯತ್ನವಾಗಿದೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಯವರನ್ನು ಬದಲಾಯಿಸುವ ನಿರ್ಧಾರವು ಬಿಜೆಪಿ ಜೊತೆಗಿನ ಜುಗಲ್ಬಂದಿಯನ್ನು ತೋರಿಸುತ್ತದೆ. ಪ್ರಧಾನಿಗೆ ವಿರೋಧಕ್ಕಿಂತಲೂ ಹೆಚ್ಚಾಗಿ ದೇಶದ ವಿರೋಧ ಪಕ್ಷಗಳನ್ನು ಒಟ್ಟಿಗೆ ಸೇರಿಸುವ ಒಂದು ವಿಚಾರ ಇದ್ದರೆ ಅದು ಮುಖ್ಯ ಚುನಾವಣಾ ಆಯುಕ್ತರ ಮೇಲಿನ ನಂಬಿಕೆಯ ಕೊರತೆ. ಚುನಾವಣಾ ಆಯೋಗದ ಮೇಲೆ ಜನರು ಇರಿಸಿದ್ದ ವಿಶ್ವಾಸವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಒಂದು ಕಾಲದಲ್ಲಿ ಪಾವಿತ್ರ್ಯ ಹೊಂದಿದ್ದ ಸಂಸ್ಥೆಯಾಗಿದ್ದ ಚುನಾವಣಾ ಆಯೋಗವನ್ನು ಹಾಸ್ಯಾಸ್ಪದಗೊಳಿಸಿದ ಕೀರ್ತಿಯು ಜ್ಞಾನೇಶ್ ಕುಮಾರ್ ಅವರಿಗೇ ಸಲ್ಲಬೇಕು. ಔಚಿತ್ಯ ಮತ್ತು ‘ತಟಸ್ಥವಾಗಿರುವಿಕೆ’ಯು ಮಾನದಂಡವಾಗಿದ್ದರೆ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಲ್ಲಿ ಜ್ಞಾನೇಶ್ ಕುಮಾರ್ ಅವರು ಇರುವುದಕ್ಕೆ ಸಾಧ್ಯವೇ ಇಲ್ಲ. ಯಾವುದೇ ಸಕ್ರಿಯ ಪ್ರಜಾಪ್ರಭುತ್ವದಲ್ಲಿ, ಸಾರ್ವಜನಿಕವಾಗಿ ಆಗಿರುವ ಅವಮಾನದಿಂದಾಗಿ ಜ್ಞಾನೇಶ್ ಕುಮಾರ್ ಅವರಂಥವರು ಈ ಹೊತ್ತಿಗೆ ರಾಜೀನಾಮೆ ಕೊಟ್ಟು ಆಗಬೇಕಿತ್ತು.

ಔಚಿತ್ಯಹೀನತೆ, ಪಕ್ಷಪಾತ ಮತ್ತು ಅದಕ್ಷತೆಯಂತಹ ಅತ್ಯಂತ ಕೆಟ್ಟ ವಿಚಾರಗಳು ಕೂಡ ತಾವೇ ರಕ್ಷಿಸಬೇಕಿದ್ದ ಪ್ರಜಾಪ್ರಭುತ್ವಕ್ಕೆ ಜ್ಞಾನೇಶ್ ಕುಮಾರ್ ಕೊಟ್ಟ ಅತಿದೊಡ್ಡ ಏಟಾದ ‘ಎಸ್ಐಆರ್’ನ ಮುಂದೆ ಮಸುಕಾಗಿಬಿಡುತ್ತವೆ. ಎಸ್ಐಆರ್ ಹೆಸರಿನಲ್ಲಿ ಮಾಡಿದ ರೀತಿಯಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ ಎಂಬುದರ ಕಾನೂನು–ತಾಂತ್ರಿಕ ಆಯಾಮ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ನೀಡಬೇಕಿದೆ. ನ್ಯಾಯಾಲಯದ ತೀರ್ಪು ಏನೇ ಆಗಿರಲಿ, ಈ ಇಡೀ ಪ್ರಕ್ರಿಯೆಯ ಪರಿಣಾಮ ಏನು ಎಂಬುದು ನಮ್ಮ ಕಣ್ಣ ಮುಂದೆಯೇ ಇದೆ. ಸುಮಾರು ಐದು ಕೋಟಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಈಗಾಗಲೇ ತೆಗೆದುಹಾಕಲಾಗಿದೆ. ದೇಶದ ಮೂರನೇ ಒಂದರಷ್ಟು ಪ್ರದೇಶದಲ್ಲಿ ಈ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಪ್ರತಿಯೊಂದು ರಾಜ್ಯದಲ್ಲಿಯೂ ರಾಜ್ಯದ ವಯಸ್ಕ ಜನಸಂಖ್ಯೆಗೆ ಹೋಲಿಸಿದರೆ ಎಸ್ಐಆರ್ ಬಳಿಕ ಮತದಾರರ ಪಟ್ಟಿಯು ಕಿರಿದಾಗಿದೆ. ಎಸ್ಐಆರ್ನಿಂದಾಗಿ ಮತದಾರರ ಪಟ್ಟಿಯಲ್ಲಿ ಸೇರಿರುವ ಮಹಿಳಾ ಮತದಾರರ ಪ್ರಮಾಣದಲ್ಲಿ ಕುಸಿತವಾಗಿದೆ.

ಶೋಷಣೆಗೆ ಒಳಗಾದ ಭಾರತೀಯರು– ಬಡವರು, ವಲಸಿಗರು, ಬುಡಕಟ್ಟು ಜನರು– ಸ್ವತಂತ್ರ ಭಾರತದಲ್ಲಿ ಹೊಂದಿದ್ದ ಪರಿಣಾಮಕಾರಿಯಾಗಿದ್ದ ಏಕೈಕ ಹಕ್ಕಾಗಿದ್ದ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ದೊಡ್ಡದಾದ ಮತದಾನದ ಹಕ್ಕು ನಿರಾಕರಣೆಯ ಪ್ರಕ್ರಿಯೆಯನ್ನು ಯಾವ ಪೂರ್ವನಿದರ್ಶನ, ಸಮಾಲೋಚನೆ ಅಥವಾ ಸಿದ್ಧತೆ ಇಲ್ಲದೆ ಜ್ಞಾನೇಶ್ ಕುಮಾರ್ ಅವರು ಏಕಾಂಗಿಯಾಗಿ ನಡೆಸಿದ್ದಾರೆ. ಸಾರ್ವತ್ರಿಕ ಮತದಾನದ ಹಕ್ಕಿನ ಮೇಲಿನ ಈ ಪ್ರಹಾರವು ಕಪ್ಪು ವರ್ಣೀಯರಿಗೆ ಮತದಾನದ ಹಕ್ಕು ನಿರಾಕರಿಸಿದ ಅಮೆರಿಕದ ಜಿಮ್ ಕ್ರೋ ಕಾನೂನನ್ನೂ ನಾಚಿಸುತ್ತದೆ. ಜ್ಞಾನೇಶ್ ಕುಮಾರ್ ಅವರಿಗೆ ವಾಗ್ದಂಡನೆ ವಿಧಿಸುವ ಕ್ರಮವು ಅದು ಸಾಂಕೇತಿಕವೇ ಆಗಿದ್ದರೂ ‘ಭಾರತೀಯ ಜನತೆ’ಯ ಮೇಲೆ ಎಸಗಲಾದ ಅಪರಾಧವನ್ನು ಗುರ್ತಿಸುತ್ತದೆ ಮತ್ತು ಪರಿಹರಿಸಲು ಪ್ರಯತ್ನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.