ಆರೋಗ್ಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಜನಸಾಮಾನ್ಯರ ಪಾಲಿಗೆ ಕೃತಕ ಬುದ್ಧಿಮತ್ತೆ ಆಪ್ತಮಿತ್ರನಂತೆ ಒದಗಿಬರುತ್ತದೆ. ಕೆಲವು ಸಂದರ್ಭಗಳಲ್ಲಿ ‘ಎಐ’ ವೈದ್ಯರಿಗೂ ಉಪಯುಕ್ತ. ‘ಸೆಕೆಂಡ್ ಒಪಿನಿಯನ್’ ರೀತಿ ವೈದ್ಯರು ಹಾಗೂ ರೋಗಿಗಳು ಬಳಸಬಹುದಾದ ‘ಎಐ’ ಆರೋಗ್ಯಕ್ಷೇತ್ರದಲ್ಲಿನ ತಜ್ಞರ ಒತ್ತಡವನ್ನು ಹಗುರಗೊಳಿಸಬಲ್ಲದು.