ಬಚ್ಚಿಟ್ಟ ಕೆಂಡ ಮತ್ತೆ ಉರಿವುದಲ್ಲದೆ ಬೂದಿಯಲ್ಲಿ ಕೆಂಡವುಂಟೇ ?

ಭವಕ್ಕೆ ಬಂದುದು ತನ್ನಿಚ್ಛೆಯಿಂದಲ್ಲದೆ

ಪರರ(ನ) ದೂರಲದೇಕೆ ?

ಭವದ ಬೇರ ಕಿತ್ತಿ, ಸ್ವರೂಪ ಚಿದಗ್ನಿಯನಿಕ್ಕಿ ಅಂತಃಕರಣಕ್ಕೆ ಶಿವಮಂತ್ರವಿರಿಸಿ, ದಿವ್ಯ ಘಟದಲ್ಲಿ ಶಿವದಾಸೋಹವ ಶಿವಭಕ್ತರನುಭಾವದಲ್ಲಿ ಉಂಡು ಲಿಂಗೈಕ್ಯನಾಗಿ ಭವವ ಭೇದಿಸೆಂದ! ಗುರು ಬಸವಪ್ರಭುವಿನ ಅರಿವಲ್ಲಿ ಲಿಂಗ ಸ್ವಯವು ಮುರುಘೇಶ.

ಮೇಲ್ಕಂಡ ವಚನದಂತೆ ಕೇವಲ ಭವದ ವಿಚಾರವನ್ನೇ ಹೊತ್ತರೆ ಭಾವವನ್ನು ಭೇದಿಸಲು ಮುಖ್ಯವಾದ ಸಾಧನಾ ಮಾರ್ಗವನ್ನು ಬಸವ ತತ್ವದಲ್ಲಿ ಕಾಣಬಹುದು.

ಅಷ್ಟಾವರಣ ಸಂಪನ್ನರಾಗಿ ಷಟ್ಸ್ಥಲಗಳೊಂದಿಗೆ ಐಕ್ಯ ಪದವಿಯನ್ನು ಸಾಧಿಸೋಣ

ಅಷ್ಟಾವರಣಗಳು:-

1) ಗುರು: ಕಾಯಕ್ಕೆ ಅರಿವನ್ನು ಪ್ರಾಪ್ತಿ ಮಾಡುವ ಚೈತನ್ಯವೇ ಗುರು. ಪಿಂಡಾಂಡದಿ ತೋರುವ ಕಾಯವೇ ಗುರು, ಅರಿವಿನಿಂದ ಕೂಡಿದ ಸತ್ಕ್ರಿಯಾ ಸದಾಚಾರಗಳ ಸಂಗಮ, ಇದು ಸ್ಥೂಲ ತನುವನ್ನು ಶುದ್ಧೀಕರಿಸುವುದು, ಭಕ್ತನ ಶ್ರದ್ಧೆಯೇ ಗುರು, ಮದವಳಿಯುವುದು. ಶ್ರದ್ಧಾಭಕ್ತಿ ಗುರುಕೃಪೆಯಿಲ್ಲದವನ ಕರ್ಮ ಹರಿಯದು.

2) ಲಿಂಗ: ಅಂಗದ ಮೇಲೆ ಸಾಹಿತ್ಯವಾದ ಇಷ್ಟಲಿಂಗ, ಪ್ರಾಣವೇ ಲಿಂಗ, ಪ್ರಾಣದ ಮರೆಯಲ್ಲಿ ಸೂಕ್ಷ್ಮತನುವಿನಲ್ಲಿ ವ್ಯವಹರಿಸುವ ಮನಸ್ಸು. ಸಕಲ ವಿಚಾರಗಳನ್ನು ಶುದ್ಧರೂಪದಲ್ಲಿ ಅರಿತು ಅಂಗವಿಸಿಕೊಳ್ಳುವ ಪ್ರಕ್ರಿಯೆಯೇ ಲಿಂಗ, ಭಕ್ತನ ಶ್ರದ್ಧೆಯೇ ಲಿಂಗ, ಕಾಮವಳಿಯುವುದು, ನಿಷ್ಠಾಭಕ್ತ, ಲಿಂಗ ಸೋಂಕದವನ ಅಂಗ ಭಂಗ.

3) ಜಂಗಮ: ಜ್ಞಾನವೆ ಜಂಗಮ, ಕಾರಣತನುವಿನ ಭಾವದ ನೆಲೆಯಲ್ಲಿ ಅನುಭಾವಿಸುವ, ಸ್ಫುರಿಸುವ ಚೈತನ್ಯವೇ ಜಂಗಮ, ಭಕ್ತನ ಶ್ರದ್ಧೆಯೇ

ಜಂಗಮ, ಲಿಂಗನ ಪೂಜಿಸುವ ಸದಾಚಾರವೇ ಜಂಗಮ, ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮ, ಮತ್ಸರವಳಿಯುವುದು, ಸಾವಧಾನಭಕ್ತ, ಜಂಗಮ ದರುಶನವಿಲ್ಲದವಂಗೆ ಮೋಕ್ಷಾರ್ಥ ಬಟ್ಟೆ ದೊರೆಯದು.

4) ವಿಭೂತಿ: ಹಣೆಯ ಮೇಲೆ ಧಾರಣ ಮಾಡುವ ಭಸ್ಮ, ಸೋಂಕಿನ ಸುಖವ ಮರೆದು ಭಕ್ತನ ಸಮರಸ ಮತ್ತು ಕಾಯದೊಳು ಕಾಂಬ ಅರುವಿನ ಬೆಳಗೇ ವಿಭೂತಿ, ಕ್ರೋಧವನಳಿಯುವುದು, ಆನಂದಭಕ್ತ, ವಿಭೂತಿಯ ಧರಿಸದವಂಗೆ ದುರಿತಲಿಖಿತಂಗಳು ತೊಡೆಯವು.

5) ರುದ್ರಾಕ್ಷಿ: ಅರಿವಿನ ಕೃಪೆಯೇ ರುದ್ರಾಕ್ಷಿ, ಶಿವಾಚಾರವನ್ನು ಅಳವಡಿಸಿಕೊಳ್ಳುವುದು, ಅನುಭಾವವೇ ರುದ್ರಾಕ್ಷಿ, ಕ್ರೋಧವನಳಿಯುವುದು, ಆನಂದಭಕ್ತ, ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು.

6) ಮಂತ್ರ: ಅರಿವು ತಾನೇ ಆಗಿ ಮೆರೆದುದೇ ಮಂತ್ರ, ಭಕ್ತನ ನಿಷ್ಠೆಯೇ ಮಂತ್ರ, ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು, ಲೋಭವನಳಿಯುವುದು, ಸಮರಸಭಕ್ತ.

7) ಪಾದೋದಕ: ಅರಿವಿನ ಕರಣವೇ ಪಾದೋದಕ, ಆನಂದವೇ ಪಾದೋದಕ, ಮೋಹವನಳಿಯುವುದು, ಅನುಭಾವ ಭಕ್ತ, ಪಾದೋದಕವ ಕೊಳದವನ ಪರಿಭವಂಗಳು ಅಳಿಯವು.

8) ಪ್ರಸಾದ: ಅರಿವಿನ ಆನಂದವೇ ಪ್ರಸಾದ, ಸಾವಧಾನವೇ ಪ್ರಸಾದ, ಮೋಹವನಳಿಯುವುದು, ಅನುಭಾವಭಕ್ತ, ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು.

ಬರಿಯ ಬಾಹ್ಯದ ಆಡಂಬರದ ಅಷ್ಟಾವರಣ ಧಾರಣೆಯಿಂದ ಸಾಧಕನಲ್ಲಿ ಯಾವ ಬದಲಾವಣೆಗಳು ಗೋಚರಿಸದಿದ್ದರೆ ಅಂಥಾ ಆವರಣಗಳು ಶುಷ್ಕವೆನಿಸಿಕೊಳ್ಳುತ್ತವೆ. ಅವುಗಳಿಂದ ಯಾವ ಪ್ರಯೋಜನವೂ ಇಲ್ಲ. ಬಾಹ್ಯ ಅಷ್ಟಾವರಣಗಳಿಗೆ ತತ್-ಸಂಬಂಧವಾದ ಅಂತರ್ ಅಷ್ಟಾವರಣಗಳನ್ನು ಅರಿವಿನ ಮುಖದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಧಕನು ತನ್ನ ಇಂದ್ರಿಯ ಸ್ವಭಾವ ಗುಣಗಳಿಂದ ಮುಕ್ತನಾಗಿ ಬಯಲ ಸಾಧನೆಯಲ್ಲಿ ತೊಡಗಿ ಬಯಲ ರೂಪವೇ ತಾನಾಗುವನು.

ಪಂಚಾಚಾರಗಳು:

1) ಲಿಂಗಾಚಾರ : ಅಂಗದ ಮೇಲೆ ಲಿಂಗವನ್ನು ಧರಿಸಿದ್ದ ಪ್ರತಿಯೊಬ್ಬರೂ ಮಾಡುವ ಕೆಲಸ , ನೋಡುವ ನೋಟ , ಕೊಂಬುವ ಪ್ರಸಾದಗಲೆಲ್ಲವನ್ನು ಲಿಂಗಮುಖವಾಗಿ ತೆಗೆದುಕೊಳ್ಳಬೇಕು. ಗುರುಲಿಂಗ ಜಂಗಮರಿಗೆ ಅನ್ಯವ ಬಗೆಯದೆ ಸುವಿಚಾರ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು . ಭವಿಗಳೊಂದಿಗೆ ನಿಲ್ಲಬಾರದು ,

ಲಿಂಗಾಚಾರ : ದೇವನೊಬ್ಬನೇ ಎಂದು ನಂಬಿ ಒಂದೇ ಆಕಾರದಲ್ಲಿ ಪೂಜಿಸುವುದು ಲಿಂಗಾಚಾರ .

2) ಸದಾಚಾರ : 'ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗ ಘಟಸರ್ಪ' ಅಂದರೆ ಸತ್ಯ ಶುದ್ದ ಕಾಯಕದಿಂದ ಗುರುಲಿಂಗ ಜಂಗಮರ ಸೇವೆಯನ್ನು ಮಾಡುವಲ್ಲಿ ಆಚಾರ ಸುವಿಚಾರ ಉಚ್ಚಾರಗಳು ಪರಿಶುದ್ದಗೊಂಡು ಲಿಂಗವು ಮೆಚ್ಚು ವನ್ಥಾಗುವುದೇ ಸದಾಚಾರವು ,ಸದಾಚಾರ : ಸತ್ಯಶುದ್ಧ ಕಾಯಕದಿಂದ ಬಂದದ್ದರಲ್ಲಿ ಮಿಕ್ಕದ್ದನ್ನು ಸಮಾಜಕ್ಕೆ ನೀಡಿ ರಾಷ್ಟ್ರದ ಪ್ರಗತಿಗೆ ದುಡಿಯುವುದೇ ಸದಾಚಾರ

3) ಶಿವಾಚಾರ : ಜಗದ ಜನರೆಲ್ಲರೂ ಒಂದೇ ಎಂಬ ಸಮತಾ ಭಾವನೆಯೇ ಶಿವಾಚಾರ . ಇಲ್ಲಿ ಪ್ರತಿಯೊಬ್ಬನ ಸಮತ್ವದ ಜೊತೆಗೆ ಸಮಾಜದ ಆಗು-ಹೋಗುಗಳ ಸಮತೋಲನವನ್ನು ಕಂಡುಕೊಳ್ಳಬಹುದು. ವರ್ಣ, ಜಾತಿ, ಆಶ್ರಮಗಳಲ್ಲಿಯ ಭೇದಭಾವವನ್ನು ಕಾಣಲಾಗುವುದಿಲ್ಲ ,ಶಿವಾಚಾರ : ಶಿವಭಕ್ತರಲ್ಲಿ ಜಾತೀಯತೆಯನ್ನು ಮಾಡದಿರುವುದೇ ಶಿವಾಚಾರ

4) ಗಣಚಾರ : ಶಿವಾಚಾರಿಯದವನು ಶಿವನಿಂದೆಯ ಮಾಡಲಾಗದು. ಶಿವನಿಂದೆಯ ಕೇಳಲಾಗದು. ಪರಧರ್ಮವನ್ನು ಹೀಯಾಲಿಸದೆ, ಪರರನ್ನು ನಿಂದಿಸದೆ ಪರಶಿವನ ಮೆಚ್ಚುಗೆಯನ್ನು ಪಡೆಯಬೇಕು. ಇಂಥಪ್ಪ ವೀರಶೈವನು ಶಿವನಿಂದೆಯಂ ಕೇಳಿ ದೊಡೆ ಆ ಊರು, ದೇಶ, ಕೋಶಗಳನ್ನೆಲ್ಲ ತ್ಯಾಗ ಮಾಡಬಲ್ಲ ಮಹಾತ್ಯಾಗಿ ಅವನಗಿರಬೇಕು ,ಗಣಾಚಾರ : ಅನ್ಯಾಯ, ಅನೀತಿ, ಜಾತೀಯತೆಯ ವಿರುದ್ಧ ಹೋರಾಡುವದೇ ಗಣಾಚಾರ

5) ಭ್ರುತ್ಯಾಚಾರ : 'ಎನಗಿಂತ ಕಿರಿಯರಿಲ್ಲ; ಶಿವಭಕ್ಥರಿಗಿಂಥ ಹಿರಿಯರಿಲ್ಲ ' ಎಂಬುದೇ ಭ್ರುತ್ಯಾಚಾರವು . ಭಕ್ತನು ಶರಣರಿದ್ದಲ್ಲಿಗೆ ಹೋಗಿ ಕಿಂಕರನಾಗಿ ತನ್ನ ತನು , ಮನ , ಧನಗಳನ್ನು ಅರ್ಪಿಸಬೇಕು . ಶಿವಭಕ್ತರ ವಿಚಾರದಲ್ಲಿ ವಿನಯಶೀಲನಾಗಿರಬೇಕು, ಭ್ರುತ್ಯಾಚಾರ : ಸಮಾಜದ ಹಿತಕ್ಕಾಗಿ, ಕಿಂಕರನಾಗಿ ಸೇವೆ ಮಾಡುವುದೇ ಭ್ರುತ್ಯಾಚಾರ

ಷಟ್ಸ್ಥಲಗಳೊಂದಿಗೆ ಮಹಾ ಮುಕ್ತಿಯನೈದುವ ಸಾಧನೆ:

1) ಭಕ್ತಸ್ಥಲ- ಯಮ ಮತ್ತು ನಿಯಮ : (ಈ ಹಂತದಲ್ಲಿ ಸಾಧಕನು ಭಕ್ತಿ ಮತ್ತು ಶ್ರದ್ಧೆಗಳನ್ನು ಅಳವಡಿಸಿಕೊಳ್ಳುತ್ತಾನೆ.)

2) ಮಹೇಶ್ವರಸ್ಥಲ- ನಿಯಮ ಮತ್ತು ಆಸನ : (ಈ ಹಂತದಲ್ಲಿ ಸಾಧಕನಲ್ಲಿ ತತ್ವ ನಿಷ್ಠೆ ಅಳವಟ್ಟು ಗಟ್ಟಿಗೊಳ್ಳುವುದು.)

3) ಪ್ರಸಾದಿಸ್ಥಲ- ಪ್ರತ್ಯಾಹಾರ : (ಈ ಹಂತದಲ್ಲಿ ಸಾಧಕನು ಜೀವನವನ್ನು ದೇವರಿತ್ತ ಪ್ರಸಾದ, ಜಗತ್ತೆಲ್ಲವೂ ಪ್ರಸಾದವೆಂದು ಭಾವಿಸಿ ಅನುಭವಿಸುತ್ತಾನೆ.)

4) ಪ್ರಾಣಲಿಂಗಿಸ್ಥಲ- ಪ್ರಾಣಾಯಾಮ ಮತ್ತು ಧ್ಯಾನ : (ಈ ಹಂತದಲ್ಲಿ ಸಾಧಕನು ಪ್ರಾಣದಲ್ಲಿ ದೇವರನ್ನು ಕಾಣುವನು, ಅಂತಃಕರಣಗಳು ಪರಿಶುದ್ಧಗೊಂಡು ದೈವೀಮಯವಾಗುವ ಸ್ಥಿತಿ.)

5) ಶರಣಸ್ಥಲ- ಧಾರಣ : (ದೇವರು ತನ್ನೊಳಗೇ ಇದ್ದಾನೆ, ಅಖಂಡ ಸೃಷ್ಟಿಯಲ್ಲೂ ಇದ್ದಾನೆ ಹಾಗಾಗಿ ಜಗತ್ತು ಬೇರೆಯಲ್ಲ ನಾನು ಬೇರೆಯಲ್ಲ ಎಂಬ ಭಾವ ಬಲಿಯುವುದು.)

6) ಐಕ್ಯಸ್ಥಲ- ಸಮಾಧಿ : (ನಿಶ್ಚಿಂತ ನಿಜವನ್ನು ಒಡಗೂಡುವ ಸ್ಥಿತಿಯೇ ಐಕ್ಯ)

ಮೇಲ್ಕಂಡ ಅಷ್ಟಾವರಣಗಳು ಅಂಗವಾಗಿ, ಪಂಚಾಚಾರಗಳು ಪ್ರಾಣವಾಗಿ, ಷಟ್ಸ್ಥಲಗಳು ಅತ್ಮವಾಗಿಸಿ ಸಾಧನೆಗೈದ ಮಹಾ ಲಿಂಗೈಕ್ಯನಪ್ಪನು ಸ್ವಯ ತಾನಪ್ಪನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.