ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸುನಾಮಿ, ತಮಿಳುನಾಡಿನಲ್ಲಿ ಅದು ಭೌಗೋಳಿಕ ಪಲ್ಲಟ
(tectonic shift). ಪೂರ್ವದ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಬಿಜೆಪಿ ಗುಡಿಸಿ
ಹಾಕಿದ್ದರೆ, ದಕ್ಷಿಣದ ರಾಜ್ಯದಲ್ಲಿ ಚಿತ್ರನಟ ಮತ್ತು ರಾಜಕಾರಣಕ್ಕೆ ಹೊಸಬರಾದ ಜೋಸೆಫ್ ವಿಜಯ್ ದ್ರಾವಿಡ ಪಕ್ಷವಾದ ಡಿಎಂಕೆಯನ್ನು ಮಣಿಸಿದ್ದಾರೆ, ಸಂಚಲನಾತ್ಮಕ ಜಯ ಸಾಧಿಸಿದ್ದಾರೆ.

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಎದ್ದುಕಾಣಿಸುವ ಈ ಎರಡು ಫಲಿತಾಂಶಗಳು ಇತಿಹಾಸ ಸೃಷ್ಟಿಗಿಂತ ಕಡಿಮೆಯೇನಲ್ಲ. ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಳ್ವಿಕೆಯನ್ನು ಬಿಜೆಪಿ ಅಂತ್ಯಗೊಳಿಸಿದ್ದರೆ, ಡಿಎಂಕೆ ನಾಯಕ ಸ್ಟಾಲಿನ್ ಅವರಎರಡನೇ ಅವಧಿಯ ಆಸೆಗೆ ಯುವ ಐಕಾನ್ ತಣ್ಣೀರೆರಚಿದ್ದಾರೆ. ತಮ್ಮ ಪಕ್ಷಗಳ ಸೋಲು ಸಾಲದೆಂಬಂತೆ, ಹಾಲಿ ಇಬ್ಬರೂ ಮುಖ್ಯಮಂತ್ರಿಗಳು ಈ ಹಿಂದೆ ತಮ್ಮ ಪಕ್ಷದಲ್ಲೇ ಇದ್ದು ಹೊರಗೆ ಹೋದವರ ವಿರುದ್ಧ ಸ್ವಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದಾರೆ.

ಈ ಎರಡು ರಾಜಕೀಯ ಪಲ್ಲಟಗಳಿಗೆ ಕಾರಣವೇನು? ಇದು ಎರಡು ರಾಜ್ಯಗಳ ಹೊಸ ಅಧ್ಯಾಯ
ಗಳನ್ನು ಬರೆದ ವಿವಿಧ ಅಂಶಗಳ ಸಂಯೋಜನೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ, ಮಮತಾ ಅವರು
‘ಬೀದಿ ಹೋರಾಟಗಾರ್ತಿ’ ಎಂದು ಹೆಸರಾಗಿದ್ದರೂ, ತಳಮಟ್ಟದ ವಾಸ್ತವಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದರೆನ್ನಿಸುತ್ತದೆ. 2011ರ ಮೊದಲ ಗೆಲುವಿನಿಂದಲೂ ಮಹಿಳಾಶಕ್ತಿ ಅವರ ಬೆನ್ನಿಗಿತ್ತು ಮತ್ತುಆ ನಾರೀಶಕ್ತಿಗಾಗಿ ಮಮತಾ ಹಲವಾರು ಯೋಜನೆಗಳನ್ನು ಘೋಷಿಸಿದ್ದರು. ಆದರೆ, ಈ ಬಾರಿ ಮಹಿಳಾ ಮತಬ್ಯಾಂಕ್ನಲ್ಲಿ ಬಿರುಕು ಕಾಣಿಸಿದೆ. ಆರ್.ಜಿ.ಕರ್ ಕಾಲೇಜಿನ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಮಹಿಳೆಯರ ಮೇಲಿನ ಕಿರುಕುಳದ ಮೂರು ಘಟನೆಗಳು,ಮಹಿಳೆಯರಲ್ಲಿ ಅಸುರಕ್ಷತೆಯನ್ನೂ ಆಕ್ರೋಶವನ್ನೂ ಮೂಡಿಸಿದ್ದವು. ಕೈಗಾರಿಕೀಕರಣದ ಕೊರತೆಯಿಂದಾಗಿ ಉಂಟಾದ ನಿರುದ್ಯೋಗವು ಯುವಕರನ್ನು
ಬಿಜೆಪಿಯತ್ತ ಸೆಳೆಯಿತು.

ಹಿಂದುತ್ವ ಮತ್ತು ಬಾಂಗ್ಲಾದೇಶಿಗಳ ಅಕ್ರಮ ವಲಸೆಯ ಮೇಲೆ ಬಿಜೆಪಿಯ ಪಟ್ಟುಬಿಡದ ಗಮನ ಹಾಗೂ ಟಿಎಂಸಿ ಸರ್ಕಾರ ಅಕ್ರಮ ವಲಸಿಗರಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಜನರಲ್ಲಿ ಅನುರಣಿಸಿತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್ಐಆರ್) ಭಾರೀ ವಿವಾದ ಸೃಷ್ಟಿಸಿತು ಮತ್ತು ಲಕ್ಷಾಂತರ ಮತದಾರರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಟಿಎಂಸಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿತು. ಆದರೆ, ‘ಎಸ್ಐಆರ್’ನ ನಿಜವಾದ ಪರಿಣಾಮ ಇನ್ನೂ ತಿಳಿದುಬಂದಿಲ್ಲ.

ಪಕ್ಷದ ಕಾರ್ಯಕರ್ತರ ಭ್ರಷ್ಟಾಚಾರ, ‘ಕಟ್–ಮನಿ’ ಹಾವಳಿ ಮತ್ತು 2023ರ ಪಂಚಾಯತ್ ಚುನಾವಣೆಗಳಲ್ಲಿ ಕಂಡುಬಂದ ಭೀಕರ ಹಿಂಸಾಚಾರ ಸೇರಿದಂತೆ ನಿರಂತರ ಹಿಂಸಾತ್ಮಕ ರಾಜಕೀಯವು ಟಿಎಂಸಿಯ ಪತನಕ್ಕೆ ಕಾರಣವಾಯಿತು. ಪಶ್ಚಿಮ ಬಂಗಾಳದ ಗಡಿಯನ್ನು ಪ್ರವೇಶಿಸಲು ದೃಢಸಂಕಲ್ಪ ಮಾಡಿದ್ದ ಬಿಜೆಪಿ, ಚುನಾವಣೆಗೆ ಹಲವು ತಿಂಗಳುಗಳ ಮೊದಲೇ ಪೂರ್ಣ ಶಕ್ತಿಯೊಂದಿಗೆ ಕಣಕ್ಕಿಳಿದಿತ್ತು. ವಾಸ್ತವವಾಗಿ, ಇದರ ಸಿದ್ಧತೆ 2019ರ ಲೋಕಸಭೆ ಚುನಾವಣೆಯ ಬೆನ್ನಲ್ಲೇ ಆರಂಭವಾಗಿತ್ತು. ಅದರ ಫಲಿತಾಂಶ ಈಗ ಕಣ್ಣ ಮುಂದಿದೆ: 2016ರಲ್ಲಿ ಬರೀ 3 ಸ್ಥಾನ ಗಳಿಸಿದ್ದ ಬಿಜೆಪಿಯ ಬಲ, 2021ರಲ್ಲಿ 77ಕ್ಕೆ ಏರಿ, ಈಗ 294 ಸದಸ್ಯ ಬಲದ ವಿಧಾನಸಭೆಯಲ್ಲಿ 207ಕ್ಕೆ ಜಿಗಿದಿದೆ (ಒಂದು ಸ್ಥಾನದಲ್ಲಿ ಮರುಮತದಾನ ಬಾಕಿಯಿದೆ).

ತಮಿಳುನಾಡಿನಲ್ಲಿ, ಸ್ಟಾಲಿನ್ ಅವರ ಆಡಳಿತವು ಉತ್ತಮವಾಗಿದೆ ಎಂದು ಪರಿಗಣಿತವಾಗಿದ್ದರೂ ಮತ್ತು ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂ, ಮತದಾರರು– ವಿಶೇಷವಾಗಿ ಯುವಜನರು– ಚಲನಚಿತ್ರ ತಾರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ಟಾಲಿನ್ ಅವಧಿಯಲ್ಲಿ ತಮಿಳುನಾಡು ಸ್ಥಿರ ಪ್ರಗತಿಯನ್ನು ಕಂಡಿತು, ಕೈಗಾರಿಕೀಕರಣವನ್ನು ಮುಂದುವರಿಸಿತು ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಉತ್ತಮ ದಾಖಲೆ ಹೊಂದಿತ್ತು. ಆದಾಗ್ಯೂ, ಒಕ್ಕೂಟ ವ್ಯವಸ್ಥೆಯ ಮೇಲಿನ ಅತಿಯಾದ ಗಮನ, ಕೇಂದ್ರ ವಿರೋಧಿ ನಿಲುವು, ಹಿಂದೂಗಳವಿರುದ್ಧವಾಗಿ ಅಲ್ಪಸಂಖ್ಯಾತರನ್ನು ಬೆಂಬಲಿಸುವ ಪಕ್ಷದ ಧೋರಣೆ, ಇತ್ಯಾದಿಗಳು ಮತದಾರರನ್ನು ಕೆರಳಿಸಿರಬಹುದು. ಆದರೂ, ತಮಿಳುನಾಡು ಯುಗಗಳಿಂದಲೂ ಕೋಮುಸೌಹಾರ್ದ ಮತ್ತು ಜಾತ್ಯತೀತತೆಗೆ ಹೆಸರುವಾಸಿಯಾಗಿದೆ.

ಕಾರಣ ಏನೇ ಇರಲಿ, ವಿಜಯ್ ಅವರ ಬಿರುಗಾಳಿಯು ದ್ರಾವಿಡ ಪಕ್ಷಗಳ 59 ವರ್ಷಗಳ ನಿರಂತರ ಆಳ್ವಿಕೆಯನ್ನು ಕೊನೆಗೊಳಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ವಿಜಯ್ ತಾವು ದ್ರಾವಿಡ ಸಂಸ್ಕೃತಿಯ ಪರ ಎಂದು ಹೇಳಿಕೊಂಡರೂ, ತಮ್ಮಪಕ್ಷಕ್ಕೆ ಅದರ ಹೆಸರನ್ನು ಇಟ್ಟಿಲ್ಲ. ಬದಲಾಗಿ, ಎಲ್ಲ ತಮಿಳರನ್ನು ಪ್ರತಿನಿಧಿಸುತ್ತೇವೆ ಎಂಬ ಅರ್ಥ ಬರುವಂತೆ ‘ತಮಿಳು’ (ತಮಿಳಗ ವೆಟ್ರಿ ಕಳಗಂ) ಎಂಬ ಹೆಸರನ್ನು ಬಳಸಿದ್ದಾರೆ. 69 ಸಿನಿಮಾಗಳ ನಾಯಕ ವಿಜಯ್ ಸಾಂಪ್ರದಾಯಿಕ ಪ್ರಚಾರಶೈಲಿಯನ್ನು ಕೈಬಿಟ್ಟು, ಮತದಾರರನ್ನು ತಲಪಲು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಅವಲಂಬಿಸಿದ್ದರು, ಅದು ಅಂತಿಮವಾಗಿ ಯಶಸ್ವಿಯಾಯಿತು.

51 ವರ್ಷದ ಈ ನಟ ಇದುವರೆಗೆ ಮಾಧ್ಯಮಗಳಿಂದ ದೂರವಿದ್ದಾರೆ ಮತ್ತು ಒಂದೇ ಒಂದು ಪತ್ರಿಕಾ
ಗೋಷ್ಠಿಯನ್ನು ನಡೆಸಿಲ್ಲ. ಅವರು ಸಮಾಜದ ವಿವಿಧವರ್ಗಗಳಿಗೆ ಹಲವಾರು ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ, ಇವುಗಳ ಅನುಷ್ಠಾನವನ್ನು ರಾಜ್ಯದ ಬಜೆಟ್ನಲ್ಲಿ ಪೂರೈಸುವುದು ಅಸಾಧ್ಯ ಎಂದು ಹಲವರು ಹೇಳುತ್ತಿದ್ದಾರೆ. ವಿವಿಧ ವಿಷಯಗಳ ಬಗ್ಗೆ ತಮ್ಮ ನಿಲುವು ಏನು ಎನ್ನುವುದನ್ನು ಅವರಿನ್ನೂ ಸ್ಪಷ್ಟಪಡಿಸಿಲ್ಲ. ಮೊದಲ ಪ್ರಯತ್ನದಲ್ಲೇ ಶೇ 34.9ರಷ್ಟು ಮತಗಳನ್ನು ಪಡೆಯುವ ಮೂಲಕ ವಿಜಯ್ ಅಮೋಘ ಸಾಧನೆ ಮಾಡಿದ್ದಾರೆ. ಇದು ತಮಿಳು ಐಕಾನ್ ಎಂಜಿಆರ್ ಅವರಿಗೂ ಸಾಧ್ಯವಾಗಿರಲಿಲ್ಲ. ಮೊದಲ ಬಾರಿಗೆ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಬ್ಬರು ತಮಿಳುನಾಡಿನಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದಾಗಿ ಅವರು ಆಗಾಗ ಹೇಳುತ್ತಿದ್ದಾರೆ; ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ. ನಟನ ಮುಂದಿನ ನಡೆ ಕುತೂಹಲಕರವಾಗಿದೆ. ಆಡಳಿತಾತ್ಮಕ ಅನುಭವದ ಸಂಪೂರ್ಣ ಕೊರತೆಯಿರುವ ಅವರಿಗೆ ರಾಜ್ಯದ ವ್ಯವಹಾರಗಳನ್ನು ನಿರ್ವಹಿಸುವುದು ಒಂದು ದೊಡ್ಡ ಸವಾಲಾಗಿದೆ. ಅದರಲ್ಲೂ ಮತದಾರರ ನಿರೀಕ್ಷೆಗಳು ತುಂಬಾ ಹೆಚ್ಚಿರುವಾಗ ಆಡಳಿತದ ಸವಾಲು ಸುಲಭವಲ್ಲ.

ಪ್ರಸ್ತುತ ಚುನಾವಣೆಯು ದೇಶದಾದ್ಯಂತ ಬಿಜೆಪಿಯ ಪ್ರಭಾವ ಮತ್ತಷ್ಟು ವಿಸ್ತಾರಗೊಂಡಿರುವು
ದನ್ನು ಪ್ರತಿಬಿಂಬಿಸುತ್ತದೆ. ಪಕ್ಷವು ಈಗ ನೇರವಾಗಿ ಮತ್ತು ಎನ್ಡಿಎ ಪಾಲುದಾರರೊಂದಿಗೆ ಒಕ್ಕೂಟದ 21 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇದರ ವ್ಯಾಪ್ತಿಯು ಪಶ್ಚಿಮದ ಗುಜರಾತ್ನಿಂದ ಪೂರ್ವದ ಪಶ್ಚಿಮ ಬಂಗಾಳದವರೆಗೆ ಮತ್ತು ಈಶಾನ್ಯದ ಬಹುತೇಕ ಎಲ್ಲ ರಾಜ್ಯಗಳಿಗೆ ಹರಡಿದೆ. ಉತ್ತರ ಭಾರತ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಭೌಗೋಳಿಕವಾಗಿ, ಸುಮಾರು ಶೇ 78ರಷ್ಟು ಜನಸಂಖ್ಯೆಯನ್ನು ಮತ್ತು ಭಾರತದ ಶೇ 72ರಷ್ಟು ಭೂಪ್ರದೇಶವನ್ನು ಬಿಜೆಪಿ ಆವರಿಸಿಕೊಂಡಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಎರಡು ಪ್ರಬಲ ಪ್ರಾದೇಶಿಕಪಕ್ಷಗಳಾದ ಡಿಎಂಕೆ ಮತ್ತು ಟಿಎಂಸಿ ಸೋಲಿನ ನಂತರ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವುದುರ್ಬಲಗೊಂಡಿದೆ. ಕೇರಳದಲ್ಲಿ ಅಧಿಕಾರಕ್ಕೆ
ಬಂದಿರುವ ಕಾಂಗ್ರೆಸ್ಗೆ ಅಲ್ಪ ಆಶಾವಾದ ಮೂಡಿದೆ. ಸಮನ್ವಯದ ಸಂಪೂರ್ಣ ಕೊರತೆ, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಮೈತ್ರಿಕೂಟದ ಪಾಲುದಾರರ ವಿರುದ್ಧ ಕಾಂಗ್ರೆಸ್ ಸ್ಪರ್ಧೆ, ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರು ಸ್ಟಾಲಿನ್ ಮತ್ತು ತೇಜಸ್ವಿ ಯಾದವ್ ಅವರಂತಹ ಪ್ರಾದೇಶಿಕ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದು ಅಥವಾ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಘೋಷಿಸದಿದ್ದುದು ಮೈತ್ರಿಕೂಟದ ಹಿನ್ನಡೆಗೆ ಕಾರಣವಾಯಿತು. ಈ ಬಾರಿಯ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅನೇಕ ಉನ್ನತ ನಾಯಕರು ಪಶ್ಚಿಮ ಬಂಗಾಳಕ್ಕೆ ಹೋಗಿ ಟಿಎಂಸಿ ಪರ ಪ್ರಚಾರ ಮಾಡಿದರು; ಆದರೆ, ಅಲ್ಲಿ ಬಹುತೇಕ ಅಸ್ತಿತ್ವದಲ್ಲೇ ಇಲ್ಲದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಿಲ್ಲ.

ಕೇರಳದಲ್ಲಿನ ಸೋಲು ದೇಶದಲ್ಲಿ ಎಡರಂಗದ ಆಡಳಿತದ ಅಂತ್ಯವನ್ನೂ ಸೂಚಿಸುತ್ತಿದೆ. ನಿರ್ಗಮಿತ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ 80 ವರ್ಷ ವಯಸ್ಸಾಗಿರುವುದರಿಂದ, ರಾಜ್ಯದ ಎಡರಂಗದ ನಾಯಕತ್ವದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಪಕ್ಷವನ್ನು ಮುನ್ನಡೆಸಲು ಸಿಪಿಎಂ ತನ್ನ ಉತ್ತರಾಧಿಕಾರಿ ಆಯ್ಕೆ ಮಾಡಬೇಕಾಗಿದೆ.

ಪ್ರಸ್ತುತ ಚುನಾವಣೆಯು ಕುಟುಂಬ ರಾಜಕಾರಣಕ್ಕೆ ಭಾರೀ ಪೆಟ್ಟು ನೀಡಿದೆ. ಮಮತಾ, ಸ್ಟಾಲಿನ್ ಮತ್ತು ಅಸ್ಸಾಂನಲ್ಲಿ ಗೌರವ್ ಗೊಗೊಯ್ ಅವರ ಸೋಲು ಈ ಪ್ರವೃತ್ತಿಯನ್ನು ಸೂಚಿಸುತ್ತಿದೆ. ಮತದಾರರು ಮತ್ತು ಪಕ್ಷದ ಕಾರ್ಯಕರ್ತರು ಕುಟುಂಬ ರಾಜಕಾರಣದಿಂದ ಬೇಸತ್ತಿರಬಹುದು. ಆದರೆ, ಈ ಟ್ರೆಂಡ್ಗೆ ಕರ್ನಾಟಕದ ಉಪಚುನಾವಣೆ ಅಪವಾದವಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಕೂದಲೆಳೆಯ ಅಂತರದಲ್ಲಿ ಗೆದ್ದಿದ್ದಾರೆ. ಅವರ ತಂದೆ ಮಂತ್ರಿ, ತಾಯಿ ಸಂಸದೆ. ಬಾಗಲಕೋಟೆಯಲ್ಲಿ ದಿವಂಗತ ಎಚ್.ವೈ. ಮೇಟಿ ಅವರ ಸ್ಥಾನಕ್ಕೆ ಅವರ ಪುತ್ರ ಉಮೇಶ ಮೇಟಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಕುಟುಂಬ ರಾಜಕಾರಣ ಸದ್ಯಕ್ಕಂತೂ ಅಬಾಧಿತವಾಗಿದೆ.

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.