‘ಮೈಕೈ ನೋವು, ಮಂಡಿ ನೋವು. ಎರಡು ವರ್ಸದಿಂದ ಇಲ್ಲಿಗೇ ಬತ್ತಿದ್ದೀನಿ. ಮೇಲಾಗೈತೆ. ಇಲ್ಲಿ ಇಂಜೆಕ್ಷನ್, ಔಷಧ ಯಾವುದಕ್ಕೂ ದುಡ್ಡ ತಗಳ್ಳಲ್ಲ, ದುಡ್ಡು ಉಳಿತೈತೆ, ಕಾಯಿಲೆನೂ ವಾಸಿಯಾಗ್ತೈತೆ..’

ಡಾ. ರಮಣ್ ರಾವ್ ಅವರ ಟಿ.ಬೇಗೂರಿನ ‘ಭಾನುವಾರದ ಗ್ರಾಮೀಣ ಚಿಕಿತ್ಸಾಲಯ’ಕ್ಕೆ ಬಂದಿದ್ದ ಖಾನಾಹೊಸಳ್ಳಿಯ ಓಬಮ್ಮ, ಬೇಗ ಬೇಗ ಮಾತಾಡಿ ಮುಗಿಸಿ ‘ಫಿಸಿಯೋಥೆರಪಿ’ ಮಾಡಿಸಿಕೊಳ್ಳುವ ವಿಭಾಗದತ್ತ ಹೊರಟರು.
.ಹೃದ್ರೋಗ ತಜ್ಞ ಡಾ.ರಮಣ್ ರಾವ್: ಉಚಿತ ಆರೋಗ್ಯ ಸೇವೆಗೆ 50 ವರ್ಷ.
ಬಳ್ಳಾರಿಯ ಗೌರಮ್ಮ, ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಇಲ್ಲಿಗೆ ಬಂದಿದ್ದರು. 'ನಾಕು ವರ್ಷದಿಂದ ಬರ್ತಿದ್ದೀನಿ. ನೋವು ಕಡಿಮೆಯಾಗಿದೆ. ಡಾಕ್ಟ್ರು ಬಹಳ ಚೆನ್ನಾಗಿ ಔಷಧ ಕೊಡ್ತಾರೆ' ಎನ್ನುತ್ತಾ ಚೀಟಿ ಹಿಡಿದುಕೊಂಡು ಔಷಧ ತಗೊಳ್ಳಲು ಹೊರಟರು. ತುಮಕೂರು ಜಿಲ್ಲೆಯ ಓಬನಹಳ್ಳಿಯ ಸುಶೀಲಮ್ಮ, ಪಾವಗಡದ ಶೋಬಕ್ಕನಂತಹ ನೂರಾರು ಮಂದಿ ಚಿಕಿತ್ಸೆ ಪಡೆಯಲು ಸರದಿಯಲ್ಲಿ ನಿಂತಿದ್ದರು.

ಪ್ರತಿ ಭಾನುವಾರ ಇಂಥ 700 ರಿಂದ 1000 ರೋಗಿಗಳಿಗೆ ವಿವಿಧ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಿದ್ದಾರೆ ಬೆಂಗಳೂರಿನ ಹೃದ್ರೋಗ ತಜ್ಞ ಡಾ. ರಮಣ್ ರಾವ್.

‘ನೀನು ಡಾಕ್ಟ್ರಾದರೆ, ಬಡ ಜನರ, ಹಳ್ಳಿ ಜನರ ನೋವನ್ನು ಕಡಿಮೆ ಮಾಡಲು ಸಾಧ್ಯ' ಎಂದು ಬಾಲ್ಯದಲ್ಲಿ ತಂದೆ ಹೇಳಿದ ಒಂದು ಮಾತು, ವೈದ್ಯಕೀಯ ಪದವಿ ಮುಗಿಸಿದ ಕೂಡಲೇ ರಮಣ್ ರಾವ್ ಅವರಿಗೆ ಟಿ.ಬೇಗೂರಿನಲ್ಲಿರುವ ತಮ್ಮ ಫಾರಂ ಹೌಸ್ನಲ್ಲಿ ಈ ಗ್ರಾಮೀಣ ಚಿಕಿತ್ಸಾಲಯ ಆರಂಭಿಸಲು ಪ್ರೇರೇಪಿಸಿತು. 1973ರಲ್ಲಿ ಆರಂಭವಾದ ಈ ಉಚಿತ ಆರೋಗ್ಯ ಸೇವಾ ಕೈಂಕರ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ ಎಂಬುದು ಚಿಕಿತ್ಸಾಲಯ ಸಿಬ್ಬಂದಿಯ ಅಂದಾಜು.

ರಮಣ್ ರಾವ್ ಅವರು ತಮ್ಮ ‘ರಾಜ್ ಪ್ರಕಾಶ್ ಟ್ರಸ್ಟ್’ ಮೂಲಕ 53 ವರ್ಷಗಳಿಂದ ಪ್ರತಿ ಭಾನುವಾರ ತಪ್ಪದೇ ಈ ಚಿಕಿತ್ಸಾಲಯ ನಡೆಸಿಕೊಂಡು ಬರುತ್ತಿದ್ದಾರೆ. ಸುತ್ತಮುತ್ತಲಿನವರಿಗೆ ‘ಭಾನುವಾರದ ಡಾಕ್ಟ್ರು’ ಎಂದೇ ಪರಿಚಿತರಾಗಿದ್ದಾರೆ.

‘ಕ್ಲಿನಿಕ್ ಹೇಗೆ ಆರಂಭಿಸಿದಿರಿ ? ಹಣ ಹೇಗೆ ಹೊಂದಿಸಿದಿರಿ ? ಜನರು ಹೇಗೆ ನಿಮ್ಮನ್ನು ನಂಬಿ ಉಚಿತ ಚಿಕಿತ್ಸೆ ಪಡೆಯಲು ಬಂದರು’? ಎಂದು ರಮಣ್ ರಾವ್ ಅವರನ್ನು ಕೇಳಿದರೆ, ಅವರು ಒಂದು ದೀರ್ಘ ಕಥನವನ್ನೇ ತೆರೆದಿಟ್ಟರು.

'ನಾನು ಉಚಿತ ಕ್ಲಿನಿಕ್ ಆರಂಭಿಸಿದಾಗ, ನಮ್ಮ ತಂದೆ ಪ್ರತಿ ವಾರ ₹3 ಸಾವಿರ ಹಣ ಕೊಡುತ್ತಿದ್ದರು. ಅದರಲ್ಲೇ ಸಗಟು ಔಷಧ ವ್ಯಾಪಾರಿಗಳ ಬಳಿ ಹೋಗಿ ಕಡಿಮೆ ಬೆಲೆಗೆ ಪ್ರಾಥಮಿಕವಾದಂತಹ ಔಷಧಗಳನ್ನು ಖರೀದಿಸುತ್ತಿದ್ದೆ. ಆರಂಭದಲ್ಲಿ ಒಂದೆರಡು ವರ್ಷ ನಾಲ್ಕು, ಐದು, ಹತ್ತು ಜನ ಪೇಷೆಂಟ್ಗಳು ಬಂದರು. ಜನ ಎಷ್ಟೇ ಬಂದರೂ, ನಾನು ಮಾತ್ರ ಭಾನುವಾರ ಇಲ್ಲಿಗೆ ಬಂದು ಚಿಕಿತ್ಸೆ ಕೊಡುವುದನ್ನು ತಪ್ಪಿಸುತ್ತಿರಲಿಲ್ಲ. ಹಾಗಾಗಿ ಸುತ್ತಲಿನ ಜನರಿಗೆ ಭಾನುವಾರ ಇಲ್ಲಿ ಡಾಕ್ಟರ್ ಇದ್ದೇ ಇರುತ್ತಾರೆ ಎಂಬುದು ಖಚಿತವಾಗಿತ್ತು. ಹೀಗಾಗಿ, ಕ್ರಮೇಣ ಹೆಚ್ಚು ಹೆಚ್ಚು ಜನ ಬರಲು ಆರಂಭಿಸಿದರು’ ಎನ್ನುತ್ತಾ ಆರಂಭದ ದಿನಗಳನ್ನು ರಮಣ್ ರಾವ್ ನೆನಪಿಸಿಕೊಂಡರು.

ಆರಂಭದ ಐದು ವರ್ಷದವರೆಗೆ ಪ್ರತಿ ವಾರ 40 ರಿಂದ 50 ಪೇಷೆಂಟ್ಗಳು ಬರಲಾರಂಭಿಸಿದರು. 10 ವರ್ಷಕ್ಕೆ ಅದು ನೂರಾಯಿತು. 15 ವರ್ಷಕ್ಕೆ 300 ಕ್ಕೆ ತಲುಪಿತು. 20 ರಿಂದ 25 ವರ್ಷದ ಹೊತ್ತಿಗೆ 500 ದಾಟಿತು. ಅಲ್ಲಿಂದ ಇಲ್ಲಿವರೆಗೆ ವೇಗವಾಗಿ ಸಂಖ್ಯೆ ಏರಿತು. ಈಗ ಪ್ರತಿ ವಾರ 700 ರಿಂದ 1000 ಜನರವರೆಗೂ ತಲುಪಿದೆ’ ಎಂದು ರಮಣ್ ರಾವ್, ಚಿಕಿತ್ಸಾಲಯದ ಬೆಳವಣಿಗೆಯನ್ನು ವಿವರಿಸಿದರು.

’ಜನ ಹೆಚ್ಚಾದಷ್ಟು ನಿಮಗೆ ನಿರ್ವಹಣೆ ಕಷ್ಟವಾಗಲಿಲ್ಲವೇ’ ಎಂದು ರಮಣ್ ರಾವ್ ಅವರನ್ನು ಕೇಳಿದರೆ, ‘ಖಂಡಿತಾ ಇಲ್ಲ, ಹೆಚ್ಚು ಜನರಿಗೆ ಚಿಕಿತ್ಸೆ ನೀಡಬೇಕೆಂಬ ಕನಸಿತ್ತು. ಅದು ಈಗ ಈಡೇರಿದೆ’ ಎಂದು ರಮಣ್ ರಾವ್ ಉತ್ಸಾಹದಿಂದಲೇ ಹೇಳಿದರು.

ಅಚ್ಚರಿಯ ವಿಷಯವೆಂದರೆ, ಆರಂಭದಿಂದಲೂ ಈ ಚಿಕಿತ್ಸಾಲಯಕ್ಕೆ ಬೋರ್ಡ್ ಹಾಕಿಲ್ಲ. ಎಲ್ಲೂ ವೈದ್ಯರ ಹೆಸರೂ ಬರೆದಿಲ್ಲ. ಆದರೂ ಪ್ರತಿ ಭಾನುವಾರ ರಾಜ್ಯದ ವಿವಿಧೆಡೆಯಿಂದ ಜನರು ಬರುತ್ತಾರೆ. ಶನಿವಾರ ರಾತ್ರಿಯಿಂದಲೇ ಇಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ, ಇಲ್ಲಿ ಚಿಕಿತ್ಸೆಪಡೆಯುವ ಬಹುತೇಕರಿಗೆ ವೈದ್ಯರ ಹೆಸರೇ ಗೊತ್ತಿಲ್ಲ!

ಮಾತಿನ ನಡುವೆ ಡಾ.ರಮಣ್ ರಾವ್ ಅವರು ವಿಚಾರ ಹೇಳಿದಾಗ ನನಗೆ ನಂಬಲಾಗಲಿಲ್ಲ. ಚಿಕಿತ್ಸೆ ಪಡೆದು ಬರುತ್ತಿದ್ದ ಚಳ್ಳಕೆರೆ ಮತ್ತು ಕೂಡ್ಲಿಗಿ ಕಡೆಯ ಇಬ್ಬರನ್ನು ಕೇಳಿದೆ ‘ನಿಮಗೆ ಚಿಕಿತ್ಸೆ ಕೊಟ್ಟ ವೈದ್ಯರ ಹೆಸರೇನು’ ಎಂದು. ಅದಕ್ಕವರು ’ಗೊತ್ತಿಲ್ಲ’ ಎಂದರು. ‘ಸರಿ, ಚಿಕಿತ್ಸೆ ನೀಡಿದ್ದು ಯಾರು’ ಎಂದೆ. ದೂರದಲ್ಲಿದ್ದ ರಮಣ್ ರಾವ್ ಕಡೆಗೆ ಕೈ ತೋರಿದರು ! ಇಲ್ಲಿಗೆ ಬರುವವರಿಗೆ ವೈದ್ಯರ ಹೆಸರು ಗೊತ್ತಿಲ್ಲದಿ ದ್ದರೂ, ಅವರ ಕೈಗುಣದ ಮೇಲೆ ನಂಬಿಕೆ ಇದೆ. ಚಿಕಿತ್ಸೆಗಾಗಿ ಸರತಿಯಲ್ಲಿ ನಿಂತಿದ್ದವರನ್ನು ಮಾತನಾಡಿಸಿದಾಗ, ಅವರ ಮಾತುಗಳಲ್ಲಿ ಈ ಭರವಸೆ ವ್ಯಕ್ತವಾಗುತ್ತಿತ್ತು.

‘ನಾನು ಬೆಳಿಗ್ಗೆ ಇಲ್ಲಿಗೆ ಬಂದು ಚಿಕಿತ್ಸೆ ಆರಂಭಿಸುವ ಮೊದಲು ಸರತಿಯಲ್ಲಿ ನಿಂತಿರುವವರಿಗೆ ನಮಸ್ಕರಿಸುತ್ತೇನೆ. ಆಗ ಅವರ ಕಣ್ಣುಗಳಲ್ಲಿ ನನ್ನ ಬಗೆಗಿರುವ ಗೌರವ, ಈ ವೈದ್ಯರು ನನ್ನ ನೋವನ್ನು ಖಂಡಿತ ವಾಸಿ ಮಾಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ಯನ್ನು ಕಾಣುತ್ತೇನೆ. ಅವೆಲ್ಲವನ್ನೂ ಉಳಿಸಿಕೊಳ್ಳುವ ರೀತಿಯಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ಜೊತೆಗಿರುವವರು ಹಾಗೇ ನಡೆದುಕೊಳ್ಳುತ್ತಾರೆ' ಎನ್ನುತ್ತಾರೆ ಡಾ. ರಾವ್.

ಇಲ್ಲಿ ರಮಣ್ ರಾವ್ ಒಬ್ಬರೇ ತಜ್ಞ ವೈದ್ಯರು (ಫಿಸಿಷಿಯನ್). ಇವರೊಂದಿಗೆ 50 ಮಂದಿ ಸ್ವಯಂ ಸೇವಕರು ಇದ್ದಾರೆ. ಡಾ.ರಾವ್, ರೋಗಿಗಳನ್ನು ಪರೀಕ್ಷಿಸಿ, ಔಷಧಿ, ಇಂಜೆಕ್ಷನ್ಗೆ ಚೀಟಿ ಬರೆದು ಕೊಟ್ಟರೆ, ಸಂಬಂಧಿಸಿದ ಕೌಂಟರ್ಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಾರೆ. ‘ಐವಿ, ಐಎಂ ಇಂಜೆಕ್ಷನ್, ಬಿ.ಪಿ. ಬ್ಲಡ್ ಶುಗರ್, ನೆಬ್ಯುಲೈಸೇಷನ್ ಸೇರಿದಂತೆ ವಿವಿಧ ವಿಭಾಗಗಳಿವೆ. ಸಿಬ್ಬಂದಿ ಇವರನ್ನು ಪರೀಕ್ಷೆ ಮಾಡಿ, ಕಾರ್ಡ್ನಲ್ಲಿ ಬರೆದುಕೊಡುತ್ತಾರೆ. ಅದನ್ನು ಡಾಕ್ಟರ್ಗೆ ತೋರಿಸಿ, ಔಷಧ ಪಡೆದುಕೊಳ್ಳುತ್ತಾರೆ.

ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಮೂರು ವಾರಕ್ಕೊಮ್ಮೆ ದಂತ ವೈದ್ಯಕೀಯ ತಪಾಸಣೆ, ಚಿಕಿತ್ಸೆಗಾಗಿ ಅಲ್ಲಿನ ಸಿಬ್ಬಂದಿ ಬರುತ್ತಾರೆ. 250 ರಿಂದ 300 ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ‘ಇಲ್ಲಿಗೆ ಬರುವವರಲ್ಲಿ ಮೈಕೈ ನೋವು, ಮಂಡಿ ನೋವು, ಬೆನ್ನು ನೋವಿನ ಸಮಸ್ಯೆಯವರು ಅಧಿಕ. ಅದರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು ಬರುತ್ತಾರೆ. ನಾನು ಇಂಜೆಕ್ಷನ್, ಔಷಧ ಕೊಡುತ್ತೇನೆ. ಅಗತ್ಯವಿದ್ದವರಿಗೆ ಹರ್ಷ ಆಸ್ಪತ್ರೆಯ ಸಿಬ್ಬಂದಿ ಫಿಸಿಯೋಥೆರಪಿ ಮಾಡುತ್ತಾರೆ. ಜೊತೆಗೆ ವ್ಯಾಯಾಯಮಗಳನ್ನು ಮಾಡಿಸಿ, ಮನೆಯಲ್ಲೇ ಅಭ್ಯಾಸ ಮಾಡಲು ಸೂಚಿಸುತ್ತಾರೆ. ಆ ವ್ಯಾಯಾಮ ಮಾಡಿದರೆ, ಮತ್ತೆ ಅವರು ಆಸ್ಪತ್ರೆಗೆ ಬರುವ ಅಗತ್ಯವೇ ಇರಲ್ಲ' ಎನ್ನುತ್ತಾರೆ ರಾವ್.

‘ಇಷ್ಟೊಂದು ಜನರಿಗೆ ಚಿಕಿತ್ಸೆ ನೀಡಲು ನಿಮಗೆ ಒಬ್ಬರಿಗೇ ಶ್ರಮವಾಗುವುದಿಲ್ಲವೇ? ವಾರಾಂತ್ಯದಲ್ಲಿ ವಿರಾಮ ಬೇಕೆನಿಸುವುದಿಲ್ಲವೇ ?’ ಎಂದು ರಮಣ್ ರಾವ್ ಅವರನ್ನು ಕೇಳಿದರೆ, ‘ವರ್ಕ್ ಈಸ್ ಮೈ ಪ್ರೇಯರ್ (ಕೆಲಸವೇ ನನಗೆ ಪೂಜೆ ಇದ್ದಂತೆ).ಹಾಗಾಗಿ ದಣಿವಾಗಲ್ಲ. ನನ್ನೊಂದಿಗೆ ನನ್ನ ಕುಟುಂಬ, ಸ್ವಯಂ ಸೇವಕರು ಸಾಥ್ ನೀಡುತ್ತದೆ’ ಎನ್ನತ್ತಾರೆ ಅವರು.

'ನನ್ನ ವೈದ್ಯಕೀಯ ವೃತ್ತಿಯ ಒಂದು ಭಾಗವನ್ನು ಬಡವರ ಸೇವೆಗೆ ಮೀಸಲಿಟ್ಟಿದ್ದೇನೆ. ಹೀಗೆಂದರೆ ಯಾರೂ ನಂಬಲ್ಲ. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ನನ್ನನ್ನು ನಂಬಿ ಇಷ್ಟು ಮಂದಿ ಇಲ್ಲಿಗೆ ಬರುತ್ತಾರಲ್ಲಾ ಅದೇ ನನಗೆ ರಿವಾರ್ಡ್, ಪ್ರಶಸ್ತಿ ಎಲ್ಲ' ಎಂಬುದು ಅವರ ಅಭಿಪ್ರಾಯ.

ಇಲ್ಲಿಗೆ ಬರುವ ರೋಗಿಗಳಿಗೆ, ಅವರ ವಾರಸುದಾರರಿಗೆ ಉಪಹಾರ, ಊಟದ ವ್ಯವಸ್ಥೆ ಇದೆ. ಶನಿವಾರ ರಾತ್ರಿಯೇ ಬಂದು ಸರತಿಯಲ್ಲಿ ನಿಲ್ಲುವವರಿಗೆ, ರಾತ್ರಿ ಲಘು ಉಪಹಾರ, ಭಾನುವಾರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದಾರೆ. ಜನರ ಅನುಕೂಲಕ್ಕಾಗಿ ಫಾರಂ ಹೌಸ್ ಪಕ್ಕದಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಬಡ ಜನರಿಗೆ ಚಿಕಿತ್ಸೆ ನೀಡುವ ಜೊತೆಗೆ, ವೈಯಕ್ತಿ ಶುಚಿತ್ವಕ್ಕೂ ಆದ್ಯತೆ ನೀಡಿದ್ದಾರೆ ಡಾ.ರಾವ್. ಕೊರೊನಾ ಸಮಯದಲ್ಲಿ ಶುಚಿತ್ವದ ಬಗ್ಗೆ ಸುತ್ತಮುತ್ತ ಲಿನ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾಗ, ಹಿಮಾಲಯಾ ವೆಲ್ನೆಸ್ ಮತ್ತು ಔಷಧ ಕಂಪನಿಯವರು ವೈಯಕ್ತಿಕ ಶುಚಿತ್ವಕ್ಕೆ ಅಗತ್ಯವಾದ ಸೋಪು, ಶ್ಯಾಂಪು, ಟೂತ್ಪೇಸ್ಟ್ನಂತಹ ವಸ್ತುಗಳನ್ನು ಉಚಿತವಾಗಿ ಪೂರೈಸುತ್ತಿದ್ದರು. ಅದನ್ನು ಈಗಲೂ ಮುಂದುವರಿಸಿದ್ದಾರೆ. ಚಿಕಿತ್ಸೆಗಾಗಿ ಬರುವವರಿಗೆ ಅವೆಲ್ಲವನ್ನೂ ನೀಡುತ್ತಿದ್ದಾರೆ. ‘ವೈಯಕ್ತಿಕ ಶುಚಿತ್ವವಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ' ಎಂಬುದು ಇದರ ಹಿಂದಿನ ಉದ್ದೇಶ' ಎಂದು ರಾವ್ ಹೇಳುತ್ತಾರೆ.

ಕೊನೆಯದಾಗಿ...

ಭವಿಷ್ಯದ ಚಿಂತನೆ ಏನು ಎಂಬ ಪ್ರಶ್ನೆಗೆ ರಮಣ್ ರಾವ್ ಉತ್ತರಿಸಿದ್ದು ಹೀಗೆ; ‘ನಾವು ಈಗ ಕೈಗೊಳ್ಳುತ್ತಿರುವ ಗ್ರಾಮೀಣ ಆರೋಗ್ಯ ಸೇವೆಯ ಮಾದರಿಯನ್ನು, ಯುವ ವೈದ್ಯ ಸಮೂಹಕ್ಕೆ ಪರಿಚಯಿಸುತ್ತಾ, ಅವರನ್ನು ಉತ್ತೇಜಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲಿಗೆ ಅನೇಕರು ವೈದ್ಯಕೀಯ ವಿದ್ಯಾರ್ಥಿಗಳು ಹೌಸ್ ಸರ್ಜನ್ಗಾಗಿ ಬರುತ್ತಾರೆ. ಅವರಿಗೂ ಈ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಅವರು ತಮ್ಮ ವ್ಯಾಪ್ತಿಯಲ್ಲಿ ಈ ಮಾದರಿಯನ್ನು ಅನುಸರಿಸುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಡಾ. ರಮಣ್ ರಾವ್.

ರಮಣ್ ರಾವ್ ಅವರ 'ಗ್ರಾಮೀಣ ಚಿಕಿತ್ಸಾಲಯ'ಕ್ಕೆ ದೂರದ ದೇಶಗಳಿಂದ ಜನರು ಭೇಟಿ ನೀಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಪಾಲರಾಗಿದ್ದ ವಜುಭಾಯಿವಾಲ, ಆದಿಚುಂಚನಗಿರಿ ಮಠದ ನಿರ್ಮಲನಾಂದನಾಥ ಸ್ವಾಮೀಜಿ, ಮಾದಾರಚೆನ್ನಯ್ಯ ಸ್ವಾಮೀಜಿ ಸೇರಿದಂತೆ ಗಣ್ಯಾತಿಗಣ್ಯರು ಭೇಟಿ ನೀಡಿದ್ದಾರೆ, ಇವರ ಕೆಲಸವನ್ನು ಶ್ಲಾಘಿಸಿದ್ದರೆ.

ಡಾ. ರಮಣ್ ರಾವ್ ಅವರ 53 ವರ್ಷಗಳ ಗ್ರಾಮೀಣ ಚಿಕಿತ್ಸಾಲಯದ ಉಚಿತ ಆರೋಗ್ಯ ಸೇವೆಯು ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.

ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಡಾ. ರಮಣ್ ರಾವ್ ಅವರ ಹೆಸರು ದಾಖಲಾಗಿದೆ. ಆ ಸಂಸ್ಥೆಯವರು ರಮಣ್ ರಾವ್ ಅವರಿಗೆ ಕರೆ ಮಾಡಿ, 'ನಿಮ್ಮ ಸೇವಾ ಕಾರ್ಯವನ್ನು ವರ್ಲ್ಡ್ ಬುಕ್ ಆಫ್ರೆಕಾರ್ಡ್ನಲ್ಲಿ ದಾಖಲಿಸುತ್ತೇವೆ ಎಂದು ಹೇಳಿ, ಪ್ರಶಸ್ತಿ ಪತ್ರವನ್ನೂ ಕಳಿಸಿದ್ದಾರೆ. ಈಗ ಗಿನ್ಮೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲೂ ದಾಖಲಾಗುವ ಹಾದಿಯಲ್ಲಿದೆ.

ರಾಜ್ ಕುಟುಂಬದ ನಂಟು...

ಡಾ. ರಮಣ್ ರಾವ್ ಬೆಂಗಳೂರಿನ ಸದಾಶಿವ ನಗರದಲ್ಲಿ ಕ್ಲಿನಿಕ್ ಮತ್ತು ಮನೆ ಇದೆ. ಅಲ್ಲೇ ವಾಸವಿದ್ದಾರೆ. ಇದು ವರನಟ ಡಾ. ರಾಜ್ ಕುಮಾರ್ ಮನೆಗೆ ಸಮೀಪವಿದೆ. ಇವರು ಡಾ.ರಾಜ್ ಕುಟುಂಬದ ವೈದ್ಯರು.

ರಮಣ್ ರಾವ್ ವೈದ್ಯಕೀಯ ಪದವಿ ಮುಗಿಸಿದ ನಂತರ ಸದಾಶಿವ ನಗರದಲ್ಲಿ ಜೀವನ ನಿರ್ವಹಣೆಗಾಗಿ ಕ್ಲಿನಿಕ್ ಶುರು ಮಾಡಿದೆ. ಅದಾಗಿ ಎರಡು ವರ್ಷ ಕಳೆದಿರಬಹುದು. ಒಂದು ದಿನ ರಾಜ್ ಕುಮಾರ್ ಮನೆಯವರು ರಮಣ್ ರಾವ್ ಅವರಿಗೆ ಕರೆ ಮಾಡಿ. 'ಅಣ್ಣಾವ್ರು ನಿಮ್ಮ ಕ್ಲಿನಿಕ್ಗೆ ಬರುತ್ತಾರಂತೆ' ಎಂದು ಹೇಳಿದರು. 'ಆ ಕರೆ ಬಂದ ಕೂಡಲೇ ಕ್ಲಿನಿಕ್.ನಲ್ಲಿದ್ದ ಎಲ್ಲ ಪೇಷೆಂಟ್ಗಳಿಗೆ ಕಾಯಲು ಹೇಳಿ ಅಣ್ಣಾವ್ರಿಗಾಗಿ ಬಾಗಿಲಲ್ಲೇ ಕಾದು ನಿಂತೆ. ಶ್ವೇತವಸ್ತ್ರಧಾರಿಯಾಗಿ ಡಾ.ರಾಜ್ ಬಂದರು. ಅವರ ಕಾಲಿಗೆ ನಮಸ್ಕರಿಸಲು ಬಾಗಿದೆ. ಅಷ್ಟರಲ್ಲೇ ಎರಡೂ ಕೈಹಿಡಿದು ನನ್ನನ್ನು ಎತ್ತಿದರು. ಪ್ರೀತಿ, ಗೌರವದಿಂದ ಮಾತನಾಡಿಸಿದರು. ಧನ್ಯನಾದೆ ಎನ್ನಿಸಿತು. ಆಗಿನಿಂದ ನಾನು ಅವರ ಕುಟುಂಬದ ವೈದ್ಯನಾದೆ' ಎಂದು ರಾಜ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ರಮಣ್ರಾವ್ ಸಂಭ್ರಮದಿಂದ ವರ್ಣಿಸಿದರು.

ಅಣ್ಣಾವ್ರ ಅಭಿಮಾನಿಯಾಗಿ, ಅವರ ನೆನಪಿಗಾಗಿ ಗ್ರಾಮೀಣ ಚಿಕಿತ್ಸಾಲಯದ ಹಲವು ಕಡೆ ರಾಜ್ಕುಮಾರ್ ಅವರ ದೊಡ್ಡ ದೊಡ್ಡ ಭಾವಚಿತ್ರಗಳಿವೆ. ಪ್ರತಿ ಭಾನುವಾರ ಇಡೀ ದಿನ ರಾಜ್ಕುಮಾರ್ ಹಾಡುಗಳನ್ನು ಪ್ಲೇ ಮಾಡುತ್ತಾರೆ. ಆ ಹಾಡುಗಳ ಹಿನ್ನೆಲೆಯಲ್ಲೇ ರೋಗಿಗಳಿಗೆ ಚಿಕಿತ್ಸೆ, ಪರೀಕ್ಷೆಗಳೂ ನಡೆಯುತ್ತಿರುತ್ತದೆ. ಅದೊಂದು ಸಂಭ್ರಮದ ವಾತಾವರಣ. 'ಐವತ್ತು ವರ್ಷಗಳಿಂದ ಹೀಗೆ ನಡೆದು ಕೊಂಡುಬರುತ್ತಿದೆ' ಎನ್ನುತ್ತಾರೆ ಚಿಕಿತ್ಸಾಲಯದ ಸ್ವಯಂ ಸೇವಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.