ಅಪ್ರಾಮಾಣಿಕತೆಯೇ ಸಹಜಸ್ಥಿತಿ ಎನ್ನುವ ಹಂತ ತಲಪಿರುವ ಚುನಾವಣಾ ವ್ಯವಸ್ಥೆ ಇದೇ ರೀತಿ ಮುಂದುವರಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವುದು ಖಚಿತ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿನ ಚುನಾವಣೆಗಳು, ಅಧಃಪತನದ ದಾರಿಯಲ್ಲಿಯೇ ಇನ್ನೂ ಮುಂದುವರಿಯುವುದರ ಗುರಿ ಪ್ರಪಾತವಷ್ಟೇ ಆಗಿರಲಿದೆ ಎನ್ನುವುದರ ಸಂಕೇತದಂತಿವೆ.