ಮೇ 10ರ ಭಾನುವಾರದಂದು, ಪ್ರಧಾನಿ ನರೇಂದ್ರ ಮೋದಿಯವರ ಸಂಚಾರವಿದ್ದ ರಸ್ತೆಯಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿ, ಭಾರೀ ಭದ್ರತಾ ಆತಂಕ ಸೃಷ್ಟಿಯಾಯಿತು. ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ನ 3 ಕಿಲೋಮೀಟರ್ ಆಸುಪಾಸಿನಲ್ಲಿರುವ, ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಎಂಬಲ್ಲಿ ಈ ಸ್ಫೋಟಕಗಳು ಪತ್ತೆಯಾದವು. ಪ್ರಧಾನಿ ನರೇಂದ್ರ ಮೋದಿಯವರು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ನಿನ 45ನೇ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧ್ಯಾನ ಮಂದಿರದ ಉದ್ಘಾಟನೆ ನಡೆಸಲು ಆಗಮಿಸಿದ್ದರು. ಈ ಅಪಾಯಕಾರಿ ವಸ್ತು ರಸ್ತೆ ಬದಿಯಿಂದ ಬಹುತೇಕ 40ರಿಂದ 50 ಮೀಟರ್ ಅಂತರದಲ್ಲಿ ಬಿದ್ದಿದ್ದು, ಪ್ರಧಾನ ಮಂತ್ರಿಯವರ ಆಗಮನಕ್ಕೆ ಕೆಲವು ಗಂಟೆಗಳ ಮುನ್ನ ಕೈಗೊಂಡ ಕಡ್ಡಾಯ ಪರಿಶೀಲನೆ ಮತ್ತು ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಪತ್ತೆಯಾಯಿತು.

ವಿಸ್ತೃತ ತನಿಖೆ ನಡೆಸಿದ ಬಳಿಕ, ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತ ವ್ಯಕ್ತಿಯನ್ನು ಗುರುತಿಸಿ ವಶಕ್ಕೆ ಪಡೆದುಕೊಂಡರು. ಅಧಿಕಾರಿಗಳ ಪ್ರಕಾರ, ಶಂಕಿತ ವ್ಯಕ್ತಿ ಭಾನುವಾರ ಬೆಳಗಿನ ಜಾವವೇ ಕೋರಮಂಗಲ ಪೊಲೀಸ್ ಠಾಣೆಗೆ ಕರೆ ಮಾಡಿ, ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಎಚ್ಎಎಲ್ ಆವರಣದಲ್ಲಿ ಮತ್ತು ಆರ್ಟ್ ಆಫ್ ಲಿವಿಂಗ್ ಕೇಂದ್ರದ ಬಳಿ ಸ್ಫೋಟಗಳು ನಡೆಯಲಿವೆ ಎಂದು ಬೆದರಿಕೆ ಒಡ್ಡಿದ್ದ. ಇದೇ ವ್ಯಕ್ತಿ ಹಿಂದೆಯೂ ಬೆಂಗಳೂರಿಗೆ ಗಣ್ಯರು ಭೇಟಿ ನೀಡುವ ಸಂದರ್ಭದಲ್ಲಿ ಇದೇ ರೀತಿಯ ಬೆದರಿಕೆ ಕರೆಗಳನ್ನು ಮಾಡಿ ಬಂಧನಕ್ಕೆ ಒಳಗಾಗಿದ್ದ ಎಂದು ಪೊಲೀಸರು ವಿವರಿಸಿದ್ದು, ಆತನ ಮಾನಸಿಕ ಆರೋಗ್ಯ ಸರಿಯಿಲ್ಲದ ಕಾರಣದಿಂದ ಬಳಿಕ ಬಿಡುಗಡೆ ಮಾಡಲಾಗಿತ್ತು ಎಂದಿದ್ದಾರೆ. ಆದರೆ, ಈ ಬಾರಿ ಆತನ ಎಚ್ಚರಿಕೆ ಕರೆಯ ಬಳಿಕ, ಆ ಸ್ಥಳದಲ್ಲಿ ಜಿಲೆಟಿನ್ ಕಡ್ಡಿಗಳು ಲಭಿಸಿರುವುದರಿಂದ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಪತ್ತೆಯಾದ ಎರಡು ಜಿಲೆಟಿನ್ ಕಡ್ಡಿಗಳನ್ನು ಉದ್ದೇಶಪೂರ್ವಕವಾಗಿಯೇ ಪ್ರಧಾನಿಯವರು ಸಂಚರಿಸುವ ರಸ್ತೆಯ ಬಳಿ ಎಸೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಶಂಕಿತ ವ್ಯಕ್ತಿಯ ಪೋಷಕರನ್ನೂ ಪೊಲೀಸರು ಪ್ರಶ್ನಿಸಿದ್ದು, ತನಿಖಾಧಿಕಾರಿಗಳು ಆತನ ದೂರವಾಣಿ ಕರೆಗಳು, ದೈನಂದಿನ ಚಲನವಲನಗಳ ತನಿಖೆ ನಡೆಸಿ, ಯಾವುದಾದರೂ ದೊಡ್ಡ ಸಂಚಿಗೂ ಆತನಿಗೂ ಸಂಬಂಧವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳು ಜಿಲೆಟಿನ್ ಕಡ್ಡಿಗಳನ್ನು ಪೂರೈಸಿದ್ದು ಯಾರು ಎನ್ನುವ ಕುರಿತೂ ತನಿಖೆ ನಡೆಸುತ್ತಿದ್ದು, ಯಾರಾದರೂ ಆ ಸ್ಥಳದಲ್ಲಿ ಕಡ್ಡಿಗಳನ್ನು ಇಡುವಂತೆ ಶಂಕಿತನಿಗೆ ಸೂಚಿಸಿರಬಹುದೇ ಎಂದೂ ಪರಿಶೀಲಿಸುತ್ತಿದ್ದಾರೆ.
.ಜಿಲೆಟಿನ್ ಕಡ್ಡಿ: ಉದ್ದೇಶಪೂರ್ವಕ ಕೃತ್ಯ! ಆರೋಪಿಗಳ ಸುಳಿವು ಅಲಭ್ಯ .ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್ ಪತ್ತೆ.
ಈಗ ಜಿಲೆಟಿನ್ ಕಡ್ಡಿಗಳು ಎಂದರೇನು? ಇದರಿಂದ ಏನಾಗುತ್ತದೆ? ಎಂದು ನೀವು ಆಲೋಚಿಸುತ್ತಿರಬಹುದು. ಬ್ಲಾಸ್ಟಿಂಗ್ ಜಿಲೆಟಿನ್ ಅಥವಾ ಜೆಲಿಗ್ನೈಟ್ ಎಂದೂ ಕರೆಯಲ್ಪಡುವ ಇವು ಅತ್ಯಂತ ಶಕ್ತಿಶಾಲಿ ಸ್ಫೋಟಕಗಳಾಗಿದ್ದು, ಮುಖ್ಯವಾಗಿ ಗಣಿಗಾರಿಕೆ, ಕ್ವಾರೆ, ರಸ್ತೆ ನಿರ್ಮಾಣ, ಸುರಂಗ ತೋಡುವಿಕೆ, ಮತ್ತು ದೊಡ್ಡ ಪ್ರಮಾಣದ ಇಂಜಿನಿಯರಿಂಗ್ ಕಾರ್ಯಗಳಲ್ಲಿ ಬಳಕೆಯಾಗುತ್ತವೆ. ಇವನ್ನು ಗಟ್ಟಿಯಾದ ಕಲ್ಲುಗಳನ್ನು ಮತ್ತು ದಪ್ಪನೆಯ ಕಾಂಕ್ರೀಟ್ ನಿರ್ಮಾಣಗಳನ್ನು ಹೆಚ್ಚಿನ ಬಲ ಪ್ರಯೋಗಿಸಿ ಒಡೆಯುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಜಿಲೆಟಿನ್ ಕಡ್ಡಿಗಳ ನಿರ್ಮಾಣದಲ್ಲಿ ಅಪಾಯಕಾರಿ ರಾಸಾಯನಿಕಗಳು ಬಳಕೆಯಾಗುತ್ತವೆ. ಇದರಲ್ಲಿ ಮುಖ್ಯವಾದ ಎರಡು ವಸ್ತುಗಳೆಂದರೆ ನೈಟ್ರೋಗ್ಲಿಸರಿನ್ (ಗ್ಲಿಸರಿನ್ ಅನ್ನು ಸಸ್ಯ ಅಥವಾ ಪ್ರಾಣಿಜನ್ಯ ಕೊಬ್ಬು, ಮತ್ತು ಕೇಂದ್ರೀಕೃತ ನೈಟ್ರಿಕ್ ಆಮ್ಲ ಮತ್ತು ಗಂಧಕಾಮ್ಲಗಳೊಡನೆ ಬೆರೆಸಿ ತಯಾರಿಸುವ ದಪ್ಪನೆಯ, ಏಕೈಕ ದ್ರವ ವಸ್ತು) ಮತ್ತು ನೈಟ್ರೋ ಸೆಲ್ಯುಲೋಸ್ ಅಥವಾ ಗನ್ ಕಾಟನ್ (ಹತ್ತಿಯ ನಾರುಗಳು ಅಥವಾ ಮರದ ತಿರುಳನ್ನು ಪ್ರಬಲ ನೈಟ್ರಿಕ್ ಮತ್ತು ಗಂಧಕಾಮ್ಲಗಳೊಡನೆ ಬೆರೆಸಿ ತಯಾರಿಸಲಾಗುತ್ತದೆ). ಬಹಳ ಜಾಗರೂಕವಾಗಿ, 50ರಿಂದ 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಿಸಿ ಮಾಡುತ್ತಾ, ನೈಟ್ರೋ ಸೆಲ್ಯುಲೋಸ್ ಅನ್ನು ನೈಟ್ರೋಗ್ಲಿಸರಿನ್ ಜೊತೆ ಬೆರೆಸಲಾಗುತ್ತದೆ. ಅತಿಯಾದ ತಾಪಮಾನದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸುವ ಸಾಧ್ಯತೆಗಳಿರುವುದರಿಂದ, ತಾಪಮಾನವನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯವಾಗುತ್ತದೆ. ಹಾಗೆಂದು ತಾಪಮಾನ ಕಡಿಮೆಯಾದರೆ, ರಾಸಾಯನಿಕಗಳು ಸರಿಯಾಗಿ ಮಿಶ್ರಣಗೊಳ್ಳುವುದಿಲ್ಲ. ಕ್ರಮೇಣ ಈ ಮಿಶ್ರಣ ಒಂದು ದಪ್ಪನೆಯ, ರಬ್ಬರ್ ರೀತಿಯ ಜೆಲ್ಲಿಯಂತಹ ವಸ್ತುವಾಗುತ್ತದೆ. ಇದರ ಸ್ಥಿರತೆ, ಬಾಳಿಕೆ, ಮತ್ತು ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮರದ ತಿರುಳು ಮತ್ತು ಸೋಡಿಯಂ ನೈಟ್ರೇಟ್ನಂತಹ ವಸ್ತುಗಳನ್ನು ಬೆರೆಸಲಾಗುತ್ತದೆ. ಈ ಅಂತಿಮ ಉತ್ಪನ್ನ ಒಂದು ತಿಳಿ ಹಳದಿ ಬಣ್ಣದ, ಜೆಲ್ಲಿಯಂತಹ, ಅತ್ಯಂತ ಶಕ್ತಿಶಾಲಿ ಸ್ಫೋಟಕ ವಸ್ತುವಾಗುತ್ತದೆ. ಇದನ್ನು ಬೇಕಾದಂತೆ ಹೊಂದಿಸುವುದು ಸುಲಭವಾಗಿದ್ದು, ಇದು ನೀರು ನಿರೋಧಕವೂ ಹೌದು.

ಜಿಲೆಟಿನ್ ಕಡ್ಡಿಗಳ ನೀರು ನಿರೋಧಕ ಗುಣವೇ ಅವುಗಳನ್ನು ಔದ್ಯಮಿಕ ಬಳಕೆಗೆ ಸೂಕ್ತವಾಗಿಸುತ್ತವೆ. ಏಕೆಂದರೆ, ಸಾಮಾನ್ಯ ಸ್ಫೋಟಕಗಳು ನೆಲದಾಳದ ಗಣಿಗಳು ಮತ್ತು ಸುರಂಗಗಳ ತೇವಾಂಶಭರಿತ ಪರಿಸ್ಥಿತಿಯಲ್ಲಿ ವಿಫಲವಾಗುತ್ತವೆ. ಈ ಕಡ್ಡಿಗಳನ್ನು ಸಾಮಾನ್ಯವಾಗಿ ಸಿಲಿಂಡರ್ ಆಕಾರದಲ್ಲಿ ಸಂಗ್ರಹಿಸಿ, ಮೇಣದ ಕಾಗದಗಳಲ್ಲಿ ಮುಚ್ಚಿಡಲಾಗುತ್ತದೆ. ಅವುಗಳ ಮೃದುವಾದ, ರಬ್ಬರ್ನಂತಹ ಗುಣ ಕಾರ್ಮಿಕರಿಗೆ ಸ್ಫೋಟ ಕಾರ್ಯಾಚರಣೆಗಳಿಗಾಗಿ ಜಿಲೆಟಿನ್ ಅನ್ನು ಕೊರೆದ ಗುಂಡಿಗಳಿಗೆ ಬಲವಾಗಿ ತುಂಬಲು ಅನುಕೂಲ ಕಲ್ಪಿಸುತ್ತದೆ. ಒಂದು ಬಾರಿ ಜೆಲೆಟಿನ್ ಅನ್ನು ಸರಿಯಾಗಿ ತುಂಬಿದರೆ, ಅವು ಉದ್ದೇಶಿತ ಸ್ಥಳದಲ್ಲಿ ಅತ್ಯಧಿಕ ಪರಿಣಾಮ ಉಂಟುಮಾಡುತ್ತವೆ.

ಆದರೆ, ಜಿಲೆಟಿನ್ ಕಡ್ಡಿಗಳು ತಾವಾಗಿಯೇ ಸ್ಫೋಟಿಸುವುದಿಲ್ಲ. ಅವುಗಳಿಗೆ ಡಿಟೊನೇಟರ್ ಅಥವಾ ಬ್ಲಾಸ್ಟಿಂಗ್ ಕ್ಯಾಪ್ ಎನ್ನುವ ಸಣ್ಣ ಟ್ರಿಗರಿಂಗ್ ಉಪಕರಣ ಬೇಕು. ಬ್ಲಾಸ್ಟಿಂಗ್ ಕ್ಯಾಪ್ ಎನ್ನುವುದು ಒಂದು ಸಣ್ಣ ಲೋಹದ ಟ್ಯೂಬ್ ಆಗಿದ್ದು, ಸಾಮಾನ್ಯವಾಗಿ ತಾಮ್ರ ಅಥವಾ ಅಲ್ಯೂಮಿನಿಯಂನಿಂದ ನಿರ್ಮಿತವಾಗಿ, ಒಳಗಡೆ ಅತ್ಯಂತ ಸೂಕ್ಷ್ಮವಾದ ಸ್ಫೋಟಕ ವಸ್ತುಗಳನ್ನು ಹೊಂದಿರುತ್ತವೆ. ಒಂದು ವಿದ್ಯುತ್ ಕರೆಂಟ್, ಉರಿಯುವ ಫ್ಯೂಸ್, ಅಥವಾ ಆಘಾತದ ಅಲೆ ಈ ಕ್ಯಾಪನ್ನು ತಲುಪಿದ ತಕ್ಷಣ, ಇದು ಸಣ್ಣದಾದ, ಆದರೆ ತೀವ್ರವಾದ ಸ್ಫೋಟಕ್ಕೆ ಚಾಲನೆ ನೀಡುತ್ತದೆ. ಈ ಸಣ್ಣ ಸ್ಫೋಟ ಬಳಿಕ ಜಿಲೆಟಿನ್ ಕಡ್ಡಿಗಳ ಭಾರೀ ಸ್ಫೋಟಕ್ಕೆ ಕಾರಣವಾಗಿ, ಕೆಲವೇ ಸೆಕೆಂಡುಗಳಲ್ಲಿ ಶಕ್ತಿಶಾಲಿ ಸ್ಫೋಟ ಉಂಟಾಗುತ್ತದೆ. ಜಿಲೆಟಿನ್ ಕಡ್ಡಿಗಳನ್ನು ನಿರ್ವಹಿಸುವಾಗ, ಸಾಗಿಸುವಾಗ, ಮತ್ತು ಸಂಗ್ರಹಿಸುವಾಗ ಸುರಕ್ಷಿತವಾಗಿಡುವ ಸಲುವಾಗಿ ಡಿಟೊನೇಟರ್ ಬಳಸಿಯೇ ಸ್ಫೋಟಿಸುವಂತೆ ವಿನ್ಯಾಸಗೊಳಿಸಲಾಗಿದೆ. ಡಿಟೊನೇಟರ್ ಹೊರತಾಗಿ, ನೇರವಾದ ಬೆಂಕಿಯಾಗಲಿ, ಬೀಳಿಸುವಿಕೆಯಾಗಲಿ, ಅಥವಾ ಬಲವಾದ ಹೊಡೆತ ನೀಡುವುದರಿಂದಾಗಲಿ ಜಿಲೆಟಿನ್ ಕಡ್ಡಿಗಳು ಸುಲಭವಾಗಿ ಸ್ಫೋಟಿಸುವುದಿಲ್ಲ. ಇಂತಹ ಅಂತರ್ಗತ ಸುರಕ್ಷತಾ ಕ್ರಮಗಳಿಂದಾಗಿ ನಿಯಂತ್ರಿತ ಔದ್ಯಮಿಕ ಸ್ಫೋಟ ನಡೆಸಲು ಡಿಟೊನೇಟರ್ ಅನಿವಾರ್ಯವಾಗುತ್ತದೆ.

ಒಂದು ಬಾರಿ ಚಾಲನೆಗೊಂಡರೆ, ಸ್ಫೋಟದಿಂದ ಭಾರೀ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ಆಘಾತದ ಅಲೆಗಳು ಬಂಡೆಗಳನ್ನು ಒಡೆಯಬಲ್ಲವು, ಕಟ್ಟಡಗಳಿಗೆ ಹಾನಿ ಮಾಡಬಲ್ಲವು, ಗಾಜಿನ ಕಿಟಕಿಗಳನ್ನು ಪುಡಿಗಟ್ಟಬಲ್ಲವು, ಮತ್ತು ಅಪಾಯಕಾರಿ ತುಣುಕುಗಳನ್ನು ಎಲ್ಲೆಡೆಯೂ ಚಿಮ್ಮಿಸಬಲ್ಲವು. ಜನಭರಿತ ಸ್ಥಳಗಳಲ್ಲಿ ಕಾಲ್ತುಳಿತ, ಹಾರಾಡುವ ತುಣುಕುಗಳ ಕಾರಣದಿಂದಾಗಿ ಅಪಾಯದ ಸಾಧ್ಯತೆ ಹಲವು ಪಟ್ಟು ಹೆಚ್ಚಾಗುತ್ತದೆ.

ಬಾಂಬ್ ಡಿಸ್ಪೋಸಲ್ ಆ್ಯಂಡ್ ಡಿಟೆಕ್ಷನ್ ಸ್ಕ್ವಾಡ್ಸ್ (ಬಿಡಿಡಿಎಸ್) ತಕ್ಷಣವೇ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಸ್ಥಳಕ್ಕೆ ತೆರಳಿ, ಅವುಗಳನ್ನು ವಶಕ್ಕೆ ಪಡೆದುಕೊಂಡು, ಸಂಪೂರ್ಣ ಸ್ಥಳದ ಭದ್ರತೆಯನ್ನು ಮತ್ತೊಮ್ಮೆ ಪರಿಶೀಲಿಸಿದವು. ಪ್ರಧಾನಿಯವರು ಸಂಚರಿಸುವ ರಸ್ತೆಯಾದ್ಯಂತ ಹಲವು ಪದರಗಳ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಯಿತು. ಈ ಸ್ಫೋಟಕಗಳನ್ನು ನಿರ್ಮಾಣ ಕಾರ್ಯದವರು ಆಕಸ್ಮಿಕವಾಗಿ ಅಲ್ಲಿ ಬಿಟ್ಟು ತೆರಳಿದರೇ, ಅಥವಾ ವಿವಿಐಪಿ ಸಂಚಾರದ ಸಮಯಕ್ಕೆ ಹೊಂದಿಕೆಯಾಗುವಂತೆ ಉದ್ದೇಶಪೂರ್ವಕವಾಗಿ ಅಲ್ಲಿ ಇಟ್ಟಿದ್ದರೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.

ಗಮನಿಸಬೇಕಾದ ವಿಚಾರವೆಂದರೆ, ಬ್ಲಾಸ್ಟಿಂಗ್ ಜಿಲೆಟಿನ್ ಆಹಾರ ಜಿಲೆಟಿನ್ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಆಹಾರ ಜಿಲೆಟಿನ್ ಅನ್ನು ಕೊಲಾಜೆನ್ನಿಂದ (ಪ್ರಾಣಿಗಳ ಮೂಳೆ ಮತ್ತು ಚರ್ಮದಿಂದ ಸಿಗುವ ನೈಸರ್ಗಿಕ ಪ್ರೊಟೀನ್) ಪಡೆಯಲಾಗುತ್ತದೆ. ಇದನ್ನು ಆಹಾರದಲ್ಲಿ ಮತ್ತು ಔಷಧಗಳಲ್ಲಿ ಬಳಸಲಾಗುತ್ತದೆ. ಆದರೆ, ಬ್ಲಾಸ್ಟಿಂಗ್ ಜಿಲೆಟಿನ್ ಒಂದು ಅಪಾಯಕಾರಿ ರಾಸಾಯನಿಕ ಸ್ಫೋಟಕವಾಗಿದ್ದು, ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಶನ್ (ಪಿಇಎಸ್ಒ) ನಿಯಮಗಳ ಅಡಿಯಲ್ಲಿ ನಿಯಂತ್ರಿಸಲ್ಪಟ್ಟಿದೆ. ಬೆಂಗಳೂರು ಪೊಲೀಸರ ಕ್ಷಿಪ್ರ ಕ್ರಮ ಒಂದು ಸಂಭಾವ್ಯ ದುರಂತವನ್ನು ತಪ್ಪಿಸಿರುವ ಸಾಧ್ಯತೆಗಳಿವೆ.
.ಬೆಂಗಾವಲು ಪಡೆ ವಾಹನಗಳ ಸಂಖ್ಯೆ ಇಳಿಕೆ ಮಾಡಿದ ಪ್ರಧಾನಿ ಮೋದಿ.ಮೋದಿ ವಿರುದ್ಧ ಲಘು ಟೀಕೆ ಸಲ್ಲದು: ಎಚ್.ಡಿ. ದೇವೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.