‘‘ಮಹಾನ್ ಪಾಶ್ಚಾತ್ಯ ಸಾಮ್ರಾಜ್ಯಗಳು ಅವನತಿ ಹೊಂದುತ್ತಿವೆ, ನಿರೀಶ್ವರವಾದಿ ಕಮ್ಯುನಿಸ್ಟ್ ಕ್ರಾಂತಿಗಳು ಮತ್ತು ವಸಾಹತುಶಾಹಿ ವಿರೋಧಿ ದಂಗೆಗಳು ಜಗತ್ತನ್ನು ಬದಲಿಸಿವೆ. ‘ಕ್ರೈಸ್ತ ಪಾಶ್ಚಾತ್ಯ ಜಗತ್ತು’ ಅಂತ್ಯಗೊಂಡಿದೆ. ಇಂತಹ ಹತಾಶೆಯ ದೃಷ್ಟಿಕೋನವನ್ನು ನಾವು ತಿರಸ್ಕರಿಸಬೇಕು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಅಮೆರಿಕವನ್ನು ಮತ್ತೆ ಮಹಾನ್ ದೇಶ’ವನ್ನಾಗಿ ಮಾಡಹೊರಟಿರುವುದರ ಹಿಂದಿನ ಉದ್ದೇಶವೇ ‘ಪಾಶ್ಚಾತ್ಯ ಜಗತ್ತನ್ನು ಮತ್ತೆ ಮಹಾನ್ ಆಗಿಸುವುದು’’. ಇವು ಇತ್ತೀಚಿನ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆಡಿರುವ ಮಾತುಗಳು.

ರೂಬಿಯೊ ಅವರ ‘ಮ್ಯೂನಿಚ್ ಪ್ರಣಾಳಿಕೆ’ಯು ‘ಕ್ರೈಸ್ತ ಪಾಶ್ಚಾತ್ಯ’ ದೇಶಗಳ ನಾಗರಿಕತೆಯ ಏಕತೆಯ ಘೋಷಣೆಯೂ ಹೌದು. ‘ನಿರೀಶ್ವರವಾದಿ ಕಮ್ಯುನಿಸ್ಟರು’ ಹಾಗೂ ‘ಜಾಗತಿಕ ದಕ್ಷಿಣದ’ ವಸಾಹತುಶಾಹಿ ವಿರೋಧಿಗಳ ವಿರುದ್ಧದ ಸಮರ ಘೋಷಣೆಯೂ ಹೌದು. ಇಂದು ಅಮೆರಿಕ ಎರಡನೆಯ ಮಹಾಯುದ್ಧದ ನಂತರ ಗಳಿಸಿದ ಆಧಿಪತ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕ್ಯೂಬಾ, ವೆನೆಜುವೆಲಾ, ಇರಾನ್ ಮೇಲಿನ ದಾಳಿಗಳನ್ನು ಇಂತಹ ಪ್ರಯತ್ನಗಳಾಗಿ ನೋಡಬಹುದು. ತನ್ನ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಪೂರಕವಲ್ಲದ ಆಡಳಿತವನ್ನು ಬದಲಿಸುವ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡಿದೆ. ಅಂತರರಾಷ್ಟ್ರೀಯ ಕಾನೂನಿನ ನಿಯಮಗಳನ್ನೆಲ್ಲ ಉಲ್ಲಂಘಿಸಿ, ನೇರ ಮಿಲಿಟರಿ ಹಸ್ತಕ್ಷೇಪ ನಡೆಸುತ್ತಿದೆ. ದಶಕಗಳ ಕಾಲ ವಸಾಹತುಶಾಹಿ ವಿರೋಧಿ ಚಳವಳಿಗಳಿಂದ ಸಂಪಾದಿಸಿದ್ದ ಸ್ವಾತಂತ್ರ್ಯವನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಂದ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ರಷ್ಯಾದಿಂದ ಪೆಟ್ರೋಲ್ ಕೊಳ್ಳಲು ಅಮೆರಿಕದ ಅನುಮತಿ ಪಡೆದುಕೊಳ್ಳಬೇಕಾದ ಸ್ಥಿತಿ ಭಾರತದಂಥ ದೇಶಗಳಿಗೆ ನಿರ್ಮಾಣವಾಗಿದೆ.

ಹಿಂದೆ ಬ್ರಿಟನ್ಗೆ ಪಾವತಿ ಕೊರತೆ ಎದುರಾಗಿದ್ದಾಗ, ವಸಾಹತುಗಳಿಂದ ಲೂಟಿ ಮಾಡಿ ಕೊರತೆ
ಯನ್ನು ನೀಗಿಸಿಕೊಂಡಿತ್ತು. ಈಗ ಅಮೆರಿಕದ ಆರ್ಥಿಕತೆ ತೀವ್ರ ಬಿಕ್ಕಟ್ಟಿನಲ್ಲಿದೆ. ಅದು ವಿಶ್ವದ ಅತಿ
ದೊಡ್ಡ ಸಾಲಗಾರ ದೇಶವಾಗಿದೆ. ಈವರೆಗೆ ಡಾಲರನ್ನು ಮುದ್ರಿಸಿ ಬಿಕ್ಕಟ್ಟನ್ನು ನಿರ್ವಹಿಸಿಕೊಳ್ಳುತ್ತಿದ್ದ ಅಮೆರಿಕ ಬೇರೆ ದಾರಿ ಕಂಡುಕೊಳ್ಳಬೇಕಾಗಿದೆ. ವಸಾಹತುಗಳಿಲ್ಲದೆ ಸಾಮ್ರಾಜ್ಯಶಾಹಿಗೆ ಅಸ್ತಿತ್ವವಿಲ್ಲ. ಜಗತ್ತಿನ ಎಲ್ಲಾ ಕಡೆ ತನ್ನ ಮಾತು ಕೇಳುವ, ತನ್ನ ಆರ್ಥಿಕ, ರಾಜಕೀಯ ಹಾಗೂ ಮಿಲಿಟರಿ ಹಿತಾಸಕ್ತಿಗೆ ಹೊಂದಿಕೊಳ್ಳುವ ಸರ್ಕಾರಗಳನ್ನು ನೇಮಿಸಬೇಕಾಗಿದೆ. ನಿರಂತರ ಮಾರುಕಟ್ಟೆಗೆ, ಕಚ್ಚಾ
ಪದಾರ್ಥಗಳಿಗೆ ವಸಾಹತುಗಳು ಬೇಕು. ವೆನೆಜುವೆಲಾ,ಇರಾನಿನಂತಹ ತೈಲಸಂಪದ್ಭರಿತ ದೇಶಗಳ ಮೇಲಿನ ದಾಳಿಯ ಹಿಂದಿನ ಉದ್ದೇಶವೂ ಇದೇ. ‘ವೆನೆಜುವೆಲಾದಲ್ಲಿ ನಾನು ಆಡಳಿತ ನಡೆಸುತ್ತೇನೆ. ಅಲ್ಲಿಯ ತೈಲವನ್ನು ವಶಕ್ಕೆ ತೆಗೆದುಕೊಳ್ಳುತ್ತೇನೆ’ ಎಂದುಟ್ರಂಪ್ ನೇರವಾಗಿ, ಹೇಳಿದ್ದಾರೆ. ಇನ್ನು ಮುಂದೆ ಅವುಗಳ ಒಡೆತನ ಅಮೆರಿಕದ ಕಂಪನಿಗಳದ್ದು.

ಭಾರತದಂತಹ ದೇಶಗಳನ್ನು ಅಸಮಾನ ಒಪ್ಪಂದಗಳಿಗೆ ಒಪ್ಪಿಸಿ, ತನ್ನ ಸರಕು ಸೇವೆಗಳಿಗೆ ಬೇಕಾದ ಮಾರುಕಟ್ಟೆಯನ್ನು ಟ್ರಂಪ್ ಸೃಷ್ಟಿಸಿಕೊಳ್ಳುತ್ತಿದ್ದಾರೆ. ‘ಯಾವುದೇ ಕಾರಣಕ್ಕೂ ಚೀನಾದ ವಿಷಯದಲ್ಲಿ ಮಾಡಿದ ತಪ್ಪನ್ನು ಭಾರತದ ವಿಷಯದಲ್ಲಿ ಮಾಡುವುದಿಲ್ಲ, ಅದು ಬೆಳೆದು ನಮ್ಮೊಂದಿಗೆ ಸ್ಪರ್ಧಿಸುವುದಕ್ಕೆ ಬಿಡುವುದಿಲ್ಲ’ ಎಂದೂ ಟ್ರಂಪ್ ಹೇಳಿದ್ದಾರೆ. ಹಾಗಿದ್ದಾಗ್ಯೂ ‘ಭಾರತೀಯರು ಒಳ್ಳೆಯವರು. ನಮ್ಮ ಮಾತನ್ನು ಕೇಳುತ್ತಾರೆ’ ಅನ್ನುವ ಅವರ ಮೆಚ್ಚುಗೆ ಮಾತಿಗೆ ತಲೆಯಾಡಿಸುತ್ತಾ, ವಿದೇಶಿ ನೀತಿಯನ್ನು ಗಾಳಿಗೆ ತೂರಿ, ನಿರಂತರ ಅವಮಾನಕ್ಕೆ ಗುರಿಯಾಗುತ್ತಿದ್ದೇವೆ.

ಟ್ರಂಪ್, ನೇತನ್ಯಾಹು, ಇವರೆಲ್ಲಾ ಹಲವು ಒತ್ತಡಗಳಲ್ಲಿ ಸಿಲುಕಿದ್ದಾರೆ. ಅವರಿಗೆ ದೇಶದೊಳಗೆ ಬೆಂಬಲ ಕಮ್ಮಿಯಾಗುತ್ತಿದೆ. ದೇಶದೊಳಗಿನ ಬಿಕ್ಕಟ್ಟನ್ನು ನಿಭಾಯಿಸಲು ವಿಫಲರಾಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಯುದ್ಧ ಅವರಿಗೆ ಹೊದಿಕೆಯಾಗುತ್ತಿದೆ. ಯುದ್ಧಗಳಿಂದ ಜನಸಾಮಾನ್ಯರ ಬದುಕು ಹೈರಾಣಾಗುತ್ತದೆ. ಆದರೆ, ಇಂತಹ ನಾಯಕರುಗಳಿಗೆ ಜನಸಾಮಾನ್ಯರ ಬಗ್ಗೆ ಚಿಂತೆ ಇರುವುದಿಲ್ಲ. ಹೊರ್ಮುಜ್ ಜಲಸಂಧಿ ಈಗ ಸ್ಥಗಿತಗೊಂಡಿದೆ. ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗ, ರಸಗೊಬ್ಬರದ ಮೂರನೇ ಒಂದು ಭಾಗ ಹೊರ್ಮುಜ್ ಜಲಸಂಧಿಯ ಮೂಲಕವೇ ಸರಬರಾಜಾಗುತ್ತದೆ. ಜಾಗತಿಕ ಯೂರಿಯಾ ರಫ್ತಿನ ಶೇ 35 ಮತ್ತು ಸಲ್ಫರ್ ರಫ್ತಿನ ಶೇ 45ರಷ್ಟು ಅದನ್ನು ಹಾದುಕೊಂಡೇ ಬರಬೇಕು. ತೈಲ, ಎಲ್ಪಿಜಿ ಕೊರತೆಯನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಬೆಲೆಗಳು ಗಗನಕ್ಕೇರುತ್ತಿವೆ. ರಸ್ತೆಬದಿಯಲ್ಲಿ ಬೋಂಡಾ ಮಾರುವ ಅಂಗಡಿಗಳಿಂದ ಹಿಡಿದು ದೊಡ್ಡ ಹೋಟೆಲ್ಗಳವರೆಗೆ ಎಲ್ಲವನ್ನೂ ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಆಹಾರದ ಮೇಲೆ ಇನ್ನೊಂದು ರೀತಿಯಲ್ಲೂ ಹೊಡೆತ ಬೀಳುತ್ತಿದೆ. ಭಾರತಕ್ಕೆ ಪ್ರತಿ ತಿಂಗಳು ಸುಮಾರು 20 ಲಕ್ಷ ಟನ್ ವಿವಿಧ ರಸಗೊಬ್ಬರದ ಅವಶ್ಯಕತೆಯಿದೆ. ಭಾರತ ಬಹುತೇಕ ರಾಸಾಯನಿಕಗಳನ್ನು ಅಮದು ಮಾಡಿಕೊಳ್ಳುತ್ತದೆ. ಯೂರಿಯಾ, ಗಂಧಕ ಮತ್ತು ಅಮೋನಿಯಾ, ಇವೆಲ್ಲಾ ಬಹುತೇಕ ತಯಾರಾಗುವುದು ಸೌದಿ ಅರೇಬಿಯಾ, ಕತಾರ್, ಒಮನ್ ಮತ್ತು ಯುಎಇ ರಾಷ್ಟ್ರಗಳಲ್ಲಿ. ಅಮೋನಿಯಾ ಉತ್ಪಾದನೆಯಲ್ಲಿ ಇರಾನ್ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಯುದ್ಧ ಮುಂದುವರಿದರೆ ರಸಗೊಬ್ಬರದ ಪೂರೈಕೆ ಅಸ್ತವ್ಯಸ್ತಗೊಳ್ಳುತ್ತದೆ. ರಷ್ಯಾ ಈ ಕೊರತೆಯನ್ನು ತುಂಬಬಹುದಿತ್ತು. ಆದರೆ, ಉತ್ಪಾದನಾ ಮಿತಿ ಮತ್ತು ರಫ್ತು ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅಮೋನಿಯಾ ಕೊರತೆಯಾದರೆ ದೇಶೀಯ ಯೂರಿಯಾ ಉತ್ಪಾದನೆಗೂ ಹೊಡೆತ ಬೀಳುತ್ತದೆ. ಬಿತ್ತನೆಯ ಸಮಯದಲ್ಲಿ ರಸಗೊಬ್ಬರ ಸಿಗದಿದ್ದರೆ, ಅದರ ಪರಿಣಾಮ ಕೃಷಿ ಇಳುವರಿಯ ಮೇಲೆ ಆಗುತ್ತದೆ. ಬೆಲೆ ಏರಿದರೆ ರೈತರು ಬಳಸುವ ಪ್ರಮಾಣವೂ ಕಡಿಮೆಯಾಗುತ್ತದೆ. ಅಂತಿಮವಾಗಿ ಇಳುವರಿ ಕಮ್ಮಿಯಾಗುತ್ತದೆ. ಪರಿಣಾಮವಾಗಿ ಬ್ರೆಡ್, ಮೊಟ್ಟೆ, ಮಾಂಸ ಮತ್ತು ಇತರ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತದೆ. ಈ ಬಿಕ್ಕಟ್ಟು 2022ರ ರಷ್ಯಾ–ಉಕ್ರೇನ್ ಯುದ್ಧದಿಂದ ಉಂಟಾದ ಆಹಾರದ ಬಿಕ್ಕಟ್ಟಿಗಿಂತಲೂ ತೀವ್ರವಾಗಿರಬಹುದು ಎನ್ನುವ ಆತಂಕವಿದೆ. ಅಂತಿಮವಾಗಿ ಇದರ ಪರಿಣಾಮ ನಮ್ಮ ಅಡುಗೆಮನೆಯ ಮೇಲೂ ಆಗುತ್ತದೆ. ಇದು ನಮ್ಮ ಆಹಾರದ ಸುರಕ್ಷತೆಗೆ ದೊಡ್ಡ ಪೆಟ್ಟಾಗುತ್ತದೆ.

ರಸಗೊಬ್ಬರದ ಬೆಲೆ ಏರಿಕೆ ನಮ್ಮ ಆರ್ಥಿಕತೆಯನ್ನು ಇನ್ನೂ ಹಲವು ರೀತಿಯಲ್ಲಿ ಕಾಡುತ್ತದೆ. ಉದಾ
ಹರಣೆಗೆ, ಭಾರತದಲ್ಲಿ ರಸಗೊಬ್ಬರಕ್ಕೆ ಸಬ್ಸಿಡಿ ನೀಡಲಾಗುತ್ತಿದೆ. ಬೆಲೆ ಏರಿದರೆ ಸಬ್ಸಿಡಿಯ ಪ್ರಮಾಣವೂ ಹೆಚ್ಚುತ್ತದೆ. 2024–25ರಲ್ಲಿ ಸರ್ಕಾರವು ಸುಮಾರು ₹1.9 ಲಕ್ಷ ಕೋಟಿಯನ್ನು ಸಬ್ಸಿಡಿಗಾಗಿ ವ್ಯಯಿಸಿದೆ. ಈಗ ಯೂರಿಯಾ ದರ ಶೇ 30ರಿಂದ 40ರಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಬಹುಶಃ ಈ ಯುದ್ಧದಿಂದ ಗಾಸಿಗೊಳಗಾಗದ ಯಾವುದೇ ಕ್ಷೇತ್ರವೂ ಇಲ್ಲ.

ಭಾರತ ತನ್ನ ಸ್ವಾಯತ್ತತೆಯನ್ನು, ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಗಟ್ಟಿಯಾದ ನಿಲುವನ್ನು ತೆಗೆದುಕೊಳ್ಳಬೇಕು. ಚೀನಾ ಅತಿಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶ. ಅದು ಅಮೆರಿಕದ ಯಾವುದೇ ಆಕ್ಷೇಪಗಳಿಗೆ ಸೊಪ್ಪು ಹಾಕದೆ, ತನಗೆ ಅನುಕೂಲವಾದ ಕಡೆಯಿಂದ ತೈಲವನ್ನು ಖರೀದಿಸುತ್ತಿದೆ. ಆದರೆ, ರಷ್ಯಾದಿಂದ ಖರೀದಿಸಿದ್ದಕ್ಕೆ ಭಾರತದ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿತ್ತು. ವಾಸ್ತವ ಏನೆಂದರೆ, ಹಿಂದೆ ಬೈಡೆನ್ ಕಾಲದಲ್ಲಿ ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಸಮ್ಮತಿಸಲಾಗಿತ್ತು. ಆಗ ರಷ್ಯಾ–ಉಕ್ರೇನ್ ಯುದ್ಧದ ಸಮಯದಲ್ಲಿ ತೈಲದ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕಿತ್ತು. ರಷ್ಯಾದಿಂದ ಭಾರತ ತೈಲ ಖರೀದಿಸುವುದರಿಂದ ತೈಲ ಮಾರುಕಟ್ಟೆಯ ಮೇಲೆ ಒತ್ತಡ ಕಡಿಮೆಯಾಗಿ ಬೆಲೆಗಳು ಸ್ಥಿರವಾಗಿರುತ್ತವೆ ಅನ್ನುವುದು ಆಗಿನ ಲೆಕ್ಕಾಚಾರವಾಗಿತ್ತು. ಈಗಲೂ ಅದೇ ಕಾರಣಕ್ಕೆ ರಷ್ಯಾದಿಂದ ಕೊಳ್ಳಲು ಅನುಮತಿಸಲಾಗಿದೆ. ತೈಲದ ಬೆಲೆ ನಿಯಂತ್ರಣದಲ್ಲಿ ಭಾರತದ ಪಾತ್ರ ಮಹತ್ವದ್ದು ಎಂಬುದು ಅಮೆರಿಕಕ್ಕೆ ತಿಳಿದಿದೆ.

ಇರಾನ್ ಮೇಲೆ ಬಾಂಬ್ ಹಾಕಿ ಯುದ್ಧವನ್ನು ಪ್ರಾರಂಭಿಸಿದಾಗ ಆ ಸಂಘರ್ಷ ಸಾಗಬಹುದಾದ ದಾರಿಯ ಬಗ್ಗೆ ಟ್ರಂಪ್ಗೆ ಸ್ಪಷ್ಟ ಕಲ್ಪನೆ ಇದ್ದಿರಲಿಕ್ಕಿಲ್ಲ. ಟ್ರಂಪ್ ಅಂತಹವರು ಒಂದೆರಡು ದಿನಗಳಲ್ಲಿ ಯುದ್ಧ ಮುಗಿಸಿಬಿಡುತ್ತೇನೆಂದು ಯೋಚಿಸುವುದಕ್ಕೆ ಸಾಧ್ಯ. ಆದರೆ, ವಾಸ್ತವ ಬೇರೆ ಅನ್ನುವುದನ್ನು ವಿಯೆಟ್ನಾಂ ಯುದ್ಧದಂತಹ ಘಟನೆಗಳು ತಿಳಿಸಿವೆ. ಯಾವಾಗ ಯುದ್ಧ ಮುಗಿಯುತ್ತದೆ ಅನ್ನುವುದು ಖಾತರಿಯಿಲ್ಲ. ಯಾರ ಬಳಿ ಡ್ರೋನ್, ಮಿಸೈಲ್ ಇವೆಲ್ಲಾಖಾಲಿಯಾಗುತ್ತವೆ ಅನ್ನುವುದನ್ನು ತಿಳಿಯುವ ಸಾಧ್ಯತೆಯೂ ಇಲ್ಲ. ಆದರೆ, ಯುದ್ಧ ಮುಂದುವರಿದಷ್ಟೂ ಆಗುವ ವಿಪತ್ತು ಅಪಾರ. ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ದಿನಕ್ಕೆ 500 ದಶಲಕ್ಷ ಡಾಲರ್ ಖರ್ಚಾಗುತ್ತಿದೆಯಂತೆ. ಅದರಿಂದಾಗುವ ಆಸ್ತಿ, ಪ್ರಾಣ ಹಾನಿ ಹಲವು ಸಾವಿರ ಪಟ್ಟು ಹೆಚ್ಚು.

ಭಾರತ ಅಮೆರಿಕದೊಂದಿಗೆ ವ್ಯಾಪಾರವನ್ನುಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿರಬಹುದು. ವ್ಯಾಪಾರ ಎಲ್ಲರಿಗೂ ಒಳ್ಳೆಯದು. ಆದರೆ,ಅಮೆರಿಕ ಎಲ್ಲವನ್ನೂ ಲಪಟಾಯಿಸಲು ಯೋಚಿಸಿ
ದರೆ ಯಾರಿಗೂ ಲಾಭವಿರುವುದಿಲ್ಲ. ತಮ್ಮ ಸರಕುಗಳಿಗೆ ಪರ್ಯಾಯ ಮಾರುಕಟ್ಟೆಯನ್ನು ಕಂಡು
ಕೊಳ್ಳುವುದಕ್ಕೆ ಭಾರತದಂತಹ ರಾಷ್ಟ್ರಗಳಿಗೆ ಸಾಧ್ಯವಿದೆ. ಅಮೆರಿಕಕ್ಕೆ ತನಗೆ ಬೇಕಾದ ವಸ್ತುಗಳನ್ನೆಲ್ಲಾ ತನ್ನಲ್ಲೇ ತಯಾರಿಸಿಕೊಳ್ಳುವುದು ಕಷ್ಟ.

ಹಿರಿಯರು ಸ್ಥಾಪಿಸಿದ ಸರ್ಕಾರಿ ಉದ್ದಿಮೆಗಳನ್ನು ಬಂಡವಾಳದ ಕ್ರೋಡೀಕರಣಕ್ಕಾಗಿ ನಾವು ಮಾರಿಕೊಳ್ಳುತ್ತಿದ್ದೇವೆ. ಹಿರಿಯರು ಗಳಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳೋಣ. ನೂರಾರು ಮಕ್ಕಳನ್ನು ಬಲಿ ಪಡೆದ ಯುದ್ಧ ಯಾವುದೇ ಸಮಸ್ಯೆಗೂ ಪರಿಹಾರವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.