ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ನೌಕಾಪಡೆಗಳು ಒಂದು ಅಸಾಧಾರಣ ಮೈಲಿಗಲ್ಲು ಸ್ಥಾಪಿಸಿದ್ದು, ಒಡಿಶಾದ ಬಳಿಯ ಬಂಗಾಳ ಕೊಲ್ಲಿಯ ತೀರದಿಂದ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ನೌಕಾಪಡೆಯ ಆ್ಯಂಟಿ ಶಿಪ್ ಮಿಸೈಲ್ ಶಾರ್ಟ್ ರೇಂಜ್ನ (ಎನ್ಎಎಸ್ಎಂ-ಎಸ್ಆರ್) ಮೊದಲ ಸಾಲ್ವೋ ಉಡಾವಣೆಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿವೆ. ಸಾಲ್ವೋ ಉಡಾವಣೆ ಎಂದರೆ, ಎರಡು ಕ್ಷಿಪಣಿಗಳನ್ನು ಒಂದರ ನಂತರ ಒಂದರಂತೆ ಕ್ಷಿಪ್ರವಾಗಿ ಒಂದೇ ವೇದಿಕೆಯಿಂದ ಉಡಾವಣೆಗೊಳಿಸುವ ಪ್ರಕ್ರಿಯೆಯಾಗಿದೆ. ಇದೇ ಮೊದಲ ಬಾರಿಗೆ ಇಂತಹ ಗಾಳಿಯಿಂದ ಉಡಾವಣೆಗೊಳಿಸುವ ಹಡಗು ನಿರೋಧಕ ಕ್ಷಿಪಣಿ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದ್ದು, ಇದು ಭಾರತದ ರಕ್ಷಣಾ ವಲಯಕ್ಕೆ ಒಂದು ಹೆಮ್ಮೆಯ ಕ್ಷಣವಾಗಿದೆ.

ಎನ್ಎಎಸ್ಎಂ-ಎಸ್ಆರ್ ಶತ್ರುಗಳ ಯುದ್ಧ ನೌಕೆಗಳ ಮೇಲೆ ದಾಳಿ ಮಾಡುವ ಸಲುವಾಗಿ ಯುದ್ಧ ವಿಮಾನ ಅಥವಾ ಹೆಲಿಕಾಪ್ಟರ್ಗಳಿಂದ ಉಡಾವಣೆ ನಡೆಸಬಹುದಾದ ಮೊದಲ ಸಂಪೂರ್ಣ ಭಾರತೀಯ ನಿರ್ಮಾಣದ ಕ್ಷಿಪಣಿಯಾಗಿದೆ. ಇದನ್ನು ನಿಜಕ್ಕೂ ವಿಶೇಷವಾಗಿಸುವುದು ಕ್ಷಿಪಣಿಯ ಸೀ ಸ್ಕಿಮ್ಮಿಂಗ್ ಸಾಮರ್ಥ್ಯ. ಅಂದರೆ, ಇದು ಶತ್ರುಗಳ ರೇಡಾರ್ ಕಣ್ಣಿಗೆ ಬೀಳುವುದನ್ನು ತಪ್ಪಿಸುವ ಸಲುವಾಗಿ ಸಮುದ್ರದ ಮೇಲ್ಮೈಗೆ ಬಹಳ ಹತ್ತಿರಾಗಿ ಸಾಗುತ್ತದೆ. ನೀರಿನ ಮೇಲ್ಮೈಗೆ ಬಹಳ ಸನಿಹದಲ್ಲಿ, ಶತ್ರುವಿನ ಕಣ್ಣಿಗೆ ಬಹುತೇಕ ಅಗೋಚರವಾಗಿ ಸಾಗುವ ಒಂದು ಕ್ಷಿಪಣಿಯನ್ನು ಊಹಿಸಿಕೊಳ್ಳಿ. ಭಾರತದ ವಿನೂತನ ಕ್ಷಿಪಣಿ ಯಥಾವತ್ ಅಂತಹದ್ದೇ ಆಗಿದೆ. ಇದು ಬಹುತೇಕ 55 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದಾಗಿದ್ದು, 'ಫೈರ್ ಆ್ಯಂಡ್ ಫಾರ್ಗೆಟ್' ವ್ಯವಸ್ಥೆಯಡಿ ಕಾರ್ಯಾಚರಿಸುತ್ತದೆ. ಒಂದು ಬಾರಿ ಉಡಾವಣೆಗೊಳಿಸಿದರೆ, ಈ ಕ್ಷಿಪಣಿ ತನ್ನದೇ ಬುದ್ಧಿವಂತಿಕೆಯನ್ನು ಬಳಸಿಕೊಂಡು, ಪೈಲಟ್ನಿಂದ ಹೆಚ್ಚುವರಿ ನಿರ್ದೇಶನದ ಅಗತ್ಯವಿಲ್ಲದೆ, ತಾನೇ ಗುರಿಯನ್ನು ಹುಡುಕುತ್ತಾ ಹಾರಿ, ಅದನ್ನು ನಾಶಪಡಿಸುತ್ತದೆ. ಇದು ಯಾವುದೇ ಹವಾಮಾನದಲ್ಲೂ ಕಾರ್ಯಾಚರಿಸಬಲ್ಲದಾಗಿದ್ದು, ಹಗಲು ಮತ್ತು ರಾತ್ರಿ ಎರಡರಲ್ಲೂ ನಿಖರ ದಾಳಿ ನಡೆಸಬಲ್ಲದು. ಆದ್ದರಿಂದ ಇದು ನೈಜ ಯುದ್ಧ ಸನ್ನಿವೇಶಕ್ಕೂ ಪೂರಕವಾಗಿದೆ.

ಪ್ರಸ್ತುತ ಪರೀಕ್ಷೆಯಲ್ಲಿ ಕ್ಷಿಪಣಿ ತನ್ನ ಎಲ್ಲ ಗುರಿಗಳನ್ನೂ ಸಾಧಿಸಿದ್ದು, ಇದನ್ನು ರೇಡಾರ್, ಮತ್ತು ಚಂಡೀಪುರದ ಇಂಟಗ್ರೇಟೆಡ್ ಟೆಸ್ಟ್ ರೇಂಜಿನ (ಐಟಿಆರ್) ಇಲೆಕ್ಟ್ರೋ ಆಪ್ಟಿಕಲ್ ಸಿಸ್ಟಮ್ಗಳು ಮತ್ತು ಟೆಲಿಮೆಟ್ರಿಗಳು ನೀಡಿರುವ ಮಾಹಿತಿಗಳು ಸಾಬೀತುಪಡಿಸಿವೆ. ತಮ್ಮ ಸಾಲ್ವೋ ಉಡಾವಣಾ ಸಾಮರ್ಥ್ಯವನ್ನು ಸಾಬೀತುಪಡಿಸುವುದರ ಜೊತೆಗೆ, ಈ ಕ್ಷಿಪಣಿಗಳು ತಾವು ಹಡಗು ಸಮುದ್ರವನ್ನು ಸೇರುವ ಜಾಗದಲ್ಲೇ ದಾಳಿ ನಡೆಸಬಲ್ಲೆವು ಎನ್ನುವುದನ್ನು ಪ್ರದರ್ಶಿಸಿವೆ. ಈ ದುರ್ಬಲವಾದ ಸ್ಥಳದ ಮೇಲೆ ದಾಳಿ ನಡೆಸುವುದರಿಂದ ಅತ್ಯಧಿಕ ಹಾನಿಯೂ ಉಂಟಾಗಲಿದ್ದು, ಹಡಗುಗಳನ್ನು ಬಹಳಷ್ಟು ಬೇಗನೆ ಮುಳುಗಿಸಲು ಸಾಧ್ಯವಾಗುತ್ತದೆ. ಈ ಪರೀಕ್ಷೆಗೆ ಹಿರಿಯ ಡಿಆರ್ಡಿಒ ವಿಜ್ಞಾನಿಗಳು, ಭಾರತೀಯ ನೌಕಾಪಡೆ ಮತ್ತು ವಾಯುಪಡೆಗಳ ಅಧಿಕಾರಿಗಳು, ಮತ್ತು ಉತ್ಪಾದನೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವ ಅಭಿವೃದ್ಧಿ ಹಾಗೂ ಉತ್ಪಾದನಾ ಸಹಯೋಗಿಗಳು (ಡಿಸಿಪಿಪಿ) ಸಾಕ್ಷಿಯಾಗಿದ್ದರು.

ಈ ಕ್ಷಿಪಣಿ ತನ್ನ ಆರಂಭಿಕ ವೇಗಕ್ಕಾಗಿ ಉಡಾವಣೆಯ ವೇಳೆ ಒಂದು ಘನ ಬೂಸ್ಟರ್ ಬಳಸಿಕೊಳ್ಳುತ್ತದೆ. ಅದು ಸುದೀರ್ಘ ಕಾಲ ಹಾರಾಟ ನಡೆಸುವ ಸಲುವಾಗಿ ದೀರ್ಘ ಉರಿಯುವಿಕೆಯ ಇಂಜಿನನ್ನು ಬಳಸುತ್ತದೆ. ಒಳಭಾಗದಲ್ಲಿ ಕ್ಷಿಪಣಿ ಹಲವಾರು ಸ್ಮಾರ್ಟ್ ವ್ಯವಸ್ಥೆಗಳನ್ನು ಹೊಂದಿದೆ. ಅವೆಂದರೆ, ಗುರಿಯನ್ನು ಹುಡುಕಲು ಒಂದು ಸೀಕರ್, ಕ್ಷಿಪಣಿಯ ಮೆದುಳಿನಂತೆ ಕಾರ್ಯಾಚರಿಸುವ ಅಂತರ್ಗತ ಏವಿಯಾನಿಕ್ಸ್ ಮಾಡ್ಯುಲ್, ಮತ್ತು ಫೈಬರ್ ಆಪ್ಟಿಕ್ ಗೈರೋಸ್ಕೋಪ್ ಆಧಾರಿತ ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್ ಮತ್ತು ರೇಡಿಯೋ ಆಲ್ಟಿಮೀಟರ್. ಇವುಗಳು ಕ್ಷಿಪಣಿಗೆ ತಮ್ಮ ಕರಾರುವಾಕ್ಕಾದ ಸ್ಥಾನ, ದಿಕ್ಕು, ಮತ್ತು ಸಮುದ್ರದ ಮೇಲೆ ತಾನಿರುವ ಎತ್ತರ ತಿಳಿಯಲು ನೆರವಾಗುತ್ತವೆ. ಇದು ಅತ್ಯಂತ ವೇಗದ, ದ್ವಿಮುಖ ಡೇಟಾ ಲಿಂಕ್ ಹೊಂದಿದ್ದು, ಹಾರಾಟ ನಡೆಸುವಾಗಲೇ ಮಾಹಿತಿ ಹಂಚಿಕೊಳ್ಳಲು ಮತ್ತು ನಿಖರವಾಗಿ ಸಾಗಲು ನೆರವಾಗುತ್ತದೆ. ಈ ಕ್ಷಿಪಣಿಯ ಅತ್ಯಂತ ರೋಚಕವಾದ ಅಂಶವೆಂದರೆ, ಇದರ ಎಲ್ಲ ಆಧುನಿಕ ಭಾಗಗಳನ್ನು ಡಿಆರ್ಡಿಒ ಪ್ರಯೋಗಾಲಯಗಳು ಮತ್ತು ಭಾರತೀಯ ಉದ್ಯಮಗಳು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿ ಪಡಿಸಿವೆ. ಆ ಮೂಲಕ ಕ್ಷಿಪಣಿ 'ಆತ್ಮನಿರ್ಭರ ಭಾರತ'ಕ್ಕೆ ನೈಜ ಸಂಕೇತವಾಗಿದೆ.

ಕ್ಷಿಪಣಿಯನ್ನು ಹೈದರಾಬಾದಿನ ರಿಸರ್ಚ್ ಸೆಂಟರ್ ಇಮಾರತ್ ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಲ್ಯಾಬೋರೇಟರಿ (ಹೈದರಾಬಾದ್), ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ (ಪುಣೆ), ಟರ್ಮಿನಲ್ ಬ್ಯಾಲಿಸ್ಟಿಕ್ ರಿಸರ್ಚ್ ಲ್ಯಾಬೊರೇಟರಿ (ಚಂಡೀಗಢ), ಮತ್ತು ಐಟಿಆರ್ ಚಂಡೀಪುರಗಳು ಸಹಯೋಗ ನೀಡಿವೆ. ನೈಜ ಉತ್ಪಾದನೆಯನ್ನು ಡೆವಲಪ್ಮೆಂಟ್ ಕಮ್ ಪ್ರೊಡಕ್ಷನ್ ಪಾರ್ಟ್ನರ್ಸ್ (ಡಿಸಿಪಿಪಿ) ನಡೆಸಲಿದ್ದು, ಇದಕ್ಕಾಗಿ ಭಾರತೀಯ ಉದ್ಯಮಗಳು ಮತ್ತು ಸ್ಟಾರ್ಟಪ್ಗಳು ಕೈಜೋಡಿಸಲಿವೆ. ಇದು ಸ್ಥಳೀಯ ರಕ್ಷಣಾ ವ್ಯವಸ್ಥೆಗೆ ಉತ್ತೇಜನ ನೀಡಲಿದೆ.

ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಡಿಆರ್ಡಿಒ ಸಂಸ್ಥೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ ಮತ್ತು ಡಿಸಿಪಿಪಿ ಸೇರಿದಂತೆ ಎಲ್ಲ ಔದ್ಯಮಿಕ ಸಹಯೋಗಿಗಳನ್ನು ಅವರ ಅಸಾಧಾರಣ ಸಾಧನೆಗಾಗಿ ಶ್ಲಾಘಿಸಿದ್ದಾರೆ. ಈ ಕ್ಷಿಪಣಿಯ ಅಭಿವೃದ್ಧಿ ಭಾರತದ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಅಸಾಧಾರಣವಾಗಿ ಹೆಚ್ಚಿಸಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್ಡಿಒ ಮುಖ್ಯಸ್ಥರೂ ಆದ ಡಾ. ಸಮೀರ್ ವಿ ಕಾಮತ್ ಅವರೂ ಸಾಲ್ವೋ ಉಡಾವಣೆಯ ಯಶಸ್ಸಿಗಾಗಿ ತಂಡಗಳನ್ನು ಅಭಿನಂದಿಸಿದ್ದಾರೆ.

ಎನ್ಎಎಸ್ಎಂ ಕ್ಷಿಪಣಿ ದುಬಾರಿ ವಿದೇಶಿ ಕ್ಷಿಪಣಿಗಳಾದ ನೇವಲ್ ಸ್ಟ್ರೈಕ್, ಮಾರ್ಟೆ ಇಆರ್, ಮತ್ತು ಸೀ ವೆನಮ್ಗಳಿಗೆ ಪರ್ಯಾಯವಾದ, ಕಡಿಮೆ ವೆಚ್ಚದ ಭಾರತೀಯ ಆಯ್ಕೆಯಾಗಿ ಕಾರ್ಯಾಚರಿಸಲಿದೆ. ಈ ಕ್ಷಿಪಣಿಗಳನ್ನು ವಿದೇಶಗಳಿಂದ ಖರೀದಿಸುವುದು ಅಪಾರ ವೆಚ್ಚದಾಯಕವಾಗಿದೆ. ಆದರೆ, ಎನ್ಎಎಸ್ಎಂ-ಎಸ್ಆರ್ ಕ್ಷಿಪಣಿ ಭಾರತಕ್ಕೆ ಕೋಟ್ಯಂತರ ರೂಪಾಯಿ ಉಳಿಸುವುದರ ಜೊತೆಗೆ, ಸ್ವಂತ ತಂತ್ರಜ್ಞಾನವನ್ನೂ ಒದಗಿಸಲಿದೆ. ಡಿಆರ್ಡಿಒ ಪ್ರಕಾರ, ಈ ಕ್ಷಿಪಣಿ ಅಂದಾಜು 380 ಕೆಜಿ ತೂಕ ಹೊಂದಿದ್ದು, ಮೊದಲಿಗೆ ಭಾರತೀಯ ನೌಕಾಪಡೆಯ ಸೀ ಕಿಂಗ್ ಹೆಲಿಕಾಪ್ಟರ್ಗೆ ಅಳವಡಿಸಲಾಗುತ್ತದೆ. ಅದರ ಹಳೆಯ ಸೀ ಈಗಲ್ ಕ್ಷಿಪಣಿಗಳ ಬದಲಿಗೆ ಇದು ಬಳಕೆಯಾಗಲಿದೆ. ಸೀ ಕಿಂಗ್ ಹೆಲಿಕಾಪ್ಟರ್ಗಳು ಈಗ ಹಳೆಯದಾಗಿದ್ದು, ನಿವೃತ್ತಿಯ ಅಂಚಿಗೆ ಬಂದಿವೆ. ಈ ನೂತನ ಕ್ಷಿಪಣಿ ಭವಿಷ್ಯದ ನೌಕಾಪಡೆಯ ಹೆಲಿಕಾಪ್ಟರ್ಗಳಿಗೂ ಅಳವಡಿಕೆಯಾಗಲಿದ್ದು, ಭಾರತಕ್ಕೆ ದೀರ್ಘಾವಧಿಯ ಕಾರ್ಯತಂತ್ರದ ಅನುಕೂಲ ಕಲ್ಪಿಸಲಿದೆ.

ಪ್ರಸ್ತುತ ಯಶಸ್ವೀ ಪರೀಕ್ಷೆ ಕೇವಲ ಒಂದು ಕ್ಷಿಪಣಿ ಉಡಾವಣೆಯಷ್ಟೇ ಅಲ್ಲ. ಇದು ಭಾರತ ರಕ್ಷಣಾ ತಂತ್ರಜ್ಞಾನದಲ್ಲಿ ಒಂದು ಶಕ್ತಿಶಾಲಿ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯೂ ಹೌದು. ಇಂತಹ ಪ್ರತಿಯೊಂದು ಸಾಧನೆಯ ಮೂಲಕ ಭಾರತ ಜಗತ್ತಿನ ಅತ್ಯುನ್ನತ ಮಿಲಿಟರಿ ಶಕ್ತಿಗಳಿಗೆ ಸರಿಸಮನಾಗಿ ನಿಲ್ಲಲಿದ್ದು, ಮುಂದಿನ ತಲೆಮಾರುಗಳಿಗೆ ವಿಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ದೊಡ್ಡ ಕನಸುಗಳನ್ನು ಕಾಣಲು ಪ್ರೇರೇಪಿಸಲಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)..

-(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.