ಇರಾನ್–ಇಸ್ರೇಲ್ ಯುದ್ಧ ಪ್ರಾರಂಭವಾಗಿ ತಿಂಗಳು ಕಳೆಯುತ್ತ ಬಂದಿದೆ. ಭೌಗೋಳಿಕವಾಗಿ ಕರ್ನಾಟಕಕ್ಕಿಂತಲೂ ಚಿಕ್ಕದಾಗಿರುವ ಇಸ್ರೇಲ್ ಯುದ್ಧದೈತ್ಯ ಇರಾನ್ ಮೇಲೆ ಅಮೆರಿಕದ ನೆರವಿನೊಂದಿಗೆ ದಾಳಿ ಮಾಡುತ್ತಿದೆ. ಈ ದಾಳಿ ಏಕೆ ನಡೆಯುತ್ತಿದೆ? ಇದರಲ್ಲಿ ಅಮೆರಿಕದ ಪಾತ್ರವೇನು ಎಂಬಿತ್ಯಾದಿ ಪ್ರಶ್ನೆಗಳು ಈಗಲೂ ಹಾಗೇ ಉಳಿದಿವೆ!

ಸುತ್ತಲೂ ವೈರಿಗಳ ಕೋಟೆಯನ್ನು ಕಟ್ಟಿಕೊಂಡಿರುವ ಇರಾನ್ನ ಯುದ್ಧ, ಸಂಘರ್ಷಗಳ ಇತಿಹಾಸ ಸುದೀರ್ಘವಾಗಿದೆ. 1979ರ ಇಸ್ಲಾಮಿಕ್ ಕ್ರಾಂತಿ ಬಳಿಕ ಇರಾನ್ ಮತ್ತು ಅಮೆರಿಕ ನಡುವಣ ಸಂಬಂಧ ಹದಗೆಟ್ಟಿತು. ಮೊನ್ನೆ ಇಸ್ರೇಲ್–ಅಮೆರಿಕ ಒಟ್ಟಾಗಿ ಹತ್ಯೆ ಮಾಡಿದ ಇರಾನ್ನ ಪರಮೋಚ್ಛ ನಾಯಕ ಆಯತೊಲ್ಲಾ ಖೊಮೇನಿ ಅಧಿಕಾರ ಪಡೆದಿದ್ದು ಈ ಕ್ರಾಂತಿಯಲ್ಲಿಯೇ. ಅಲ್ಲಿಂದ ನಂತರ ಅಮೆರಿಕ ಮತ್ತು ಇರಾನ್ ನಡುವಣ ಸಂಘರ್ಷ ಸದಾ ಒಂದಿಲ್ಲೊಂದು ಬಗೆಯಲ್ಲಿ ಚಾಲ್ತಿಯಲ್ಲಿತ್ತು.

1980ರಲ್ಲಿ ಇರಾನ್-ಇರಾಕ್ ಯುದ್ಧ ಪ್ರಾರಂಭವಾಯಿತು. ಇದು ಕೊಲ್ಲಿ ರಾಷ್ಟ್ರಗಳಲ್ಲಿ ನಡೆದ ಸುದೀರ್ಘ ಯುದ್ಧಗಳಲ್ಲೊಂದು. ಈ ಯುದ್ಧದಲ್ಲಿ ಇರಾಕ್ ಅಮೆರಿಕ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲವನ್ನು ಹೊಂದಿತ್ತು. ಇರಾನ್ಗೂ ಚೀನಾ, ಕೊರಿಯಾದಂಥ ರಾಷ್ಟ್ರಗಳ ಬಲವಿತ್ತು. ಪ್ರಾರಂಭದ ದಿನಗಳಲ್ಲಿ ಇಸ್ರೇಲ್ ಇರಾನ್ನ ಪರವಾಗಿ ನಿಂತಿತ್ತು. ಆದರೆ ಅದನ್ನು ಮರೆತ ಇರಾನ್ ಬಳಿಕ ಇಸ್ರೇಲ್ನ ಅಸ್ತಿತ್ವವನ್ನು ವಿರೋಧಿಸಲು ಪ್ರಾರಂಭಿಸಿತು. ಇರಾನ್ ನೇರವಾಗಿ ಹೋರಾಡದೆ, ಹೆಜ್ಬೊಲ್ಲಾ (ಲೆಬನಾನ್), ಹಮಾಸ್ (ಗಾಜಾ), ಮತ್ತು ಹೌತಿ (ಯೆಮೆನ್) ಉಗ್ರರ ಗುಂಪುಗಳ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿತು. ಇದು ರಾಜಕೀಯ, ಧಾರ್ಮಿಕ ಮತ್ತು ಭೌಗೋಳಿಕ ರಾಜಕೀಯ ದ್ವೇಷವಾಗಿದೆ. ಇರಾನ್ ಪರಮಾಣು ಕಾರ್ಯಕ್ರಮ, ಹಮಾಸ್ ಮತ್ತು ಹೆಜ್ಬೊಲ್ಲಾಹ್ದಂಥ ಉಗ್ರಗಾಮಿ ಗುಂಪುಗಳಿಗೆ ಇರಾನ್ನ ಬೆಂಬಲ ಮತ್ತು ಇಸ್ರೇಲ್ನ ಅಸ್ತಿತ್ವಕ್ಕೆ ಬೆದರಿಕೆ ಹಾಕುವ ಇರಾನ್ನ ನಿಲುವಿನಿಂದಾಗಿ ಪ್ರಸ್ತುತದ ಯುದ್ಧ ನಡೆಯುತ್ತಿದೆ.

ಅಮೆರಿಕ ಜತೆಗಿನ ಸಂಘರ್ಷ

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ನಾಶವೇ ನಮ್ಮ ಗುರಿಯೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ಗುಡುಗಿದ್ದಾರೆ. 1953ರಲ್ಲಿ ಅಮೆರಿಕ ಮತ್ತು ಬ್ರಿಟನ್ ಬೆಂಬಲದೊಂದಿಗೆ ಇರಾನ್ನಲ್ಲಿ ಒಂದು ಅಧಿಕಾರ ಪಲ್ಲಟ ನಡೆಯಿತು. ಇರಾನ್ನ ಪ್ರಧಾನಿ ಮೊಹಮ್ಮದ್ ಮೊಸದ್ದೇಘ್ ಅವರು ದೇಶದ ತೈಲ ಉದ್ಯಮವನ್ನು ಬ್ರಿಟಿಷ್ ಕಂಪನಿಯಿಂದ ರಾಷ್ಟ್ರೀಕರಣ ಮಾಡಿದ್ದರು. ಇದರಿಂದ ಬ್ರಿಟನ್ಗೆ ಅತಿದೊಡ್ಡ ನಷ್ಟವಾಯಿತು. ಇದಕ್ಕೆ ಕೆರಳಿದ ಬ್ರಿಟನ್, ಅಮೆರಿಕ ರಹಸ್ಯ ಕಾರ್ಯಾಚರಣೆಯ ಮೂಲಕ ಮೊಹಮ್ಮದ್ ಮೊಸದ್ದೇಘ್ ಅವರನ್ನು ಅಧಿಕಾರದಿಂದ ಕಿತ್ತೆಸೆದವು. ಅವರ ಬದಲಿಗೆ ಅಂದು ಅಧಿಕಾರದ ಗದ್ದುಗೆ ಏರಿದ್ದು ಶಾ ಮೊಹಮ್ಮದ್ ರೆಜಾ ಪಹ್ಲವಿ. ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿದ ರೆಜಾ ಪೆಹ್ಲವಿಯನ್ನು ಕೆಳಗಿಳಿಸಿದ್ದು ಆಯತೊಲ್ಲಾ ಖೊಮೇನಿ. ಆ ದ್ವೇಷ ಇವತ್ತಿನ ತನಕವೂ ಮುಂದುವರಿದುಕೊಂಡು ಬಂದಿದೆ.

ಸಿರಿಯಾ, ಯೆಮನ್, ಲೆಬನಾನ್, ಗಾಜಾ ಯುದ್ಧಗಳಲ್ಲಿ ಪರೋಕ್ಷವಾಗಿ ಭಾಗಿಯಾಗಿರುವ ಇರಾನ್ಗೆ ಸಂಘರ್ಷಗಳು ಹೊಸತಲ್ಲ. ಉಗ್ರ ಗುಂಪುಗಳನ್ನು ಪೋಷಿಸಿಕೊಂಡು ಇರಾಕ್, ಇಸ್ರೇಲ್ ಮೇಲೆ ದಾಳಿ ಮಾಡುತ್ತ ದಿನ ಒಂದಲ್ಲ ಒಂದು ಸಂಘರ್ಷದಲ್ಲಿ ಸಕ್ರಿಯವಾಗಿರುತ್ತದೆ. ಅಮೆರಿಕಕ್ಕೆ ಸೇನಾ ನೆಲೆ ನೀಡಿರುವ ತನ್ನ ನೆರೆಹೊರೆಯ ದೇಶಗಳ ಮೇಲೂ ಇರಾನ್ ಕಿಡಿಕಾರುತ್ತ ಬಂದಿದೆ. ಪಾಕಿಸ್ತಾನದೊಂದಿಗೆ ಗಡಿ ಸಂಘರ್ಷ ಮಾಡಿಕೊಂಡಿತ್ತು. ಅಫ್ಘನ್ ಯುದ್ಧದಲ್ಲಿ ಪಾಲು ಹೊಂದಿತ್ತು. ಇಂಥ ರಾಷ್ಟ್ರದ ಕೈಯ್ಯಲ್ಲಿ ಅಣ್ವಸ್ತ್ರ ಇರುವುದು ಅಪಾಯಕಾರಿ ಎಂಬ ಅಮೆರಿಕದ ವಾದದಲ್ಲಿ ಅರ್ಥವಿದೆ. ಆದರೆ ಇದೇ ಪೂರ್ತಿ ಸತ್ಯವೂ ಅಲ್ಲ. 80ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಹೊಂದಿರುವ ಅಮೆರಿಕದ ಆತಂಕದ ಹಿಂದೆ ವ್ಯಾಪಾರಿ ಉದ್ದೇಶವೂ ಅಡಗಿದೆ. ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಅಮೆರಿಕದ ರಫ್ತು ಪಾಲು ಶೇಕಡ 42ರಷ್ಟಿದೆ. ಶಸ್ತ್ರಾಸ್ತ್ರ ಉತ್ಪಾದನೆ ಅಮೆರಿಕದ ಪ್ರಮುಖ ಆದಾಯದ ಮೂಲವು ಹೌದು. ಹೀಗಾಗಿ ಸಿದ್ಧಪಡಿಸಿದ ಆಯುಧಗಳು ಖರ್ಚಾದಷ್ಟು ಅಮೆರಿಕಕ್ಕೆ ಲಾಭ. ಆ ಉದ್ದೇಶದಿಂದಲೇ ಅಮೆರಿಕ ಎಲ್ಲ ಯುದ್ಧಗಳಲ್ಲಿಯೂ ತನ್ನ ಅಸ್ತಿತ್ವ ಇಟ್ಟುಕೊಳ್ಳಲು ಬಯಸುವುದು.

ರಷ್ಯಾ ವಿರೋಧ

ಊರೆಲ್ಲ ತನ್ನ ನೆಲೆಯೂರಲು ಯತ್ನಿಸುತ್ತಿರುವ ಅಮೆರಿಕ ಕೊಲ್ಲಿ ರಾಷ್ಟ್ರಗಳಲ್ಲಿ ಅಸ್ತಿತ್ವ ಪಡೆಯುವುದು, ತೈಲ ವಹಿವಾಟಿನಲ್ಲಿ ಪ್ರಾಬಲ್ಯ ಸಾಧಿಸುವುದು ರಷ್ಯಾಕ್ಕೆ ಇಷ್ಟವಿಲ್ಲ. ರಷ್ಯಾ–ಉಕ್ರೇನ್ ನಡುವಣ ಯುದ್ಧದಲ್ಲಿ ಅಮೆರಿಕ ಪರೋಕ್ಷವಾಗಿ ಉಕ್ರೇನ್ ಬೆಂಬಲಕ್ಕೆ ನಿಂತಿದೆ. ಹೀಗಾಗಿ ಅಮೆರಿಕದ ವಿರೋಧಿ ಪಾಳಯದಲ್ಲಿ ರಷ್ಯಾ ಮುಂಚೂಣಯಲ್ಲಿರುತ್ತದೆ! ಇರಾನ್ ಮತ್ತು ರಷ್ಯಾ ನಡುವಿನ ಸಂಬಂಧವು ಬಹಳ ಚೆನ್ನಾಗಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾಕ್ಕೆ ಇರಾನ್ ಡ್ರೋನ್ಗಳನ್ನು ಪೂರೈಸುತ್ತಿದೆ. ರಷ್ಯಾದಲ್ಲಿ ಡ್ರೋನ್ ಉತ್ಪಾದನೆಯನ್ನು ಸ್ಥಳೀಕರಿಸಲು ಸಹಾಯ ಮಾಡುತ್ತಿದೆ. ರಷ್ಯಾ ಇರಾನ್ಗೆ ಸುಧಾರಿತ ಯುದ್ಧ ವಿಮಾನಗಳು ಮತ್ತು ಮಿಲಿಟರಿ ತಂತ್ರಜ್ಞಾನವನ್ನು ಒದಗಿಸುತ್ತಿದೆ. ಜತೆಗೆ ಇರಾನ್ನ ತೈಲ ಉದ್ಯಮ ಮತ್ತು ರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತಿದೆ. ಜನವರಿ 2025ರಲ್ಲಿ, ಎರಡೂ ದೇಶಗಳು 20 ವರ್ಷಗಳ ಕಾರ್ಯತಂತ್ರದ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇಷ್ಟಾಗಿಯೂ ರಷ್ಯಾ ಇರಾನ್ ಪರವಾಗಿ ನೇರವಾಗಿ ಅಮೆರಿಕದೊಂದಿಗೆ ಯುದ್ಧಕ್ಕೆ ಇಳಿಯಲು ಸಿದ್ಧವಿಲ್ಲ.

ಇರಾನ್ ಮತ್ತು ಇಸ್ರೇಲ್ ನಡುವೆ ಪ್ರಬಲರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಸೇನಾ ಬಲದಿಂದ, ಭೌಗೋಳಿಕವಾಗಿ ಇರಾನ್ ಪ್ರಬಲವಾಗಿದೆ. ಆದರೆ ಯುದ್ಧತಂತ್ರಜ್ಞಾನ, ಕ್ಷಿಪಣಿಗಳ ವಿಚಾರದಲ್ಲಿ ಇಸ್ರೇಲ್ ಮುಂದಿದೆ. ಜತೆಗೆ ಅಮೆರಿಕದ ಬಲ ಅದಕ್ಕಿದೆ. ಹೀಗಾಗಿ ಯುದ್ಧದ ಭೀಕರತೆ ಇನ್ನಷ್ಟು ಗಾಢವಾಗುವುದಂತೂ ದಿಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.