‘ಗೇ’ಗಳ ಬಗ್ಗೆ ಹಾಗೂ ಅವರ ಲೈಂಗಿಕ ಜೀವನದ ಕುರಿತು ಸಮಾಜದಲ್ಲಿ ಅನೇಕ ಪೂರ್ವಗ್ರಹಗಳಿವೆ. ಗಂಡು–ಹೆಣ್ಣಿನಂತೆಯೇ ‘ಗೇ’ ಆಗಿರುವುದೂ ಒಂದು ಸಹಜ ನೈಸರ್ಗಿಕ ಸ್ಥಿತಿ ಎನ್ನುವುದನ್ನು ಸಮಾಜಕ್ಕೆ ತಿಳಿಸಿಕೊಡುವ ಅಗತ್ಯವಿದೆ.

ನಾನು ಎಲ್ಲೇ ‘ಗೇ’ ಬದುಕಿನ ಬಗ್ಗೆ ಬರೆಯಲಿ ಅಥವಾ ಮಾತಾಡಲಿ, ಸಮಾಜದ ಬಹುತೇಕರು ‘ಗೇ ಗಳು ಅವರ ಪಾಡಿಗೆ ಅವರಿದ್ದರೆ ಯಾರಿಗೂ ತೊಂದರೆಯಿಲ್ಲ. ಆದರೆ, ಒಳ್ಳೆಯ ಹುಡುಗರನ್ನೂ ಆ ದುಶ್ಚಟಕ್ಕೆ ಹಚ್ಚಿ ಹಾಳು ಮಾಡುತ್ತಾರೆ. ಅದನ್ನು ನಾವು ವಿರೋಧಿಸುತ್ತೇವೆ’ ಎಂದು ಹೇಳುತ್ತಾರೆ. ಇದೊಂದು ರೀತಿ ‘ಗೇ’ತನವನ್ನು ನೇರವಾಗಿ ವಿರೋಧಿಸದೆ ತಾವು ಆಧುನಿಕರೆಂದು ತೋರಿಸಿಕೊಳ್ಳುತ್ತಾ, ‘ಆದರೆ...’ ಎಂಬ ಕೊಸರನ್ನು ವ್ಯಕ್ತಪಡಿಸುವ ಕ್ರಮ. ಜಾತ್ಯತೀತ ವಿವಾಹವನ್ನು ಸಮರ್ಥಿಸುತ್ತಾ, ‘ಆದರೆ... ಆಹಾರ ಆಚಾರ ವಿಚಾರಗಳು ವ್ಯತ್ಯಾಸವಾಗಿ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಕೆಲವರು ಕೊಸರನ್ನು ಹಾಕುತ್ತಾರಲ್ಲಾ, ಹಾಗೆ. ಈ ಲೇಖನದಲ್ಲಿ ‘ಗೇ’ತನವೆನ್ನುವುದು ಯಾಕೆ ದುಶ್ಚಟವಲ್ಲ ಎಂದು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ನನಗೆ ಅನುಭವಜನ್ಯವಾದ ಗೇ ಜಗತ್ತನ್ನು ಕುರಿತು ಇಲ್ಲಿ ಮಾತಾಡಿದ್ದರೂ, ಈ ಲೇಖನವನ್ನು ಎಲ್ಲಾ ಕ್ವೀರ್ ಸಮುದಾಯಕ್ಕೂ ಅನ್ವಯಿಸಿ ಓದಿಕೊಳ್ಳಬಹುದು.

ಮೊದಲಿಗೆ ಚಟವೆಂದರೇನು ಎಂದು ತಿಳಿಯೋಣ. ಒಂದೇ ಕೆಲಸವನ್ನು ಅನವಶ್ಯಕವಾಗಿ ಮತ್ತೆ ಮತ್ತೆ ಮಾಡುತ್ತಿದ್ದರೆ ಆ ಗೀಳು ಚಟವೆಂದು ಕರೆಯಲ್ಪಡುತ್ತದೆ. ಈ ಚಟ ಸಾತ್ವಿಕವೂ ಆಗಿರ
ಬಹುದು, ತಾಮಸವೂ ಆಗಿರಬಹುದು. ತಾಮಸ ಚಟಕ್ಕೆ ‘ದುಶ್ಚಟ’ ಎಂಬ ಪದವನ್ನು ಬಳಸುತ್ತೇವೆ.

ಸಾತ್ವಿಕ ಚಟದಿಂದ ಅಂತಹ ಸಮಸ್ಯೆಗಳೇನೂ ಇರುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಮತ್ತೆ ಮತ್ತೆ ತಮ್ಮ ಒಟ್ಟು ಆಸ್ತಿಯನ್ನು ಲೆಕ್ಕ ಹಾಕಿಕೊಳ್ಳುವ ಚಟವಿರುತ್ತದೆ. ಇನ್ನೂ ಕೆಲವರು ಕೈಗಳನ್ನು ಮತ್ತೆ ಮತ್ತೆ ತೊಳೆದುಕೊಳ್ಳುತ್ತಾರೆ. ಇತ್ತೀಚೆಗೆ ಮೊಬೈಲ್ ನೋಡುವ ವ್ಯಸನವೂ ಕಾಣುತ್ತಿದೆ. ಇಂತಹ ಚಟಗಳು ತುಸು ಮಾನಸಿಕ ಒತ್ತಡವನ್ನು ಹೇರಿದರೂ, ದೈಹಿಕವಾಗಿ ತೊಂದರೆ ಮಾಡುವುದಿಲ್ಲ. ಆದ್ದರಿಂದ ಇವೆಲ್ಲ ಸಾತ್ವಿಕ ಚಟಗಳು.

ತಾಮಸ ಚಟಕ್ಕೆ ಬಲಿಯಾದ ವ್ಯಕ್ತಿ ದೈಹಿಕವಾಗಿಯೂ, ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ತೊಂದರೆ ಅನುಭವಿಸುತ್ತಾನೆ ಮತ್ತು ತನ್ನನ್ನು ನಂಬಿಕೊಂಡವರಿಗೆ ತೊಂದರೆ ಕೊಡುತ್ತಾನೆ. ಉದಾಹರಣೆಗೆ, ಗುಟ್ಕಾ ಸೇವನೆ, ಹಲವು ನಶೆಗಳ ಬಳಕೆ, ಧೂಮಪಾನ, ಮದ್ಯಪಾನ, ಜುಗಾರಿ, ಇತ್ಯಾದಿಗಳು. ಸಮಾಜವು ಇಂತಹವನ್ನು ‘ದುಶ್ಚಟ’ಗಳೆಂದು ಕರೆಯುತ್ತದೆ. ಅಂದರೆ ಯಾರೋ ಯಾರಿಗೋ ಕಲಿಸಿಕೊಟ್ಟ ನಂತರ ತಲೆದೋರುವ ವಿನಾಶಕಾರಿ ಚಟಗಳಿವು. ಅವುಗಳಿಂದ ಹೊರಬರುವುದು ಕಷ್ಟ. ಸಮಾಜದ ಬಹುತೇಕರು ‘ಗೇ’ ಸ್ವಭಾವವು ಇಂತಹ ದುಶ್ಚಟಕ್ಕೆ ಸೇರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಗೇ’ತನದ ಕಲ್ಪನೆಯೇ ಇಲ್ಲದ ಅಮಾಯಕ ಹುಡುಗನೊಬ್ಬನಿಗೆ ಯಾರೋ ಮತ್ತೊಬ್ಬ ಗೇ ಅದರ ‘ರುಚಿ ಹತ್ತಿಸಿ ಬಿಡುತ್ತಾನೆ’. ಆಗಿನಿಂದ ಈ ‘ಅಮಾಯಕ’ ಹುಡುಗ ಗೇ ಬದುಕನ್ನು ಜೀವಿಸತೊಡಗುತ್ತಾನೆ. ಸಾಯುವ ತನಕವೂ ಅದು ಮುಂದುವರಿಯುತ್ತದೆ. ಇದರಲ್ಲಿ ಅವನದೇನೂ ತಪ್ಪಿರುವುದಿಲ್ಲ. ಗೇ ಗಳು ಡ್ರಾಕುಲಾ ಇದ್ದಂತೆ. ಒಂದು ಡ್ರಾಕುಲಾ ಮತ್ತೊಬ್ಬ ಸಾಮಾನ್ಯ ವ್ಯಕ್ತಿಗೆ ಹಲ್ಲೂರಿಸಿ ರಕ್ತ ಹೀರಿದರೆ ತೀರಿತು, ಅವನೂ ಡ್ರಾಕುಲಾ ಆಗಿ ಬಿಡುತ್ತಾನಲ್ಲ, ಅಂತಹದು ಎಂದು ಅವರ ಕಲ್ಪನೆ.

ದುಶ್ಚಟಗಳಿಗೆ ಮನುಷ್ಯ ಯಾಕೆ ಬಲಿಯಾಗುತ್ತಾನೆ ಎಂದು ಯೋಚಿಸಿ. ಯಾವುದು ಸದ್ಯದ ವಾಸ್ತವದ ಸಂಗತಿಗಿಂತಲೂ ಹೆಚ್ಚಿನ ಸಂತೋಷವನ್ನೂ, ಕಾಲ್ಪನಿಕ ನಶೆಯನ್ನು ನೀಡುತ್ತದೋ ಅಂತಹವುಗಳಿಗೆ ತನ್ನ ದುರ್ಬಲ ಗಳಿಗೆಗಳಲ್ಲಿ ಮನುಷ್ಯ ಬಲಿಯಾಗುತ್ತಾನೆ. ಮದ್ಯಪಾನ ಮಾಡಿದಾಗ ಅದರ ನಶೆ ಇಳಿಯುವವರೆಗೆ ವ್ಯಕ್ತಿಯು ವಾಸ್ತವದ ಸಮಸ್ಯೆಗಳಿಂದ ಮುಕ್ತವಾಗುತ್ತಾನೆ. ಈ ನಶೆ ಎನ್ನುವುದು ಮನೆಯಲ್ಲಿ ಶ್ಯಾವಿಗೆ ಪಾಯಸ ಕುಡಿದರೆ ಸಿಗುವುದಿಲ್ಲವಾದ್ದರಿಂದ ಹೊರಗೆ ಹುಡುಕುತ್ತಾನೆ. ಇದೇ ರೀತಿ ಜುಗಾರಿಯ ಚಟವೂ ಅವನ ಸ್ಪರ್ಧಾಮನೋಭಾವವನ್ನು ಸಂತೃಪ್ತಿ ಪಡಿಸುವ, ಸುಲಭವಾಗಿ ಹಣ ಸಂಪಾದಿಸಬೇಕೆಂಬ ಹಂಬಲವನ್ನು ಪೂರೈಸುತ್ತದೆ. ವಾಸ್ತವ ಬದುಕಿನಲ್ಲಿ ಅಂತಹುದು ಅವನಿಗೆ ಕಷ್ಟ.

ಆದರೆ, ಗೇ ಕೂಡುವಿಕೆಯಿಂದ ಇಂತಹ ಯಾವುದೇ ಲಾಭ ‘ಗೇ’ ಅಲ್ಲದ ಹುಡುಗನಿಗೆ ದಕ್ಕುವುದಿಲ್ಲ. ಗೇ ಹುಡುಗನಿಗೆ ಮನೆಯಲ್ಲಿ ಮದುವೆ ಮಾಡಿಕೊಡಲು ಪ್ರಯತ್ನಗಳು ನಡೆಯುತ್ತವೆ. ಹೆಣ್ಣಿನೊಡನೆ ಕೂಡುವುದರಲ್ಲೇ ದೊಡ್ಡ ಆನಂದ ಸಿಗುವುದಾದರೆ ಅವನು ಗಂಡಿನ ಬಳಿಗೆ ಯಾಕೆ ಹೋಗುತ್ತಾನೆ? ಯಾರೋ ಅವನಿಗೆ ಗಂಡಿನ ಸಹವಾಸ (‘ದುಶ್ಚಟ’) ಕಲಿಸಿದ್ದರೆಂದರೂ, ಜೀವಮಾನವಿಡೀ ಅವನು ಗಂಡಿಗಾಗಿ ಏಕೆ ಹಂಬಲಿಸುತ್ತಾನೆ? ಮನೆಯಲ್ಲಿಯೇ ನಶೆ ಸಿಗುವುದಾದರೆ ಪಬ್ಗೆ ಹೋಗಿ ಯಾರಾದರೂ ಕುಡಿಯುತ್ತಾರೆ ಯಾಕೆ? ಎಷ್ಟೋ ಮದುವೆಯಾದ ಗಂಡಸರು ಗೇ ಹುಡುಗರನ್ನು ಕೂಡಲು ಅರಸಿ ಒದ್ದಾಡುತ್ತಾರೆ. ಹಾಗಂತ ಗಂಡಿನೊಡನೆ ಕೂಡುವ ಸುಖವು ಹೆಣ್ಣಿನೊಡನೆ ಕೂಡುವ ಸುಖಕ್ಕಿಂತಾ ಹೆಚ್ಚು ಎಂದರೆ ಅದೂ ತಪ್ಪಾಗುತ್ತದೆ. ಅದೇ ಸತ್ಯವಾಗಿದ್ದರೆ ಜಗತ್ತಿನ ಗಂಡಸರೆಲ್ಲಾ ‘ಗೇ’ಗಳಾಗಲು ಹಾತೊರೆಯುತ್ತಿದ್ದರು. ಇದು ಅವರವರ ಸ್ವಭಾವ. ಹುಟ್ಟಿನಿಂದ ಬರುವ ಗುಣ.

ಸಲಿಂಗರತಿಯಿಂದ ದೇಹಾರೋಗ್ಯ ಕೆಡುತ್ತದೆಯೆ ಅಥವಾ ಆರ್ಥಿಕ ತೊಂದರೆ ಅನುಭವಿಸುತ್ತಾನೆಯೆ ಎಂದು ನೋಡಿದರೆ ಅದೂ ಇಲ್ಲ. ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿದರೆ, ಹೆಣ್ಣಾಗಲಿ ಅಥವಾ ಗಂಡಾಗಲಿ, ಗುಪ್ತರೋಗಗಳು ಬರುತ್ತವೆ. ಅದಕ್ಕೆ ನಾವು ಗೇ ಬದುಕನ್ನು ಆರೋಪಿಸುವಂತಿಲ್ಲ. ಎಷ್ಟೋ ಬಾರಿ ಕೂಡುವಿಕೆಯಾದ ನಂತರ ಗೇ ಹುಡುಗರು ಸಂತೋಷದಿಂದ ಹಾಡುವುದನ್ನು ಗಮನಿಸಿದ್ದೇನೆ. ಅಂದರೆ ಮಾನಸಿಕವಾಗಿಯೂ ಕೂಡುವಿಕೆ ಅವರಿಗೆ ಚೇತೋಹಾರಿಯಾದದ್ದೇ ಆಗಿದೆ. ಆರ್ಥಿಕ ಹೊರೆಯಂತೂ ಇಲ್ಲವೇ ಅಲ್ಲ. ತನ್ನಂತೆಯೇ ಗಂಡನ್ನು ಕೂಡುವ ಅಭಿರುಚಿ ಹೊಂದಿರುವ ಸಾವಿರಾರು ಜನರು ನಮ್ಮ ಸುತ್ತಮುತ್ತಲೇ ಇರುತ್ತಾರೆ. ಈ ಡಿಜಿಟಲ್ ಯುಗದಲ್ಲಿ ಅವರನ್ನು ಹುಡುಕುವುದೂ ಕಷ್ಟವಲ್ಲ. ತಮ್ಮ ಬಯಕೆ ತೀರಿಸಿಕೊಳ್ಳಲು ಅವರು ಹಣ ಕೊಡುವ ಅವಶ್ಯಕತೆ ಬರುವುದಿಲ್ಲ.

ಯಾವುದೇ ರೀತಿಯಿಂದ ನೋಡಿದರೂ ಗೇ ಎನ್ನುವುದು ಒಂದು ಸ್ವಭಾವವೇ ಹೊರತು ದುಶ್ಚಟವಲ್ಲ. ವ್ಯಕ್ತಿಯೊಬ್ಬನಿಗೆ ಬಲವಂತದಿಂದ ಲೈಂಗಿಕ ಆಸಕ್ತಿಯನ್ನು ರೂಢಿಸುವುದಾದರೂ ಹೇಗೆ? ಅದು ಅಷ್ಟು ಸುಲಭವಾಗಿದ್ದರೆ ಗೇ ವ್ಯಕ್ತಿಗೆ ಹೆಣ್ಣುಗಳ ರುಚಿ ತೋರಿಸಿ ಸಂಪೂರ್ಣವಾಗಿ ‘ಸ್ಟ್ರೇಟ್’ ಮಾಡಬಹುದಿತ್ತಲ್ಲವೆ? ಇಡೀ ಸಮಾಜದ ಕಡೆಗಣ್ಣಿಗೆ ಗುರಿಯಾಗಿ ಯಾರಿಗಾದರೂ ಗೇ ಬದುಕು ಬದುಕುವ ಅವಶ್ಯಕತೆಯಾದರೂ ಏನಿರುತ್ತದೆ? ಅವಕಾಶ ಸಿಕ್ಕರೆ ಸಾಕು ‘ಗೇ’ತನದಿಂದ ಹೊರಬಂದು ಸಮಾಜದ ರೂಢಿಯಂತೆ ಮದುವೆ, ಮಕ್ಕಳು ಮಾಡಿಕೊಂಡು ಅವನೂ ಸುಖವಾಗಿ ಇರಲು ಬಯಸುವುದಿಲ್ಲವೆ? ಅದು ಸಾಧ್ಯವಿಲ್ಲವೆಂಬ ಕಾರಣಕ್ಕೇ ‘ಗೇ’ಗಳ ಕುರಿತು ಸಮಾಜಕ್ಕೆ ತಿಳಿಸಿಕೊಡುವುದು ಅಗತ್ಯವಿದೆ.

ಅನಿವಾರ್ಯದ ಮೈಥುನ ಕತೆಗಳು ಬೇರೆ. ಉದಾಹರಣೆಗೆ ಸೈನ್ಯದಲ್ಲೋ, ಜೈಲಿನಲ್ಲೋ ಬರೀ ಗಂಡಸರೇ ಇದ್ದು ಹೆಣ್ಣಿನ ಸಂಪರ್ಕವೇ ಇಲ್ಲದಿದ್ದಾಗ ಅವರು ಅಂತಿಮ ಆಯ್ಕೆಯಾಗಿ ತಮ್ಮ ಕಾಮತೃಷೆಯನ್ನು ಗಂಡಿನ ಜೊತೆ ತೀರಿಸಿಕೊಂಡಿರುವ ಸಾಧ್ಯತೆ ಇರುತ್ತದೆ. ಆದರೆ, ಒಮ್ಮೆ ಅಲ್ಲಿಂದ ಹೊರಬಂದು ಅವನ ಆಯ್ಕೆಯ ಹೆಣ್ಣುಗಳು ಸಿಕ್ಕಾಗ ಅವನು ಅಪ್ಪಿತಪ್ಪಿಯೂ ಗಂಡಿನ ಕಡೆ ನೋಡಲಾರ. ಇದೇ ರೀತಿ ಗೇ ಹುಡುಗನೊಬ್ಬನನ್ನು ಬರೀ ಹೆಂಗಸರೇ ಇರುವ ಪರಿಸರದಲ್ಲಿ ಇಟ್ಟುಬಿಟ್ಟರೆ ಅವನೂ ಬೇರೆ ದಾರಿಯಿಲ್ಲದೆ ಹೆಣ್ಣನ್ನು ಕೂಡಬಹುದೇನೋ? ಆದರೆ, ಒಮ್ಮೆ ಗಂಡಿನ ಸಂಪರ್ಕ ಸಿಕ್ಕ ತಕ್ಷಣ ಅವನು ಹೆಣ್ಣಿನ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಕೆಲವೊಬ್ಬ ಗಂಡಸರಿಗೆ ಹೆಣ್ಣು ಮತ್ತು ಗಂಡು, ಇಬ್ಬರ ಮೇಲೂ ಸಮಾನ ದೈಹಿಕ ಆಸಕ್ತಿ ಇರುತ್ತದೆ. ಎರಡನ್ನೂ ಅವರು ಬಯಸುತ್ತಿರುತ್ತಾರೆ. ಆದರೆ, ಸಮಾಜವನ್ನು ಎದುರಿಸುವ ಧೈರ್ಯವಿಲ್ಲದೆ ಗಂಡಿನ ಮೇಲಿರುವ ಬಯಕೆಯನ್ನು ಹತ್ತಿಕ್ಕಿಕೊಂಡು ಜೀವನವಿಡೀ ಹೆಣ್ಣಿನೊಡನೆ ಬದುಕುತ್ತಾರೆ. ಟ್ಯಾಬೂ ಸಂಸ್ಕೃತಿಯಲ್ಲಿ ಬದುಕುವುದಕ್ಕೆ ವ್ಯಕ್ತಿಗೆ ಸಾಕಷ್ಟು ಧೈರ್ಯ ಇರಬೇಕಾಗುತ್ತದೆ.

ಮತ್ತೆ ಕೆಲವರು ಗೇ ಬದುಕು ಅನೈಸರ್ಗಿಕ ಎನ್ನುವ ವಾದ ಹಿಡಿದು ಬರುತ್ತಾರೆ. ನಾವು ಸುಮ್ಮನೆ ಗೂಗಲ್ ಮಾಡಿದರೆ ತಿಳಿಯುವ ಸಂಗತಿಯೇನೆಂದರೆ, ಜಗತ್ತಿನಲ್ಲಿ 1,500ಕ್ಕೂ ಹೆಚ್ಚು ಪ್ರಾಣಿ–ಪಕ್ಷಿ ಪ್ರಭೇದದಲ್ಲಿ ವಿಜ್ಞಾನಿಗಳು ಸಲಿಂಗರತಿಯನ್ನು ಗುರ್ತಿಸಿದ್ದಾರೆ. ಈ ವಿಷಯ ಅವರಿಗೆ ಸ್ಪಷ್ಟಪಡಿಸಿದೊಡನೆ ‘ಗಂಡು–ಹೆಣ್ಣು ಕೂಡುವ ಮುಖ್ಯ ಉದ್ದೇಶ ಸಂತಾನೋತ್ಪತ್ತಿ’ ಎಂದು ಮುಂದುವರಿಯುತ್ತಾರೆ. ಅದನ್ನೂ ಚರ್ಚಿಸೋಣ. ಸಂತಾನವಾಗಲು ಪ್ರಾಪ್ತ ಗಂಡು–ಹೆಣ್ಣುಗಳು ಸರಿಯಾದ ಸಮಯದಲ್ಲಿ ಕೂಡಿದರೆ ಗರ್ಭ ನಿಂತು ಮಗುವಾಗುತ್ತದೆ. ಅಂದರೆ, ಒಂದೆರಡು ಕೂಡುವಿಕೆಯಿಂದ ಕೂಡುವಿಕೆಯ ಉದ್ದೇಶ ಪೂರ್ಣಗೊಳ್ಳುತ್ತದೆ. ಹಾಗಿದ್ದರೆ ಸಾಯುವ ತನಕ ತನ್ನ ಸಂಗಾತಿಯೊಡನೆ ಕೂಡಲು ಮನುಷ್ಯ ಏಕೆ ಹಾತೊರೆಯುತ್ತಾನೆ? ಇದಕ್ಕೆ ಉತ್ತರ ಸ್ಪಷ್ಟವಾಗಿದೆ. ಕೂಡುವಿಕೆಯ (ನಾಗರಿಕ ರೀತಿಯಲ್ಲಿ ‘ಮದುವೆ’) ಮುಖ್ಯ ಉದ್ದೇಶ ದೈಹಿಕ ಸುಖವನ್ನು ಹೊಂದುವ ಬಯಕೆಯಾಗಿದೆ. ತಿನ್ನುವುದಕ್ಕೆ, ನಿದ್ರಿಸುವುದಕ್ಕೆ ಮನುಷ್ಯ ಹೇಗೆ ಒದ್ದಾಡುತ್ತಾನೋ ಅಂತಹದೇ ತೀವ್ರತೆಯಲ್ಲಿ ಕೂಡುವಿಕೆಗೂ ಹಂಬಲಿಸುತ್ತಾನೆ. ಈ ಕೂಡುವಿಕೆಗೆ ಸಂತಾನ ಎನ್ನುವ ಒಂದು ಸುಂದರ ಉಪ ಉತ್ಪನ್ನವಿದ್ದರೂ, ಸಂತಾನವೇ ಕೂಡುವಿಕೆಯ ಮುಖ್ಯ ಗುರಿಯಲ್ಲ ಎಂಬುದು ನಮ್ಮ ಅರಿವಿನಲ್ಲಿರಬೇಕು.

ಇನ್ನು ಕೊನೆಯ ಅಸ್ತ್ರವಾಗಿ ‘ಗೇ’ಗಳು ಚಿಕ್ಕ ಹುಡುಗರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಾರೆ ಎನ್ನುವ ಆಪಾದನೆ. ಇದು ಸುಳ್ಳಲ್ಲ. ಕೆಲವೊಬ್ಬರು ಹಿರಿಯರು ಎಳೆಯ ಪ್ರಾಯದ ಹುಡುಗರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡ ಉದಾಹರಣೆಗಳಿವೆ. ಇದು ವಿಕೃತಿ ಮತ್ತು ಅಕ್ಷಮ್ಯ ಅಪರಾಧ. ಅಂತಹವುಗಳನ್ನು ಪೊಲೀಸ್ ಇಲಾಖೆಗೆ ರಿಪೋರ್ಟ್ ಮಾಡಬೇಕು. ಆದರೆ, ಇಂತಹ ವಿಕೃತಿಗಳು ಎಲ್ಲಾ ಸಮುದಾಯದಲ್ಲೂ ಇರುತ್ತವಲ್ಲವೆ? ದಿನನಿತ್ಯ ವೃತ್ತಪತ್ರಿಕೆಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲೆಯರನ್ನು ಗಂಡಸರು ಅತ್ಯಾಚಾರ ಮಾಡಿದ, ಮಗಳನ್ನೇ ಅಪ್ಪನೊಬ್ಬ ತನ್ನ ಖೆಡ್ಡಾಕ್ಕೆ ಕೆಡವಿಕೊಂಡ ವರದಿಗಳು ಬರುತ್ತಲೇ ಇರುತ್ತವೆ. ಹಾಗಂತ ಎಲ್ಲಾ ಗಂಡಸರೂ ಬಾಲಕಾಮುಕರು ಎಂದು ಹೇಳಲು ಸಾಧ್ಯವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.