‘ಸೈಕ್ಲಿಂಗ್ ಕಾಶಿ’ ಎಂದು ಪ್ರಸಿದ್ಧವಾದ ‘ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿದ ‘ಸೈಕ್ಲಿಂಗ್’ ಬೆಳವಣಿಗೆಗೆ ಅರ್ಧ ಶತಮಾನದ ಇತಿಹಾಸವಿದೆ. ಈ ಜಿಲ್ಲೆಗಳ ಬಡ ಕುಟುಂಬಗಳ ಯುವಜನರು ಸೈಕ್ಲಿಂಗ್ ಮೂಲಕವೇ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ; ಕೆಲವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿರುವುದೂ ಇದೆ.