ತಂತ್ರಜ್ಞಾನ ಎನ್ನುವುದು ಬರೀ ಯಂತ್ರಗಳ ಆವಿಷ್ಕಾರವೆ ಅಥವಾ ಅದು ಮಾನವ ಸಂವೇದನೆಗಳ ವಿಸ್ತರಣೆಯೆ? ಅತಿ ವೇಗದಲ್ಲಿ ದಾಂಗುಡಿಯಿಡುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ
ಗಳು ಮನುಷ್ಯತ್ವವನ್ನೇ ಮರೆಸುತ್ತಿವೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪ್ರಶ್ನೆಯಿದು.

‘ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗಾಗಿ ತುಡಿಯುವ ಜವಾಬ್ದಾರಿಯತ ನಾವೀನ್ಯತೆ ಬೇಕು’
ಎಂಬ ಧ್ಯೇಯದ ಮೂಲಕ ತಾಂತ್ರಿಕ ಕ್ರಾಂತಿಯ ಮುಖಗಳನ್ನು ವಿಶ್ಲೇಷಿಸುವ ಪ್ರಯತ್ನ ಈಗ ಆಗಬೇಕಿದೆ. ಐದನೇ ಕೈಗಾರಿಕಾ ಕ್ರಾಂತಿಯ ಹಿಂಬೆಳಕಿನಲ್ಲಿ ನಮ್ಮ ನೆಲಮೂಲದ ಜ್ಞಾನ–ತಿಳಿವಳಿಕೆಗಳು ನಮ್ಮನ್ನು ಹೇಗೆಲ್ಲ ಉದ್ಧರಿಸಬಲ್ಲವು ಎಂಬುದನ್ನು ಯೋಚಿಸಿ ಯೋಜಿಸಬೇಕಿದೆ. ಇದು ಬರೀ ಸಾಧನೆಗಳ ಪ್ರದರ್ಶನವಾಗದೆ, ತಂತ್ರಜ್ಞಾನದ ಸರಿ–ತಪ್ಪುಗಳ ಪರಾಮರ್ಶೆಯೂ ಆಗಬೇಕು.

ಐದನೇ ಕೈಗಾರಿಕಾ ಕ್ರಾಂತಿಯು (ಇಂಡಸ್ಟ್ರಿ 5.0) ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಿಂದ ಮುಂದುವರಿದು, ಮಾನವ ಮತ್ತು ರೊಬೋಟ್ ನಡುವೆ ಸಹಯೋಗ ಬೇಕು ಮತ್ತು ಅದುವೇ ಜಗತ್ತಿಗೆ ಒಳ್ಳೆಯದು ಎಂದು ನಿರೂಪಿಸುತ್ತಿದೆ. ಸ್ಮಾರ್ಟ್ ಫ್ಯಾಕ್ಟರಿ ಮತ್ತು ಅತಿಯಾದ ಸಂಪರ್ಕದ ಮೇಲೆ ಕೇಂದ್ರೀಕರಿಸಿದ್ದ ಕಳೆದ ಕೈಗಾರಿಕಾ ಕ್ರಾಂತಿ (ಇಂಡಸ್ಟ್ರಿ 4.0)ಗಿಂತ ಭಿನ್ನವಾಗಿರುವ ಮತ್ತು ಮಾನವನ ಸೃಜನಶೀಲತೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಬೇಕೆಂದು ಪ್ರತಿಪಾದಿಸುವ ಇಂಡಸ್ಟ್ರಿ 5.0 ಕಾರ್ಮಿಕರನ್ನು ಉತ್ಪಾದನಾ ಪ್ರಕ್ರಿಯೆಯ ಕೇಂದ್ರಬಿಂದುವನ್ನಾಗಿ ಮಾಡುವ ಪ್ರಯತ್ನದಲ್ಲಿದೆ.

ಆರೋಗ್ಯ ಕ್ಷೇತ್ರದಲ್ಲಿ ಎಐ ಆಧಾರಿತ ರೋಗನಿರ್ಣಯವು ವೈದ್ಯರಿಗೆ ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ನೀಡುತ್ತಿರುವುದು ಮತ್ತು ಉತ್ಪಾದನಾ ವಲಯದಲ್ಲಿ ಪುನರಾವರ್ತಿತ ಹಾಗೂ ಅಪಾಯಕಾರಿ ಕೆಲಸಗಳನ್ನು ‘ಕೋಬೋಟ್ಸ್’ಗಳು ನಿರ್ವಹಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಕ್ರಾಂತಿಯು ಸೇವೆಗಳನ್ನು ದೇಶದ ಮೂಲೆ ಮೂಲೆಗೂ ತಲಪಿಸಬಹುದೆಂಬ ನಿರೀಕ್ಷೆಯಿದೆ.

ಪ್ರತಿಯೊಂದು ಕ್ರಾಂತಿಯೂ ತನ್ನದೇ ಆದಸವಾಲುಗಳನ್ನು ಒಡಲಲ್ಲಿಟ್ಟುಕೊಂಡೇ ಜನಿಸಿರುತ್ತದೆ.
ಅದು ತ್ವರಿತ ಬದಲಾವಣೆಯ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಬಾರದು. ಬದಲಾವಣೆಯ ವೇಗವು ಅತಿಯಾದಷ್ಟೂ ಅಸಮಾನತೆ ಹೆಚ್ಚಾಗುತ್ತದೆ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳಲು ಸಂಪನ್ಮೂಲಗಳಿಲ್ಲದ ಸಮುದಾಯಗಳನ್ನು ನಿರ್ದಾಕ್ಷಿಣ್ಯವಾಗಿ ಹಿಂದೆ ತಳ್ಳಿಬಿಡುತ್ತದೆ. ಸದ್ಯದ ಇಂಡಸ್ಟ್ರಿ 5.0 ಸಿದ್ಧಾಂತವು ಮಾನವ ಕೇಂದ್ರಿತವಾಗಿದ್ದರೂ, ದತ್ತಾಂಶ ಗೋಪ್ಯತೆ ಮತ್ತು ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಗೆ ಸಂಬಂಧಿಸಿದಂತೆ ದೊಡ್ಡ ಸವಾಲುಗಳನ್ನು ಒಡ್ಡುತ್ತಲೇ ಇದೆ. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯು ಸಾಂಪ್ರದಾಯಿಕ ಕರಕೌಶಲಗಳನ್ನು ನಾಶ ಮಾಡಬಹುದು ಮತ್ತು ವಿಮರ್ಶಾತ್ಮಕ ಚಿಂತನೆಯಿಲ್ಲದ ಸಮಾಜವನ್ನು ರೂಪಿಸಿ ಸಾಮಾಜಿಕ ವೈಫಲ್ಯಗಳಿಗೆ ಕಾರಣವಾಗಬಹುದು. ಎಲ್ಲವನ್ನೂ ಹಣ–ವಿದೇಶಿ ವಿನಿಮಯ ದರದ ದೃಷ್ಟಿಯಲ್ಲಿ ನೋಡುವವರಿಗೆ ಇದು ಅರ್ಥವಾಗುವುದಿಲ್ಲ.

ಇ–ತ್ಯಾಜ್ಯದಿಂದ ಹಿಡಿದು ದತ್ತಾಂಶ ಕೇಂದ್ರಗಳ ಅತಿಯಾದ ಇಂಧನ–ನೀರಿನ ಬಳಕೆಯವರೆಗೆ ಈ ಹೈಪರ್ ಕನೆಕ್ಟೆಡ್ ಜಗತ್ತನ್ನು ನಿರ್ವಹಿಸಲು ಆಗುತ್ತಿರುವ ಪರಿಸರ ನಾಶವು ಸುಸ್ಥಿರತೆಯ ಹಾದಿಗೆ ದೊಡ್ಡ ಅಡ್ಡಿಯಾಗುತ್ತಿದೆ. ಇದು ತಿಳಿದಿದ್ದರೂ ಅದನ್ನು ನಿರ್ಲಕ್ಷಿಸಿ ನಡೆಯುತ್ತಿರುವ ಸರ್ಕಾರಿ ಯೋಜನೆಗಳು ಯಾರ ಒಳಿತಿಗಾಗಿ? ನೀರು, ವಿದ್ಯುತ್ತನ್ನು ಆಪೋಶನ ತೆಗೆದುಕೊಳ್ಳುವ ದತ್ತಾಂಶ ಕೇಂದ್ರಗಳು ಯಾರಿಗಾಗಿ? ಬೆಟ್ಟಗಳಲ್ಲಿ ಸುರಂಗ ಕೊರೆಯುವ ಅತ್ಯುನ್ನತ ತಂತ್ರಜ್ಞಾನ ಲಭ್ಯವಿದೆ ಎಂಬ ಕಾರಣಕ್ಕೆ ನಿಸರ್ಗದತ್ತ ಮಳೆಕಾಡಿನ ಘಟ್ಟಪ್ರದೇಶವನ್ನು ಕೊರೆಯಲು ಸಿದ್ಧವಾಗಿರುವುದು ಯಾವ ಸಾಧನೆಗಾಗಿ? ಯಂತ್ರಬಲವಿದೆ ಎಂದು ನದಿಗಳ ದಿಕ್ಕನ್ನೇ ತಿರುಗಿಸುವುದು ಸರಿಯೆ?

ಇದುವರೆಗಿನ ಬಹುಪಾಲು ತಾಂತ್ರಿಕ ಸಾಧನೆಗಳು ಮಾನವಕುಲಕ್ಕೆ ಅಭಿವೃದ್ಧಿಯ ಅಭೂತಪೂರ್ವ ಸಾಧನಗಳನ್ನು ನಿಸ್ಸಂದೇಹವಾಗಿ ನೀಡಿವೆ. ಅವುಗಳಿಂದ ಅನುಕೂಲಗಳಾಗಿವೆ ಎನ್ನುವುದು ಎಷ್ಟು ನಿಜವೋ, ಅನಪೇಕ್ಷಿತ ಪರಿಣಾಮಗಳೂ ಭೂಮಿಯನ್ನು ಬಾಧಿಸುತ್ತಿವೆ ಎನ್ನುವುದೂ ಅಷ್ಟೇ ಸತ್ಯ. ಯಾವುದೇ ಹೊಸ ಉತ್ಪನ್ನದ ಬಳಕೆ ಮತ್ತು ವಿಲೇವಾರಿಗಳು ಸಾಮಾಜಿಕ ಸ್ಥಿರತೆ ಮತ್ತು ಪರಿಸರದ ಆರೋಗ್ಯವನ್ನು ಹದಗೆಡಿಸಬಾರದು. ತಂತ್ರಜ್ಞಾನಕ್ಕೆ ‘ಮಾನವಸ್ಪರ್ಶ’ ಎನ್ನುವುದು ಬರೀ ಕಾರ್ಪೊರೇಟ್ ಘೋಷವಾಕ್ಯವಾಗದೆ, ನಾವೀನ್ಯತೆಯ ಮೂಲ ತತ್ತ್ವವಾಗಬೇಕು. ಯಾವುದೇ ದೇಶದ ಕೈಗಾರಿಕಾ ನೀತಿಯು ಮೊದಲು ಅದನ್ನು ಖಚಿತಪಡಿಸಬೇಕು.

ತಾಂತ್ರಿಕ ಕ್ರಾಂತಿಯ ಫಲಗಳು ಗಣ್ಯರಿಗೆ, ಸ್ಥಿತಿವಂತರಿಗೆ ಮಾತ್ರ ಸೀಮಿತವಾಗದಂತೆ ನಿಗಾವಹಿಸಬೇಕಿದೆ. ನಗರದ ಹೈಟೆಕ್ ಪ್ರಯೋಗಾಲಯದಲ್ಲಿನ ಆವಿಷ್ಕಾರವೊಂದು ದೂರದ ಹಳ್ಳಿಯ ರೈತನ ಜೀವನವನ್ನು ಸುಧಾರಿಸುತ್ತದೆಯೇ ಎಂಬುದೇ ನಮ್ಮ ಯಶಸ್ಸಿನ ನಿಜವಾದ ಅಳತೆಗೋಲು. ನಮ್ಮ ಅಧ್ಯಾಪಕರ ಮತ್ತು
ಸಂಶೋಧಕರ ಪಿಎಚ್.ಡಿ. ಪ್ರಬಂಧಗಳು ಗ್ರಂಥಾಲಯದ ಕಪಾಟು ಸೇರಿ ದೂಳು ತಿನ್ನಬಾರದು. ಹಕ್ಕುಸ್ವಾಮ್ಯ ದೊರೆತ ತಕ್ಷಣ ಸಂಶೋಧಕನ ಜವಾಬ್ದಾರಿ ಮುಗಿಯುವುದಿಲ್ಲ. ಸಂಶೋಧನೆಯ ಫಲಿತಾಂಶವು ಜನಬಳಕೆಯ ಉತ್ಪನ್ನವಾದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ, ಉದ್ಯೋಗ ಸೃಷ್ಟಿಸು
ತ್ತದೆ. ಇದನ್ನೇ ಜವಾಬ್ದಾರಿಯುತ ನಾವೀನ್ಯತೆ ಎನ್ನುವುದು. ಇದನ್ನು ಸರಿಯಾಗಿ ನಿರ್ವಹಿಸಿ ಪೋಷಿಸುವ ಮೂಲಕ, ನಾವು ಆಧುನಿಕ ಯುಗದ ಸಂಕೀರ್ಣತೆಗಳನ್ನು ಸರಿಯಾಗಿ ನಿಭಾಯಿಸಬಹುದು.

ಹಬೆ ಶಕ್ತಿಯ ಬಳಕೆಯಿಂದ ಯಾಂತ್ರೀಕರಣದ ಯುಗ ಆರಂಭವಾಯಿತು. ವಿದ್ಯುತ್ ಶಕ್ತಿಯಿಂದಾಗಿ ಬೃಹತ್ ಪ್ರಮಾಣದ ಉತ್ಪಾದನೆ ಮತ್ತು ಅಸೆಂಬ್ಲಿ ಲೈನ್ಗಳು ಬಂದವು. ನಂತರ ಬಂದ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್, ಇಂಟರ್ನೆಟ್ ಬಳಸಿಕೊಂಡು ಡಿಜಿಟಲ್ ಕ್ರಾಂತಿ ಹಾಗೂ ಸ್ವಯಂಚಾಲಿತ ವ್ಯವಸ್ಥೆ
ಗಳನ್ನು ಚಾಲ್ತಿಗೆ ತಂದವು. ತಂತ್ರಜ್ಞಾನ ಮತ್ತೊಮ್ಮೆ ಮಗ್ಗುಲು ಬದಲಿಸಿದ್ದರಿಂದ ಇಂಟರ್ನೆಟ್ ಆಫ್ ಥಿಂಗ್ಸ್, ಡೇಟಾ ಮತ್ತು ಕ್ಲೌಡ್ ತಂತ್ರಜ್ಞಾನದ ಮೂಲಕ ಜಗತ್ತೇ ಬೆಸೆದುಕೊಂಡಿತು. ಈಗ ಯಂತ್ರಗಳ ವೇಗ ಮತ್ತು ಮನುಷ್ಯನ ಸೃಜನಶೀಲತೆ ಒಂದಾಗುತ್ತಿವೆ.

ಸಾಫ್ಟ್ವೇರ್, ಕೃತಕ ಬುದ್ಧಿಮತ್ತೆ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಅಮೆರಿಕ ಜಾಗತಿಕ ನಾಯಕತ್ವವನ್ನು ಸಾಧಿಸಿದೆ. ವಿಶ್ವದ ಕಾರ್ಖಾನೆ ಎಂಬ ಖ್ಯಾತಿಯ ಚೀನಾ 5ಜಿ ನೆಟ್ವರ್ಕ್, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಸುಧಾರಿತ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಅಗ್ರಸ್ಥಾನದಲ್ಲಿದೆ. ರೊಬೊಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪುಟ್ಟ ಜಪಾನ್, ಈಗ ಹೊಸ ತಂತ್ರಜ್ಞಾನಗಳನ್ನು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಬಳಸುತ್ತಿದೆ. ಸೆಮಿಕಂಡಕ್ಟರ್ಗಳು, ಸ್ಮಾರ್ಟ್ಫೋನ್ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಡಿಜಿಟಲ್ ಪ್ರದರ್ಶನ ತಂತ್ರಜ್ಞಾನದಲ್ಲಿ ದಕ್ಷಿಣ ಕೊರಿಯಾ ವಿಶ್ವಕ್ಕೇ ಮಾದರಿಯಾಗಿದೆ.

ಭಾರತದ ತಂತ್ರಜ್ಞಾನ ಸಾಧನೆಗಳೇನೂ ಕಡಿಮೆಯಿಲ್ಲ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳ ಗ್ರಹವನ್ನು ತಲಪಿದ ‘ಮಂಗಳಯಾನ’ ಮತ್ತು ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ದೇಶವಾಗಿ ಭಾರತವನ್ನು ಗುರ್ತಿಸಿದ ‘ಚಂದ್ರಯಾನ–3’ ನಮ್ಮ ಬಾಹ್ಯಾಕಾಶ ಸಂಶೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯೆನಿಸಿವೆ. ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ನಿರ್ಮಿತ ‘ತೇಜಸ್’ ಲಘು ಯುದ್ಧ ವಿಮಾನ, ‘ಅಗ್ನಿ’, ‘ಪೃಥ್ವಿ’ ಕ್ಷಿಪಣಿ ಸರಣಿಗಳು, ‘ಅರಿಹಂತ್’ ಪರಮಾಣು ಜಲಾಂತರ್ಗಾಮಿ ಮತ್ತು ಇತ್ತೀಚಿನ ‘ವಿಕ್ರಾಂತ್’ ವಿಮಾನವಾಹಕ ನೌಕೆಗಳು ವಿಶ್ವದ ಗಮನ ಸೆಳೆದಿವೆ.

ಅಮೆರಿಕ, ಯುರೋಪ್ ದೇಶಗಳು ಇಂದಿಗೂ ಕಾರ್ಡ್ ಮತ್ತು ನಗದು ವ್ಯವಹಾರದ ಮೇಲೆ ಅವಲಂಬಿತವಾಗಿರುವಾಗ, ಯುಪಿಐ ತಂತ್ರಜ್ಞಾನವು ಬೀದಿ ಬದಿಯ ವ್ಯಾಪಾರಿಯಿಂದ ಹಿಡಿದು ದೊಡ್ಡ ಮಾಲ್ಗಳವರೆಗೆ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡುವ ಡಿಜಿಟಲ್ ಕ್ರಾಂತಿಯನ್ನು ಮಾಡಿದೆ. ಈ ತಂತ್ರಜ್ಞಾನವನ್ನಿಂದು ಸಿಂಗಪುರ, ಯುಎಇ ಮತ್ತು ಹಲವು ದೇಶಗಳು ಅಳವಡಿಸಿಕೊಳ್ಳುತ್ತಿವೆ.

ಸುಸ್ಥಿರ ಇಂಧನದತ್ತ ಮುಖ ಮಾಡಿರುವ ನಾವು ‘ಗ್ರೀನ್ ಹೈಡ್ರೋಜನ್ ಮಿಷನ್’ ಪ್ರಾರಂಭಿಸಿದ್ದೇವೆ. ಸ್ವದೇಶಿ ನಿರ್ಮಿತ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಂತ್ರಜ್ಞಾನವನ್ನು ಬಳಸಿಕೊಂಡು, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತಿದ್ದೇವೆ. ದೇಸೀ ತಂತ್ರಜ್ಞಾನದಿಂದ ಸಿದ್ಧಪಡಿಸಲಾದ ‘ನ್ಯಾನೊ ಯೂರಿಯಾ’ ಮಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗುತ್ತಿದೆ. ವಿಶ್ವದ ನೂರಕ್ಕೂ ಹೆಚ್ಚು ದೇಶಗಳಿಗೆ ನಾವೇ ತಯಾರಿಸಿದ ಜೆನೆರಿಕ್ ಔಷಧಗಳು ಮತ್ತು ಲಸಿಕೆಗಳನ್ನು ರಫ್ತು ಮಾಡಿ ‘ವಿಶ್ವದ ಔಷಧಾಲಯ’ ಎಂಬ ಖ್ಯಾತಿ ಗಳಿಸಿದ್ದೇವೆ. ಕೃಷಿ ಕ್ಷೇತ್ರದಲ್ಲಿ ‘ಕೃಷಿ ಡ್ರೋನ್’ಗಳ ಬಳಕೆ ಮತ್ತು ರೈತರಿಗಾಗಿ ಸಿದ್ಧಪಡಿಸಿದ ‘ಭುವನ್’ ಪೋರ್ಟಲ್ ಭೂಮಿಯ ನಕ್ಷೆ ಮತ್ತು ಬೆಳೆಗಳ ಸ್ಥಿತಿಗತಿಯನ್ನು ತಿಳಿಯಲು ಸಹಾಯ ಮಾಡುತ್ತಿವೆ.

ವಿದೇಶಿ ಅವಲಂಬನೆ ಕಡಿಮೆ ಮಾಡಿ ಭಾರತದಲ್ಲೇ ಚಿಪ್ಗಳ ತಯಾರಿಕೆಗೆ ಒತ್ತು ನೀಡುವ ಸೆಮಿ
ಕಂಡಕ್ಟರ್ ಮಿಷನ್, ಮುಂದಿನ ತಲೆಮಾರಿನ ಸೂಪರ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ನೆಲೆ ಕಲ್ಪಿಸಲು ಕ್ವಾಂಟಂ ಮಿಷನ್, 6ಜಿ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆಯನ್ನು ತಲಪಿಸುವ ಡಿಜಿಟಲ್ ಕ್ರಾಂತಿ ಯೋಜನೆಗಳು ಸಿದ್ಧವಾಗಿವೆ.

ತಂತ್ರಜ್ಞಾನವು ಬರೀ ಬೌದ್ಧಿಕ ಆಸ್ತಿಯಲ್ಲ; ಅದು ಉದ್ಯೋಗ ಸೃಷ್ಟಿಸಬೇಕು. ತಂತ್ರಜ್ಞಾನದಿಂದ ಹುಟ್ಟುವ ತ್ಯಾಜ್ಯವನ್ನು ಸಂಸ್ಕರಿಸುವ ‘ಪ್ರತಿತಂತ್ರಜ್ಞಾನ’ ಬೇಕೇ ಬೇಕು. ಪ್ರತಿ ತಂತ್ರಜ್ಞಾನವು ಪರಿಸರಸ್ನೇಹಿ ಆಗಿರಬೇಕು. ಕಾಡುವ ಬಡತನ ಹಾಗೂ ಅನಾರೋಗ್ಯದ ವಿರುದ್ಧದ ಹೋರಾಟ ವಿಧಾನ
ಆಗಬೇಕು. ತಂತ್ರಜ್ಞಾನವು ನಮಗೆ ನೀಡುವ ಶಕ್ತಿಯನ್ನು ನಾವೆಲ್ಲ ವಿವೇಕದಿಂದ ಬಳಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.