ಯುದ್ಧೋನ್ಮಾದದ ಬೆಂಕಿ ಇಡೀ ಜಗತ್ತಿನಲ್ಲಿ ಇನ್ನಿಲ್ಲದ ತಲ್ಲಣಗಳನ್ನು ಉಂಟು ಮಾಡುತ್ತಿದೆ. ಇದು ಅಪಾರ ಪ್ರಮಾಣದ ಆರ್ಥಿಕತೆಯ ನಷ್ಟಕ್ಕೆ ಕಾರಣವಾಗುತ್ತಿದೆಯಲ್ಲದೆ, ಶತಮಾನಗಳಿಂದ ಕಟ್ಟುವ ಕೆಲಸದಲ್ಲಿ ತೊಡಗಿದ ಮಾನವನ ಶ್ರಮವನ್ನೂ ಮಣ್ಣುಪಾಲಾಗಿಸುತ್ತಿದೆ. ಇದೆಲ್ಲಕ್ಕಿಂತ ಹೆಚ್ಚು ನೋವಿನ ಸಂಗತಿಯೆಂದರೆ, ಯುದ್ಧಗಳಲ್ಲಿ ಅಮಾಯಕ ಜೀವಿಗಳ ಮಾರಣಹೋಮ ನಡೆಯುತ್ತಿರುವುದು.

ಮನುಷ್ಯತ್ವವನ್ನೇ ಮಾರಿಕೊಂಡವರು ನಡೆಸು ತ್ತಿರುವ ಯುದ್ಧಗಳಲ್ಲಿ ಸುಖಾಸುಮ್ಮನೆ ಸಾಯುತ್ತಿರುವ ಅಸಂಖ್ಯ ಜನಸಾಮಾನ್ಯರ ಕರುಣಾಜನಕ ಕಥೆ ಹೇಳ ತೀರದ್ದು. ಯುದ್ಧಹಿಂಸಾರತಿಯ ದುಷ್ಟರು ಈ ರೀತಿ ಕೊಲ್ಲುವ ದುಸ್ಸಾಹಸಕ್ಕೆ ಇಳಿದಿರುವುದು ಯಾವ ಕಾರಣಕ್ಕಾಗಿ? ಇದರ ಹಿಂದಿರುವ ಮಾನಸಿಕ ಸ್ಥಿತಿ ಎಂಥದ್ದು? ಇಂಥ ಪ್ರಶ್ನೆಗಳು ಮನುಷ್ಯತ್ವವುಳ್ಳ ಯಾರನ್ನಾದರೂ ಕಾಡುತ್ತವೆ. ಜಗತ್ತಿನ ಎಲ್ಲ ವಿದ್ಯಮಾನಗಳನ್ನು ಮಾನವೀಯ ನೆಲೆಯಲ್ಲಿಯೇ ಪರೀಕ್ಷಿಸಿ, ‘ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ’ ಕನ್ನಡದ ಶರಣರು ಈ ಬಗೆಯ ಕ್ರೌರ್ಯ, ಹಿಂಸೆಗಳನ್ನು 12ನೇ ಶತಮಾನದಷ್ಟು ಹಿಂದೆಯೇ ನೇರವಾಗಿ
ಖಂಡಿಸಿದ್ದು ಗಮನಾರ್ಹ. ಅಹಿಂಸೆ ಕುರಿತಾದ ವಚನಮೌಲ್ಯಗಳು ಯಾವಕಾಲದ ಹಿಂಸೆ ಮತ್ತು ಯುದ್ಧಗಳಿಗಾದರೂ ನೈತಿಕಪಾಠ ಆಗುವಂತಿವೆ.

‘ಇರಿವುದು ಕಡಿವುದು ಕೊಲುವುದು ಮಲದೇಹಿಗಳಿಗಲ್ಲದೆ ನಿರ್ಮಲದೇಹಿಗಳಿಗುಂಟೆ? ಸಮಯ ಸಮುದ್ರದಂತಿರಬೇಕು. ತಪ್ಪನರಸಿ ಶಿಕ್ಷಿಸುವನ್ನಬರ ನರಧೂತಕುಲಕ್ಕೆ ಪರಶಿವ ರೂಪುಂಟೆ? ಆ ಹರವರಿಯ ನುಡಿದಡೆನಗೇನು?’ ಎಂಬ ಘಟ್ಟಿವಾಳಯ್ಯನ ವಚನದಲ್ಲಿ, ಹಿಂಸೆ ಯಾವ ಬಗೆಯದೇ ಇರಲಿ, ಅದರ ನಿರಾಕರಣೆಯೇ ಪ್ರಧಾನವಾಗಿ ಎದ್ದು ಕಾಣುತ್ತದೆ. ‘ಮಲದೇಹಿಗಳಲ್ಲಿ’ ಮಾತ್ರ ಇರಿಯುವ ಅಥವಾ ಕೊಲ್ಲುವ ಕ್ರೌರ್ಯವಿರಲು ಸಾಧ್ಯವೇ ಹೊರತು, ನಿರ್ಮಲದೇಹಿಗಳಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳುವ ಆತನ ಮಾತಿನಲ್ಲಿ ಧ್ವನಿತವಾಗಿರುವುದು ಕೊಲ್ಲುವವರೆಲ್ಲರೂ ‘ಮಲದೇಹಿಗಳೇ’ ಎಂಬ ನಿಜಾರ್ಥ. ಈ ಮಾತನ್ನೇ ಆಧರಿಸಿ ಹೇಳುವುದಾದರೆ, ಈಗ ಯುದ್ಧ ಸಾರಿ, ಕೊಲ್ಲುವ ಕುಕೃತ್ಯಕ್ಕೆ ತೊಡಗಿರುವ ಎಲ್ಲರೂ ಕೊಳಕು ಮನಸ್ಸಿನವರೇ ಎಂದರ್ಥ. ಇಂಥ ಮಲದೇಹಿಗಳ ಮನಸ್ಸಿನಲ್ಲಿ ನಿರ್ಮಲ ಬುದ್ಧಿ ಬರಬೇಕೆಂಬ
ಆಶಯದಿಂದಲೇ ಆತ ‘ಸಮಯ ಸಮುದ್ರದಂತಿರಬೇಕು’ ಎಂದಿದ್ದಾನೆ. ಮನುಷ್ಯಧರ್ಮ ಸಮುದ್ರದ ಹಾಗೆ ವಿಶಾಲ ಮನೋಭಾವದಿಂದ ಕೂಡಿದ್ದರೆ ಅದು ಯಾರನ್ನೂ ಕೊಲ್ಲುವ ಕೃತ್ಯಕ್ಕೆ ಇಳಿಯುವುದಿಲ್ಲ. ಹೀಗೆ, ಕೊಲ್ಲುವ ಹಿಂಸಾಪ್ರವೃತ್ತಿಯನ್ನು ಖಂಡಿಸುತ್ತಲೇ, ಧರ್ಮದ ದಾರಿಯಲ್ಲಿ ನಡೆಯಲು ಮಹತ್ವದ ಮಾರ್ಗವನ್ನು ಸೂಚಿಸುತ್ತಾರೆ ಶರಣರು.

ಯುದ್ಧಪಿಪಾಸು ರಕ್ಕಸರಿಗೆ ಹಿಂಸೆ ಅಥವಾ ಮನುಷ್ಯರ ಸಾವು ಗಣನೆಗೇ ಇರದ ಸಾಮಾನ್ಯ ಸಂಗತಿ ಗಳು. ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾದ ಮೊದಲ ದಿನವೇ ರಷ್ಯಾದ ಕ್ಷಿಪಣಿಯೊಂದು ಉಕ್ರೇನಿನ ಹೆರಿಗೆ ಆಸ್ಪತ್ರೆಯ ಮೇಲೆ ಬಿತ್ತು.ಮಹಿಳೆಯೊಬ್ಬಳ ಪ್ರಸವದ ಸಂದರ್ಭದಲ್ಲೇ ಕ್ಷಿಪಣಿ ಎರಗಿತು. ಕೂಸು ಆಗತಾನೇ ತಾಯಿಯ ಗರ್ಭದಿಂದ ಅರ್ಧ ಮಾತ್ರ ಹೊರಬಂದಿತ್ತು; ಆ ಹಂತದಲ್ಲಿ ತಾಯಿಯ ಮೇಲೆಯೇ ಕ್ಷಿಪಣಿ ಬಿದ್ದ ಪರಿಣಾಮವಾಗಿ ಅವಳು ಕ್ಷಣದಲ್ಲೇ ಅಸು ನೀಗಿದಳು. ಅರ್ಧ ಹೊರಬಂದಿದ್ದ ಕೂಸು ಥರಗುಟ್ಟುತ್ತಲೇ ಭೂಮಿಗೆ ಬಂತು. ಆದರೆ ಬಹಳ ಹೊತ್ತು ಬದುಕಿ ಉಳಿಯಲಿಲ್ಲ. ಜಗತ್ತನ್ನು ಕಣ್ಣು ಬಿಟ್ಟು ನೋಡುವ ಮೊದಲೇ ಅದು ಇಹಲೋಕಕ್ಕೆ ವಿದಾಯ ಹೇಳಬೇಕಾಯ್ತು. ಹುಟ್ಟುತ್ತಲೇ ಸತ್ತ ಆ ಕೂಸು ಯುದ್ಧೋನ್ಮಾದಿಗಳ ಮನೆಯದಾಗಿರಲಿಲ್ಲ; ಬದಲಾಗಿಬೇರೆಯವರದಾಗಿತ್ತು. ಇದೇ ರೀತಿ ಇರಾನ್ ಮೇಲೆ ಯುದ್ಧ ಸಾರಿದ ಮೊದಲ ದಿನವೇ ಶಾಲಾ ವಸತಿನಿಲಯವೊಂದರ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ್ದರಿಂದಾಗಿ ಅಮಾಯಕ ಮಕ್ಕಳ ಮಾರಣಹೋಮ ನಡೆಯಿತು. ಇದಕ್ಕೆ ಅಮೆರಿಕವಾಗಲಿ, ಅಲ್ಲಿನ ಅಧಿಕಾರಿ ವರ್ಗ ಅಥವಾ ಯುದ್ಧರಾಕ್ಷಸನಾಗಲಿ ಕಿಂಚಿತ್ತೂ ಮರುಗಲಿಲ್ಲ. ಇಂಥ ಸಾವಿನ ಸಂಖ್ಯೆ ಈಗ ನಿರಂತರವಾಗಿ ಏರುತ್ತಲೇ ಇದೆ.

ಬೇರೆಯವರ ಸಾವಿಗೆ ಕಾರಣವಾಗುವ ಹಿಂಸಾಪ್ರವೃತ್ತಿಯ ವಿರುದ್ಧ ಶರಣರು ಮಾನವೀಯ ಕಳಕಳಿಯನ್ನು ವ್ಯಕ್ತಪಡಿಸಿದ್ದು, ಅವರ ಮನುಷ್ಯ ಪ್ರೀತಿಯ ದ್ಯೋತಕವಾಗಿದೆ. ‘ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು ನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಮರುಗುವಂತೆ ಅವನೇಕೆ ಮರುಗನು? ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ’ ಎಂದು ಮನುಷ್ಯನ ಹಿಂಸಾಪ್ರವೃತ್ತಿಯ ಹಿಂದಿರುವ ದ್ವಂದ್ವವನ್ನು ಪ್ರಶ್ನಿಸುತ್ತಾಳೆ ಅಕ್ಕಮಹಾದೇವಿ. ಒಬ್ಬ ಜಾಲಗಾರ ನೀರಲ್ಲಿ ಹೊಕ್ಕು, ಅನೇಕ ಜಲಚರ ಪ್ರಾಣಿಗಳನ್ನು ಹಿಡಿದು, ಕೊಂದು ಖುಷಿಪಡುತ್ತಾನೆ. ಪ್ರಾಣಿಗಳನ್ನು ಕೊಲ್ಲುವುದರಿಂದ ಆತನಿಗೆ ಲಾಭವಿದೆ. ಆದರೆ, ಅದೇ ಜಾಲಗಾರನ ಮನೆಯಲ್ಲಿ ಮಗು ಸತ್ತರೆ, ಆತನಿಗೆ ಅದೇ ರೀತಿಯ ಖುಷಿಯಾಗಲು ಸಾಧ್ಯವೆ? ತನ್ನ ಮಗು ಸತ್ತಾಗ ನೊಂದು ಮರುಗುವಂತೆ, ಜಲಚರಗಳನ್ನು ಕೊಂದಾಗ ಆತ ಮರುಗುತ್ತಾನೆಯೆ? ಎಂಬುದಿಲ್ಲಿ ಅಕ್ಕನ ಮುಖ್ಯ ಪ್ರಶ್ನೆ.

ತನ್ನವರು ಸತ್ತರೆ ದುಃಖಿಸುವ, ಬೇರೆಯವರುಸತ್ತರೆ ಖುಷಿಪಡುವ ಮನುಷ್ಯನ ನೀಚ, ದ್ವಂದ್ವಪ್ರವೃತ್ತಿ ಮನುಕುಲಕ್ಕೆ ಮಾರಕವಾದದ್ದು. ವರ್ತಮಾನದ ಯುದ್ಧಗಳಲ್ಲಿ ಕ್ರಿಯಾಶೀಲವಾಗಿರುವುದು ಇಂಥ ತರತಮದ ಕ್ಷುದ್ರ ಪ್ರವೃತ್ತಿಯೇ. ಎಲ್ಲಿಯವರೆಗೆ ಬೇರೆಯವರ ಸಾವೂ ನಮ್ಮ ಮನೆಯ ಸಾವೇ ಎಂಬ ಮಾನವೀಯ ಸಂವೇದನೆ ಹುಟ್ಟುವುದಿಲ್ಲವೋ, ಅಲ್ಲಿಯವರೆಗೂ ಇಂಥ ಕ್ರೌರ್ಯ ನಡೆಯುತ್ತಲೇ ಇರುತ್ತದೆ. ಇಂಥ ಅಮಾನವೀಯ ಮತ್ತು ಕ್ರೌರ್ಯದ ನಡೆಯೇ ಜಗಕೆಲ್ಲ ನಗೆಗಡೆಯಾಗುತ್ತದೆ ಎನ್ನುತ್ತಾಳೆ ಅಕ್ಕ. ಇದು ಹಿಂಸೆಯನ್ನು ಕುರಿತ ಪ್ರತಿಭಟನೆ ಮಾತ್ರವಾಗಿರದೆ, ಮನುಷ್ಯತ್ವ ಮಾರಿಕೊಂಡ ರಾಕ್ಷಸರ
ಅಂತಃಸಾಕ್ಷಿಯನ್ನೇ ಕೆಣಕುವಂಥ ಪ್ರಶ್ನೆ. ಯುದ್ಧ ಸಾರಿದವರೇ ನೇರವಾಗಿ ರಣರಂಗದಲ್ಲಿ ನಿಂತು ಹೋರಾಡಿದರೆ, ಅವರಿಗೆ ಸಾವಿನ ಹಿಂದಿನ ನೋವು ಅರ್ಥವಾಗಲು ಸಾಧ್ಯ. ಆದರೆ, ಯುದ್ಧ ಸಾರಿದವರು ಯುದ್ಧ ಮಾಡುತ್ತಾರೆಯೆ? ಇಲ್ಲ; ಅವರು ಯುದ್ಧ ಮಾಡಿಸುತ್ತಾರೆ, ಸಾವುಗಳಿಗೆ ಕಾರಣವಾಗುತ್ತಾರೆ.

ತಾವು ನಡೆಸುತ್ತಿರುವುದು ಹಿಂಸೆಯೆಂದು ತಿಳಿದೂ ಅದನ್ನೇ ಮಾಡುವುದು ಮನುಷ್ಯತ್ವ ಮಾರಿಕೊಂಡ
ವರಿಂದ ಮಾತ್ರ ಸಾಧ್ಯ. ಇಂಥ ಹಿಂಸಾರತಿಗಳಿಗೂ ಶರಣರು ಸೂಕ್ತವಾದ ಪಾಠ ಕಲಿಸುತ್ತಾರೆ. ಬಸವಣ್ಣ
ನವರ ಒಂದು ವಚನದಲ್ಲಿ ‘ಅರಿದರಿದು! ಸಮಗಾಣಿಸಬಾರದು, ತ್ರಾಸಿನ ಕಟ್ಟಳೆಯನಿಂತಿನಿತು ವೆಗ್ಗಳವಾದರೆ
ಈಶ್ವರನೊಡೆಯಿಕ್ಕದೆ ಮಾಣುವನೆ? ಪಾತ್ರ ಅಪಾತ್ರವೆಂದು ಕಂಡರೆ ಶಿವನೆಂತು ಮೆಚ್ಚುವನು?
ಜೀವ ಜೀವಾತ್ಮವ ಸರಿಯೆಂದು ಕಂಡರೆ ಸಮವೇದಿಸದಿಪ್ಪನೆ ಶಿವನು? ತನ್ನ ಮನದಲ್ಲಿ
ಸರ್ವಜೀವದಯಾಪರಿಯಾದಲ್ಲಿ ಕೂಡಲಸಂಗಮ ದೇವನು ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ?’ ಎಂದು ಹೇಳಿರುವುದು ಇದೇ ಅರ್ಥದಲ್ಲಿ. ಸಾವು– ನೋವು ತರುತ್ತದೆ ಎಂಬುದು ಗೊತ್ತಿದ್ದೂ, ಕೊಲ್ಲುವ
ಕೃತ್ಯ ನಡೆಸುವವರನ್ನು ದೇವರು ಎಂದೂ ಕ್ಷಮಿಸಲಾರಎಂಬುದೇ ಅವರ ನಿಲುವು. ‘ತನ್ನಂತೆ ಪರರು’
ಎಂಬುದು ಮನುಷ್ಯರಾದವರು ರೂಢಿಸಿಕೊಳ್ಳಬೇಕಾದ ಸಮಾನತೆಯ ಪ್ರಜ್ಞೆ. ಇದರಲ್ಲಿ ತರತಮ ಮಾಡಿದರೆ ಸಮಾಜದಲ್ಲಿ ಸಮಾನತೆಯ ತೂಕವೇ ತಪ್ಪಿಹೋಗುತ್ತದೆ. ಎಲ್ಲ ಜೀವಿಗಳಲ್ಲೂ ಇರುವ ಜೀವಾತ್ಮನು ಒಂದೇ ಎಂಬ ಭಾವನೆಯಿಂದ ಹಾಗೂ ಎಲ್ಲರನ್ನೂ ದಯಾಪರವಾದ ದೃಷ್ಟಿಯಿಂದ ಕಂಡರೆ ಮಾತ್ರ ದೇವರು ಅಂಥವರನ್ನು ಒಪ್ಪಿಕೊಳ್ಳುತ್ತಾನೆ; ಅಪ್ಪಿಕೊಳ್ಳುತ್ತಾನೆ. ಇದು ಬಸವಣ್ಣನವರು ಪ್ರತಿಪಾದಿ
ಸುವ ಅಹಿಂಸಾತತ್ತ್ವದ ಅತ್ಯಂತ ಖಚಿತ ನಿಲುವು. ಆದರೆ, ದೇವರು, ಧರ್ಮ, ಮಾನವೀಯತೆ, ತನ್ನಂತೆ ಪರರು, ನನಗಾದಂತೆ ಅವರಿಗೂ ನೋವಾಗುತ್ತದೆ ಎಂಬ ಭಾವನೆಗಳೇ ಇಲ್ಲದ ಹಿಂಸಾರತಿಪೀಡಿತ ಮನಸ್ಸುಗಳಿಗೆ ಮಾನವೀಯ ಮೌಲ್ಯಗಳ ಪರಿಚಯವಿರಲು ಸಾಧ್ಯವೆ?

ಶರಣರು ಹಿಂಸೆಯ ಬಗೆಗೆ ಹೇಳುವ ಅಂತಿಮ ಸತ್ಯದ ಮಾತುಗಳು ಇಡೀ ವಿಶ್ವದ ಜನರ ಮನಸ್ಸು ಗಳನ್ನೇ ಪರಿವರ್ತಿಸುವಂತಿವೆ. ಬಸವಣ್ಣನವರ ‘ದಯವಿಲ್ಲದ ಧರ್ಮವದಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ; ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲ
ದೊಲ್ಲನಯ್ಯಾ’ ಎಂಬ ವಚನವೇ ಇದಕ್ಕೆ ಸಾಕ್ಷಿ. ಜಗತ್ತಿನಲ್ಲಿ ಸಾವಿರಾರು ಧರ್ಮಗಳಿರಬಹುದು. ಆದರೆ, ಅವುಗಳಲ್ಲಿ ದಯಾಗುಣವೇ ಇಲ್ಲದಿದ್ದರೆ ಅವು ಧರ್ಮಗಳಾಗಲಾರವು, ಮತ್ತು ಅಂಥ ಧರ್ಮಗಳು ಮತ್ತಾವ ಒಳಿತನ್ನೂ ಮಾಡಲಾರವು ಎಂಬುದು ಬಸವಣ್ಣನ ನಿಲುವು. ಒಂದು ಧರ್ಮದ ಮೂಲ ದಯೆಯೇ ಆಗಿರುತ್ತದೆ. ಆದರೆ, ಅದನ್ನೇ ಮಾರಿಕೊಂಡ ಅಹಂಕಾರಿಗಳು ಹಿಂಸಾಮಾರ್ಗ ಹಿಡಿದು ಎಲ್ಲರನ್ನೂ ಹಿಂಸಿಸುತ್ತ, ಕೊಲ್ಲುತ್ತ ಹೋಗುತ್ತಿದ್ದಾರೆ. ಈಗ ಯುದ್ಧ ಹೂಡಿರುವ ರಕ್ಕಸರು ನಡೆಯುತ್ತಿರುವುದು ಧರ್ಮದ ಮಾರ್ಗವೂ ಅಲ್ಲ, ದಯೆಯ ಮಾರ್ಗವೂ ಅಲ್ಲ. ಅಂಥವರಿಂದ ಜಗತ್ತಿನಲ್ಲಿ ಶಾಂತಿಯ ವಾತಾವರಣದ ನಿರ್ಮಾಣ ಸಾಧ್ಯವೆ? ಹೀಗಾಗುವುದರ ಒಟ್ಟಾರೆ ಪರಿಣಾಮವೇ ಸರ್ವನಾಶ. ‘ಮನುಷ್ಯ ಮನುಷ್ಯನನ್ನೇ ಅದೇನು ಮಾಡುತ್ತಿದ್ದಾನೆ’ ಎಂಬ ವರ್ಡ್ಸ್ವರ್ತ್ನ ಮಾತು ಈಗ ಯಾರಿಗಾದರೂ ಕೇಳುತ್ತಿದೆಯೆ?

ಯುದ್ಧದ ಕ್ರೌರ್ಯದಿಂದ ತತ್ತರಿಸುತ್ತಿರುವ ಮತ್ತು ಅಸಂಖ್ಯ ಜೀವಿಗಳ ಸಾವು ಸಂಭವಿಸುತ್ತಿರುವ ವರ್ತಮಾನದಲ್ಲಿ ಈಗ ಜಗತ್ತಿಗೆ ಉಳಿದಿರುವುದು ಶರಣರು ಪ್ರತಿಪಾದಿಸಿದ ದಯೆ ಮತ್ತು ಅಹಿಂಸೆಯ
ಮಾರ್ಗವೊಂದೇ. ಯುದ್ಧ ಸಾರಿರುವ ಕ್ಷುದ್ರ ಮನಸ್ಸುಗಳಲ್ಲಿ ಶರಣರು ಪ್ರತಿಪಾದಿಸಿದ ದಯಾಗುಣ ಮತ್ತು ಧರ್ಮದ ಮೌಲ್ಯಗಳು ಜಾಗೃತವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.