ಯುವಜನರ ಸಹಭಾಗಿತ್ವ ಇಲ್ಲದೆ ಯಾವ ಕ್ಷೇತ್ರವೂ ಹೊಸತನ ಮೈಗೂಡಿಸಿಕೊಳ್ಳುವುದು ಕಷ್ಟ. ರಾಜಕಾರಣ, ಸಾಂಸ್ಕೃತಿಕ ಕ್ಷೇತ್ರದ ಈ ಹೊತ್ತಿನ ಬಹುತೇಕ ಬಿಕ್ಕಟ್ಟುಗಳಿಗೆ, ಆ ಕ್ಷೇತ್ರಗಳು ಯುವಶಕ್ತಿಗೆ ಬೆನ್ನುಹಾಕಿರುವುದೇ ಕಾರಣ. ಹಿರಿಯರ ಅನುಭವದೊಂದಿಗೆ ಯುವಜನರ ಶಕ್ತಿಯೂ ಸೇರಿಕೊಳ್ಳುವುದು ಸಮಾಜದ ಆರೋಗ್ಯಕ್ಕೆ ಅಪೇಕ್ಷಣೀಯ.