ಮಾನಹಾನಿ ವಿರುದ್ಧ ಮೊಸಳೆ ದೂರು!

ಸೋಮವಾರ, ಮಾರ್ಚ್ 18, 2019
31 °C

ಮಾನಹಾನಿ ವಿರುದ್ಧ ಮೊಸಳೆ ದೂರು!

Published:
Updated:

ನಾಟಕ ನೋಡಬೇಕೆಂದು ರಂಗಮಂದಿರಕ್ಕೆ ಹೋದ ವಿಜಿಗೆ ನಿರಾಸೆ ಕಾದಿತ್ತು. ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ನಾಟಕ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದ್ದರು. ‘ಛೇ..‌. ಒಂದೊಳ್ಳೆ ಮನರಂಜನೆ ಇಲ್ಲ ಈ ಊರಲ್ಲಿ’ ಎಂದು ಬೈದುಕೊಂಡು ಹೋಗ್ತಿದ್ದವನಿಗೆ ‘ತ್ಯಾಗಮಯಿ, ಕರುಣಾರತ್ನ, ಕರುಣಾಸಾಗರ’ ಎಂಬ ಘೋಷಣೆಗಳು ಕೇಳತೊಡಗಿದವು.

‘ಮೊಮ್ಮಗನಿಗಾಗಿ ಕ್ಷೇತ್ರವನ್ನೇ ಬಿಟ್ಟುಕೊಟ್ಟೆ...’ ಒಂದು ಕಡೆ ಅಳು, ಮತ್ತೊಂದೆಡೆ ‘ಎಂಥಾ ತ್ಯಾಗ’, ‘ಎಂಥಾ ತ್ಯಾಗ’ ಎಂಬ ಬಹುಪರಾಕ್.

‘ಕುಟುಂಬ ರಾಜಕಾರಣ ನಾನು ಮಾಡಿದ್ದೀನಾ... ನಾನು, ನಾನು, ನಾನು’ ‘ಆಪ್ತಮಿತ್ರ’ದ ನಾಗವಲ್ಲಿ ಸ್ಟೈಲ್‌ನಲ್ಲಿ ಅವರು ಕೇಳತೊಡಗಿದರು. ‘ಜನ ಬಯಸಿದ್ದಕ್ಕೆ ‘ಅಖಿಲ್’ಗೆ ಟಿಕೆಟ್ ಕೊಟ್ಟೆ... ಕ್ಷೇತ್ರ ‘ಪ್ರಜ್ವಲಿಸಲಿ’ ಎಂದು ಇವನಿಗೆ ಟಿಕೆಟ್ ಕೊಟ್ಟೆ... ಅಭಿಮಾನಿಗಳು ಬಯಸ್ತಿದ್ದಾರೆ ಅಂತಾ ನಾನು ನಿಲ್ತಿದ್ದೀನಿ... ಜನಾಭಿಮಾನಿಗಳೇ ಬಯಸ್ತಿರೋ
ವಾಗ ವಿರೋಧಿಗಳಿಗ್ಯಾಕೆ ಚಿಂತೆ’ ಮತ್ತೆ ಅಳು.

ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಗೆ ವಿಜಿ ಕೇಳ್ದ ‘ಈ ಜನಾಭಿಮಾನಿಗಳು ಅಂದ್ರೆ ಯಾರು‌?’

‘ನಾವೂ, ನೀವೇ ಸರ್?’.

‘ಅಯ್ಯೋ, ನಾನು ಇವರಿಗೆ ಟಿಕೆಟ್ ಕೊಡಿ, ಅವರಿಗೆ ಟಿಕೆಟ್ ಕೊಡಿ ಅಂತಾ ಹೇಳೇ ಇಲ್ವಲ್ಲ... ನನ್ನನ್ನ ಯಾರೂ ಕೇಳೂ ಇಲ್ಲ’. ಇದ್ಯಾವುದೋ ಅನ್ಯಗ್ರಹದಿಂದ ಬಂದ ಜೀವಿ ಇರಬಹುದು ಎಂಬಂತೆ ಆ ವ್ಯಕ್ತಿ ವಿಜಿಯನ್ನ ನೋಡತೊಡಗಿದ. 

ಆ ನಾಟಕ ರದ್ದಾದರೂ, ಈ ನಾಟಕ ಒಳ್ಳೆ ಖುಷಿ ಕೊಡ್ತು ಎಂದುಕೊಳ್ಳುತ್ತಾ ವಿಜಿ ಮುಂದೆ ಹೆಜ್ಜೆ ಹಾಕತೊಡಗಿದ. ಆಶ್ಚರ್ಯ, ಪೊಲೀಸ್ ಸ್ಟೇಷನ್ ಮುಂದೆ ಮೊಸಳೆಗಳ ಸಾಲು. ‘ನೀರಲ್ಲಿರೋದು ಬಿಟ್ಟು ಇಲ್ಲೇಕೆ’ ಕೇಳ್ದ ವಿಜಿ. ‘ನಮ್ಮ ಮಾನಕ್ಕೆ ಹಾನಿ ಆಗಿದೆ. ನಾವಾದರೂ ಬೇಟೇನ ಬಲೆಗೆ ಬೀಳಿಸ್ಕೊಳೋಕೆ ಅಳ್ತೀವಿ.

ಆದರೆ, ಯಾರೋ ಯಾವುದೋ  ಸ್ವಾರ್ಥಕ್ಕೆ ಅತ್ತರೂ ನಮ್ಮ ಹೆಸರು ಹೇಳ್ತಿದಾರೆ. ಹೀಗಾಗಿ ಕೇಸ್ ಹಾಕೋಕೆ ಬಂದಿದೀವಿ’ ಒಕ್ಕೊರಲಿನಿಂದ ಹೇಳಿದವು ಮೊಸಳೆಗಳು.

‘ನಿಮ್ಮ ಕಣ್ಣೀರಿಗೂ, ಅವರ ಕಣ್ಣೀರಿಗೂ ವ್ಯತ್ಯಾಸವೇನಿಲ್ಲ ಬಿಡಿ’ ಎನ್ನುತ್ತಾ ಓಟಕಿತ್ತ ವಿಜಿ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !