‘ಹಲೋ... ಬ್ರಹ್ಮಾಂಡ ಜ್ಯೋತಿಷಿಗಳಾ? ನಾನು ಟೀವಿ ರಿಪೋಟ್ರು ತೆಪರೇಸಿ ಮಾತಾಡ್ತಿರೋದು...’

‘ಓ... ಏನಯ್ಯಾ, ಬೆಳಬೆಳಗ್ಗೆ ಫೋನು? ಏನು ನಿನ್ ಡೌಟು?’

‘ನನ್ ತಲೇಲಿ ಡೌಟಿದೆ ಅಂತ ನಿಮಗೆಂಗೆ ಗೊತ್ತಾತು?’

‘ಮುಂಡಾಮೋಚ್ತು... ನಾನು ತ್ರಿಕಾಲ ಜ್ಞಾನಿ ಕಣಯ್ಯ, ಮೂರು ಲೋಕದಲ್ಲಿ ಏನೇನು ನಡೆಯುತ್ತೆ ಎಲ್ಲ ನಂಗೆ ಗೊತ್ತಾಗುತ್ತೆ. ಅದೇನ್ ಕೇಳು...’

‘ಅಲ್ಲ, ತಮಿಳುನಾಡಲ್ಲಿ ಜ್ಯೋತಿಷಿ ಒಬ್ರು ಯಾರು ಸಿಎಂ ಆಗ್ತಾರೆ ಅಂತ ಚುನಾವಣೆಗೆ ಮೊದ್ಲೇ ಹೇಳಿದ್ರಂತೆ. ಕರ್ನಾಟಕದಲ್ಲಿ ಈಗ ಮೊದ್ಲು ಸಂಪುಟ ವಿಸ್ತರಣೆ ಆಗುತ್ತೋ ಸಿಎಂ ಬದಲಾವಣೆ ಆಗುತ್ತೋ ಅವರು ಹೇಳ್ತಾರಾ?’

‘ಅದ್ನ ನಾನೇ ಹೇಳ್ತೀನಿ, ಸಂಪುಟ ವಿಸ್ತರಣೆ ಆದ್ರೆ ಸಿಎಂ ಬದಲಾವಣೆ ಆಗಲ್ಲ, ಬರೆದಿಟ್ಕೋ...’

‘ನಿಮ್ತಲೆ, ಅದು ಎಲ್ರಿಗು ಗೊತ್ತು. ಹೋಗ್ಲಿ, ಡಿಕೆಶಿ ಸಾಹೇಬ್ರು ಸಿಎಂ ಆಗ್ತಾರಾ ಇಲ್ವ, ಸ್ವಲ್ಪ ಕೇಳಿ ಹೇಳ್ತೀರಾ?’

‘ಆ ಜ್ಯೋತಿಷಿಗೆ ಈಗ ಬಾಳ ಡಿಮ್ಯಾಂಡ್ ಕಣಯ್ಯ, ನಿನ್ ಡೌಟ್ಸ್ ಮತ್ತೇನಿದೆ ಒಟ್ಟಿಗೇ ಹೇಳಿಬಿಡು, ಕೇಳಿ ಹೇಳ್ತೀನಿ...’

‘ಓಕೆ, ಈಗ ಜಗತ್ತಲ್ಲಿ ಯುದ್ಧ ಯಾವಾಗ ನಿಲ್ತವೆ? ಟ್ರಂಪ್ ತಲೆ ಯಾವಾಗ ಸರಿ ಇರುತ್ತೆ? ಚಿನ್ನ ಯಾವಾಗ ಇಳಿಯುತ್ತೆ? ಸೆನ್ಸೆಕ್ಸ್ ಯಾವಾಗ ಏರುತ್ತೆ? ಮೋದಿ ಸಾಹೇಬ್ರ ಕಣ್ಣು ಮುಂದೆ ಯಾವ ರಾಜ್ಯದ ಮೇಲಿದೆ?’

‘ಲೇ ದಡ್ಡ, ಇವನ್ನೆಲ್ಲ ಹೇಳಾಕೆ ಆ ಬ್ರಹ್ಮನಿಗೂ ಸಾಧ್ಯ ಇಲ್ಲ ತಿಳ್ಕಾ. ನಾವು ಎಕ್ಸಿಟ್ ಪೋಲ್ ತರ ಒಂದು ಅಂದಾಜಿನ ಮೇಲೆ ಏನೋ ಹೇಳಿರ್ತೀವಿ, ನೀವು ನಂಬಿಬಿಡ್ತೀರಿ. ಈಗ ತಮಿಳುನಾಡಿನ ಜ್ಯೋತಿಷಿಗೆ ತಾನು ಮುಖ್ಯಮಂತ್ರಿ ವಿಶೇಷಾಧಿಕಾರಿ ಆಗ್ತೀನಿ ಅಂತ ಮೊದ್ಲೇ ಗೊತ್ತಿತ್ತಾ? ಅದು ಬಿಡು, ಸಿಕ್ಕ ಅಧಿಕಾರ ಒಂದೇ ದಿನಕ್ಕೆ ಮುಂಡಾಮೋಚ್ಕಳುತ್ತೆ ಅಂತ ಗೊತ್ತಿತ್ತಾ?’

‘ಓ... ಹೌದಾ? ಇದ್ರಲ್ಲಿ ಹಂಗೆಲ್ಲ ಐತಾ?’

‘ಲೇ ತಮಾ... ಮತ್ತೆ ನಾನು ಇಂಗೆಲ್ಲ ಹೇಳಿದೆ ಅಂತ ಟಿವೀಲಿ ಹಾಕಿಬಿಟ್ಟೀಯ... ನಿನ್ನ ಸುಟ್ಟು ಭಸ್ಮ ಮಾಡಿಬಿಟ್ಟೇನು...’

ತೆಪರೇಸಿ ಹೆದರಿ ಪಟ್ಟಂತ ಫೋನಿಟ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.