ನಡುರಾತ್ರಿ ಹೊರಗಡೆ ಪರಪರ ಕೆರೆವ ಸದ್ದು. ಬಾಗಿಲು ತೆರೆದರೆ ಬೆಕ್ಕಣ್ಣ ಒಳಗೋಡಿ ಬಂದಿದ್ದೇ ಹಾಲು ಹಾಕೆಂದು ಮ್ಯಾಂವ್ಗುಟ್ಟಿತು. ‘ಅಲ್ಲಲೇ... ಹತ್ತು ಗಂಟೆಗೆ ಹಾಲು ಕುಡಿದು ಹೋಗಿದ್ದೆ,ಇಷ್ಟ್ ಲಗೂ ಹಸಿವಾಗೂ ಹಂಗ ಹೊರಗೇನ್ಕಡಿದು ಬಂದ್ಯಲೇ’ ಎಂದೆ. ‘ಪಾಕಿಸ್ತಾನಕ್ಕೆ ಹೋಗಿದ್ದೆ’ ಮಗುಮ್ಮಾಗಿ ಹೇಳಿತು. ‘ಹ್ಞಾಂ’ ನಾನು ಬಿಟ್ಟಬಾಯಿ,ಕಣ್ಣು ಮುಚ್ಚದೇ ಕಕ್ಕಾಬಿಕ್ಕಿಯಾದೆ.

‘ಅಲ್ಲಿ ಪಾಕಿಗಳು ಇನ್ನೂ ಭಯೋತ್ಪಾದಕರ ಹೆಣ ಎಣಸಾಕತ್ತಾರ,ಇಲ್ಲಿ ವಿಪಕ್ಷಗಳು ಸಾಕ್ಷ್ಯ ಕೇಳ್ತಾರ ಅಂತ ಮೋದಿ ಮಾಮಾ ಹೇಳಿದ್ನಲ್ಲ,ಅದಕ್ಕ ಪಾಪದ ಪಾಕಿಗಳಿಗೆ ಹೆಣ ಎಣಸಾಕ ಹೆಲ್ಪ್ ಮಾಡಾಕ್ಹೋಗಿದ್ದೆ’ ಕಣ್ಣು ಮುಚ್ಚಿ ಹಾಲು ನೆಕ್ಕುತ್ತಲೇ ವಿವರಿಸಿತು.

‘ಎಷ್ಟ್ ಎಣಿಸಿದ್ಯಲೇ’. ‘ಅಷ್ಟ್ ಮಂದಿ ಸತ್ತಾರ,ಇಷ್ಟ್ ಲಗೂನೆ ಎಣಿಸೂದು ಹೆಂಗ ಮುಗೀತದ... ಚುನಾವಣೆವರೆಗೂ ಎಣಿಸೂದೆ. ಏನೇ ಅನ್ನವಾ... ಮೋದಿ ಮಾಮ ನಮ್ ಜಾತೀನೆ’ ಎಂದು ಗರ್ವದಿಂದ ಬೀಗಿತು.

‘ಅಂದ್ರ ಕಣ್ಮುಚ್ಚಿ ಹಾಲು ಕುಡಿಯೂದೇನು?’

‘ಹಂಗಲ್ಲ,ನಡುರಾತ್ರಾಗ ಬ್ಯಾಟಿಯಾಡೂದು ಅಂತ. ನೋಟು ಬಂದ್ಮಾಡಿದ್ದು ರಾತ್ರಿ; ಜಿಎಸ್ಟಿ ಲಾಂಚ್,ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್,ಬಾಲಾಕೋಟ್ ದಾಳಿ ಎಲ್ಲ ಮಾಡಿದ್ದು ನಡುರಾತ್ರಿವಳಗ. ಗೋವಾದಾಗ ಪರ್ರೀಕರ್ ಸತ್ಮ್ಯಾಗ ಹೊಸ ಮುಖ್ಯಮಂತ್ರಿ ಪ್ರಮಾಣವಚನ ತಗಂಡಿದ್ದು ರಾತ್ರಿ ಎರಡು ಗಂಟೆಗೆ. ಸ್ವತಂತ್ರ ಭಾರತದಾಗ ಅಷ್ಟ್ ರಾತ್ರಿವಳಗ ಯಾರಾರ ಪ್ರಮಾಣವಚನ ತಗಂಡಿದ್ದು ದಾಖಲೆ ಐತೇನು...’ ಬೆಕ್ಕಣ್ಣ ವಾದಿಸುತ್ತಲೇ ಇತ್ತು.

‘ಹ್ಞೂಂ ಮತ್ತ... ಬೆಂಗಳೂರು ದಕ್ಷಿಣಕ್ಕೆ ಮಹಿಳಾ ಅಭ್ಯರ್ಥಿ ಅಂತಿದ್ದ ಮೋದಿ ಮಾಮಾ ಬ್ಯಾರೆಯವ್ರಿಗೆ ಟಿಕೆಟ್ ಕೊಟ್ಟಿದ್ದೂ ರಾತ್ರೀನೆ... ಹಿಂತಾ ಘನಂದಾರಿ ಕೆಲಸ ಹಗಲು ಯಾರು ಮಾಡ್ತಾರ’ ಆಕಳಿಸುತ್ತ ಹೇಳಿದೆ.

‘ಗೊತ್ತೈತಿಲ್ಲೋ... ಚೌಕೀದಾರ್ ಶೇರ್ ಹೈ... ಶೇರ್ ಅಂದ್ರ ಹುಲಿ,ಹಂಗಾಗಿ ನಮ್ಮ ಜಾತಿ’ ಬೆಕ್ಕಣ್ಣ ಹುಳ್ಳಗೆ ನಕ್ಕು ಮತ್ತೆ ಹೊರಗೋಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.