ಬುಧವಾರ, ನವೆಂಬರ್ 20, 2019
22 °C

ಸರ್ಕಾರ- ಸಂಸಾರ ಕಾರ... ಸಾರ...!

Published:
Updated:
Prajavani

‘ಗುರೂ... ಸರ್ಕಾರಕ್ಕೂ ಸಂಸಾರಕ್ಕೂ ಏನು ವ್ಯತ್ಯಾಸ?’

‘ವೆರಿ ಸಿಂಪಲ್, ಸರ್ಕಾರದಲ್ಲಿ ಕಾರ ಇದೆ, ಸಂಸಾರದಲ್ಲಿ ಸಾರ ಇದೆ’.

‘ಅಷ್ಟೇನಾ?’

‘ಸಂಸಾರ ನಡೆಸೋರು ಸಂತೆ ಮಾಡ್ತಾರೆ, ಸರ್ಕಾರ ನಡೆಸೋರು ‘ವ್ಯಾಪಾರ’ ಮಾಡ್ತಾರೆ’.

‘ಗುಡ್, ಮತ್ತೆ?’

‘ಸಂಸಾರದಲ್ಲಿ ದುಡ್ಡು ಕೊಟ್ಟು ಆಪರೇಷನ್ ಮಾಡಿಸ್ಕೋತಾರೆ. ಸರ್ಕಾರದಲ್ಲಿ ಅವರೇ ದುಡ್ಡು ಕೊಟ್ಟು ಆಪರೇಷನ್ ಮಾಡ್ತಾರೆ’.

‘ಕರೆಕ್ಟ್, ಆಮೇಲೆ?’

‘ಸರ್ಕಾರ ಅಂದ್ರೆ ಸರ್ಕಸ್ ಇದ್ದಂಗೆ. ಇಲ್ಲಿಂದ ಅಲ್ಲಿಗೆ ಹಾರ್ತಾರೆ, ಅಲ್ಲಿಂದ ಇಲ್ಲಿಗೆ ಹಾರ್ತಾರೆ. ಒಂದು ಸಾಮ್ಯತೆ ಅಂದ್ರೆ ಸರ್ಕಾರದಲ್ಲೂ ಸರ್ಕಸ್‍ನಲ್ಲೂ ತಂತಿ ಮೇಲೆ ನಡೆಯೋರಿರ್ತಾರೆ!’

‘ವೆರಿಗುಡ್, ಬೇರೆ?’

‘ಸಂಸಾರದಲ್ಲಿ ಕಾಟ ಕೊಡೋಕೆ ಒಬ್ಬ ಅತ್ತೆ ಇರಬಹುದು. ಆದ್ರೆ ಸರ್ಕಾರದಲ್ಲಿ ಅಂಥೋರು ಬಹಳ ಜನ ಇರ್ತಾರೆ’.

‘ಕರೆಕ್ಟಾಗಿ ಹೇಳಿದೆ. ಈಗ ಸಂಸಾರ ಅಥವಾ ಸರ್ಕಾರ ಸರಿಯಾಗಿ ನಡೀಬೇಕು ಅಂದ್ರೆ ಏನಿರಬೇಕು?’

‘ಪಂಢರಿಬಾಯಿ ಅಂಥ ಅತ್ತೆ ಇರಬೇಕು, ರಮಾದೇವಿ ಅಂಥ ತಾಯಿ ಇರಬೇಕು’.

‘ವಂಡರ್‍ಫುಲ್ ಗುರೂ, ಫೈನಲ್ಲಾಗಿ ಇನ್ನೇನಾದ್ರೂ ಇದೆಯಾ?’

‘ಸಂಸಾರದ ರೀತಿ ಸರ್ಕಾರ ನಡೆಸಬಹುದು. ಆದ್ರೆ ಸರ್ಕಾರದ ರೀತಿ ಸಂಸಾರ ನಡೆಸಿದ್ರೆ ನೋಡಿದ್‌ ಜನ ಮುಖಕ್ಕೆ ಉಗೀತಾರೆ!’

 

ಪ್ರತಿಕ್ರಿಯಿಸಿ (+)