‘ವೂ ಕಣ್ಲಾ! ಸೋತ ಎಲೆಕ್ಷನ್ನು, ಹುಡುಗಿ ಸೆಲೆಕ್ಷನ್ನು ಎರಡೂ ಒಂದೇ! ಕಳ್ಕಂಡ ಛಾನ್ಸು ಪದೇ ಪದೇ ಬರ್ತಿರ್ತದೆ ಕಣ್ಮುಂದೆ, ಹ್ಯಾಂಗ್ ಓವರ್ರೇ ಓಗಲ್ಲ ನೋಡು’ ಎಂದ ಮಾಲಿಂಗ.

‘ವೂ! ಗೇಮ್ ನಾಟ್ ಓವರ್ ಅಂತ ಅಸೆಂಬ್ಲಿ ಡಿಸಾಲ್ವ್ ಆದ್ರೂ ದೀದಿ ಕುರ್ಚಿಗೆ ಹ್ಯಾಂಗ್ ಆಗವ್ರಲ್ಲಪ್ಪ... ಸೋಲಿಸಿದರೇನು ಸುವೇಂದು, ನಾನು ಹಾಕ್ಕಂಡು ಕೂತ್ಕತೀನಿ ಗೋಂದು ಅಂತಾವ್ರೆ’.

‘ಎಣ್ ಮಕ್ಳು ಮನೇಲೇ ಯಜಮಾನಿಕೆ ಬುಡು ಅಂದ್ರೆ ಉರಿದು ಬೀಳ್ತರೆ, ಇನ್ನು ಸಿಎಂ ಸೀಟಿನ ವ್ಯಾಮೋಹ ಅಷ್ಟು ಸುಲಭವಾಗಿ ಓಯ್ತದೇನ್ಲಾ? ಇಂದ್ರಮ್ಮನ್ ತರ ದೀದಿನೂ ನಿಜವಾದ ಓರಾಟಗಾರ್ತಿ ಕಣ್ಲಾ!’ ಎಂದ ಕಲ್ಲೇಶಿ.

‘ಊ ಕಣ್ಲಾ! ಬೇರೆ ದೇಶ್ದಾಗೆಲ್ಲಾ ಈ ಸರ್ವಾಧಿಕಾರಿಗಳು ಎಲೆಕ್ಷನ್ ಸೋತ್ರೂ ಕುರ್ಚಿಗೇ ಅಂಟ್ಕಂಡು ಕುಂತಿರ್ತಾರೆ, ಜಿಂಬಾಬ್ವೆಯ ರಾಬರ್ಟ್ ಮೊಗಾಬೆ ತರ. ನಮ್ ಎಣ್ ಮಕ್ಳೂ ನಾವು ಗೂಬೆ ಅಲ್ಲ, ಲೇಡಿ ಮೊಗಾಬೆ ಅಂತ ಪ್ರೂವ್ ಮಾಡವ್ರೆ’.

‘ಒಟ್ನಾಗೆ ದೀದಿ ದೇಶಕ್ಕೇ ಮಾದರಿ ಆಗವ್ರೆ! ನನ್ ಎಂಡ್ರು ‘ದೀದಿ ಗಮ್ ಕಂಪನಿ’ ಅಂತ ಒಂದು ಸ್ಟಾರ್ಟಪ್ ಮಾಡ್ಬೇಕು ಅಂತಾವ್ಳೆ’.

‘ಲೇಯ್ ಇಲ್ಲಿ, ಎಂಡ್ ಅಪ್ಪೇ ಆಗ್ತಿಲ್ಲವಲ್ಲೋ! ದೀದಿನೇ ಮಾದರಿ ಆಗಿ ಸೋತೋರೇ ಸೀಟು ಬುಡಾಕಿಲ್ಲ ಅಂತಾವ್ರೆ, ಇನ್ನು ಗೆದ್ದು ಶಾಸಕರ ಬೆಂಬಲ ಇರೋರು ಎಂಗ್ ಬುಟ್ಟಾರು ಅಂತ ಟಗರು ಬಂಡೆ ಮೇಲೆ ಗುರ್ ಅನ್ಬಹುದು’.

‘ಅಂಗಾದ್ರೆ ಬಂಗಾಳದ ಪಬಂಪಬಂ ದೀದಿ ಪದ ಇಲ್ಲಿ ಗಮ್ ಗಮ್ ಗೋವಿಂದಂ. ಬಂ ಬಂ ಶಂಖನಾದಂ!’ ಎಂದ ಪರ್ಮೇಶಿ.

ಎಲ್ಲರೂ ‘ಸಕತ್ ಕಣ್ಲಾ’ ಎಂದು ಪರ್ಮೇಶಿಯ ಬೆನ್ನು ಗುದ್ದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.