ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅವರ್‌ಬಿಟ್‌, ಇವರ್‌ಬಿಟ್‌...

Last Updated 15 ನವೆಂಬರ್ 2021, 17:21 IST
ಅಕ್ಷರ ಗಾತ್ರ

‘ಹ್ಯಾಕಿಂಗ್ ಪಂಟ್ರುಗಳು ಒಂದು ಲ್ಯಾಪ್‍ಟಾಪ್ ಮಡಿಕಂಡು ಬಿಟ್‍ಕಾಯಿನ್ ಚೀಟಿಂಗ್ ಮಾಡ್ಬುಟ್ಟವರಂತೆ! ಇದು ಬೇತಾಳನ ಪ್ರಶ್ನೆ ಥರಾ ಆಗೋಯ್ತಲ್ಲಾ ಸಾ?’ ಅಂತಂದೆ.

‘ನನಗೇನೂ ಗೊತ್ತಿಲ್ಲ, ನಾನವನಲ್ಲ, ನಾನವನಲ್ಲ, ನನ್ನ ಬುಟ್ಬುಡಿ’ ಅಂತ ಕಿಷ್ಣ ಜನ್ಮಸ್ಥಾನದಿಂದ ಹೊಂಟೇ ಹೋದ್ನಂತಪ್ಪ. ಜಾಮೀನು ಕೊಟ್ಟೋರು ಯಾರು ಅಂತ್ಲೂ ಗೊತ್ತಿಲ್ಲವಂತೆ! ಈ ಇಚಾರದೇಲಿ ದಿಂಡುಕುಳಗಳು ‘ನಾನೇ ಸತುವಂತ’ ಅಂತ ಹೇಳ್ತಿರಾ ಕತೆ ಕೇಳಿಸ್ಕಲಾ’ ಅಂದ್ರು ತುರೇಮಣೆ.

‘ಯಾವನಾದ್ರೂ ಕಾಂಗ್ರೆಸಿನೋನು ಬಿಟ್‍ಕಾಯಿನ್ ತಗಂಡುದ್ರೆ ಹಾಕ್ರೀ ವಳಕ್ಕ. ನಿಮ್ಮದೇ ಸರ್ಕಾರ ಅದ ತನಿಖೆ ಮಾಡಿ!’- ಸಿದ್ದಣ್ಣ.

‘ಬಿಟ್‍ಕಾಯಿನ್ ದಂಧೆ ಮಾಡ್ದವರುನ್ನ ಧಮ್ ಇದ್ರೆ ಬಂಧಿಸಿ. ನಾವೂ ಮಾಹಿತಿ ತಗತಾ ಇದೀವಿ’- ಡಿಕೆಶಿ.

‘ಬಿಟ್‍ಕಾಯಿನ್ ಭೋಜನದಲ್ಲಿ ಕಾಂಗ್ರೆಸ್ಸಿನೋರು ಉಂಡಿದ್ರೆ ಯಾರು ಅಂತ ಹೆಸರೇಳ್ರಿ’- ಪರಮಿ.

‘ತಾಕತ್ತಿದ್ರೆ ಸಿದ್ದಣ್ಣ ಸಿಎಂ ಆಗಿದ್ದಾಗ ಕ್ರಮ ತಕ್ಕಬೇಕಾಗಿತ್ತು. ಯಾರ‍್ಯಾರಿಗೆ ಎಷ್ಟು ಹೋಗ್ಯದೆ ಕಾಂಗ್ರೇಸಿನೋರು ದಾಖಲೆ ಕೊಡಬೇಕ್ರಿ’- ಕುಮ್ಮಿ.

‘ಬಿಟ್‍ಕಾಯಿನ್ ತನಿಖೆ ಸರಿಯಾಗಿ ನಡೆದ್ರೆ ಸಿಎಂ ತಲೆದಂಡ ಆಯ್ತದೆ. ಕಾಂಗ್ರೆಸಿನವರ ತವು ಬಿಟ್‍ಕಾಯಿನ್ ಇದ್ರೆ ತೋರಿಸ್ಲಿ’- ಪ್ರಿಯಾಂಕ್.

‘ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸತ್ಯ ಜನರ ಮುಂದಿಡ್ತೀವಿ’- ಸುಧಾಕರ್.

‘ಮೋದಿ ಮಾರಾಜರು ಬಿಟ್‍ಕಾಯಿನ್ ವಿಚಾರಕೆ ತಲೆ ಕೆಡಿಸ್ಕ್ಯಬ್ಯಾಡಿ ಆ ಇಬ್ಬರುನ ನೋಡಿಕ್ಯತಿವಿ ಅಂದವ್ರೆ. ಯಾರನ್ನೂ ಬುಡಲ್ಲ, ಬಲಿ ಹಾಕ್ತೀವಿ’- ಬಸಣ್ಣ.

‘ಅದ್ಯಾರೋ ಮೋದಿ ಚಿಗಪ್ಪಾರಿಗೆ ದೂರು ಬರೆದು ಪಟ್ಟಿ ಕೊಟ್ಟವ್ರಂತೆ! ಯಾರ‍್ಯಾರಿಗೆ ಅಗುತ್ಕತದೋ ನಾನ್ಕಾಣೆ’ ಅಂತಂದೆ.

‘ಇವುರ ಮಾತು ಕೇಳಿ ಇದೇನೂ ಆಯ್ತದೆ ಅಂದ್ಕಬ್ಯಾಡ. ದಿಮ್ಮಗಿರೋರು ಬೋದಾಡಿಕ್ಯಂಡು ಪುಕಾರೆಬ್ಸಿ ‘ಅವರ್‌ಬಿಟ್, ಇವರ್‌ಬಿಟ್, ಅವರ‍್ಯಾರು’ ಅಂತ ಕಣ್ಣಾಮುಚ್ಚಾಲೆ ಆಡೊವೊತ್ಗೆ ಡ್ರಗ್ ಕೇಸು ಥರಾ ಬಿಟ್‍ಕಾಯಿನ್ ಕೇಸೂ ಜನಕ್ಕೆ ಮರತೋಯ್ತದೆ!’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT