ಗುರು ಪಿ.ಎಸ್.

‘ರೀ, ನಾಳೆ ನನ್ ಬರ್ತ್ ಡೇ, ನೆನಪಿದೆ ತಾನೆ’ ಹೊಸದೊಂದು ಅಪ್ಲಿಕೇಷನ್ ಹಾಕುವಂತೆ ಹೇಳಿದಳು ಹೆಂಡತಿ.

‘ನೆನಪಿದೆ, ನೆನಪಿದೆ’ ಎಂದು ಮುಖ ನೋಡದೆ ತಲೆ ಅಲ್ಲಾಡಿಸಿದೆ.

‘ಮುಂದಿನ ವರ್ಷ ನಿನ್ನ ಬರ್ತ್ ಡೇಗೆ ಗೋಲ್ಡ್ ಚೈನ್ ಕೊಡಿಸ್ತೀನಿ ಅಂತ ಕಳೆದ ಸಲ ಹೇಳಿದ್ರಿ’ ರಾಗ ಎಳೆದಳು.

‘ಏನೂ ಅಂತ ಮಾತಾಡ್ತಿದೀಯ ನೀನು, ನನ್ನನ್ನ ದೇಶದ್ರೋಹಿ ಮಾಡಬೇಕಂತಿದೀಯೇನು’ ಗಡುಸಾಗಿಯೇ ಕೇಳಿದೆ.

‘ಅಯ್ಯಯ್ಯ, ಗಿಫ್ಟ್ ಕೊಡಿಸಿದ್ರೆ ಅದು ಹೆಂಗ್ ರೀ ದೇಶದ್ರೋಹಿ ಆಗ್ತೀರಿ’ ಎಂದಳು ಆಶ್ಚರ್ಯದಿಂದ.

‘ಬೇರೆ ಗಿಫ್ಟ್ ಕೊಡಿಸಿದ್ರೆ ಆಗಲ್ಲ, ಗೋಲ್ಡ್ ಗಿಫ್ಟ್ ಕೊಡಿಸಿದ್ರೆ ದೇಶದ್ರೋಹಿ ಆಗ್ತೀನಿ’.

‘ಓಹೋ, ನಮ್ಮ ಪ್ರಧಾನಮಂತ್ರಿಗಳು ಹೇಳಿದ್ರು ಅಂತ ನೀವೀಗ ಚಿನ್ನ ಕೊಡಿಸಲ್ಲ ಅಂತಿದೀರಿ?’

‘ಎಷ್ಟು ಬೇಗ ಅರ್ಥ ಮಾಡಿಕೊಂಡಲ್ಯಮ್ಮ, ಗುಡ್ ಗುಡ್’ ಎನ್ನುತ್ತಾ, ‘ಸಂಜೆಯಾಯ್ತು, ತಿನ್ನೋದಕ್ಕೆ ಈರುಳ್ಳಿ ಬಜ್ಜಿ ಮಾಡಿಕೊಡು. ನಿನ್ನ ಕೈಯಲ್ಲಿ ಈರುಳ್ಳಿ ಬಜ್ಜಿ ತಿನ್ನೋದೇ ಪರಮಾನಂದ’ ಪೂಸಿ ಹೊಡೆಯುವವನಂತೆ ಹೇಳಿದೆ.

‘ನೀವು ದೇಶಪ್ರೇಮಿ ಆಗಬೇಕು, ನಾನು ಮಾತ್ರ ದೇಶದ್ರೋಹಿ ಆಗಬೇಕೇನು?’

‘ಇದೇನಮ್ಮ, ಎರಡು ಕನಸು ಕಲ್ಪನಾ ಥರ ಹೇಳ್ತಿದೀಯ?’

‘ಹೂಂ ಮತ್ತೆ, ಎಣ್ಣೆ ಪದಾರ್ಥ ಹೆಚ್ಚು ಬಳಸಬೇಡಿ ಅಂತ ಮೋದಿ ಸಾಹೇಬ್ರು ಹೇಳಿಲ್ವ, ಇನ್ನೇನಿದ್ದರೂ ನಿಮಗೆ ಅನ್ನ, ಮಜ್ಜಿಗೇನೆ ಗತಿ’.

‘ನನ್ನ ಬಾಣ ನನಗೇ ತಿರುಗಿಸ್ತಿದೀಯ, ಇರಲಿ. ಸ್ವಲ್ಪ ಹೊರಗೆ ಹೋಗಿ ಬರ್ತೀನಿ’ ಎಂದು ಬೈಕ್ ಕೀ ಕೈಗೆತ್ತಿಕೊಂಡೆ.

‘ಮತ್ತೆ ಮತ್ತೆ ದೇಶದ್ರೋಹದ ಕೆಲಸ ಮಾಡ್ತಿದೀರಲ್ರೀ, ಬೈಕ್ ಬಿಟ್ಟು ನಡೆದುಕೊಂಡು ಹೋಗಿ’ ಪಟ್ಟು ಬಿಡದವಳಂತೆ ಹೇಳಿದಳು.

ಪೇಪರ್ ಓದುತ್ತಾ ಕೂತೆ. ‘ನೋಡಿಲ್ಲಿ, ನೀಟ್ ಎಕ್ಸಾಂ ಕ್ಯಾನ್ಸಲ್ ಅಂತೆ. ಮಗಳು ಮತ್ತೆ ಪರೀಕ್ಷೆ ಬರೆಯಬೇಕು’ ಬೇಸರದಲ್ಲಿ ಹೇಳಿದೆ.

‘ಮಗಳು ನೀಟ್ಗೆ ಓದೋ ಬದಲು ಜ್ಯೋತಿಷ ಶಾಸ್ತ್ರವಾದರೂ ಕಲಿಯಬೇಕಿತ್ತು’.

‘ಏಕೆ?’

‘ಯಾವುದಾದರೂ ರಾಜ್ಯದ ಗವರ್ನ್ಮೆಂಟ್ನಲ್ಲಿ ವಿಶೇಷ ಅಧಿಕಾರಿಯಾದರೂ ಆಗ್ತಿದ್ಲು’ ಎಂದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.