ಬಿಜೆಪಿಯ ಕಟ್ಟಾ ಬೆಂಬಲಿಗ ಮುದ್ದಣ್ಣ, ಕಾಂಗ್ರೆಸ್ನ ಕಟ್ಟಾ ಕಾರ್ಯಕರ್ತ ವಿಜಿ ಗಹನ ಚರ್ಚೆಯಲ್ಲಿ ತೊಡಗಿದ್ದರು.

‘ಏನ್ ಸಾರ್, ನಿಮ್ಮ ಸಾಹೇಬ್ರು ಮುಖ್ಯಮಂತ್ರಿ ಆದ್ರು ಅನ್ನೋ ಖುಷಿ ಮುಖದಲ್ಲಿ ಎದ್ದು ಕಾಣ್ತಿದೆ’ ಎಂದು ವಿಜಿಯ ಕಾಲೆಳೆದ ಮುದ್ದಣ್ಣ.

‘ಖುಷಿ ಇರಲೇಬೇಕಲ್ಲ. ಪಾಪ, ನೀವು ಎಷ್ಟೆಲ್ಲ ಆಸೆ ಇಟ್ಟುಕೊಂಡಿದ್ರಿ... ಅಧಿಕಾರ ಹಸ್ತಾಂತರ ಸುಲಭವಾಗಿ ಆಗಲ್ಲ, ಕಾಂಗ್ರೆಸ್ ಇಬ್ಭಾಗ ಆಗಿಬಿಡುತ್ತೆ ಅಂತ. ಆದ್ರೆ ಎಲ್ಲ ಹೂವು ಎತ್ತಿದಷ್ಟು ಸುಲಭವಾಗಿ ಆಗಿಹೋಯ್ತು. ರಾಜ್ಯದ ಇತಿಹಾಸದಲ್ಲೇ ಇಂಥ ಬೆಳವಣಿಗೆ ಹಿಂದೆ ಕಂಡಿದ್ರಾ?’ ತನ್ನ ಪಕ್ಷದ ಬಗ್ಗೆ ಹೊಗಳಿಕೊಳ್ಳತೊಡಗಿದ ವಿಜಿ.

‘ಹ್ಹಹ್ಹಹ್ಹ, ಇದೆಲ್ಲ ಸುಲಭವಾಗಿ ಆಗಿರಬಹುದು, ಆದ್ರೆ ಪ್ರಮುಖ ವಿರೋಧ ಪಕ್ಷವಾದ ನಮ್ಮನ್ನ ಎದುರಿಸೋದಿದೆ ಮುಂದೆ’.

‘ನೀವು ಏನೇನಕ್ಕೆ ವಿರೋಧ ಮಾಡ್ತೀರಿ ಹೇಳಿ’.

‘ಹಿಂದೂ ಧರ್ಮಕ್ಕೆ ಕಾಂಗ್ರೆಸ್ನಿಂದ ಅಪಾಯವಿದೆ ಅಂತ ಹೋರಾಟ ಮಾಡ್ತೀವಿ’.

ಗೂಗಲ್ ಮಾಡುತ್ತಾ, ಆಯ್ದ ಸುದ್ದಿಗಳನ್ನ ಓದತೊಡಗಿದ ವಿಜಿ, ‘ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಕರ್ನಾಟಕದ ಡಿಸಿಎಂ’ ಎಂದ ಜೋರಾಗಿ.

‘ಕಾಂಗ್ರೆಸ್ಸಿಗರು ಹಿಂದೂ ಧರ್ಮದ ಆಚಾರ–ವಿಚಾರ, ನಂಬಿಕೆಗಳ ವಿರುದ್ಧವಾಗಿದ್ದಾರೆ ಅಂತ ಟೀಕಿಸ್ತೀವಿ...’

‘ಪೂರ್ವಾಭಿಮುಖವಾಗಿ ನಿಂತು ಪ್ರತಿಜ್ಞಾವಿಧಿ ಸ್ವೀಕರಿಸಿದ ಕಾಂಗ್ರೆಸ್ನ ನೂತನ ಮುಖ್ಯಮಂತ್ರಿ’ ಎಂದು ಮತ್ತಷ್ಟು ಜೋರಾಗಿ ಓದಿದ ವಿಜಿ.

‘ನಮ್ಮ ಬಳಿ ಮತ್ತೊಂದು ಅಸ್ತ್ರವಿದೆ. ಅದನ್ನ ಪ್ರಯೋಗಿಸಿದರೆ ನಿಮ್ಮ ಸಾಹೇಬ್ರು ಮತ್ತು ನಿಮ್ಮ ಪಕ್ಷ ಮಟಾಷ್ ಆಗಿಬಿಡುತ್ತೆ ಗೊತ್ತಾ?’ ಬಾಣ ಬಿಟ್ಟ ಮುದ್ದಣ್ಣ.

‘ಯಾವುದಪ್ಪ ಆ ಅಸ್ತ್ರ?’

‘ಜೈಲಿಗೆ ಹೋಗಿ ಬಂದವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಇಂಥವರು ನಮ್ಮನ್ನು ಆಳಬೇಕಾ?’ ವ್ಯಂಗ್ಯವಾಗಿ ನಗುತ್ತಾ ಜೋರಾಗಿ ಹೇಳಿದ ಮುದ್ದಣ್ಣ.

ಇನ್ನೂ ಜೋರಾಗಿ ನಗುತ್ತಾ, ‘ಚೆಕ್ ಮೂಲಕ ಲಂಚ ಸ್ವೀಕರಿಸಿ ಜೈಲಿಗೆ...’ ಎಂದು ವಿಜಿ ಹಳೆಯ ಸುದ್ದಿಯನ್ನ ಓದುತ್ತಿದ್ದಂತೆ ಮುದ್ದಣ್ಣ ಅಲ್ಲಿಂದ ಕಾಲ್ಕಿತ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.